Laxman Narasimhan Net Worth: ಸ್ಟಾರ್‌ಬಕ್ಸ್ ಹೊಸ ಸಿಇಒ ಲಕ್ಷ್ಮಣ್ ನರಸಿಂಹನ್ ಆಸ್ತಿ, ಶಿಕ್ಷಣ, ಕುಟುಂಬದ ಬಗ್ಗೆ ನಿಮಗೆಷ್ಟು ಗೊತ್ತು?
ಲಕ್ಷ್ಮಣ್ ನರಸಿಂಹನ್ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಮ್ಯಾಕಿನ್ಸೆ ಆ್ಯಂಡ್ ಕಂಪನಿಯೊಂದಿಗೆ 2 ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ. ಸ್ಟಾರ್‌ಬಕ್ಸ್ ಅವರು 2022ರ ಸೆಪ್ಟೆಂಬರ್ 1ರಂದು ಸಿಇಒ ಆಗಿ ಲಕ್ಷ್ಮಣ್ ನರಸಿಂಹನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ನವದೆಹಲಿ: ಪ್ರಸಿದ್ಧ ಕಾಫಿ ಕಂಪನಿಯಾಗಿರುವ ಸ್ಟಾರ್‌ಬಕ್ಸ್ ಸಿಇಒ ಆಗಿ ನೇಮಕವಾಗಿರುವ ಲಕ್ಷ್ಮಣ್ ನರಸಿಂಹನ್ (Laxman Narasimhan) ಇದೀಗ ಭಾರೀ ಚರ್ಚೆಯಲ್ಲಿರುವ ಹೆಸರು. ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಹುದ್ದೆಗೆ ಏರಿದ ಭಾರತೀಯ ಮೂಲದ ಉದ್ಯಮಿಗಳ ಪಟ್ಟಿಗೆ ಇದೀಗ ಲಕ್ಷ್ಮಣ್ ನರಸಿಂಹನ್ ಕೂಡ ಸೇರಿಕೊಂಡಿದ್ದಾರೆ. ಲಕ್ಷ್ಮಣ್ ನರಸಿಂಹನ್ ಎಂಬ ಈ ಭಾರತೀಯ- ಅಮೆರಿಕನ್ ವ್ಯಕ್ತಿ ರೆಕಿಟ್ ಬೆನ್‌ಕೈಸರ್‌ನ CEO ಆಗಿ ಸೇವೆ ಸಲ್ಲಿಸಿದ್ದವರು. ಈ ಹಿಂದೆ ಪೆಪ್ಸಿಕೋದ ಉನ್ನತ ವಾಣಿಜ್ಯ ಅಧಿಕಾರಿಯೂ ಆಗಿದ್ದರು. ಲಕ್ಷ್ಮಣ್ ನರಸಿಂಹನ್ ಅವರನ್ನು ಗುರುವಾರ ಸ್ಟಾರ್‌ಬಕ್ಸ್‌ನ (Starbucks) ಹೊಸ CEO ಆಗಿ ನೇಮಿಸಲಾಗಿದೆ.
ಲಕ್ಷ್ಮಣ್ ನರಸಿಂಹನ್ ಅವರು 1967ರ ಏಪ್ರಿಲ್ 15ರಂದು ಜನಿಸಿದರು. ಅವರಿಗೆ ಈಗ 55 ವರ್ಷ. ಲಕ್ಷ್ಮಣ್ ನರಸಿಂಹನ್ ಪುಣೆಯಲ್ಲಿ ಹುಟ್ಟಿ ಬೆಳೆದರು. ಅವರು ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಕಾಲೇಜಿನಿಂದ ತಮ್ಮ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.
ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ದಿ ಲಾಡರ್ ಇನ್ಸ್ಟಿಟ್ಯೂಟ್ನಿಂದ ಜರ್ಮನ್ ಮತ್ತು ಅಂತಾರಾಷ್ಟ್ರೀಯ ಅಧ್ಯಯನಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. ಹಾಗೇ, ವಾರ್ಟನ್ ಶಾಲೆಯಿಂದ ಹಣಕಾಸು ವಿಷಯದಲ್ಲಿ MBA ಪದವಿ ಪಡೆದಿದ್ದಾರೆ.
ಇದನ್ನೂ ಓದಿ: Big News: ಸ್ಟಾರ್‌ಬಕ್ಸ್ ನೂತನ ಸಿಇಒ ಆಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ನೇಮಕ
ಲಕ್ಷ್ಮಣ್ ನರಸಿಂಹನ್ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಮ್ಯಾಕಿನ್ಸೆ ಆ್ಯಂಡ್ ಕಂಪನಿಯೊಂದಿಗೆ 2 ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ. ನಿರ್ದೇಶಕ ಸ್ಥಾನವನ್ನು ನೀಡುವ ಮೊದಲು ಅವರು ನವದೆಹಲಿಯಲ್ಲಿ ಕಂಪನಿಯ ಸ್ಥಳ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದರು. ಅವರು 2012ರಲ್ಲಿ ಪೆಪ್ಸಿಕೋಗೆ ಸೇರಿದರು ಮತ್ತು ಗ್ಲೋಬಲ್ ಚೀಫ್ ಕಮರ್ಷಿಯಲ್ ಆಫೀಸರ್ ಸೇರಿದಂತೆ ಹಲವಾರು ಕಾರ್ಯನಿರ್ವಾಹಕ ಹುದ್ದೆಗಳನ್ನು ವಹಿಸಿಕೊಂಡರು,
ಸೆಪ್ಟೆಂಬರ್ 2019ರಲ್ಲಿ ಲಕ್ಷ್ಮಣ್ ನರಸಿಂಹನ್ ರಾಕೇಶ್ ಕಪೂರ್ ಅವರಿಂದ ರೆಕಿಟ್ ಬೆನ್ಕಿಸರ್‌ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು. ಸ್ಟಾರ್‌ಬಕ್ಸ್ ಅವರು 2022ರ ಸೆಪ್ಟೆಂಬರ್ 1ರಂದು ಸಿಇಒ ಆಗಿ ಲಕ್ಷ್ಮಣ್ ನರಸಿಂಹನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ: ಮಾಜಿ ಕಾರ್ಪೊರೇಟರ್ ಸಿ.ಜಿ ಗೌರಮ್ಮರಿಗೆ ಸೇರಿದ 3.35 ಕೋಟಿ ಆಸ್ತಿ ಜಪ್ತಿ ಮಾಡಿದ ಇ.ಡಿ
ಲಕ್ಷ್ಮಣ್ ನರಸಿಂಹನ್ ಅವರಿಗೆ ಮದುವೆಯಾಗಿದೆ. ಅವರಿಗೆ ಮಕ್ಕಳೂ ಇದ್ದಾರೆ. ಲಕ್ಷ್ಮಣ್ ನರಸಿಂಹನ್ ಅವರ ಆಸ್ತಿ ಸುಮಾರು 25.3 ಮಿಲಿಯನ್ ರೂ. ಮೌಲ್ಯದ್ದಾಗಿದೆ. ಲಕ್ಷ್ಮಣ್ ನರಸಿಂಹನ್ ಅವರು 1.6 ಮಿಲಿಯನ್ ಡಾಲರ್ ನಗದು ಬೋನಸ್ ಜೊತೆಗೆ ಇಡೀ ವರ್ಷಕ್ಕೆ ಮೂಲ ವೇತನದಲ್ಲಿ 1.3 ಮಿಲಿಯನ್ ಡಾಲರ್ ಗಳಿಸುತ್ತಾರೆ.