Twitter: ಟ್ವಿಟರ್ ಹೊಸ ಸಿಇಒ ಲಿಂಡಾ ಯಾಕರಿನೊ; ಕೊನೆಗೂ ಹೆಸರು ಬಹಿರಂಗಪಡಿಸಿದ ಮಸ್ಕ್
ಟ್ವಿಟ್ಟರ್ಗೆ ಹೊಸ ಸಿಇಒ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದ ಎಲಾನ್ ಮಸ್ಕ್ ಇದೀಗ ಕೊನೆಗೂ ಅವರ ಹೆಸರನ್ನು ಬಹಿರಂಗಪಡಿಸಿದ್ದಾರೆ. ಲಿಂಡಾ ಯಾಕರಿನೊ ಅವರನ್ನು ನೂತನ ಸಿಇಒ ಆಗಿ ಸ್ವಾಗತಿಸಲು ಇಷ್ಟಪಡುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟ್ಟರ್ಗೆ ಹೊಸ ಸಿಇಒ (Twitter CEO) ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದ ಎಲಾನ್ ಮಸ್ಕ್ ಇದೀಗ ಕೊನೆಗೂ ಅವರ ಹೆಸರನ್ನು ಬಹಿರಂಗಪಡಿಸಿದ್ದಾರೆ. ಲಿಂಡಾ ಯಾಕರಿನೊ ಅವರನ್ನು ನೂತನ ಸಿಇಒ ಆಗಿ ಸ್ವಾಗತಿಸಲು ಇಷ್ಟಪಡುತ್ತೇನೆ. ಅವರು ಉದ್ಯಮ ನಿರ್ವಹಣೆ ಬಗ್ಗೆ ಪ್ರಮುಖವಾಗಿ ಗಮನಹರಿಸಲಿದ್ದಾರೆ. ನಾನು ಪ್ರಾಡಕ್ಟ್, ಹೊಸ ತಂತ್ರಜ್ಞಾನಗಳ ಬಗ್ಗೆ ಗಮನಹರಿಸಲಿದ್ದೇನೆ. ಆ್ಯಪ್ಗಾಗಿ ಅವರ ಜತೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.
ಹೊಸ ಸಿಇಒ ಸಿಕ್ಕಿದ್ದಾರೆ ಎಂದು ಮಸ್ಕ್ ಶುಕ್ರವಾರ ಬೆಳಗ್ಗೆಯೇ ಘೋಷಣೆ ಮಾಡಿದ್ದರು. ಈ ವಿಚಾರವಾಗಿ ಟ್ವೀಟ್ ಕೂಡ ಮಾಡಿದ್ದರು. ಹೊಸ ಸಿಇಒ ಒಬ್ಬ ಮಹಿಳೆ ಎಂಬುದನ್ನೂ ತಿಳಿಸಿದ್ದ ಅವರು, ಹೆಸರು ಬಹಿರಂಗಪಡಿಸಿರಲಿಲ್ಲ. ಲಿಂಡಾ ಯಾಕರಿನೊ ಅವರೇ ಟ್ವಿಟರ್ನ ನೂತನ ಸಿಇಒ ಆಗಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಇದೀಗ ಎಲ್ಲ ವದಂತಿಗಳಿಗೆ ತೆರೆ ಬಿದ್ದಂತಾಗಿದೆ.
I am excited to welcome Linda Yaccarino as the new CEO of Twitter!@LindaYacc will focus primarily on business operations, while I focus on product design & new technology.
Looking forward to working with Linda to transform this platform into X, the everything app. https://t.co/TiSJtTWuky
— Elon Musk (@elonmusk) May 12, 2023
ಟೆಸ್ಲಾ, ಸ್ಪೇಸ್ಎಕ್ಸ್ ಇತ್ಯಾದಿ ಕಂಪನಿಗಳ ಒಡೆಯ ಎಲಾನ್ ಮಸ್ಕ್ ಕಳೆದ 2022ರ ಅಕ್ಟೋಬರ್ ತಿಂಗಳಲ್ಲಿ 44 ಬಿಲಿಯನ್ ಡಾಲರ್ ತೆತ್ತು ಟ್ವಿಟ್ಟರ್ ಅನ್ನು ಖರೀದಿಸಿದ್ದರು. ಇದೀಗ ಅದಕ್ಕೆ ಆದಾಯ ತರಲು ವಿವಿಧ ಪ್ರಯತ್ನ ಮಾಡುತ್ತಿರುವ ಮಸ್ಕ್, ಬ್ಲೂ ಟಿಕ್ ಮಾರ್ಕ್ಗೆ ಸಬ್ಸ್ಕ್ರಿಪ್ಷನ್ ಶುಲ್ಕ ನಿಗದಿ ಮಾಡುವುದು ಸೇರಿದಂತೆ ಹಲವು ಕ್ರಮ ಕೈಗೊಂಡಿದ್ದಾರೆ. ಹಾಗೆಯೇ, ಮುಂದೆ ಟ್ವಿಟ್ಟರ್ನಲ್ಲಿ ಗಮನಾರ್ಹ ಪರಿವರ್ತನೆಗಳು ಆಗಲಿರುವ ಹಿನ್ನೆಲೆಯಲ್ಲಿ ಸಿಇಒ ಜವಾಬ್ದಾರಿ ಬಹಳ ಕಠಿಣವಾಗಿರುತ್ತದೆ. ಆದರೆ, ತಂತ್ರಜ್ಞಾನ ವಿಭಾಗದಲ್ಲಿ ಎಲಾನ್ ಮಸ್ಕ್ ಇರಲಿರುವುದರಿಂದ ಹೊಸ ಸಿಇಒಗೆ ಸಹಾಯವಾಗಬಹುದು.