layoffs: ಮೆಟಾ, ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಘೋಷಣೆ, ಸಂಕಷ್ಟದಲ್ಲಿ ದೈತ್ಯ ಕಂಪನಿಗಳು

ಮೆಟಾ ಮತ್ತು ಮೈಕ್ರೋಸಾಫ್ಟ್ ಸಿಯಾಟಲ್, ಯುಎಸ್‌ನ ವಾಷಿಂಗ್ಟನ್‌ನಲ್ಲಿರುವ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದೆ. ಅನೇಕ ದೈತ್ಯ ಕಂಪನಿಗಳು ಆರ್ಥಿಕ ಹಿಂಜರಿತ ಕಾರಣವನ್ನು ನೀಡಿ ಸಾವಿರರೂ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ.

layoffs: ಮೆಟಾ, ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಘೋಷಣೆ, ಸಂಕಷ್ಟದಲ್ಲಿ ದೈತ್ಯ ಕಂಪನಿಗಳು
Meta, MicrosoftImage Credit source: google image
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 16, 2023 | 6:39 PM

ಮೆಟಾ (meta)  ಮತ್ತು ಮೈಕ್ರೋಸಾಫ್ಟ್ (Microsoft) ಸಿಯಾಟಲ್, ಯುಎಸ್‌ನ ವಾಷಿಂಗ್ಟನ್‌ನಲ್ಲಿರುವ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದೆ. ಅನೇಕ ದೈತ್ಯ ಕಂಪನಿಗಳು ಆರ್ಥಿಕ ಹಿಂಜರಿತ ಕಾರಣವನ್ನು ನೀಡಿ ಸಾವಿರರೂ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಈ ಪೈಕಿ ಮೆಟಾ ಮತ್ತು ಮೈಕ್ರೋಸಾಫ್ಟ್ ಕೂಡ ಒಂದು, ಇದೀಗ ತನ್ನ ಕಂಪನಿಗೆ ಆಗುವ ವೆಚ್ಚವನ್ನು ಕಡಿಮೆ ಮಾಡಲು ತನ್ನ ಉಳಿದ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಘೋಷಣೆ ಮಾಡಿದೆ. ಅನಿಶ್ಚಿತ ಸ್ಥೂಲ ಆರ್ಥಿಕ ಪರಿಸ್ಥಿತಿಗಳ ನಡುವೆ ವೆಚ್ಚವನ್ನು ಕಡಿತಗೊಳಿಸಲು Twitter ಇದೇ ರೀತಿಯ ಕ್ರಮವನ್ನು ಅನುಸರಿಸಿತ್ತು. ಇದೀಗ ಈ ಎರಡು ಕಂಪನಿಗಳು ಆ ಹಾದಿಯನ್ನೇ ಅನುಸರಿಸುತ್ತಿದೆ. ಈ ಬಗ್ಗೆ ಈಗಾಗಲೇ ಮೆಟಾ, ಡೌನ್‌ಟೌನ್ ಸಿಯಾಟಲ್ ಮತ್ತು ಬೆಲ್ಲೆವ್ಯುನಲ್ಲಿರುವ ಕಚೇರಿಗಳ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶವನ್ನು ನೀಡಿದೆ.

ಬೆಲ್ಲೆವ್ಯೂನಲ್ಲಿರುವ 26-ಅಂತಸ್ತಿನ ಸಿಟಿ ಸೆಂಟರ್ ಪ್ಲಾಜಾದಲ್ಲಿ ಮೈಕ್ರೋಸಾಫ್ಟ್ ತನ್ನ ಗುತ್ತಿಗೆಯನ್ನು ನವೀಕರಿಸುವುದಿಲ್ಲ ಎಂದು ವರದಿ ಹೇಳಿದೆ. ಗುತ್ತಿಗೆಯು ಜೂನ್ 2024 ರಲ್ಲಿ ಕೊನೆಗೊಳ್ಳುತ್ತದೆ. ಹಾಗಾಗಿ ಎಲ್ಲರಿಗೂ ವರ್ಕ್ ಫ್ರಮ್ ಹೋ ನೀಡುವ ಯೋಚನೆಯನ್ನು ಮಾಡಿದೆ. ಇದರಿಂದ ಕಂಪನಿಗೆ ಒಂದಿಷ್ಟು ಲಾಭ ಇದೆ ಎಂದು ಹೇಳಲಾಗಿದೆ.

