ಅಕ್ರಮ ಆಸ್ತಿ ಗಳಿಕೆ: ಮಾಜಿ ಕಾರ್ಪೊರೇಟರ್ ಸಿ.ಜಿ ಗೌರಮ್ಮರಿಗೆ ಸೇರಿದ 3.35 ಕೋಟಿ ಆಸ್ತಿ ಜಪ್ತಿ ಮಾಡಿದ ಇ.ಡಿ

ಅಧಿಕಾರ ದುರುಪಯೋಗಪಡಿಸಿಕೊಂಡು 2010-2013ರವರೆಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ರು. ಹೀಗಾಗಿ ಸಿ.ಜಿ.ಗೌರಮ್ಮ, ಪತಿ ಗೋವಿಂದರಾಜು ವಿರುದ್ಧ ಕೇಸ್ ದಾಖಲಾಗಿತ್ತು.

ಅಕ್ರಮ ಆಸ್ತಿ ಗಳಿಕೆ: ಮಾಜಿ ಕಾರ್ಪೊರೇಟರ್ ಸಿ.ಜಿ ಗೌರಮ್ಮರಿಗೆ ಸೇರಿದ 3.35 ಕೋಟಿ ಆಸ್ತಿ ಜಪ್ತಿ ಮಾಡಿದ ಇ.ಡಿ
ಸಾಂದರ್ಭಿಕ ಚಿತ್ರ
TV9kannada Web Team

| Edited By: Ayesha Banu

Aug 02, 2022 | 7:46 PM

ಬೆಂಗಳೂರು: ನಿಗದಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದ ಹಿನ್ನೆಲೆ ಜಾರಿ ನಿರ್ದೇಶನಾಲಯ (ಇಡಿ) ಬೆಂಗಳೂರಿನ ಆಜಾದ್‌ನಗರ ವಾರ್ಡ್‌ನ ಮಾಜಿ ಕಾರ್ಪೊರೇಟರ್ ಸಿ.ಜಿ.ಗೌರಮ್ಮ ಅವರಿಗೆ ಸೇರಿದ 3.35 ಕೋಟಿ ರೂ.ಗಳ ಸ್ಥಿರಾಸ್ತಿಯನ್ನು ಜಪ್ತಿ ಮಾಡಿದೆ.

ಅಧಿಕಾರ ದುರುಪಯೋಗಪಡಿಸಿಕೊಂಡು 2010-2013ರವರೆಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ರು. ಹೀಗಾಗಿ ಸಿ.ಜಿ.ಗೌರಮ್ಮ, ಪತಿ ಗೋವಿಂದರಾಜು ವಿರುದ್ಧ ಕೇಸ್ ದಾಖಲಾಗಿತ್ತು. ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಸೆಕ್ಷನ್ 13 (2) ಮತ್ತು ಭಾರತೀಯ ದಂಡ ಸಂಹಿತೆಯ 120 (ಬಿ) ಅಡಿಯಲ್ಲಿ ಅಪರಾಧಕ್ಕಾಗಿ ಬೆಂಗಳೂರಿನ ಆಜಾದ್ ನಗರದ ವಾರ್ಡ್ ನಂ.141ನ ಮಾಜಿ ಕಾರ್ಪೊರೇಟರ್ ಸಿ.ಜಿ.ಗೌರಮ್ಮ ಮತ್ತು ಅವರ ಪತಿ ಸಿ.ಗೋವಿಂದರಾಜು ವಿರುದ್ಧ ಬೆಂಗಳೂರಿನ ಕರ್ನಾಟಕ ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಮನಿ ಲಾಂಡರಿಂಗ್ ತನಿಖೆಯನ್ನು ಪ್ರಾರಂಭಿಸಿತು.

ಸಿ.ಜಿ. ಗೌರಮ್ಮ ಅವರು ಕಾರ್ಪೊರೇಟರ್ ಆಗಿ ಈ ಅವಧಿಯಲ್ಲಿ ತಮ್ಮ ಅಧಿಕೃತ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ತಮ್ಮ ಪತಿ ಸಿ.ಗೋವಿಂದರಾಜು ಅವರೊಂದಿಗೆ ಶಾಮೀಲಾಗಿ ಅಪರಾಧದ ಆದಾಯವನ್ನು ಸೃಷ್ಟಿಸಿದ್ದಾರೆ. ಅದನ್ನು ನಗದು ರೂಪದಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವ ಮೂಲಕ ಮತ್ತು ವಿವಿಧ ಸ್ಥಿರಾಸ್ತಿಗಳನ್ನು ನಗದು ರೂಪದಲ್ಲಿ ಪಡೆಯುವ ಮೂಲಕ ಅಪರಾಧದ ಆದಾಯವನ್ನು ಲಪಟಾಯಿಸಿದ್ದಾರೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.

ಸಿ.ಜಿ. ಗೌರಮ್ಮ ಮತ್ತು ಅವರ ಪತಿ ಸಿ. ಗೋವಿಂದರಾಜು ಅವರು 2010-11 ರಿಂದ 2012-13ರ ಹಣಕಾಸು ವರ್ಷದಲ್ಲಿ 3.46 ಕೋಟಿ ರೂ.ಗಳ ಅಕ್ರಮ ಆಸ್ತಿಯನ್ನು ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗೆ ಗುರುತಿಸಲಾದ ಸ್ಥಿರ ಆಸ್ತಿಗಳಲ್ಲಿ ಕೃಷಿ ಭೂಮಿ, ವಸತಿ ನಿವೇಶನಗಳು ಮತ್ತು ವಾಣಿಜ್ಯ ನಿವೇಶನಗಳು ಸೇರಿವೆ. ಈ ಪ್ರಕರಣದಲ್ಲಿ ಆಜಾದ್ ನಗರದ ಮಾಜಿ ಕಾರ್ಪೊರೇಟರ್ ಸಿ.ಜಿ ಗೌರಮ್ಮ ಅವರಿಗೆ ಸಂಬಂಧಿಸಿದಂತ 3.35 ಕೋಟಿ ರೂ ಸ್ಥಿರಾಸ್ತಿಯನ್ನು ಸೀಜ್ ಮಾಡಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada