ಸರ್ಕಾರಕ್ಕೆ ಲಾಭಾಂಶ ನೀಡಿದ ಎಲ್​ಐಸಿ; ಹಣಕಾಸು ಸಚಿವೆ 1,831 ಕೋಟಿ ರೂ ಮೊತ್ತದ ಚೆಕ್ ವಿತರಣೆ

|

Updated on: Sep 15, 2023 | 3:13 PM

LIC Presents Cheque To Nirmala Sitharaman: ಭಾರತದ ಅತಿದೊಡ್ಡ ವಿಮಾ ಕಂಪನಿ ಎಲ್​ಐಸಿ ಈ ವರ್ಷದ ತನ್ನ ಲಾಭಾಂಶದಲ್ಲಿ ಸರ್ಕಾರದ ಪಾಲಾದ 1,831.09 ರೂ ಹಣದ ಚೆಕ್ ಅನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಒಪ್ಪಿಸಿದೆ. 2022ರ ಮೇ ತಿಂಗಳಲ್ಲಿ ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಎಲ್​ಐಸಿ ಷೇರುಬೆಲೆ ಸಾಕಷ್ಟು ಇಳಿದೆಯಾದರೂ, ಸಂಸ್ಥೆ ತನ್ನ ವಿಮಾ ಉತ್ಪನ್ನಗಳ ಮೂಲಕ ಬಹಳಷ್ಟು ಲಾಭ ಸಾಧಿಸಿದೆ. ಈ ಲಾಭಕ್ಕೆ ಅನುಗುಣವಾಗಿ ಷೇರುದಾರರಿಗೆ ಡಿವಿಡೆಂಡ್ ನೀಡಿದೆ.

ಸರ್ಕಾರಕ್ಕೆ ಲಾಭಾಂಶ ನೀಡಿದ ಎಲ್​ಐಸಿ; ಹಣಕಾಸು ಸಚಿವೆ 1,831 ಕೋಟಿ ರೂ ಮೊತ್ತದ ಚೆಕ್ ವಿತರಣೆ
ಎಲ್​ಐಸಿ
Follow us on

ನವದೆಹಲಿ, ಸೆಪ್ಟೆಂಬರ್ 15: ಭಾರತೀಯ ಜೀವ ವಿಮಾ ನಿಗಮ ತನ್ನ ಲಾಭಾಂಶದ (Dividend) ಒಂದು ಭಾಗವನ್ನು ಸರ್ಕಾರಕ್ಕೆ ನೀಡಿದೆ. ನಿನ್ನೆ (ಸೆ. 14) ನಡೆದ ಕಾರ್ಯಕ್ರಮದಲ್ಲಿ ಎಲ್​ಐಸಿ ಛೇರ್ಮನ್ ಸಿದ್ಧಾರ್ಥ್ ಮೊಹಾಂತಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ 1,831.09 ಕೋಟಿ ರೂ ಮೌಲ್ಯದ ಚೆಕ್ ಅನ್ನು ನೀಡಿದ್ದಾರೆ. ಎಲ್​ಐಸಿಯ ಪ್ರಧಾನ ಷೇರುಮಾಲಕತ್ವ ಹೊಂದಿರುವ ಸರ್ಕಾರಕ್ಕೆ ನೀಡಲಾಗಿರುವ ಡಿವಿಡೆಂಡ್ ಇದಾಗಿದೆ. ಚೆಕ್ ನೀಡುವ ಏಳೆ ಕೇಂದ್ರ ಹಣಕಾಸು ಸೇವೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎಂಪಿ ತಂಗಿರಾಲ ಹಾಗೂ ಎಲ್​ಐಸಿಯ ವಿವಿಧ ಉನ್ನತ ಅಧಿಕಾರಿಗಳೂ ಉಪಸ್ಥಿತರಿದ್ದರು.

ಆಗಸ್ಟ್ 22ರಂದು ನಡೆದ ಎಲ್​ಐಸಿಯ ವಾರ್ಷಿಕ ಮಹಾಸಭೆಯಲ್ಲಿ ಡಿವಿಡೆಂಡ್ ನೀಡುವುದಕ್ಕೆ ಷೇರುದಾರರು ಅನುಮೋದನೆ ಕೊಟ್ಟಿದ್ದರು. ಎಲ್​ಐಸಿಯಲ್ಲಿ ಸರ್ಕಾರದ ಪಾಲು ಶೇ. 95ಕ್ಕಿಂತಲೂ ಹೆಚ್ಚಿದೆ.

