Bank Holidays in December 2021: ಡಿಸೆಂಬರ್​ನಲ್ಲಿ ಬ್ಯಾಂಕ್​ಗಳಿಗೆ ಒಟ್ಟು ಎಷ್ಟು ದಿನ ರಜಾ ಗೊತ್ತೆ?

| Updated By: Srinivas Mata

Updated on: Nov 30, 2021 | 10:59 AM

2021ರ ಡಿಸೆಂಬರ್ ತಿಂಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಘೋಷಿಸಲಾದ ರಜಾ ದಿನಗಳ ಪಟ್ಟಿ ಇಲ್ಲಿದೆ. ಗ್ರಾಹಕರು ಶಾಖೆಗೆ ಭೇಟಿ ನೀಡಬೇಕಾದ ಸಂದರ್ಭದಲ್ಲಿ ಇದನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಉತ್ತಮ.

Bank Holidays in December 2021: ಡಿಸೆಂಬರ್​ನಲ್ಲಿ ಬ್ಯಾಂಕ್​ಗಳಿಗೆ ಒಟ್ಟು ಎಷ್ಟು ದಿನ ರಜಾ ಗೊತ್ತೆ?
ಸಾಂದರ್ಭಿಕ ಚಿತ್ರ
Follow us on

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಂಚಿಕೊಂಡ ರಜಾದಿನಗಳ ಪಟ್ಟಿಯ ಪ್ರಕಾರ, ಎಲ್ಲ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್​ಗಳು 2021ರ ಡಿಸೆಂಬರ್‌ನಲ್ಲಿ 12 ದಿನಗಳವರೆಗೆ ಮುಚ್ಚುತ್ತವೆ. ಅರ್ಥಾತ್ ಇಷ್ಟು ದಿನ ಬ್ಯಾಂಕ್​ಗಳಿಗೆ ರಜಾದಿನಗಳಿವೆ. ಹಬ್ಬಗಳು ಮತ್ತು ಮುಂಬರುವ ಕ್ರಿಸ್​ಮಸ್ ಹಾಗೂ ಹೊಸ ವರ್ಷದ ಆಚರಣೆಗಳ ದೃಷ್ಟಿಯಿಂದ ಮುಂದಿನ ತಿಂಗಳು ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಹೊರತುಪಡಿಸಿ ಒಟ್ಟು ಏಳು ರಜಾದಿನಗಳನ್ನು ಘೋಷಿಸಲಾಗಿದೆ. ಬ್ಯಾಂಕ್ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಮತ್ತು ಕೆಲವು ಖಾಸಗಿ ಬ್ಯಾಂಕ್​ಗಳಲ್ಲಿ ಭಿನ್ನವಾಗಿರುತ್ತವೆ ಎಂಬುದನ್ನು ಸಹ ಗಮನಿಸಬೇಕು. ಅಲ್ಲದೆ, ರಜಾದಿನಗಳನ್ನು ಮೂರು ವರ್ಗಗಳ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ: ನೆಗೋಷಿಯೆಬಲ್ ಇನ್​​ಸ್ಟ್ರುಮೆಂಟ್ಸ್ ಕಾಯ್ದೆ ಅಡಿಯಲ್ಲಿ ರಜಾದಿನಗಳು, ನೆಗೋಷಿಯೇಬಲ್ ಇನ್​ಸ್ಟ್ರುಮೆಂಟ್ಸ್ ಕಾಯ್ದೆ ಅಡಿಯಲ್ಲಿ ರಜಾದಿನಗಳು ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್​ಮೆಂಟ್ ಹಾಲಿಡೇ, ಮತ್ತು ಬ್ಯಾಂಕ್​ಳ ಖಾತೆಗಳನ್ನು ಮುಚ್ಚುವುದು.

ಡಿಸೆಂಬರ್‌ನಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ:
ಡಿಸೆಂಬರ್ 3: ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬದ ನಿಮಿತ್ತ ಗೋವಾದಲ್ಲಿ ಬ್ಯಾಂಕ್​ಗಳಿಗೆ ರಜಾ

ಡಿಸೆಂಬರ್ 5: ಭಾನುವಾರ

ಡಿಸೆಂಬರ್ 11: ಎರಡನೇ ಶನಿವಾರ

ಡಿಸೆಂಬರ್ 12: ಭಾನುವಾರ

ಡಿಸೆಂಬರ್ 18: ಯೂ ಸೋ ಸೋ ಥಾಮ್ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಮೇಘಾಲಯದಲ್ಲಿ ಮಾತ್ರ ಬ್ಯಾಂಕ್‌ಗಳಿಗೆ ರಜಾ.

ಡಿಸೆಂಬರ್ 19: ಭಾನುವಾರ

ಡಿಸೆಂಬರ್ 24: ಕ್ರಿಸ್​ಮಸ್​ ಈವ್

ಡಿಸೆಂಬರ್ 25: ಕ್ರಿಸ್​ಮಸ್/ನಾಲ್ಕನೇ ಶನಿವಾರ

ಡಿಸೆಂಬರ್ 26: ಭಾನುವಾರ

ಡಿಸೆಂಬರ್ 27: ಕ್ರಿಸ್​ಮಸ್ ಆಚರಣೆ (ಐಜ್ವಾಲ್‌ನಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುವುದು)

ಡಿಸೆಂಬರ್ 30: ಶಿಲ್ಲಾಂಗ್‌ನಲ್ಲಿ ಬ್ಯಾಂಕ್‌ಗಳು ರಜಾ

ಡಿಸೆಂಬರ್ 31: ಹೊಸ ವರ್ಷದ ಮುನ್ನಾದಿನದಂದು ಐಜ್ವಾಲ್‌ನಲ್ಲಿ ಬ್ಯಾಂಕ್‌ಗಳು ರಜಾ

ಇದನ್ನೂ ಓದಿ: Fixed Deposits: ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಆಕ್ಸಿಸ್​ ಬ್ಯಾಂಕ್, ಐಸಿಐಸಿಐ ಬ್ಯಾಂಕ್​ ಎಫ್​ಡಿ ದರಗಳು ಇಂತಿವೆ