FD Rates: SBI, ICICI, HDFC, Axis Bank- ಈ ನಾಲ್ಕರಲ್ಲಿ ಯಾವ ಬ್ಯಾಂಕ್​ನ ಎಫ್​ಡಿ ಅತ್ಯುತ್ತಮ? ಇಲ್ಲಿದೆ ಒಂದು ಹೋಲಿಕೆ

Interest Rates For FD: ಉಳಿತಾಯದ ಹಣದ ಹೂಡಿಕೆಗಳಿಗೆ ಅತ್ಯಂತ ಜನಪ್ರಿಯ ಮತ್ತು ಬಹಳ ಸಾಮಾನ್ಯವಾಗಿ ಮಾಡಲಾಗುವ ಯೋಜನೆ ಎಂದರೆ ನಿಶ್ಚಿತ ಠೇವಣಿ. ವಿವಿಧ ಪ್ರಮುಖ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್​ಗಳಿಗೆ ಬಡ್ಡಿ ದರ ಎಷ್ಟಿದೆ ಎಂಬ ಒಂದು ತುಲನಾತ್ಮಕ ವರದಿ ಇಲ್ಲಿದೆ. ದೇಶದ ಪ್ರಮುಖ ಬ್ಯಾಂಕುಗಳಾದ ಐಸಿಐಸಿಐ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಆ್ಯಕ್ಸಿಸ್ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ದರಗಳು ಎಷ್ಟಿವೆ? ಈ ಬಗ್ಗೆ ಒಂದಿಷ್ಟು ಮಾಹಿತಿಯೂ ಇದೆ.

FD Rates: SBI, ICICI, HDFC, Axis Bank- ಈ ನಾಲ್ಕರಲ್ಲಿ ಯಾವ ಬ್ಯಾಂಕ್​ನ ಎಫ್​ಡಿ ಅತ್ಯುತ್ತಮ? ಇಲ್ಲಿದೆ ಒಂದು ಹೋಲಿಕೆ
ಎಫ್​ಡಿಗೆ ಬಡ್ಡಿದರ
Edited By:

Updated on: Oct 07, 2026 | 7:59 PM

ಮುಖ್ಯಾಂಶಗಳು

  • ಭಾರತದಲ್ಲಿ ಈಗಲೂ ಜನಸಾಮಾನ್ಯರಿಗೆ ಉಳಿತಾಯ ಹಣದ ಹೂಡಿಕೆಗೆ ಎಫ್​ಡಿ ಮತ್ತು ಆರ್​ಡಿಗಳು ನೆಚ್ಚಿನ ಯೋಜನೆಗಳಾಗಿವೆ.
  • ಎಸ್​ಬಿಐ, ಐಸಿಐಸಿಐ, ಎಚ್​ಡಿಎಫ್​ಸಿ ಬ್ಯಾಂಕುಗಳಲ್ಲಿ 60 ವರ್ಷದೊಳಗಿನ ವಯಸ್ಸಿನ ಮಂದಿಗೆ ಎಫ್​ಡಿ ದರ ಶೇ. 7.10ರವರೆಗೂ ಇದೆ.
  • ಆ್ಯಕ್ಸಿಸ್ ಬ್ಯಾಂಕ್​ನಲ್ಲಿ ಸಾಮಾನ್ಯ ಗ್ರಾಹಕರ ಎಫ್​ಡಿಗೆ ಶೇ. 7.20ರವರೆಗೂ ಬಡ್ಡಿ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.95ರವರೆಗೂ ಬಡ್ಡಿ ಇದೆ.

