ವಿಧಾನಸಭಾ ಚುನಾವಣೆ ಫಲಿತಾಂಶ ಬಳಿಕ ಷೇರುಪೇಟೆ ಇನ್ನಷ್ಟು ಜಿಗಿತ; ಬಿಜೆಪಿ ಗೆದ್ದರೆ ಉದ್ಯಮಕ್ಕೆ ಯಾಕೆ ಖುಷಿ? ಇಲ್ಲಿವೆ 5 ಕಾರಣಗಳು

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Dec 04, 2023 | 3:01 PM

Market Reactions to BJP Win: ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ಮೂರು ರಾಜ್ಯಗಳಲ್ಲಿ ಬಿಜೆಪಿಯ ಭರ್ಜರಿ ಜಯದ ನಂತರ, ಷೇರುಪೇಟೆಯ ಪ್ರತಿಕ್ರಿಯೆ ಸಕಾರಾತ್ಮಕವಾಗಿದೆ. ಜನರು ಮಾತ್ರವಲ್ಲ, ಮಾರುಕಟ್ಟೆ ಮತ್ತು ಆರ್ಥಿಕತೆಯೂ ಕೂಡ ಬಿಜೆಪಿ ಸರ್ಕಾರವನ್ನು ಇಷ್ಟಪಡಲು ಪ್ರಮುಖ ಕಾರಣಗಳಿವೆ. ಸ್ಥಿರ ಸರ್ಕಾರ, ಬಂಡವಾಳ ವೆಚ್ಚ, ಹೊಸ ಕ್ಷೇತ್ರಗಳಿಗೆ ಪುಷ್ಟಿ, ಡಿಜಿಟಲ್ ಸೌಲಭ್ಯ ಮತ್ತು ಉತ್ತಮ ಆರ್ಥಿಕ ಸೂಚಕಗಳು ಬಿಜೆಪಿಯನ್ನು ಪುಷ್ಟೀಕರಿಸುತ್ತವೆ.

ವಿಧಾನಸಭಾ ಚುನಾವಣೆ ಫಲಿತಾಂಶ ಬಳಿಕ ಷೇರುಪೇಟೆ ಇನ್ನಷ್ಟು ಜಿಗಿತ; ಬಿಜೆಪಿ ಗೆದ್ದರೆ ಉದ್ಯಮಕ್ಕೆ ಯಾಕೆ ಖುಷಿ? ಇಲ್ಲಿವೆ 5 ಕಾರಣಗಳು
ಭಾರತದ ಆರ್ಥಿಕತೆ
Follow us on

ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಭರ್ಜರಿ ಜಯದ (BJP win in Assembly Elections) ನಂತರ ದೇಶದ ಷೇರುಪೇಟೆ ನಿರೀಕ್ಷೆಯಂತೆ ಜಿಗಿದಿದೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 1,000ಕ್ಕೂ ಹೆಚ್ಚು ಅಂಕಗಳಷ್ಟು ಜಿಗಿದಿದೆ. ಈ ವಿಧಾನಸಭಾ ಚುನಾವಣೆಗಳನ್ನು 2024 ರ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಬಿಜೆಪಿ ಭಾರಿ ಅಂತರದಿಂದ ಗೆದ್ದಿದೆ. ಅಷ್ಟಕ್ಕೂ ಮಾರುಕಟ್ಟೆ ಮತ್ತು ಆರ್ಥಿಕತೆ ಕೂಡ ಬಿಜೆಪಿ ಸರಕಾರವನ್ನು ಇಷ್ಟಪಡುತ್ತಿರುವಂತಿದೆ.

ಈ ಸಂದರ್ಭದಲ್ಲಿ ಅನೇಕ ಆರ್ಥಿಕ ಸೂಚಕಗಳು ಮೋದಿ ಸರ್ಕಾರದ ಪರ ವಾಲಿವೆ. ಜಿಡಿಪಿ ಮತ್ತು ಜಿಎಸ್‌ಟಿ ಸಂಗ್ರಹದ ಇತ್ತೀಚಿನ ಅಂಕಿಅಂಶಗಳು ಮಾರುಕಟ್ಟೆಯನ್ನು ಬಿಜೆಪಿಯ ಪರವಾಗಿ ತಿರುಗಿಸಿವೆ.

ಬಿಜೆಪಿ ಸರ್ಕಾರ ಬಂದರೆ ಆರ್ಥಿಕತೆ ಮತ್ತು ಮಾರುಕಟ್ಟೆಗಳಿಗೆ ಯಾಕೆ ಖುಷಿ?

