LIC: ಎಲ್​ಐಸಿಯಲ್ಲಿ ಬಿಮಾ ಸಖಿ ಕೆಲಸ; ತಿಂಗಳಿಗೆ 7,000 ರೂ ಸ್ಟೈಪೆಂಡ್, ಜೊತೆಗೆ ಕಮಿಷನ್

LIC Bima Sakhi scheme for women: ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯು ‘ಬಿಮಾ ಸಖಿ’ ಎನ್ನುವ ಹೊಸ ಸ್ಕೀಮ್ ಆರಂಭಿಸಿದೆ. ಮಹಿಳೆಯರನ್ನು ಎಲ್​ಐಸಿ ಏಜೆಂಟ್ ಆಗಲು ಪ್ರೇರೇಪಿಸಲು ಈ ಸ್ಕೀಮ್ ನಡೆಸಲಾಗುತ್ತಿದೆ. ಹತ್ತನೇ ತರಗತಿ ಓದಿರುವ 18ರಿಂದ 70 ವರ್ಷ ವಯೋಮಾನದಲ್ಲಿರುವ ಮಹಿಳೆಯರು ಬಿಮಾ ಸಖಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು.

LIC: ಎಲ್​ಐಸಿಯಲ್ಲಿ ಬಿಮಾ ಸಖಿ ಕೆಲಸ; ತಿಂಗಳಿಗೆ 7,000 ರೂ ಸ್ಟೈಪೆಂಡ್, ಜೊತೆಗೆ ಕಮಿಷನ್
ಎಲ್​ಐಸಿ

Updated on: Jul 31, 2025 | 7:38 PM

ನವದೆಹಲಿ, ಜುಲೈ 31: ಭಾರತದ ಅತಿದೊಡ್ಡ ವಿಮಾ ಸಂಸ್ಥೆಯಾದ ಲೈಫ್ ಇನ್ಷೂರೆನ್ಸ್ ಕಾರ್ಪೊರೇಶನ್ ‘ಬಿಮಾ ಸಖಿ’ (LIC Bima Sakhi) ಎನ್ನುವ ಹೊಸ ಯೋಜನೆಯನ್ನು ಆರಂಭಿಸಿದೆ. ಇದು ಎಲ್​ಐಸಿ ಏಜೆಂಟ್​​ಗಳಾಗಲು ಮಹಿಳೆಯರನ್ನು ಉತ್ತೇಜಿಸಲು ಇರುವ ಯೋಜನೆಯಾಗಿದೆ. ಸಂಸ್ಥೆಯು ತನ್ನ ಎಂಸಿಎ (ಮಹಿಳಾ ವೃತ್ತಿ ಏಜೆಂಟ್) ಸ್ಕೀಮ್ ಅಡಿಯಲ್ಲಿ ಬಿಮಾ ಸಖಿಯಾಗಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದೆ.

ಇನ್ಷೂರೆನ್ಸ್ ಕ್ಷೇತ್ರದಲ್ಲಿ ವೃತ್ತಿ ಪಡೆಯಲು ಮಹಿಳೆಯರಿಗೆ ಅವಕಾಶ ಸಿಗಲಿದೆ. ಕೆಲಸದ ಹೊತೆಗೆ ಕಲಿಕೆ, ಹಾಗೂ ಮಾಸಿಕ ಸ್ಟೈಪೆಂಡ್ ಕೂಡ ಮಹಿಳೆಯರಿಗೆ ಸಿಗಲಿದೆ. 7,000 ರೂ ಸ್ಟೈಪೆಂಡ್ ಕೊಡಲಾಗುತ್ತದೆ.

ಎಲ್​ಐಸಿ ಬಿಮಾ ಸಖಿಯಾಗಲು ಅರ್ಹತೆಗಳು

ಎಲ್​ಐಸಿ ಬಿಮಾ ಸಖಿಯಾಗಲು ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ 18 ವರ್ಷ ವಯಸ್ಸು ದಾಟಿರಬೇಕು. 10ನೇ ತರಗತಿಯಾದರೂ ತೇರ್ಗಡೆಯಾಗಿರಬೇಕು. 70 ವರ್ಷ ವಯಸ್ಸು ದಾಟಿರಬಾರದು.

