Master Card: ಮಾಸ್ಟರ್ ಕಾರ್ಡ್ಗೆ ಹೊಸ ಗ್ರಾಹಕರ ಸೇರ್ಪಡೆಗೆ ನಿರ್ಬಂಧದ ಸುತ್ತಲ ಬೆಳವಣಿಗೆ ಇಲ್ಲಿದೆ
ಡೇಟಾ ಸ್ಟೋರೇಜ್ ನಿಯಮಾವಳಿಯನ್ನು ಉಲ್ಲಂಘನೆ ಮಾಡಿದೆ ಎಂಬ ಕಾರಣಕ್ಕೆ ಮಾಸ್ಟರ್ ಕಾರ್ಡ್ಗೆ ಹೊಸ ಗ್ರಾಹಕರನ್ನು ಜುಲೈ 22ನೇ ತಾರೀಕಿನಿಂದ ಸೇರ್ಪಡೆ ಮಾಡಿಕೊಳ್ಳುವಂತಿಲ್ಲ ಎಂದು ಘೋಷಣೆ ಮಾಡಿದ ನಂತರದ ಬೆಳವಣಿಗೆ ಇಲ್ಲಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಬುಧವಾರ ಮಹತ್ವದ ಆದೇಶ ಹೊರಬಿದ್ದಿದೆ. ಜುಲೈ 22ನೇ ತಾರೀಕಿನಿಂದ ಆಚೆಗೆ ಮಾಸ್ಟರ್ ಕಾರ್ಡ್ಗೆ ಸೇರ್ಪಡೆ ಮಾಡಿಕೊಳ್ಳುವಂತಿಲ್ಲ ಎಂಬ ಸೂಚನೆಯನ್ನು ನೀಡಲಾಗಿದೆ. ಡೇಟಾ ಸ್ಟೋರೇಜ್ ನಿಯಮಾವಳಿಯನ್ನು ಉಲ್ಲಂಘನೆ ಮಾಡಿದೆ ಎಂಬ ಕಾರಣಕ್ಕೆ ಮಾಸ್ಟರ್ ಕಾರ್ಡ್ ವಿರುದ್ಧ ಇಂಥದ್ದೊಂದು ನಿರ್ಣಯ ಕೈಗೊಳ್ಳಲಾಗಿದೆ. ಭಾರತದಲ್ಲಿನ ಪಾವತಿಗೆ ಸಂಬಂಧಿಸಿದ ದತ್ತಾಂಶವನ್ನು ದೇಶದಲ್ಲೇ ಸಂಗ್ರಹಿಸಬೇಕು ಎಂಬುದು ನಿಯಮವಾಗಿತ್ತು. ವಿದೇಶೀ ಕಾರ್ಡ್ಗಳು ಸಹ ಭಾರತದಲ್ಲೇ ಪಾವತಿಯ ಮಾಹಿತಿಯನ್ನು ಸಂಗ್ರಹಿಸಬೇಕು ಎಂಬುದು ಆರ್ಬಿಐ ನಿಯಮವಾಗಿದ್ದು, ಅದನ್ನು ಮಾಸ್ಟರ್ ಕಾರ್ಡ್ ಉಲ್ಲಂಘನೆ ಮಾಡಿರುವುದು ಈಗಿನ ನಡೆಗೆ ಕಾರಣವಾಗಿದೆ. ಈಗಿನ ಬೆಳವಣಿಗೆ ಬಗ್ಗೆ ಪ್ರಮುಖಾಂಶಗಳು ಇಲ್ಲಿವೆ:
1. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕರಣ ನಂತರ ಆರ್ಬಿಎಲ್ ಬ್ಯಾಂಕ್ ಗುರುವಾರ ಹೇಳಿರುವ ಪ್ರಕಾರ, ವೀಸಾ ಇಂಕ್ ಜತೆಗೆ ಅದರ ಕ್ರೆಡಿಟ್ ಕಾರ್ಡ್ಸ್ಗಳಿಗಾಗಿ ಸಹಿ ಹಾಕಿದೆ. ಇದು ಪೂರ್ಣಗೊಂಡಲ್ಲಿ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ.
2. ಇನ್ನು 8ರಿಂದ 10 ವಾರಗಳಲ್ಲಿ ಹೊಸ ಕ್ರೆಡಿಟ್ ಕಾರ್ಡ್ಗಳನ್ನು ವೀಸಾ ನೆಟ್ವರ್ಕ್ ಅಡಿಯಲ್ಲಿ ವಿತರಣೆ ಮಾಡುವುದಕ್ಕೆ ಯೋಜನೆ ಹಾಕಿಕೊಂಡಿದೆ ಆರ್ಬಿಎಲ್. ಅದಕ್ಕೂ ಮುನ್ನ ತಾಂತ್ರಿಕವಾಗಿ ಇಂಟಿಗ್ರೇಷನ್ ಆಗಬೇಕು.
