KV Kamath: ರಿಲಯನ್ಸ್ ಇಂಡಸ್ಟ್ರೀಸ್ ಸ್ವತಂತ್ರ ನಿರ್ದೇಶಕರಾಗಿ ಕುಂದಾಪುರದ ಕೆವಿ ಕಾಮತ್ ನೇಮಕ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವ 74 ವರ್ಷದ ಕುಂದಾಪುರ ವಾಮನ ಕಾಮತ್ 5 ವರ್ಷಗಳ ಅವಧಿಗೆ ರಿಲಯನ್ಸ್ ಇಂಡಸ್ಟ್ರೀಸ್ ಸ್ವತಂತ್ರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಮುಂಬೈ: ಕುಂದಾಪುರ ಮೂಲದ ಕನ್ನಡಿಗರಾದ ಕೆವಿ ಕಾಮತ್ (K V Kamath) ಅವರನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ (Reliance Industries Ltd) ಸ್ವತಂತ್ರ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವ 74 ವರ್ಷದ ಕುಂದಾಪುರ ವಾಮನ ಕಾಮತ್ 5 ವರ್ಷಗಳ ಅವಧಿಗೆ ರಿಲಯನ್ಸ್ ಇಂಡಸ್ಟ್ರೀಸ್ ಸ್ವತಂತ್ರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಐಐಎಂ ಅಹಮದಾಬಾದ್ನ ಪದವೀಧರರಾದ ಕೆ.ವಿ. ಕಾಮತ್ ಖ್ಯಾತ ಬ್ಯಾಂಕರ್ ಆಗಿದ್ದು, ಅವರು 1971ರಲ್ಲಿ ಐಸಿಐಸಿಐ ಬ್ಯಾಂಕ್ನಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. 1988ರಲ್ಲಿ ಅವರು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB)ಗೆ ತೆರಳಿದರು. 1996ರಲ್ಲಿ ಐಸಿಐಸಿಐಗೆ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿ ನೇಮಕಗೊಂಡರು. 2009ರಲ್ಲಿ ಕೆವಿ ಕಾಮತ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನಿವೃತ್ತರಾದರು. ಬಳಿಕ 2015ರವರೆಗೆ ಐಸಿಐಸಿಐ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.
Reliance Strategic Investments (RSIL) appoints KV Kamath as non-executive Chairman. RSIL will be renamed as Jio Financial Services & will be listed.
KV Kamath will continue as Independent Director & non-executive Chairman of JFSL
(File photo). pic.twitter.com/TPfF83pAIV
— ANI (@ANI) November 4, 2022
ಕೆವಿ ಕಾಮತ್ ಇನ್ಫೋಸಿಸ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 2015ರಲ್ಲಿ ಅವರು ಬ್ರಿಕ್ಸ್ ದೇಶಗಳು ಸ್ಥಾಪಿಸಿದ ಹೊಸ ಅಭಿವೃದ್ಧಿ ಬ್ಯಾಂಕ್‌ನ ಮೊದಲ ಅಧ್ಯಕ್ಷರಾಗಿ ನೇಮಕಗೊಂಡರು. ಅವರು 2020ರಲ್ಲಿ ಆ ಸ್ಥಾನದಿಂದ ನಿವೃತ್ತರಾದರು. ಕೆವಿ ಕಾಮತ್ ಅವರು ಪ್ರಸ್ತುತ ನ್ಯಾಷನಲ್ ಬ್ಯಾಂಕ್ ಫಾರ್ ಫೈನಾನ್ಸಿಂಗ್ ಇನ್ಫ್ರಾಸ್ಟ್ರಕ್ಚರ್ ಆ್ಯಂಡ್ ಡೆವಲಪ್‌ಮೆಂಟ್ (NaBFID) ಅಧ್ಯಕ್ಷರಾಗಿದ್ದಾರೆ.
ಇದನ್ನೂ ಓದಿ: Reliance Jio: 100GB ಫ್ರೀ ಡೇಟಾ: ರಿಲಯನ್ಸ್ ಜಿಯೋದಿಂದ ಹಿಂದೆಂದೂ ನೀಡಿರದ ಬಂಪರ್ ಆಫರ್
ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕರ ಮಂಡಳಿಯು ಶುಕ್ರವಾರ ನಡೆಸಿದ ಸಭೆಯಲ್ಲಿ ಮಾನವ ಸಂಪನ್ಮೂಲ, ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಕೆ.ವಿ. ಕಾಮತ್ ಅವರನ್ನು ರಿಲಯನ್ಸ್ ಕಂಪನಿಯ ಸ್ವತಂತ್ರ ನಿರ್ದೇಶಕರಾಗಿ ನೇಮಕ ಮಾಡಲು ಷೇರುದಾರರಿಗೆ ಶಿಫಾರಸು ಮಾಡಿದೆ. ಅವರನ್ನು ರಿಲಯನ್ಸ್ ಸ್ಟ್ರಾಟಜಿಕ್ ಇನ್ವೆಸ್ಟ್ಮೆಂಟ್ ಲಿಮಿಟೆಡ್ನ ಸ್ವತಂತ್ರ ನಿರ್ದೇಶಕರನ್ನಾಗಿ ಹಾಗೂ ನಾನ್ ಎಕ್ಸಿಕ್ಯೂಟಿವ್ ಚೇರ್ಮನ್ ಆಗಿಯೂ ನೇಮಕ ಮಾಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:14 am, Sat, 5 November 22




