ಎಚ್ಚರ; ಕೋಟಕ್ ಮ್ಯೂಚುವಲ್ ಫಂಡ್ ಹೆಸರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆಗಳು
ಬ್ರ್ಯಾಂಡ್ ಹೆಸರು, ಲೋಗೊ, ವಕ್ತಾರರ ಐಡೆಂಟಿಟಿಯನ್ನು ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ದುರ್ಬಳಕೆ ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಪ್ರಕಟಣೆಯಲ್ಲಿ ಕಂಪನಿ ಉಲ್ಲೇಖಿಸಿದೆ.
ಮುಂಬೈ: ಕೋಟಕ್ ಮ್ಯೂಚವಲ್ ಫಂಡ್ (Kotak Mutual Fund) ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಕೆಲವು ನಕಲಿ ಖಾತೆಗಳು ತೆರೆದಿರುವುದು ಗಮನಕ್ಕೆ ಬಂದಿದೆ. ನಕಲಿ ಟೆಲಿಗ್ರಾಂ ಗ್ರೂಪ್ಗಳೂ ಕಾರ್ಯಾಚರಿಸುತ್ತಿರುವುದು ಗೊತ್ತಾಗಿದೆ. ಹೂಡಿಕೆದಾರುರು, ಉದ್ಯಮ ಪಾಲುದಾರರು ಹಾಗೂ ಸಾರ್ವಜನಿಕರು ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಮ್ಯೂಚುವಲ್ ಫಂಡ್ ಕಂಪನಿ ತಿಳಿಸಿದೆ. ‘ಎಚ್ಚರದಿಂದಿರಿ. ನಕಲಿ ಟೆಲಿಗ್ರಾಂ ಗ್ರೂಪ್ಗಳು ಮತ್ತು ಇತರ ಸಾಮಾಜಿಕ ಮಾಧ್ಯಮ ಖಾತೆಗಳಿಂದ ವಂಚನೆಗೆ ಒಳಗಾಗಬೇಡಿ’ ಎಂದು ಹೂಡಿಕೆದಾರರು, ಉದ್ಯಮ ಪಾಲುದಾರರನ್ನು ಉದ್ದೇಶಿಸಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಕೋಟಕ್ ಮಹೀಂದ್ರಾ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ತಿಳಿಸಿದೆ.
ಬ್ರ್ಯಾಂಡ್ ಹೆಸರು, ಲೋಗೊ, ವಕ್ತಾರರ ಐಡೆಂಟಿಟಿಯನ್ನು ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಟೆಲಿಗ್ರಾಂ ಗ್ರೂಪ್ಗಳಲ್ಲಿ ದುರ್ಬಳಕೆ ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಪ್ರಕಟಣೆಯಲ್ಲಿ ಕಂಪನಿ ಉಲ್ಲೇಖಿಸಿದೆ.
‘ಕೋಟಕ್ ಮ್ಯೂಚುವಲ್ ಫಂಡ್ ಒಂದು ಅಧಿಕೃತ ಟೆಲಿಗ್ರಾಂ ಹ್ಯಾಂಡಲ್ ಅನ್ನು ಮಾತ್ರ (https://t.me/kotakmutualfund) ಒಳಗೊಂಡಿದೆ. ಕಂಪನಿಯು ಹೂಡಿಕೆದಾರರನ್ನು ಯಾವುದೇ ರೀತಿಯಲ್ಲೂ ಅಸಹ ಹೂಡಿಕೆಗೆ ಪ್ರೇರೇಪಿಸಿ ಹಾದಿ ತಪ್ಪಿಸುವ ಕೃತ್ಯ ಎಸಗುವುದಿಲ್ಲ. ಮ್ಯೂಚುವಲ್ ಫಂಡ್ ಹೂಡಿಕೆ ಮಾರುಕಟ್ಟೆ ರಿಸ್ಕ್ಗಳಿಗೆ ಕಾಣರವಾಗಬಹುದು. ಹೂಡಿಕೆ ಮಾಡುವ ಮುನ್ನ ಅದಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಓದಿಕೊಂಡು, ಡಾಖಲೆಗಳನ್ನು ಗಮನಿಸಬೇಕು’ ಎಂದು ಕಂಪನಿ ಮನವಿ ಮಾಡಿದೆ.
‘ವಂಚನೆಯ ಗ್ರೂಪ್ಗಳ ಬಗ್ಗೆ ಬಳಕೆದಾರರು ಮತ್ತು ಹೂಡಿಕೆದಾರರು ದಯಮಾಡಿ abuse@telegram.org ಗೆ ರಿಪೋರ್ಟ್ ಮಾಡಿ. mutual@kotak.com ಗೆ ಸಂದೇಶ ಕಳುಹಿಸಿ ಗಮನಕ್ಕೆ ತನ್ನಿ’ ಎಂದು ಕೋಟಕ್ ಮ್ಯೂಚವಲ್ ಫಂಡ್ ವಿನಂತಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