LinkedIn data breach: ಲಿಂಕ್ಡ್​ಇನ್​ನ 50 ಕೋಟಿಯಷ್ಟು ಬಳಕೆದಾರರ ಮಾಹಿತಿ ಸೋರಿಕೆ ಎಂಬ ಸುದ್ದಿಗೆ ಕಂಪೆನಿಯಿಂದ ಸ್ಪಷ್ಟನೆ

ಲಿಂಕ್ಡ್​ಇನ್​ನ 50 ಕೋಟಿ ಬಳಕೆದಾರರ ಮಾಹಿತಿ ಸೋರಿಕೆ ಆಗಿದೆ ಎಂಬ ಬಗ್ಗೆ ಸುದ್ದಿ ಬಂದಿದ್ದು, ಇದನ್ನು ಕಂಪೆನಿ ನಿರಾಕರಿಸಿದೆ. ಡಾರ್ಕ್ ವೆಬ್​ನಲ್ಲಿ ಇರುವ ಮಾಹಿತಿಗಳು ನಿರುಪಯುಕ್ತವಾದವು ಎಂದು ಹೇಳಿದೆ.

LinkedIn data breach: ಲಿಂಕ್ಡ್​ಇನ್​ನ 50 ಕೋಟಿಯಷ್ಟು ಬಳಕೆದಾರರ ಮಾಹಿತಿ ಸೋರಿಕೆ ಎಂಬ ಸುದ್ದಿಗೆ ಕಂಪೆನಿಯಿಂದ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: Apr 09, 2021 | 6:53 PM

ಕೆಲ ದಿನಗಳ ಹಿಂದಷ್ಟೇ 53.3 ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿಯ ಭಾರೀ ಸೋರಿಕೆಯಲ್ಲಿ ಫೇಸ್​ಬುಕ್ ಒಳಗೊಂಡಿರುವ ಬಗ್ಗೆ ಸುದ್ದಿ ಬಂದಿತ್ತು. ಫೇಸ್​ಬುಕ್ ಮಾಹಿತಿ ಸೋರಿಕೆ ಶಾಕ್​ನಿಂದ ಇಡೀ ವಿಶ್ವ ಇನ್ನೂ ಆಚೆ ಬಂದಿಲ್ಲ. ಅದಾಗಲೇ ಮತ್ತೊಂದು ದೊಡ್ಡ ಮಾಹಿತಿ ಸೋರಿಕೆ ಸುದ್ದಿ ಬಂದಿದೆ. ಉದ್ಯೋಗ ಹುಡುಕುವುದಕ್ಕಾಗಿ ಇರುವ ವೆಬ್​ಸೈಟ್ ಲಿಂಕ್ಡ್​ಇನ್ ಹೆಸರು ಈಗಿನ ಮಾಹಿತಿ ಸೋರಿಕೆಯಲ್ಲಿ ತಳುಕು ಹಾಕಿಕೊಂಡಿದ್ದು, ಮತ್ತೊಂದು ಸುತ್ತು ಇಡೀ ವಿಶ್ವ ಶೇಕ್ ಶೇಕ್ ಶೇಕ್ ಆಗಿದೆ. ವರದಿಯ ಪ್ರಕಾರ, ಲಿಂಕ್ಡ್​ಇನ್​ನ 50 ಕೋಟಿಯಷ್ಟು ಬಳಕೆದಾರರ ಮಾಹಿತಿ ಸೋರಿಕೆ ಆಗಿದೆ.

ಸೈಬರ್​​ನ್ಯೂಸ್ ಪ್ರಕಾರ, ಈ ದೊಡ್ಡ ಮಟ್ಟದ ಮಾಹಿತಿ ಸೋರಿಕೆಯಲ್ಲಿ ಲಿಂಕ್ಡ್​ಇನ್ ಭಾಗವಾಗಿದೆ. 50 ಕೋಟಿ ಬಳಕೆದಾರರ ಅತಿ ಮುಖ್ಯವಾದ ದತ್ತಾಂಶವನ್ನು ಡಾರ್ಕ್​ವೆಬ್​ನಲ್ಲಿ ಬಯಲು ಮಾಡಲಾಗಿದೆ. ಲಿಂಕ್ಡ್​ಇನ್ ಐಡಿ, ಪೂರ್ತಿ ಹೆಸರು, ಇಮೇಲ್ ವಿಳಾಸಗಳು, ಫೋನ್ ನಂಬರ್​ಗಳು, ಲಿಂಗ, ಲಿಂಕ್ಡ್​ಇನ್ ಪ್ರೊಫೈಲ್​ಗಳ ಲಿಂಕ್​ಗಳು, ಇತರ ಸೋಷಿಯಲ್ ಮೀಡಿಯಾ ಪ್ರೊಫೈಲ್​ಗಳ ಲಿಂಕ್​ಗಳು, ವೃತ್ತಿಪರ ಟೈಟಲ್​ಗಳು, ಇತರ ಉದ್ಯೋಗ ಸಂಬಂಧಿತ ಮಾಹಿತಿಗಳು ಸೋರಿಕೆ ಆಗಿದೆ. ವರದಿಗಳು ತಿಳಿಸುವಂತೆ, ಅಪ್​ಡೇಟ್ ಆಗಿರುವ ಲಿಂಕ್ಡ್​ಇನ್ ಪ್ರೊಫೈಲ್​ಗಳನ್ನು ಮಾರಲಾಗುತ್ತಿದೆಯಾ ಅಥವಾ ಈ ಹಿಂದೆ ಲಿಂಕ್ಡ್​ಇನ್​​ನಿಂದ ಆದ ದತ್ತಾಂಶ ಸೋರಿಕೆಯನ್ನೇ ಈಗ ಒಗ್ಗೂಡಿಸಲಾಗಿದೆಯಾ ಎಂಬುದು ತಿಳಿದಿಲ್ಲ.

ಸಾರ್ವಜನಿಕವಾಗಿ ನೋಡಬಹುದಾದ ಪ್ರೊಫೈಲ್​ಗಳೂ ಇವೆ ಮಾಹಿತಿ ಸೋರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಿಂಕ್ಡ್​ಇನ್, ಮಾಹಿತಿ ಸೋರಿಕೆಯಲ್ಲಿ ಸಾರ್ವಜನಿಕವಾಗಿ ನೋಡಬಲ್ಲಂಥ ಪ್ರೊಫೈಲ್ ಒಳಗೊಂಡಿದ್ದು, ಅದನ್ನು ಲಿಂಕ್ಡ್​ಇನ್ ನಿರುಪಯುಕ್ತ ಎಂದು ಪರಿಗಣಿಸಿದೆ ಎಂದಿದೆ. “ಸದಸ್ಯರು ತಮ್ಮ ದತ್ತಾಂಶಕ್ಕೆ ಲಿಂಕ್ಡ್​ಇನ್ ಅನ್ನು ನಂಬುತ್ತಾರೆ. ಆ ನಂಬಿಕೆ ಉಳಿಸಿಕೊಳ್ಳುವುದಕ್ಕೆ ನಾವು ಕ್ರಮ ಕೈಗೊಳ್ಳುತ್ತೇವೆ. ಮಾರಾಟಕ್ಕೆ ಇಡಲಾದ ಲಿಂಕ್ಡ್​ಇನ್ ದತ್ತಾಂಶದ ಆರೋಪಕ್ಕೆ ಸಂಬಂಧಿಸಿದಂತೆ ನಾವು ತನಿಖೆ ನಡೆಸಿದ್ದೇವೆ. ಅವುಗಳು ವಾಸ್ತವವಾಗಿ ವಿವಿಧ ವೆಬ್​ಸೈಟ್​ಗಳು ಮತ್ತು ಕಂಪೆನಿಗಳ ಮಾಹಿತಿಯನ್ನು ಒಗ್ಗೂಡಿಸಿರುವುದು. ಸಾರ್ವಜನಿಕವಾಗಿ ನೋಡಬಹುದಾದ ಪ್ರೊಫೈಲ್​ಗಳೂ ಇದರಲ್ಲಿ ಒಳಗೊಂಡಿವೆ. ಅವುಗಳನ್ನು ಪ್ರಯೋಜನಕ್ಕೆ ಇಲ್ಲ ಎಂದು ಲಿಂಕ್ಡ್​ಇನ್ ಪರಿಗಣಿಸಿತ್ತು.

“ಇದು ಲಿಂಕ್ಡ್​ಇನ್ ಮಾಹಿತಿ ಸೋರಿಕೆ ಅಲ್ಲ. ಖಾಸಗಿ ಸದಸ್ಯರ ಖಾತೆ ಮಾಹಿತಿಯನ್ನು ನಾವು ಪರಿಶೀಲಿಸಬಹುದಾದ್ದರಲ್ಲಿ ಸೇರಿಸಿಲ್ಲ. ನಮ್ಮ ಸದಸ್ಯರ ದತ್ತಾಂಶದ ದುರ್ಬಳಕೆ, ಸ್ಕ್ರಾಪಿಂಗ್ ಮಾಡುವಂಥದ್ದು ಕಂಡುಬಂದಲ್ಲಿ ಲಿಂಕ್ಡ್​ಇನ್ ಸೇವೆಯ ನಿಬಂಧನೆಗಳನ್ನು ಉಲ್ಲಂಘಿಸಿದಂತಾಗುತ್ತದೆ. ಯಾರಾದರೂ ಸದಸ್ಯರ ಮಾಹಿತಿಯನ್ನು ಬಳಸುವುದಕ್ಕೆ ಪ್ರಯತ್ನಿಸಿದಲ್ಲಿ ಮತ್ತು ಲಿಂಕ್ಡ್​ಇನ್ ಉದ್ದೇಶಕ್ಕಾಗಿ ಬಳಸಿದಲ್ಲಿ ಹಾಗೂ ನಮ್ಮ ಸದಸ್ಯರು ಒಪ್ಪದಿದ್ದಲ್ಲಿ, ನಾವು ಅವರನ್ನು ತಡೆಯಲು ಶ್ರಮಿಸುತ್ತೇವೆ ಮತ್ತು ಅದಕ್ಕೆ ಉತ್ತರದಾಯಿತ್ವ ವಹಿಸುವಂತೆ ಮಾಡುತ್ತೇವೆ,” ಎಂದು ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್​ಇನ್ ಹೇಳಿಕೆಯಲ್ಲಿ ತಿಳಿಸಿದೆ.

ಲಿಂಕ್ಡ್​ಇನ್ ಪಾಸ್​ವರ್ಡ್ ಬದಲಿಸಿ ಖಾಸಗಿತನದ ನಿಗಾ ವಹಿಸುವ ಇಟಾಲಿಯನ್ ಸಂಸ್ಥೆಯು ಲಿಂಕ್ಡ್​ಇನ್ ಮಾಹಿತಿ ಸೋರಿಕೆ ಬಗ್ಗೆ ತನಿಖೆ ಶುರು ಮಾಡಿದೆ. ಅಧಿಕಾರಿಗಳು ಬ್ಲೂಮ್​ಬರ್ಗ್​ಗೆ ಈ ಬಗ್ಗೆ ತಿಳಿಸಿದ್ದು, ಬಳಕೆದಾರರ ಐಡಿಗಳು, ಪೂರ್ತಿ ಹೆಸರು, ಇಮೇಲ್ ವಿಳಾಸಗಳು, ದೂರವಾಣಿ ಸಂಖ್ಯೆಗಳು ಮೊದಲಾದ ಮಾಹಿತಿಗಳನ್ನು ಬಯಲು ಮಾಡಲಾಗಿದೆ ಎಂದು ತಿಳಿದು ಬಂದ ಮೇಲೆ ತನಿಖೆ ಕೈಗೆತ್ತಿಕೊಂಡಿರುವುದಾಗಿ ಹೇಳಿಕೊಂಡಿದೆ. ಸೈಬರ್​ನ್ಯೂಸ್ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದು, ಲಿಂಕ್ಡ್​ಇನ್ ಬಳಕೆದಾರರು ಪಾಸ್​ವರ್ಡ್ ಬದಲಿಸಿಕೊಳ್ಳುವಂತೆ ಮತ್ತು ಹೆಚ್ಚು ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ತಿಳಿಸಿದೆ.

ಇದನ್ನೂ ಓದಿ: 61 ಲಕ್ಷ ಭಾರತೀಯ ಫೇಸ್​ಬುಕ್ ಬಳಕೆದಾರರ ಮಾಹಿತಿ ಲೀಕ್

(LinkedIn 50 crore users data breach alleged by cybernews. Company clarification regarding this.)

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!