ಬಿಜೆಪಿ ಸರ್ಕಾರವೊಂದು ರಚನೆಯಾದರೆ ಮಾರುಕಟ್ಟೆ ಮತ್ತು ಆರ್ಥಿಕತೆಯ ಸ್ಪಂದನೆ ಸಕಾರಾತ್ಮಕವಾಗಿ ತೋರುವುದನ್ನು ಈ ಕೆಳಗಾಣಿಸಿದ 5 ಕಾರಣಗಳಿಂದ ಅರ್ಥಮಾಡಿಕೊಳ್ಳಬಹುದು.

ಇದನ್ನೂ ಓದಿ: ಮನೆಗಳ ಸೇಲ್​ನಲ್ಲಿ ಹೆಚ್ಚಳ; ಬೆಂಗಳೂರೇ ನಂಬರ್ 1; ಮುಂಬೈ, ಪುಣೆಯಲ್ಲಿ ಅತಿಹೆಚ್ಚು ವಸತಿಗೃಹಗಳ ಮಾರಾಟ

ಸ್ಥಿರ ಸರ್ಕಾರ: ಒಂದು ದೇಶದಲ್ಲಿ ಮಾರುಕಟ್ಟೆ ಪ್ರಬುದ್ಧವಾದಾಗ, ಅದರ ದೊಡ್ಡ ಅಗತ್ಯಗಳಲ್ಲಿ ಒಂದು, ಸ್ಥಿರ ಸರ್ಕಾರದ ಅಸ್ತಿತ್ವ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಿತ್ತು. ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಪೂರ್ಣ ಬಹುಮತದ ಸರ್ಕಾರವನ್ನು ಹೊಂದಿದ್ದರೆ, ಮೈತ್ರಿ ಇರುವಲ್ಲಿ ಬಿಜೆಪಿಗೆ ‘ಬಿಗ್ ಬ್ರದರ್ ಸಿಂಡ್ರೋಮ್’ ಲಾಭ ಸಿಗುತ್ತದೆ. ಈ ಕಾರಣಕ್ಕಾಗಿ, ಮಾರುಕಟ್ಟೆಯು ಬಿಜೆಪಿ ಸರ್ಕಾರದ ಕಡೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಸ್ಥಿರ ಸರ್ಕಾರ ಇದ್ದರೆ ಕಠಿಣ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಕ್ಯಾಪಿಟಲ್ ಎಕ್ಸ್​ಪೆಂಡಿಚರ್ ಅಥವಾ ಬಂಡವಾಳ ವೆಚ್ಚ: ಬಿಜೆಪಿ ಸರಕಾರ ಇನ್​ಫ್ರಾಸ್ಟ್ರಕ್ಚರ್​ಗೆ ಹೆಚ್ಚಿನ ಒತ್ತು ನೀಡಿದೆ. ಬಜೆಟ್‌ನಲ್ಲಿ ಬಂಡವಾಳ ವೆಚ್ಚಕ್ಕಾಗಿ ಸರ್ಕಾರ 10.5 ಲಕ್ಷ ಕೋಟಿ ರೂ ಇರಿಸಿದೆ. ಇದರಿಂದಾಗಿ ಆರ್ಥಿಕತೆಯಲ್ಲಿ ನಗದು ಹರಿವಿನ ಹೆಚ್ಚಳದ ಜೊತೆಗೆ ಆರ್ಥಿಕತೆ ಕೂಡ ವಿಸ್ತರಿಸುತ್ತದೆ. ಲಾಜಿಸ್ಟಿಕ್ಸ್ ವೆಚ್ಚ ಕಡಿಮೆ ಆದರೆ ಉದ್ಯಮಕ್ಕೆ ಲಾಭ ಆಗುತ್ತದೆ. ಹೀಗಾಗಿ ಆರ್ಥಿಕತೆಯು ಬಿಜೆಪಿ ಸರ್ಕಾರವನ್ನು ಬಯಸುತ್ತದೆ.