ಹಲವಾರು ಉದ್ಯೋಗಿಗಳು ರಿಮೋಟ್ ವರ್ಕ್ ಆಯ್ಕೆಗಳಿಗೆ ಆದ್ಯತೆ ನೀಡುವುದರಿಂದ ಮೆಟಾ ಮತ್ತು ಮೈಕ್ರೋಸಾಫ್ಟ್ ಕಚೇರಿಯನ್ನು ಬಿಟ್ಟುಕೊಡಲು ಅನುಮತಿ ನೀಡಿದೆ ಎಂದು ಹೇಳಲಾಗಿದೆ. ಜಾಗತಿಕ ಆರ್ಥಿಕ ಕುಸಿತದ ಮಧ್ಯೆ ಈ ಎರಡೂ ದೈತ್ಯ ಕಂಪನಿಗಳು ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿದೆ. ನವೆಂಬರ್ 2022 ರಲ್ಲಿ ಮೆಟಾ ಜಾಗತಿಕವಾಗಿ 11,000 ತನ್ನ ಕೆಲಸಗಾರರನ್ನು ವಜಾಗೊಳಿಸಿದೆ. ಕಂಪನಿಯ ಸಿಯಾಟಲ್ ಕಚೇರಿಯು 726 ಉದ್ಯೋಗಿಗಳನ್ನು ವಜಾಗೊಳಿಸಿದೆ. ಮತ್ತೊಂದೆಡೆ, ಮೈಕ್ರೋಸಾಫ್ಟ್ ತನ್ನ ಸಿಬ್ಬಂದಿಯನ್ನು ದೊಡ್ಡ ಪ್ರಮಾಣದಲ್ಲಿ ವಜಾಗೊಳಿಸಿಲ್ಲ, ಆದರೂ ಕಂಪನಿಯು ವೆಚ್ಚವನ್ನು ಮಿತಿಗೊಳಿಸಲು ಈ ಕ್ರಮಗಳನ್ನು ತೆಗೆದುಕೊಂಡಿದೆ. ಜುಲೈ 2022ರಲ್ಲಿ, ಖರ್ಚುಗಳನ್ನು ಕಡಿತಗೊಳಿಸಲು ಮೈಕ್ರೋಸಾಫ್ಟ್ ಪ್ರಮುಖ ಹುದ್ದೆಗಳಿಗೆ ನೇಮಕಾತಿಯನ್ನು ಸ್ಥಗಿತಗೊಳಿಸಿತು.

ಇದನ್ನು ಓದಿ:ShareChat Announces Layoffs: ಮಹತ್ವದ ನಿರ್ಧಾರ ತೆಗೆದುಕೊಂಡು ಶೇರ್‌ಚಾಟ್: 20% ಉದ್ಯೋಗಿಗಳ ವಜಾ

ಸಿಯಾಟಲ್ ಕಛೇರಿಯನ್ನು ಬಿಟ್ಟುಕೊಡಲು ಮೆಟಾದ ಕಂಪನಿಯ ವಕ್ತಾರ ಟ್ರೇಸಿ ಕ್ಲೇಟನ್ ಈ ಪ್ರಕಟನೆಯನ್ನು ಹೊರಡಿಸಿದ್ದಾರೆ. ದೂರಸ್ಥ ಅಥವಾ ವಿತರಿಸಿದ ಕೆಲಸದ ಕಡೆಗೆ ಚಲಿಸಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಪ್ರಸ್ತುತ ಆರ್ಥಿಕ ವಾತಾವರಣವನ್ನು ನೋಡಿ ಕಂಪನಿಯು ಆರ್ಥಿಕವಾಗಿ ವಿವೇಕಯುತ ಖರ್ಚು ಮಾಡಲು ನಿರ್ಧಾರಿಸುವುದರಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ವಕ್ತಾರರು ಒಪ್ಪಿಕೊಂಡಿದ್ದಾರೆ.

ಮೈಕ್ರೋಸಾಫ್ಟ್ ವಕ್ತಾರರನ್ನು ಉಲ್ಲೇಖಿಸಿ ವರದಿಯು ಕಂಪನಿಯು ಸಿಟಿ ಸೆಂಟರ್ ಪ್ಲಾಜಾ ಕುರಿತು ಇನ್ನೂ ನಿರ್ಧಾರವನ್ನು ಅಂತಿಮಗೊಳಿಸಿಲ್ಲ ಎಂದು ಹೇಳಿದೆ. ಈ ವರದಿ ಪ್ರಕಾರ ನಾವು ಕೆಲಸ ಮಾಡಲು ಒಂದು ಸ್ಥಳವನ್ನು ನಿಗದಿ ಮಾಡುವವರೆಗೆ ಹಾಗೂ ಈಗ ಇರುವ ಕಚೇರಿಗಳಿಗೆ ಹಣವನ್ನು ನೀಡಲು ಸಾಧ್ಯವಿಲ್ಲ ಕಾರಣ ಮನೆಯಿಂದಲ್ಲೆ ಕೆಲಸ ಮಾಡಲು ಅವಕಾಶವನ್ನು ನೀಡಲಾಗಿದೆ. ನಮ್ಮ ಕಂಪನಿ ನಮ್ಮ ಉದ್ಯೋಗಿಗಳಿಗೆ ಹೆಚ್ಚಿನ ಸಹಯೋಗದಿಂದ ಸಮುದಾಯವನ್ನು ರಚಿಸುತ್ತೇವೆ. ಸಾಫ್ಟ್‌ವೇರ್ ರೆಡ್‌ಮಂಡ್ ಕ್ಯಾಂಪಸ್ ನಿರ್ಮಾಣ ಮಾಡುತ್ತಿದೆ , ಇದು 2023 ರ ಕೊನೆಯಲ್ಲಿ ಪೂರ್ಣಗೊಳ್ಳಲಿದೆ.

