AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Edible Oil: ಖಾದ್ಯ ತೈಲದ ಬೆಲೆ ಇಳಿಕೆ ಮಾಡಲು ಸೀಮಾ ಸುಂಕ ಕಡಿತಗೊಳಿಸಿದ ಕೇಂದ್ರ ಸರ್ಕಾರ

ಖಾದ್ಯತೈಲ ರೀಟೇಲ್ ದರವನ್ನು ಇಳಿಕೆ ಮಾಡುವ ದೃಷ್ಟಿಯಿಂದ ಆಮದು ಮೇಲಿನ ಸೀಮಾ ಸುಂಕವನ್ನು ಇಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

Edible Oil: ಖಾದ್ಯ ತೈಲದ ಬೆಲೆ ಇಳಿಕೆ ಮಾಡಲು ಸೀಮಾ ಸುಂಕ ಕಡಿತಗೊಳಿಸಿದ ಕೇಂದ್ರ ಸರ್ಕಾರ
ಪ್ರಾತಿನಿಧಿಕ ಚಿತ್ರ
TV9 Web
| Updated By: Srinivas Mata|

Updated on:Sep 11, 2021 | 9:19 PM

Share

ಖಾದ್ಯ ತೈಲ ಬೆಲೆ ಏರಿಕೆ ಆದ ಹಿನ್ನೆಲೆಯಲ್ಲಿ ಸರ್ಕಾರದಿಂದ ತಾಳೆ ಎಣ್ಣೆ, ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಸೀಮಾ ಸುಂಕ ಇಳಿಕೆ ಮಾಡಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಇಷ್ಟು ಕಾಲ ಶೇ 10ರಷ್ಟು ಇದ್ದ ಕಚ್ಚಾ ತಾಳೆ ಎಣ್ಣೆ ಮೇಲಿನ ಮೂಲ ಆಮದು ತೆರಿಗೆಯು ಶೇ 2.5ಕ್ಕೆ ಇಳಿಕೆ ಆಗಿದೆ. ಕಚ್ಚಾ ಸೋಯಾ ತೈಲ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ಶೇ 7.5ರಿಂದ ಶೇ 2.5ಕ್ಕೆ ಇಳಿಕೆ ಮಾಡಲಾಗಿದೆ ಎಂದು ಶುಕ್ರವಾರ ತಡವಾಗಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಶನಿವಾರದಿಂದ ಇದು ಜಾರಿಗೆ ಬಂದಿದೆ. ಈ ಇಳಿಕೆಯೊಂದಿಗೆ ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಪರಿಣಾಮಕಾರಿ ಸುಂಕವು ಶೇ 24.75ಕ್ಕೆ ಇಳಿದಿದೆ. ಈ ಹಿಂದೆ ಇದು ಶೇ 35.75 ಇತ್ತು ಎಂದು ಸಾಲ್ವೆಂಟ್ ಎಕ್ಸ್​ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (SEA) ಕಾರ್ಯನಿರ್ವಾಹಕ ನಿರ್ದೇಶಕ ಬಿ.ವಿ.ಮೆಹ್ತಾ ಅವರು ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ಈಗಿನ ಹೊಸ ದರ ಕಡಿತವು ರೀಟೇಲ್ ದರವನ್ನು ಲೀಟರ್​ಗೆ 4ರಿಂದ 5 ರೂಪಾಯಿ ಕಡಿಮೆ ಆಗುತ್ತದೆ ಎಂದು ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಆಗುವುದು ಕಷ್ಟ. ಭಾರತವು ಆಮದು ಸುಂಕದಲ್ಲಿ ಇಳಿಕೆ ಆಗಿರುವುದರಿಂದ ಲೀಟರ್​ಗೆ 2ರಿಂದ 3 ರೂಪಾಯಿ ಬೆಲೆ ಇಳಿದಿದೆ. ಸರ್ಕಾರವು ಸಾಸಿವೆ ಎಣ್ಣೆ ಮೇಲಿನ ಆಮದು ಸುಂಕವನ್ನೂ ಇಳಿಸಬೇಕಿತ್ತು. ಆಗ ಅದರ ಬೆಲೆ ಕೂಡ ಕಡಿಮೆ ಆಗುತ್ತಿತ್ತು ಎಂದು ಸೇರಿಸಲಾಗಿದೆ. ಕಳೆದ ಕೆಲವು ತಿಂಗಳಿಂದ ಕೇಂದ್ರದಿಂದ ವಿವಿಧ ಖಾದ್ಯ ತೈಲಗಳ ಬೆಲೆಯಲ್ಲಿ ಇಳಿಕೆ ಮಾಡುವ ಉದ್ದೇಶಕ್ಕೆ ಆಮದು ಸುಂಕವನ್ನು ಕಡಿಮೆ ಮಾಡಲಾಗಿದೆ. ಜತೆಗೆ ಖಾದ್ಯ ತೈಲಗಳು, ಎಣ್ಣೆಬೀಜಗಳ ದಾಸ್ತಾನಿನ ಬಗ್ಗೆ ಸಗಟು ಮಾರಾಟಗಾರರು, ಮಿಲ್ಲರ್​ಗಳು, ರಿಫೈನರ್​ಗಳು ಮತ್ತು ಸ್ಟಾಕಿಸ್ಟ್​ಗಳಿಂದ ಮಾಹಿತಿ ಕಲೆ ಹಾಕುವಂತೆ ರಾಜ್ಯಗಳಿಗೆ ತಿಳಿಸಲಾಗಿದೆ. 11,040 ಕೋಟಿ ರೂಪಾಯಿ ತಾಳೆ ಎಣ್ಣೆ ಮಿಷನ್ ಕೂಡ ಘೋಷಣೆ ಮಾಡಲಾಗಿದೆ.

ಪರೋಕ್ಷ ತೆರಿಗೆಗಳ ಕೇಂದ್ರೀಯ ಮಂಡಳಿ (CBIC) ಕಳೆದ ತಿಂಗಳು ಕಚ್ಚಾ ಸೋಯಾ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮೇಲೆ ಮೂಲ ಸೀಮಾ ಸುಂಕವನ್ನು ಅರ್ಧಕ್ಕೆ ಇಳಿಸಿ, ಶೇ 7.5ಕ್ಕೆ ತಂದಿತ್ತು. ಪೂರೈಕೆಗೆ ಉತ್ತೇಜನ ನೀಡುವುದಕ್ಕೆ ಹೀಗೆ ಮಾಡಲಾಗಿತ್ತು. ಕಚ್ಚಾ ತೈಲ ಮತ್ತು ಚಿನ್ನದ ನಂತರ ಭಾರತಕ್ಕೆ ಆಮದಾಗುವ ಮೂರನೇ ಪದಾರ್ಥ ಅಂದರೆ ಅದು ಖಾದ್ಯ ತೈಲ.

ಇದನ್ನೂ ಓದಿ: Edible Oil: ಭಾರತದ ಖಾದ್ಯ ತೈಲ ಆಮದು 6 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಯುವ ಸಾಧ್ಯತೆ

(Central Government Cuts Excise Duty To Ease Retail Price Of Edible Oil)

Published On - 7:51 pm, Sat, 11 September 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