Kotak Mahindra Bank: ಕೊಟಕ್ ಮಹೀಂದ್ರಾ ಬ್ಯಾಂಕ್​ನಿಂದ ಕನಿಷ್ಠ ಮಟ್ಟದ ಬಡ್ಡಿ ದರಕ್ಕೆ ಗೃಹ ಸಾಲ; ಇಲ್ಲಿದೆ ವಿವರ

| Updated By: Srinivas Mata

Updated on: Sep 11, 2021 | 11:50 PM

ಕೊಟಕ್ ಮಹೀಂದ್ರಾ ಬ್ಯಾಂಕ್​ನಿಂದ ಗೃಹ ಸಾಲದ ಮೇಲೆ ಅತ್ಯಂತ ಕಡಿಮೆ ಬಡ್ಡಿ ದರ ಇದೆ. ಆ ಬಗ್ಗೆ ವಿವರ ಇಲ್ಲಿದೆ.

Kotak Mahindra Bank: ಕೊಟಕ್ ಮಹೀಂದ್ರಾ ಬ್ಯಾಂಕ್​ನಿಂದ ಕನಿಷ್ಠ ಮಟ್ಟದ ಬಡ್ಡಿ ದರಕ್ಕೆ ಗೃಹ ಸಾಲ; ಇಲ್ಲಿದೆ ವಿವರ
ಕೊಟಕ್ ಮಹೀಂದ್ರಾ ಬ್ಯಾಂಕ್ (ಪ್ರಾತಿನಿಧಿಕ ಚಿತ್ರ)
Follow us on

ಕೊಟಕ್ ಮಹೀಂದ್ರಾ ಬ್ಯಾಂಕ್​ ಲಿಮಿಟೆಡ್​ನಿಂದ ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟದ ಗೃಹ ಸಾಲದ ಬಡ್ಡಿ ದರ ಶೇ 6.5ರಲ್ಲಿ ನೀಡಲಾಗುತ್ತಿದೆ. ಆರ್​ಬಿಐ ಹಣಕಾಸು ನೀತಿಯಲ್ಲಿ ಅತ್ಯಂತ ಕನಿಷ್ಠ ಬಡ್ಡಿ ದರ, ಅಪಾರ ನಗದು ಮತ್ತು ಸ್ಥಿರವಾದ ಗೃಹ ಸಾಲದ ಮಾರ್ಕೆಟ್​ನಲ್ಲಿ ಬ್ಯಾಂಕ್​ನಿಂದ ದೊಡ್ಡ ಮಟ್ಟದ ಪಾಲು ತೆಗೆದುಕೊಳ್ಳಲು ಪ್ರಯತ್ನ ಸಾಗಿದೆ. 2018ರಿಂದ ಈಚೆಗೆ ಭಾರೀ ಪ್ರಮಾಣದಲ್ಲಿ ಈ ದರ ಇಳಿಕೆ ಆಗಿದೆ. ಹಬ್ಬದ ಸಂದರ್ಭದಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್​ನಿಂದ 15 ಬೇಸಿಸ್ ಪಾಯಿಂಟ್​ ಇಳಿಕೆ ಆಗಿ, ಶೇ 6.5ರಷ್ಟು ತಲುಪಿದೆ. ಸೆಪ್ಟೆಂಬರ್ 10ನೇ ತಾರೀಕಿನಿಂದ ಆರಂಭವಾಗಿ ನವೆಂಬರ್​ 8ನೇ ತಾರೀಕಿನ ತನಕ ಈ ದರ ಜಾರಿಯಲ್ಲಿ ಇರುತ್ತದೆ. ಗೃಹ ಸಾಲವೂ ಸೇರಿದಂತೆ ಫ್ಲೋಟಿಂಗ್ ರೀಟೇಲ್ ಸಾಲಗಳು ಎಕ್ಸ್​ಟರ್ನಲ್ ಬೆಂಚ್​ಮಾರ್ಕ್​ಗೆ ಜೋಡಣೆ ಆಗಿದೆ ಎಂದು ಖಾತ್ರಿ ಪಡಿಸಬೇಕಾಗುತ್ತದೆ. ಆದ್ದರಿಂದ ರೆಪೋ ದರದಲ್ಲಿ ಯಾವುದೇ ಏರಿಕೆ ಆದಲ್ಲಿ ಸಾಲದ ದರದಲ್ಲಿ ಬದಲಾವಣೆ ಆಗುತ್ತದೆ. ಸಾಲದ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಆದರೂ ಇದರಿಂದ ಮರುಹೊಂದಾಣಿಕೆ ಆಗುತ್ತದೆ.