ಭಾರತೀಯ ರಿಸರ್ವ್ ಬ್ಯಾಂಕ್ ಸತತ ಐದು ಬಾರಿ ರೆಪೋ ದರಗಳನ್ನು (RBI Repo Rate) ಏರಿಸಿದ ಬಳಿಕ ಬ್ಯಾಂಕುಗಳೂ ತಮ್ಮ ವಿವಿಧ ಬಡ್ಡಿದರಗಳನ್ನು ಹೆಚ್ಚಿಸುತ್ತಾ ಬಂದಿವೆ. ಇದರಲ್ಲಿ ಠೇವಣಿಗಳು ಮತ್ತು ಸಾಲಗಳ ಬಡ್ಡಿ ಏರಿಕೆ ಆಗಿದೆ. ನಿಶ್ಚಿತ ಠೇವಣಿಗಳ ಮೇಲೆ ನೀಡುವ ಬಡ್ಡಿ ದರ ಆಕರ್ಷಕ ಎನಿಸುವಷ್ಟು ರೀತಿಯಲ್ಲಿ ಬ್ಯಾಂಕುಗಳು ಏರಿಕೆಯ ಪೈಪೋಟಿ ನೀಡುತ್ತಿವೆ. ಆರ್​ಬಿಐನ ರೆಪೋ ದರ ಶೇ. 6.5 ಇದ್ದರೆ ಕೆಲ ಬ್ಯಾಂಕುಗಳು ಎಫ್​ಡಿ ದರಗಳನ್ನು ಶೇ. 8ರವರೆಗೆ ಆಫರ್ ಮಾಡುತ್ತಿವೆ. ಇಲ್ಲಿ ಆರ್​ಬಿಐನ ರೆಪೋ ದರ ಎಂದರೆ, ಕಮರ್ಷಿಯಲ್ ಬ್ಯಾಂಕುಗಳಿಗೆ ಆರ್​ಬಿಐ ನೀಡುವ ಸಾಲಕ್ಕೆ ವಿಧಿಸಲಾಗುವ ಬಡ್ಡಿ ದರ ಆಗಿದೆ. ಈ ದರವು ಬ್ಯಾಂಕುಗಳಿಗೆ ಒಂದು ರೀತಿಯ ದರಸೂಚಿಯಾಗಿರುತ್ತದೆ. ಕಡ್ಡಾಯ ಎಂಬ ನಿಯಮ ಇಲ್ಲದಿದ್ದರೂ ಬ್ಯಾಂಕುಗಳು ಸಾಮಾನ್ಯವಾಗಿ ರೆಪೋ ದರಕ್ಕೆ ಅನುಗುಣವಾಗಿ ಬಡ್ಡಿ ದರ ಪರಿಷ್ಕರಿಸುತ್ತವೆ. ಹೀಗಾಗಿ, ಬಹುತೇಕ ಬ್ಯಾಂಕುಗಳು ಎಫ್​ಡಿ (Fixed Deposits) ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿವೆ.

ದೇಶದ ಪ್ರಮುಖ ಬ್ಯಾಂಕುಗಳಾದ ಐಸಿಐಸಿಐ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಆ್ಯಕ್ಸಿಸ್ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ದರಗಳು ಎಷ್ಟಿವೆ? ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಎಚ್​ಡಿಎಫ್​ಸಿ ಬ್ಯಾಂಕ್​ನ ಎಫ್​ಡಿ ದರಗಳು

ಖಾಸಗಿ ಬ್ಯಾಂಕ್ ಅದ ಎಚ್​ಡಿಎಫ್​ಸಿಯಲ್ಲಿ ನಿಶ್ಚಿತ ಠೇವಣಿಗಳಿಗೆ ಶೇ. 7.1ರವರೆಗೆ ಬಡ್ಡಿ ದರ ಸಿಗುತ್ತದೆ. ಹಿರಿಯ ನಾಗರಿಕರಿಗೆ ಶೇ. 7.6ರವರೆಗೆ ಬಡ್ಡಿ ದರ ಕೊಡಲಾಗುತ್ತಿದೆ. ಇಲ್ಲಿ ಠೇವಣಿಗಳು 7ದಿನಗಳಿಂದ ಆರಂಭವಾಗಿ 10 ವರ್ಷದ ಅವಧಿಯವರೆಗೂ ಇವೆ. ಫೆಬ್ರುವರಿ 21ರಿಂದ ಈ ಎಫ್​ಡಿ ದರ ಜಾರಿಯಲ್ಲಿದೆ.