3. ವಿದೇಶೀ ಕಾರ್ಡ್ ನೆಟ್ವರ್ಕ್ಗಳು ಸಹ ಭಾರತದಲ್ಲಿನ ಪಾವತಿ ಡೇಟಾವನ್ನು ದೇಶದಲ್ಲೇ ಸಂಗ್ರಹಿಸಬೇಕು ಎಂದು 2018ರಲ್ಲಿ ಡೇಟಾ ಸ್ಟೋರೇಜ್ ನಿಯಮಾವಳಿಯನ್ನು ಉಲ್ಲಂಘಿಸಿದೆ ಎಂಬ ಕಾರಣಕ್ಕೆ ಮಾಸ್ಟರ್ ಕಾರ್ಡ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.
4. ಮಾಸ್ಟರ್ ಕಾರ್ಡ್ ಅಡಿಯಲ್ಲಿ ಬರುವಂಥ ಡೆಬಿಟ್, ಕ್ರೆಡಿಟ್ ಮತ್ತು ಪ್ರೀಪೇಯ್ಡ್ ಕಾರ್ಡ್ ಈ ಮೂರಕ್ಕೂ ಹೊಸದಾಗಿ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳುವಂತಿಲ್ಲ.
5. ಆರ್ಬಿಐ ತಿಳಿಸಿರುವಂತೆ, ಈಗಿನ ನಿರ್ಧಾರದಿಂದ ಈಗಾಗಲೇ ಇರುವ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಎಲ್ಲ ಬ್ಯಾಂಕ್ಗಳು, ಬ್ಯಾಂಕಿಂಗೇತರ ಸಂಸ್ಥೆಗಳಿಗೆ ಆರ್ಬಿಐನ ನಿರ್ಧಾರದ ಬಗ್ಗೆ ಮಾಹಿತಿ ನೀಡುವಂತೆ ಮಾಸ್ಟರ್ ಕಾರ್ಡ್ಗೆ ಸೂಚಿಸಲಾಗಿದೆ.
6. ಸೂಕ್ತ ಸಮಯ ಮತ್ತು ಅವಕಾಶವನ್ನು ಮಾಸ್ಟರ್ ಕಾರ್ಡ್ಗೆ ನೀಡಿದ ಹೊರತಾಗಿಯೂ ಡೇಟಾ ಸ್ಟೋರೇಜ್ ನಿಯಮಾವಳಿ ವಿಷಯದಲ್ಲಿ ಪಾಲನೆ ಮಾಡಲಿಲ್ಲ ಎಂದು ಆರ್ಬಿಐ ಹೇಳಿದೆ.
7. 2018ರಿಂದಲೂ ನಿಯಮಾವಳಿ ಪಾಲನೆ ಬಗ್ಗೆ ನಿರಂತರ ಅಪ್ಡೇಟ್ ಮಾಡಲಾಗುತ್ತಿದೆ. ಆರ್ಬಿಐನ ಈಗಿನ ನಿರ್ಧಾರದಿಂದ “ನಿರಾಸೆಯಾಗಿದೆ” ಎಂದು ಮಾಸ್ಟರ್ ಕಾರ್ಡ್ ಹೇಳಿದೆ.
8. ಈ ವರ್ಷದ ಏಪ್ರಿಲ್ನಲ್ಲಿ ಆರ್ಬಿಐನಿಂದ ಅಮೆರಿಕನ್ ಎಕ್ಸ್ಪ್ರೆಸ್ ಮತ್ತು ಡೈನರ್ಸ್ ಕ್ಲಬ್ಗೆ ಕೂಡ ಮೇ 1, 2021ರಿಂದ ಹೊಸದಾಗಿ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳುವುದರಿಂದ ನಿರ್ಬಂಧ ಹೇರಿತ್ತು.
9. ಈ ಎರಡೂ ಪೇಮೆಂಟ್ ಕಂಪೆನಿಗಳು ಆರ್ಬಿಐ ಡೇಟಾ ಸ್ಟೋರೇಜ್ ನಿಯಮಾವಳಿಗಳು ಪಾಲನೆ ಆಗಿರಲಿಲ್ಲ.
ಇದನ್ನೂ ಓದಿ: Master Card: ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಮಾಸ್ಟರ್ ಕಾರ್ಡ್ಗೆ ನಿರ್ಬಂಧ ವಿಧಿಸಿದ ಆರ್ಬಿಐ
(Here are the latest developments after RBI barred Master Card from adding new customers due to non compliance of data storage rule)