ಅಗ್ಗದ ಗೃಹ ಸಾಲದ ಬಡ್ಡಿ ದರ ಇರುವ ಬ್ಯಾಂಕ್​ಗಳ ವಿವರ ಹೀಗಿವೆ:
ಕೊಟಕ್​ ಮಹೀಂದ್ರಾ ಬ್ಯಾಂಕ್* ಶೇ 6.5- ಶೇ 7.3
ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಶೇ 6.7- ಶೇ 7.3
ಬ್ಯಾಂಕ್​ ಆಫ್ ಬರೋಡ ಶೇ 6.75 ಮತ್ತು ಮೇಲ್ಪಟ್ಟ
ಎಚ್​ಡಿಎಫ್​ಸಿ ಲಿಮಿಟೆಡ್​ ಶೇ 6.75- 8
ಐಸಿಐಸಿಐ ಬ್ಯಾಂಕ್ ಶೇ 6.9- ಶೇ 8
ಆಕ್ಸಿಸ್ ಬ್ಯಾಂಕ್ ಶೇ 6.9 ಮತ್ತು ಮೇಲ್ಪಟ್ಟು
(* ಶೇ 6.5ರ ಬಡ್ಡಿ ದರ ಸೆಪ್ಟೆಂಬರ್​ 10ರಿಂದ ನವೆಂಬರ್ 8, 2021ರ ಮಧ್ಯೆ ಇರುತ್ತದೆ)

ಕಡಿಮೆ ಬಡ್ಡಿದರವು ಎಲ್ಲ ಗಾತ್ರದ ಮೊತ್ತಕ್ಕೂ ಲಭ್ಯ ಆಗುತ್ತದೆ ಎಂದು ಕೊಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕ ಆಸ್ತಿ ಅಧ್ಯಕ್ಷರಾದ ಅಂಬುಜ್ ಚಂದ್ರ ಹೇಳಿದ್ದಾರೆ. ಸದ್ಯಕ್ಕೆ ಶೇ 15ರಿಂದ 20ರಷ್ಟು ಬ್ಯಾಂಕ್​ನ ಹೋಮ್​ ಲೋನ್ ವಿತರಣೆ ಅತ್ಯಂತ ಕಡಿಮೆ ದರಕ್ಕೆ ಆಗುತ್ತಿದೆ. ಚಂದ್ರ ಅವರ ಪ್ರಕಾರ, ಬ್ಯಾಂಕ್​ ಪಾಲಿಗೆ ಗೃಹ ಸಾಲವು ಪ್ರಮುಖ ಗಮನ ಕೇಂದ್ರೀಕರಿಸುವ ಅಂಶವಾಗಿದೆ. ವೇತನದಾರರು ಮತ್ತು ಸ್ವ ಉದ್ಯೋಗಿ ಗ್ರಾಹಕರಿಗೆ ಗೃಹ ಸಾಲ ನೀಡುತ್ತಿದ್ದೇವೆ ಎಂದಿದ್ದಾರೆ. ಈಚೆಗೆ ಕ್ರೆಡಿಟ್​ ಕಾರ್ಡ್​ಗಳು ಸೇರಿದಂತೆ ಎಲ್ಲ ರೀಟೇಲ್​ ಉತ್ಪನ್ನಗಳಿಗೆ ಪ್ರಬಲ ಬೇಡಿಕೆ ಕಂಡುಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಜೂನ್ 30ಕ್ಕೆ ಆಸ್ತಿ ಅಡುಮಾನ ಮಾಡಿದ ಸಾಲ ಹಾಗೂ ಗೃಹ ಸಾಲ ವರ್ಷದಿಂದ ವರ್ಷಕ್ಕೆ ಶೇ 18ರಷ್ಟು ಹೆಚ್ಚಳವಾಗಿ, 55,623 ಕೋಟಿ ಆಗಿದೆ. ಬ್ಯಾಂಕಿಂಗ್​ ವಲಯದಲ್ಲಿ ಹೌಸಿಂಗ್ ಲೋನ್​ಗಳು ವರ್ಷದ ಹಿಂದಿನ ಅವಧಿಗೆ ಹೋಲಿಸಿದಲ್ಲಿ ಈ ಜುಲೈನಲ್ಲಿ ಶೇ 10ರಷ್ಟು ಏರಿಕೆ ಆಗಿದೆ.

ಇದನ್ನೂ ಓದಿ: Debit Card EMI: ಕೊಟಕ್ ಮಹೀಂದ್ರಾ ಡೆಬಿಟ್​ ಕಾರ್ಡ್​ದಾರರಿಗೆ ಸ್ಮಾರ್ಟ್ ಇಎಂಐ ಪರಿಚಯಿಸಿದ ಕೆಎಂಬಿಎಲ್

(Kotak Mahindra Bank Housing Loan Interest Rate Start At 6.5 Percent From September 10th To November 8th 2021)