ಹೊಸ ಕ್ಷೇತ್ರಗಳಲ್ಲಿ ವಿಸ್ತರಣೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ಮೇಕ್ ಇನ್ ಇಂಡಿಯಾ’ದಿಂದ ಹಿಡಿದು ‘ಪಿಎಲ್ ಐ ಸ್ಕೀಂ’ವರೆಗೆ ಎಲ್ಲವೂ ಬಂದಿದೆ. ಈ ಕಾರಣದಿಂದಾಗಿ, ಭಾರತದಲ್ಲಿ ವ್ಯಾಪಾರ ಮತ್ತು ಉದ್ಯಮದ ಹೊಸ ಹೊಸ ಕ್ಷೇತ್ರಗಳಿಗೆ ಪುಷ್ಟಿ ಸಿಕ್ಕಿದೆ. ಮೊಬೈಲ್ ತಯಾರಿಕೆಯಲ್ಲಿ ಭಾರತ ದೊಡ್ಡ ಸಾಧನೆ ಮಾಡಿದೆ. ಈಗ ದೇಶದಲ್ಲಿ ಮಾರಾಟವಾಗುವ 100% ಫೋನ್‌ಗಳು ಮೇಡ್ ಇನ್ ಇಂಡಿಯಾ ಆಗಿವೆ. ಹೀಗಾಗಿ, ಮಾರುಕಟ್ಟೆಗಳಿಗೆ ಬಿಜೆಪಿ ಸರ್ಕಾರವೆಂದರೆ ಪ್ರಿಯವಾಗಿದೆ.

ಇದನ್ನೂ ಓದಿ: 8th Pay Commission: ಎಲೆಕ್ಷನ್ ಬಂತು, 8ನೇ ವೇತನ ಆಯೋಗ ರಚನೆಯಾಗುತ್ತಾ? ಸರ್ಕಾರದಿಂದ ಅಪ್​ಡೇಟ್ ಇದು

ಡಿಜಿಟಲ್ ಸೌಲಭ್ಯ ಹೆಚ್ಚಳ: ಬಿಜೆಪಿ ಸರಕಾರ ಡಿಜಿಟಲ್ ಇಂಡಿಯಾದತ್ತ ಹೆಚ್ಚಿನ ಗಮನ ಹರಿಸಿದೆ. ಇದರಿಂದ ಸರ್ಕಾರದ ಕೆಲಸ ಸುಲಭವಾಗಿದೆ. ಆರ್ಥಿಕತೆಯಲ್ಲಿ ಸೋರಿಕೆ ತಗ್ಗಿದ್ದು, ಸರ್ಕಾರದ ಬಜೆಟ್‌ನ ಹಣವು ನಿರ್ದಿಷ್ಟ ಸಮೂಹವನ್ನು ತಲುಪುತ್ತಿದೆ. ಅದೇ ಸಮಯದಲ್ಲಿ, ಕಂಪನಿ ಮತ್ತು ಉದ್ಯಮಕ್ಕೆ ನಿಯಮಗಳ ಹೊರೆ ಕಡಿಮೆಯಾಗಿದೆ. ಇದರಿಂದಾಗಿ ಬಿಜೆಪಿ ಸರ್ಕಾರದ ಬಗ್ಗೆ ಆರ್ಥಿಕತೆ ಸಕಾರಾತ್ಮಕವಾಗಿದೆ.

ಉತ್ತಮ ಆರ್ಥಿಕ ಸೂಚಕಗಳು: ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶದ ಬಹುತೇಕ ಆರ್ಥಿಕ ಸೂಚಕಗಳು ಸಕಾರಾತ್ಮಕವಾಗಿವೆ. ಕೇಂದ್ರ ಸರ್ಕಾರದ 10 ವರ್ಷಗಳ ಅಧಿಕಾರಾವಧಿಯನ್ನು ಗಮನಿಸಿದರೆ ಹಣದುಬ್ಬರ ದರ ಎರಡಂಕಿಗೆ ಹೋಗಿಲ್ಲ. ಸರಾಸರಿ GDP ಬೆಳವಣಿಗೆ ದರ 5 ಪ್ರತಿಶತಕ್ಕಿಂತ ಹೆಚ್ಚಿದೆ. ಇದು ಪ್ರಪಂಚದ ಅನೇಕ ದೇಶಗಳ ಆರ್ಥಿಕ ಬೆಳವಣಿಗೆ ದರಕ್ಕಿಂತ ಹೆಚ್ಚಾಗಿದೆ. ಅದೇ ಸಮಯದಲ್ಲಿ, ಸರ್ಕಾರದ ವಿತ್ತೀಯ ಕೊರತೆಯು ಸಹ ಹೆಚ್ಚಿನ ಸಮಯ ನಿಯಂತ್ರಣದಲ್ಲಿದೆ. ಇದು ಬಿಜೆಪಿ ಸರ್ಕಾರದ ಕಡೆಗೆ ಮಾರುಕಟ್ಟೆ ಮತ್ತು ಆರ್ಥಿಕತೆ ಸಕಾರಾತ್ಮಕ ಭಾವನೆ ಹೊಂದುವಂತೆ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