ಇದನ್ನೂ ಓದಿ: 1 ಲಕ್ಷ ರೂ, 30 ವರ್ಷ ಹೂಡಿಕೆ, ಕೋಟಿ ರೂಗೂ ಅಧಿಕ ರಿಟರ್ನ್; ಇದು ಈ ಐದು ಫಂಡ್​ಗಳ ಮ್ಯಾಜಿಕ್

ಹಾಲಿ ಇರುವ ಎಲ್​ಐಸಿ ಏಜೆಂಟ್​ಗಳು, ಎಲ್​ಐಸಿ ಉದ್ಯೋಗಿಗಳು, ಅವರ ಹತ್ತಿರದ ಬಂಧುಗಳು, ನಿವೃತ್ತ ಎಲ್​ಐಸಿ ಸಿಬ್ಬಂದಿ ಅಥವಾ ಮಾಜಿ ಏಜೆಂಟ್​ಗಳು ಮುಂತಾದವರು ಬಿಮಾ ಸಖಿಯಾಗಲು ಅರ್ಜಿ ಸಲ್ಲಿಸುವಂತಿಲ್ಲ.

ಮೂರು ವರ್ಷ ಸ್ಟೈಪೆಂಡ್

ಎಲ್​ಐಸಿ ಬಿಮಾ ಸಖಿಯಾಗಿ ನೇಮಕವಾದವರಿಗೆ ಮೊದಲ ವರ್ಷ 7,000 ರೂ ಮಾಸಿಕವಾಗಿ ಸ್ಟೈಪೆಂಡ್ ನೀಡಲಾಗುತ್ತದೆ. ಹಿರಿಯ ಏಜೆಂಟ್​ಗಳಿಂದ ಮಾರ್ಗದರ್ಶನ ಸಿಗುತ್ತದೆ. ಈ ಮೊದಲ ವರ್ಷದಲ್ಲಿ ಅವರು ಮಾರಿದ ಶೇ. 65ರಷ್ಟು ಪಾಲಿಸಿಗಳು ಆ್ಯಕ್ಟಿವ್ ಆಗಿ ಉಳಿದಿದ್ದರೆ ಎರಡನೇ ವರ್ಷ ಅವರಿಗೆ 6,000 ರೂ ಸ್ಟೈಪೆಂಡ್ ಸಿಗುತ್ತದೆ. ಮೂರನೇ ವರ್ಷದಲ್ಲೂ ಶೇ. 65ರಷ್ಟು ಪಾಲಿಸಿಗಳು ಆ್ಯಕ್ಟಿವ್ ಆಗಿದ್ದರೆ 5,000 ರೂ ಮಾಸಿಕ ಸ್ಟೈಪೆಂಡ್ ಸಿಗುತ್ತದೆ.

ಇದನ್ನೂ ಓದಿ: ಸಂಬಳ ಪಡೆಯುವವರಿಗೆ ಸೂಕ್ತವಾಗುವ ಉತ್ತಮ ಎಲ್​ಐಸಿ ಪ್ಲಾನ್​ಗಳಿವು…

ಇಲ್ಲಿ ಬಿಮಾ ಸಖಿ ಏಜೆಂಟ್​ಗಳು ಒಂದು ವರ್ಷದಲ್ಲಿ ಕನಿಷ್ಠ 24 ಹೊಸ ಲೈಫ್ ಇನ್ಷೂರೆನ್ಸ್ ಪಾಲಿಸಿಗಳನ್ನು ಮಾಡಿಸಬೇಕು. ಬೋನಸ್ ಕಮಿಷನ್ ಹೊರತುಪಡಿಸಿ ಒಂದು ವರ್ಷದಲ್ಲಿ 48,000 ರೂ ಕಮಿಷನ್ ಗಳಿಸಬೇಕು. ಆಗ ಸ್ಟೈಪೆಂಡ್​ಗೆ ಅರ್ಹರಾಗಿರುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