ಮೈಕ್ರೋಸಾಫ್ಟ್ ಮತ್ತು ಮೆಟಾ ಹೊರತುಪಡಿಸಿ, ಟ್ವಿಟರ್ ಜಗತ್ತಿನಾದ್ಯಂತ ಕಚೇರಿ ಸೌಲಭ್ಯಗಳನ್ನು ಬಿಟ್ಟುಕೊಡುವ ಮೂಲಕ ವೆಚ್ಚವನ್ನು ಕಡಿತಗೊಳಿಸುತ್ತಿದೆ. ಸಾಮಾಜಿಕ ಮಾಧ್ಯಮ ಕಂಪನಿಯು ಬಾಡಿಗೆ ಪಾವತಿಸಲು ಸಾಧ್ಯವಾಗದ ಆರೋಪದ ಮೇಲೆ ಮೊಕದ್ದಮೆಗಳನ್ನು ಎದುರಿಸುತ್ತಿದೆ. ಟ್ವಿಟರ್‌ನ ಸ್ಯಾನ್ ಫ್ರಾನ್ಸಿಸ್ಕೋ ಕಚೇರಿ ಇರುವ ಹಾರ್ಟ್‌ಫೋರ್ಡ್ ಕಟ್ಟಡದ ಮಾಲೀಕರಿಂದ ಟ್ವಿಟರ್ ವಿರುದ್ಧ ಮೊಕದ್ದಮೆ ಹೂಡಲಾಗಿದೆ ಎಂದು ಈ ತಿಂಗಳ ಆರಂಭದಲ್ಲಿ ವರದಿಯೊಂದು ಹೇಳಿದೆ. ಟ್ವಿಟರ್ 1.12 ಕೋಟಿ ರೂಪಾಯಿ ಬಾಡಿಗೆ ಪಾವತಿಸಿಲ್ಲ ಎಂದು ಕಟ್ಟಡದ ಮಾಲಿಕ ಹೇಳಿಕೊಂಡಿದ್ದಾರೆ . ಇತ್ತೀಚೆಗೆ, ಮತ್ತೊಂದು ವರದಿಯು ತನ್ನ ಸಿಂಗಾಪುರದ ಉದ್ಯೋಗಿಗಳನ್ನು ಬಾಡಿಗೆ ಪಾವತಿಸದ ಕಾರಣ ಕಚೇರಿ ಕಟ್ಟಡವನ್ನು ಬಿಡಲು ಕೇಳಲಾಯಿತು ಎಂದು ಹೇಳಿಕೊಂಡಿದೆ. ವೆಚ್ಚವನ್ನು ಉಳಿಸಲು ಟ್ವಿಟರ್ ದೆಹಲಿ ಮತ್ತು ಮುಂಬೈನಲ್ಲಿ ಕಚೇರಿ ಸೌಲಭ್ಯಗಳನ್ನು ಬಿಟ್ಟುಕೊಡುತ್ತಿದೆ ಎಂದು ವರದಿಯಾಗಿದೆ.

ಟ್ವಿಟರ್‌ನ ಮಾಲೀಕ ಎಲೋನ್ ಮಸ್ಕ್, ರಿಮೋಟ್ ಕೆಲಸಕ್ಕಿಂತ ಕಚೇರಿಯಿಂದ ಕೆಲಸ ಮಾಡಲು ಆದ್ಯತೆ ನೀಡುತ್ತಾರೆ. ಆದರೆ ಈ ಪರಿಸ್ಥಿತಿಯನ್ನು ನೋಡಿ ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶವನ್ನು ನೀಡಿದ್ದಾರೆ. ಜಾಗತಿಕ ಆರ್ಥಿಕ ಕುಸಿತದಿಂದಾಗಿ 2022 ರ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಟ್ವಿಟರ್ ತನ್ನ ಅರ್ಧಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Mon, 16 January 23

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