ಇದನ್ನೂ ಓದಿ: ಮೇಲಿನ ಹಂತದ ಎನ್​ಬಿಎಫ್​ಸಿಗಳ ಪಟ್ಟಿ ಬಿಡುಗಡೆ; ಈ ಸಂಸ್ಥೆಗಳಿಗೆ ಆರ್​ಬಿಐನ ಉನ್ನತ ಕಟ್ಟುಪಾಡುಗಳು ಅನ್ವಯ

1956ರಲ್ಲಿ ಐದು ಕೋಟಿ ರೂ ಆರಂಭಿಕ ಬಂಡವಾಳದೊಂದಿಗೆ ಆರಂಭವಾದ ಎಲ್​ಐಸಿಗೆ ಈಗ 67 ವರ್ಷವಾಗಿದೆ. ಭಾರತದ ಅತಿದೊಡ್ಡ ವಿಮಾ ಸಂಸ್ಥೆ ಎಂಬ ಸ್ಥಾನವನ್ನು ಸತತವಾಗಿ ಉಳಿಸಿಕೊಂಡು ಬರುತ್ತಿದೆ. ಅನೇಕ ಖಾಸಗಿ ವಿಮಾ ಕಂಪನಿಗಳು ಇನ್ಷೂರೆನ್ಸ್ ಕ್ಷೇತ್ರಕ್ಕೆ ಬಂದರೂ ಎಲ್​ಐಸಿ ಪ್ರಾಬಲ್ಯವನ್ನು ಮುರಿಯಲು ಸಾಧ್ಯವಾಗಿಲ್ಲ. ಎಲ್​ಐಸಿ ಬಳಿ ಇರುವ ಫಂಡ್​ಗಳು ಬರೋಬ್ಬರಿ 40.81 ಲಕ್ಷ ಕೋಟಿ ರೂ.

ಎಲ್​ಐಸಿ ಕಳೆದ ವರ್ಷ (2022) ಮೇ ತಿಂಗಳಲ್ಲಿ ಐಪಿಒ ಮೂಲಕ ಷೇರು ಮಾರುಕಟ್ಟೆಗೆ ಅಡಿ ಇಟ್ಟಿತು. ಬರೋಬ್ಬರಿ 21,000 ರೂ ಮೊತ್ತದ ಐಪಿಒ ಅದಾಗಿತ್ತು. ಭಾರತ ಕಂಡ ಅತಿಹೆಚ್ಚು ಮೊತ್ತದ ಐಪಿಒ ಕೂಡ ಅದು.

ಏನಿದು ಡಿವಿಡೆಂಡ್?

ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಯಾವುದೇ ಕಂಪನಿ ತನಗೆ ಬಂದಿರುವ ಲಾಭದಲ್ಲಿ ನಿರ್ದಿಷ್ಟ ಭಾಗವನ್ನು ಷೇರುದಾರರೊಂದಿಗೆ ಹಂಚಿಕೊಳ್ಳುತ್ತದೆ. ಲಾಭಾಂಶದಲ್ಲಿ ಷೇರುದಾರರಿಗೆ ಹಂಚಿಕೆಯಾಗದೇ ಉಳಿದ ಮೊತ್ತವನ್ನು ಕಂಪನಿಯ ಉಚಿತ ಮೀಸಲು ನಿಧಿಗೆ ಜಮೆಯಾಗುತ್ತದೆ.

ಇದನ್ನೂ ಓದಿ: ಸೆ. 17, ವಿಶ್ವಕರ್ಮ ಜಯಂತಿಯಂದು ಪಿಎಂ ವಿಶ್ವಕರ್ಮ ಯೋಜನೆ ಲೋಕಾರ್ಪಣೆ; ಏನಿದು ಸ್ಕೀಮ್?

2022ರ ಮೇ ತಿಂಗಳಲ್ಲಿ ಪ್ರತೀ ಷೇರಿಗೆ 949 ರೂನಂತೆ ಐಪಿಒಗೆ ತೆರೆದುಕೊಂಡ ಎಲ್​ಐಸಿ 867.20 ರುಪಾಯಿಗೆ ಲಿಸ್ಟ್ ಆಗಿತ್ತು. ಇವತ್ತು ಎಲ್​ಐಸಿ ಷೇರುಬೆಲೆ 663 ರುಪಾಯಿಯಲ್ಲಿ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