ಆ್ಯಕ್ಸಿಸ್ ಬ್ಯಾಂಕ್​ನ ಎಫ್​ಡಿ ದರಗಳು

2023 ಜನವರಿಯಿಂದ ಮಾರ್ಚ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಸಾಲ ಮತ್ತು ಠೇವಣಿಗಳಿಂದ ಭರ್ಜರಿ ಆದಾಯ ಗಳಿಸಿದ್ದ ಆ್ಯಕ್ಸಿಸ್ ಬ್ಯಾಂಕ್​ನಲ್ಲಿ ನಿಶ್ಚಿತ ಠೇವಣಿಗಳ ಮೇಲೆ ಬಡ್ಡಿ ದರ ಆಕರ್ಷಕ ಪ್ರಮಾಣದಲ್ಲಿದೆ. ಸಾರ್ವಜನಿಕರಿಗೆ ಬಡ್ಡಿ ದರ ಶೇ. 3.50ರಿಂದ ಆರಂಭವಾಗಿ ಶೇ. 7.20ರವರೆಗೂ ಇದೆ. ಹಿರಿಯ ನಾಗರಿಕರಿಗೆ ಶೇ. 7.95ರವರೆಗೆ ಬಡ್ಡಿ ಕೊಡಲಾಗುತ್ತದೆ.

ಐಸಿಐಸಿಐ ಬ್ಯಾಂಕ್​ನಲ್ಲಿ ಎಫ್​ಡಿ ದರಗಳು ಎಷ್ಟು?

ಸರ್ಕಾರಿ ಸ್ವಾಮ್ಯದ ಐಸಿಐಸಿಐ ಬ್ಯಾಂಕ್​ನಲ್ಲಿ ಸಾರ್ವಜನಿಕರ ಎಫ್​ಡಿ ಠೇವಣಿಗಳಿಗೆ ಶೇ. 3ರಿಂದ ಶೇ. 7.10ರಷ್ಟು ಬಡ್ಡಿ ಕೊಡಲಾಗುತ್ತದೆ. 60 ವರ್ಷ ಮೇಲ್ಪಟ್ಟ ವಯಸ್ಸಿನ ಮಂದಿಗೆ ಶೇ. 3.50ರಿಂದ ಶೇ. 7.60ರಷ್ಟು ಬಡ್ಡಿ ಕೊಡಲಾಗುತ್ತದೆ.

ಎಸ್​ಬಿಐ ಬ್ಯಾಂಕ್​ನಲ್ಲಿ ಎಫ್​ಡಿ ದರ ವಿವರ

ಭಾರತದ ನಂಬರ್ ಒನ್ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲೂ ಉತ್ತಮ ಎಫ್​ಡಿ ದರಗಳಿವೆ. ಸಾರ್ವಜನಿಕರಿಗೆ ನೀಡಲಾಗುವ ಎಫ್​ಡಿ ದರ ಶೇ. 3ರಿಂದ ಶೇ. 7.10ರಷ್ಟಿದೆ. ಹಿರಿಯ ನಾಗರಿಕರಿಗೆ ಶೇ. 7.60ರವರೆಗೆ ಬಡ್ಡಿ ಸಿಗುತ್ತದೆ.

ಗರಿಷ್ಠ ಬಡ್ಡಿ ದರವು ಕೆಲ ನಿರ್ದಿಷ್ಟ ಅವಧಿಯ ಠೇವಣಿಗಳಿಗೆ ಮಾತ್ರ ಅನ್ವಯ ಆಗುತ್ತದೆ. ಎಸ್​ಬಿಐನ ಅಮೃತ್ ಕಳಶ್ ಎಫ್​ಡಿ ಯೋಜನೆಯಲ್ಲಿ ಹಿರಿಯ ನಾಗರಿಕರ 400 ದಿನಗಳ ಠೇವಣಿಗೆ ಗರಿಷ್ಠ ಬಡ್ಡಿ ದರ ಸಿಗುತ್ತದೆ. ಬಹುತೇಕ ಬ್ಯಾಂಕುಗಳಲ್ಲಿ 1-2 ವರ್ಷ ಅವಧಿಯ ಠೇವಣಿಗಳಿಗೆ ಗರಿಷ್ಠ ಬಡ್ಡಿ ಸಿಗುತ್ತದೆ. ಈ ಮೇಲಿನ ನಾಲ್ಕು ಪ್ರಮುಖ ಬ್ಯಾಂಕುಗಳಲ್ಲಿ ಆ್ಯಕ್ಸಿಸ್ ಬ್ಯಾಂಕ್​ನಲ್ಲಿ ಅತಿಹೆಚ್ಚು ಬಡ್ಡಿ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:57 am, Sun, 30 April 23

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us