ಕೊರೋನಾ ಸೋಂಕಿನ ರೀತಿ ಮಂಕಿಪಾಕ್ಸ್ ಸೋಂಕು ಹರಡುವುದಿಲ್ಲ: ಸಚಿವ ಸುಧಾಕರ್

ಮಂಕಿಪಾಕ್ಸ್​ ಸೋಂಕು ಬರದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

ಕೊರೋನಾ ಸೋಂಕಿನ ರೀತಿ ಮಂಕಿಪಾಕ್ಸ್ ಸೋಂಕು ಹರಡುವುದಿಲ್ಲ: ಸಚಿವ ಸುಧಾಕರ್
ಸಚಿವ ಡಾ. ಕೆ ಸುಧಾಕರ್
Follow us
TV9 Web
| Updated By: ವಿವೇಕ ಬಿರಾದಾರ

Updated on:Aug 02, 2022 | 6:14 PM

ಬೆಂಗಳೂರು: ಮಂಕಿಪಾಕ್ಸ್ (Monkeypox)​ ಸೋಂಕು ಬರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಬೆಂಗಳೂರಿನಲ್ಲಿ (Bengaluru) ಆರೋಗ್ಯ ಸಚಿವ ಡಾ. ಸುಧಾಕರ್ (K Sudhakar) ಹೇಳಿದ್ದಾರೆ.  ಏರ್​​ಪೋರ್ಟ್​ನಲ್ಲಿ ಥರ್ಮಲ್ ಸ್ಕ್ರೀನಿಂಗ್​ ನಡೆಸಲು ಸೂಚನೆ ನೀಡಿದ್ದೇನೆ. ಕೊವಿಡ್ ಸೋಂಕಿನ ರೀತಿ ಮಂಕಿಪಾಕ್ಸ್ ಸೋಂಕು ಹರಡುವುದಿಲ್ಲ. ಕೇರಳ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ ಎಂದರು.

ಮಂಕಿಪಾಕ್ಸ್ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ವಿಶೇಷ ಸಭೆ ಮಾಡಿದ್ದೇವೆ. ಮುಖ್ಯಮಂತ್ರಿಗಳು ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಪಡೆದರು. ಸುಮಾರು ೮೦ ದೇಶದಲ್ಲಿ ೨೦ ಸಾವಿರ ಜನರಿಗೆ ಈ ಸೋಂಕು ಹರಡಿದೆ. ಭಾರತದಲ್ಲಿ ಇದುವರೆಗೆ 6 ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.

ಕೇರಳ 4 ಹಾಗೂ ದೆಹಲಿ 2 ಪ್ರಕರಣ ಪತ್ತೆಯಾಗಿದ್ದು. ಕರ್ನಾಟಕದಲ್ಲಿ 3 ಶಂಕಿತ  ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರುನಲ್ಲಿ 2 ಹಾಗೂ ಉತ್ತರ ಕನ್ನಡ  1 ಶಂಕಿತ ಪ್ರಕರಣ ಇದೆ.  ಮಂಗಳೂರಿನ ವೆನ್ ಲಾಕ್ ಆಸ್ಪತ್ರೆ ಹಾಗೂ ಬೆಂಗಳೂರಿನಲ್ಲಿ ಒಂದು ಆಸ್ಪತ್ರೆ ಚಿಕಿತ್ಸೆಗಾಗಿ ಮೀಸಲಿಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

Published On - 6:14 pm, Tue, 2 August 22