PAN: ಆನ್​ಲೈನ್​ನಲ್ಲಿ ಪ್ಯಾನ್ ಕಾರ್ಡ್ ಹೆಸರು, ಜನ್ಮದಿನಾಂಕ ಬದಲಿಸುವುದು ಹೇಗೆ? ಇಲ್ಲಿದೆ ವಿಧಾನ

Steps To Change Name In PAN Card: ಎನ್​ಎಸ್​ಡಿಎಲ್ ಅಥವಾ ಯುಟಿಐಟಿಎಸ್​ಎಲ್ ಪೋರ್ಟಲ್​ಗಳ ಮೂಲಕ ನಿಮ್ಮ ಪ್ಯಾನ್ ಕಾರ್ಡ್​ನಲ್ಲಿರುವ ವಿವರಗಳನ್ನು ಬದಲಾಯಿಸಲು ಸಾಧ್ಯ. ಅಪ್ಲಿಕೇಶನ್ ಶುಲ್ಕ ಸೇರಿದಂತೆ ಈ ಕಾರ್ಯ ಸಾಧಿಸುವ ಕ್ರಮಗಳು ಇಲ್ಲಿವೆ.

PAN: ಆನ್​ಲೈನ್​ನಲ್ಲಿ ಪ್ಯಾನ್ ಕಾರ್ಡ್ ಹೆಸರು, ಜನ್ಮದಿನಾಂಕ ಬದಲಿಸುವುದು ಹೇಗೆ? ಇಲ್ಲಿದೆ ವಿಧಾನ
ಆಧಾರ್ ಮತ್ತು ಪ್ಯಾನ್ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 12, 2023 | 6:19 PM

ಪರ್ಮನೆಂಟ್ ಅಕೌಂಟ್ ನಂಬರ್ (PAN) ಈಗ ಭಾರತದಲ್ಲಿ ಮಹತ್ವದ ದಾಖಲೆಗಳಲ್ಲೊಂದಾಗಿದೆ. ಆದಾಯ ತೆರಿಗೆ ಪಾವತಿಸಲು ಇದು ಅತ್ಯಗತ್ಯ. ಇತರ ಹಣಕಾಸು ಚಟುವಟಿಕೆಗಳಿಗೆ ಪ್ಯಾನ್ ಅಗತ್ಯ ಇದೆ. ಇದರಲ್ಲಿರುವ ವಿವರಗಳೂ ಬಹಳ ಮುಖ್ಯ ಎನಿಸುತ್ತವೆ. ಹೀಗಾಗಿ, ಪ್ಯಾನ್ ಕಾರ್ಡ್​ನಲ್ಲಿರುವ ವಿವರ ಸರಿ ಇಲ್ಲ ಎನಿಸಿದಲ್ಲಿ ಆದಷ್ಟೂ ಬೇಗ ಬದಲಾವಣೆ ಮಾಡುವುದು ಅಗತ್ಯ. ಪ್ಯಾನ್ ಕಾರ್ಡ್​ನಲ್ಲಿ ಇರುವ ನಮ್ಮ ಹೆಸರು, ತಂದೆಯ ಫೋಟೋ, ಲಿಂಗ, ನಿವಾಸ, ಸಂಪರ್ಕ ವಿಳಾಸ, ಸಹಿ ಇತ್ಯಾದಿಯನ್ನು ಬದಲಾಯಿಸಬಹುದು. ಆನ್​ಲೈನ್​ನಲ್ಲೇ ಈ ಕೆಲ ಬದಲಾವಣೆ ಮಾಡಲು ಸಾಧ್ಯ. ಇದು ಹೇಗೆ ಮಾಡಬಹುದು, ಇಲ್ಲಿದೆ ವಿವರ:

ಆನ್​ಲೈನ್ ಮೂಲಕ ಪ್ಯಾನ್ ಕಾರ್ಡ್​ನಲ್ಲಿ ನಮ್ಮ ಹೆಸರು ಮತ್ತು ಜನ್ಮದಿನಾಂಕ ಬದಲಿಸುವ ಕ್ರಮಗಳಿವು:

  • ಪ್ಯಾನ್ ಕಾರ್ಡ್​ನ ಅಧಿಕೃತ ನಿರ್ವಾಹಕ ಪೋರ್ಟಲ್, www.protean-tinpan.com ಇಲ್ಲಿಗೆ ಭೇಟಿ ನೀಡಿ
  • ಸರ್ವಿಸಸ್ ಸೆಕ್ಷನ್ ಅಡಿಯಲ್ಲಿ ಇರುವ PAN ಕ್ಲಿಕ್ ಮಾಡಿ
  • ‘ಅಪ್​ಡೇಟ್/ಕರೆಕ್ಷನ್ ಇನ್ ದಿ ಪ್ಯಾನ್’ ಈ ಆಯ್ಕೆ ಮೇಲೆ ಕ್ಲಿಕ್ ಮಾಡಿ.
  • ಹೆಸರು, ಪ್ಯಾನ್ ನಂಬರ್, ಇಮೇಲ್ ಐಡಿ, ಸಂಪರ್ಕ ಸಂಖ್ಯೆ ಇತ್ಯಾದಿ ವಿವರ ಭರ್ತಿ ಮಾಡಿ ನೊಂದಾಯಿಸಿಕೊಳ್ಳಿ
  • ನಿಮ್ಮ ಇಮೇಲ್ ಐಡಿಗೆ ಒಂದು ಟೋಕನ್ ನಂಬರ್ ಕಳುಹಿಸಲಾಗುತ್ತದೆ. ಈ ಟೋಕನ್ ನಂಬರ್ ಮೂಲಕ ಪ್ಯಾನ್ ಅರ್ಜಿಯ ಕರಡು ಪ್ರತಿ ತೆರೆಯಿರಿ.
  • ಬಳಿಕ ಕಂಟಿನ್ಯೂ ಆಯ್ಕೆ ಮಾಡಿ
  • ಈಗ ನಿಮಗೆ 3 ಆಯ್ಕೆಗಳು ಸಿಗುತ್ತವೆ. ಈ ಪೈಕಿ ಇಕೆವೈಸಿ ಅಂಡ್ ಇಸೈನ್ ಆಯ್ಕೆ ತೆಗೆದುಕೊಳ್ಳಿ. ಇದು ಆಧಾರ್ ಓಟಿಪಿ ಮೂಲಕ ಮುಂದುವರಿಯುವ ಆಯ್ಕೆ
  • ನಿಮ್ಮ ಆಧಾರ್ ಕಾರ್ಡ್ ವಿವರ ತುಂಬಿರಿ

ಇದನ್ನೂ ಓದಿSuccess: ಮಣಿಪಾಲದಲ್ಲಿ ಓದಿದ್ದೇ ಟರ್ನಿಂಗ್ ಪಾಯಿಂಟ್; ವಿಜ್ಞಾನಿ ಮುರಳಿ ದಿವಿ 1.3 ಲಕ್ಷ ಕೋಟಿ ಕಂಪನಿ ಒಡೆಯರಾದ ಕಥೆ

  • ನೀವು ಅಪ್​ಡೇಟ್ ಮಾಡಬೇಕೆಂದಿರುವ ಕೆಟಗರಿಯನ್ನು ಆರಿಸಿ.
  • ನೀವು ಬದಲಾಯಿಸಬೇಕೆಂದಿರುವ ಮಾಹಿತಿಗೆ ಪೂರಕವಾದ ದಾಖಲೆಗಳನ್ನು ಲಗತ್ತಿಸಿ.
  • ಆಧಾರ್ ನಂಬರ್ ಇತ್ಯಾದಿ ನಮೂದಿಸಿ, ಹಾಗೂ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್​ಲೋಡ್ ಮಾಡಿ.
  • ಬಳಿಕ ಅರ್ಜಿ ಶುಲ್ಕ ಹಣ ಪಾವತಿಸಿ
  • ಕೆವೈಸಿ ಪ್ರಕ್ರಿಯೆ ಮುಗಿಸಿ ಇಸೈನ್ ಸಲ್ಲಿಸಿ
  • ಇದಾದ ಬಳಿಕ ನಿಮ್ಮ ಅರ್ಜಿಯ ಸ್ವೀಕೃತಿ ಪ್ರತಿ ನಿಮಗೆ ಸಿಗುತ್ತದೆ.

ಇದನ್ನೂ ಓದಿPM Kisan: ಪಿಎಂ ಕಿಸಾನ್ 14ನೇ ಕಂತು ಸದ್ಯದಲ್ಲೇ; ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ತಿಳಿಯಿರಿ

ಎಲ್ಲವೂ ಸಮರ್ಪಕವಾಗಿದ್ದಲ್ಲಿ ನಿಮ್ಮ ಇಮೇಲ್ ಐಡಿಗೆ ಪರಿಷ್ಕೃತ ಪ್ಯಾನ್ ಕಾರ್ಡ್ ಬರುತ್ತದೆ. ಇಲ್ಲಿ ಅಪ್ಲಿಕೇಶನ್ ಶುಲ್ಕಕ್ಕೆ ಸುಮಾರು 96 ರೂ ಆಗಿರುತ್ತದೆ.

ಎನ್​ಎಸ್​ಡಿಎಲ್​ನ ಪೋರ್ಟಲ್ ಮಾತ್ರವಲ್ಲ ಯುಟಿಐಟಿಎಸ್​ಎಲ್ ಪೋರ್ಟಲ್ ಮೂಲಕವೂ ಪ್ಯಾನ್ ಕಾರ್ಡ್ ವಿವರ ಬದಲಾಯಿಸಿಕೊಳ್ಳಬಹುದು. ಆನ್​ಲೈನ್​ನಲ್ಲಿ ಮಾಡುವುದು ಗೊಂದಲ ಎನಿಸಿದಲ್ಲಿ ಪ್ಯಾನ್ ಸೆಂಟರ್​ಗಳಿಗೆ ಹೋಗಿ ಅರ್ಜಿ ಮತ್ತು ದಾಖಲೆಗಳನ್ನು ಕೊಟ್ಟು ಮಾಡಿಸಬಹುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್