AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fixed Deposits: ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಆಕ್ಸಿಸ್​ ಬ್ಯಾಂಕ್, ಐಸಿಐಸಿಐ ಬ್ಯಾಂಕ್​ ಎಫ್​ಡಿ ದರಗಳು ಇಂತಿವೆ

ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್​, ಆಕ್ಸಿಸ್​ ಬ್ಯಾಂಕ್​ ಮತ್ತು ಐಸಿಐಸಿಐ ಬ್ಯಾಂಕ್ ವಿವಿಧ ಅವಧಿಯ ಫಿಕ್ಸೆಡ್​ ಡೆಪಾಸಿಟ್​ಗಳ ಬಡ್ಡಿ ದರಗಳ ವಿವರ ಇಂತಿದೆ.

Fixed Deposits: ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಆಕ್ಸಿಸ್​ ಬ್ಯಾಂಕ್, ಐಸಿಐಸಿಐ ಬ್ಯಾಂಕ್​ ಎಫ್​ಡಿ ದರಗಳು ಇಂತಿವೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Nov 26, 2021 | 6:31 PM

Share

ಕುಸಿಯುತ್ತಿರುವ ದರಗಳ ಹೊರತಾಗಿಯೂ ಈಗಲೂ ಹೆಚ್ಚಿನ ಆಕರ್ಷಣೆ ಹೊಂದಿರುವ ದೇಶದ ಅತ್ಯಂತ ಜನಪ್ರಿಯ ಡೆಟ್​ ಇನ್​ಸ್ಟ್ರುಮೆಂಟ್​ ಆಯ್ಕೆಗಳಲ್ಲಿ ಒಂದಾಗಿದೆ ಫಿಕ್ಸೆಡ್​ ಡೆಪಾಸಿಟ್​ಗಳು. ಠೇವಣಿ ಮೊತ್ತ, ಠೇವಣಿ ಅವಧಿ ಮತ್ತು ಠೇವಣಿದಾರರ ಪ್ರಕಾರದಿಂದ ವಿವಿಧ ಬ್ಯಾಂಕ್‌ಗಳ ಬಡ್ಡಿದರಗಳು ಬದಲಾಗುತ್ತವೆ. ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ನಂತಹ ಎಲ್ಲ ಪ್ರಮುಖ ಬ್ಯಾಂಕ್​ಗಳು ಏಳು ದಿನಗಳಿಂದ 10 ವರ್ಷಗಳವರೆಗಿನ ಅವಧಿಗೆ ಫಿಕ್ಸೆಡ್​ ಡೆಪಾಸಿಟ್​ಗಳನ್ನು ನೀಡುತ್ತವೆ. ಆ ಬಗೆಗಿನ ಮಾಹಿತಿ ಒಮ್ಮೆ ನೋಡಿ.

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ಎಫ್​.ಡಿ. ದರಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶದ ಅತಿದೊಡ್ಡ ವಾಣಿಜ್ಯ ಬ್ಯಾಂಕ್. ಸಾಮಾನ್ಯ ಗ್ರಾಹಕರಿಗೆ ಏಳು ದಿನಗಳಿಂದ 10 ವರ್ಷಗಳವರೆಗೆ ಮೆಚ್ಯೂರ್​ ಆಗುವಂತೆ ಶೇ 2.90ರಿಂದ ಶೇ 5.55ರ ವರೆಗಿನ ಬಡ್ಡಿದರಗಳನ್ನು ನೀಡುತ್ತದೆ. ಈ ದರಗಳು ಜನವರಿ 8, 2021ರಿಂದ ಜಾರಿಗೆ ಬಂದಿದೆ. ಸಾಮಾನ್ಯ ಸಾರ್ವಜನಿಕರಿಗಾಗಿ ಅವಧಿ ಪ್ರಕಾರವಾಗಿ ಬಡ್ಡಿದರಗಳನ್ನು ನೋಡೋಣ:

7 ದಿನಗಳಿಂದ 45 ದಿನಗಳು: ಶೇ 2.90

46 ದಿನಗಳಿಂದ 179 ದಿನಗಳು: ಶೇ 3.90

180 ದಿನಗಳಿಂದ 210 ದಿನಗಳು; 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ: ಶೇ 4.40

1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ: ಶೇ 5.00

2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ: ಶೇ 5.10

3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ: ಶೇ 5.30

5 ವರ್ಷಗಳು ಮತ್ತು 10 ವರ್ಷಗಳವರೆಗೆ: ಶೇ 5.40

ಎಚ್​ಡಿಎಫ್​ಸಿ ಬ್ಯಾಂಕ್ ಇತ್ತೀಚಿನ ಎಫ್​ಡಿ ದರಗಳು ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಎಚ್​ಡಿಎಫ್​ಸಿ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ಏಳು ದಿನಗಳಿಂದ 10 ವರ್ಷಗಳವರೆಗೆ ಮೆಚ್ಯೂರ್​ ಆಗುವಂತೆ ಶೇ 2.50ರಿಂದ ಶೇ 5.50ರ ವರೆಗೆ ಬಡ್ಡಿಯನ್ನು ನೀಡುತ್ತದೆ. ಈ ದರಗಳು ಮೇ 21, 2021ರಿಂದ ಜಾರಿಗೆ ಬಂದಿದೆವೆ. ಸಾಮಾನ್ಯ ಸಾರ್ವಜನಿಕರಿಗಾಗಿ ಅವಧಿಯ ಪ್ರಕಾರವಾಗಿ ಬಡ್ಡಿದರಗಳನ್ನು ನೋಡೋಣ:

7 ರಿಂದ 14 ದಿನಗಳು; 15 ರಿಂದ 29 ದಿನಗಳು: ಶೇ 2.50

30 ರಿಂದ 45 ದಿನಗಳು; 46 ರಿಂದ 60 ದಿನಗಳು; 61 ರಿಂದ 90 ದಿನಗಳು: ಶೇ 3.00

91 ದಿನಗಳಿಂದ 6 ತಿಂಗಳು: ಶೇ 3.50

6 ತಿಂಗಳ 1 ದಿನದಿಂದ 9 ತಿಂಗಳವರೆಗೆ; 9 ತಿಂಗಳು 1 ದಿನದಿಂದ 1 ವರ್ಷಕ್ಕಿಂತ ಕಡಿಮೆ: ಶೇ 4.40

1 ವರ್ಷ: ಶೇ 4.90

1 ವರ್ಷ 1 ದಿನದಿಂದ 2 ವರ್ಷ: ಶೇ 4.90

2 ವರ್ಷಗಳು 1 ದಿನದಿಂದ 3 ವರ್ಷಗಳು: ಶೇ 5.15

3 ವರ್ಷಗಳು 1 ದಿನದಿಂದ 5 ವರ್ಷಗಳು: ಶೇ 5.30

5 ವರ್ಷಗಳು 1 ದಿನದಿಂದ 10 ವರ್ಷಗಳು: 5.50%

ಆಕ್ಸಿಸ್ ಬ್ಯಾಂಕ್ FD ದರಗಳು ಇತ್ತೀಚೆಗೆ ಆಕ್ಸಿಸ್ ಬ್ಯಾಂಕ್ ಏಳು ದಿನಗಳಿಂದ 10 ವರ್ಷಗಳವರೆಗೆ ವಿವಿಧ ಅವಧಿಗಳಲ್ಲಿ ಎಫ್‌ಡಿ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಠೇವಣಿಗಳ ಇತ್ತೀಚಿನ ಪರಿಷ್ಕರಣೆ ನಂತರ ಸಾಮಾನ್ಯ ಜನರಿಗೆ ಕನಿಷ್ಠ ಶೇ 2.50ರಿಂದ ಗರಿಷ್ಠ ಶೇ 5.75ರ ಬಡ್ಡಿ ದರವನ್ನು ನೀಡುತ್ತಿದೆ.

ಈ ಖಾಸಗಿ ವಲಯದ ಬ್ಯಾಂಕ್ 29 ಅವಧಿಯ ಸ್ಲ್ಯಾಬ್‌ಗಳನ್ನು ಹೊಂದಿದೆ. ಅವಧಿ ಪ್ರಕಾರವಾಗಿ ದರಗಳನ್ನು ನೋಡೋಣ:

– ಏಳು ದಿನಗಳಿಂದ 14 ದಿನಗಳು, 15 ದಿನಗಳಿಂದ 29 ದಿನಗಳು: ಶೇ 2.5

– 30 ದಿನಗಳಿಂದ 45 ದಿನಗಳು, 46 ದಿನಗಳಿಂದ 60 ದಿನಗಳು, 61 ದಿನಗಳಿಂದ 3 ತಿಂಗಳಿಗಿಂತ ಕಡಿಮೆ: ಶೇ 3

– ಮೂರು ತಿಂಗಳಿಂದ ನಾಲ್ಕು ತಿಂಗಳಿಗಿಂತ ಕಡಿಮೆ, ನಾಲ್ಕು ತಿಂಗಳಿಂದ ಐದು ತಿಂಗಳಿಗಿಂತ ಕಡಿಮೆ, ಐದು ತಿಂಗಳಿಂದ ಆರು ತಿಂಗಳಿಗಿಂತ ಕಡಿಮೆ: ಶೇ 3.5

– 6 ತಿಂಗಳಿಂದ 7 ತಿಂಗಳಿಗಿಂತ ಕಡಿಮೆ, 7 ತಿಂಗಳಿಂದ 8 ತಿಂಗಳಿಗಿಂತ ಕಡಿಮೆ, 8 ತಿಂಗಳಿಂದ 9 ತಿಂಗಳಿಗಿಂತ ಕಡಿಮೆ, 9 ತಿಂಗಳಿಂದ 10 ತಿಂಗಳಿಗಿಂತ ಕಡಿಮೆ, 10 ತಿಂಗಳಿಂದ 11 ತಿಂಗಳಿಗಿಂತ ಕಡಿಮೆ, 11 ತಿಂಗಳಿಂದ 11 ತಿಂಗಳು 25 ದಿನಗಳಿಗಿಂತ ಕಡಿಮೆ, 11 ತಿಂಗಳು 25 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ: ಶೇ 4.4.

– 1 ವರ್ಷದಿಂದ 1 ವರ್ಷ 5 ದಿನಗಳಿಗಿಂತ ಕಡಿಮೆ: ಶೇ 5.1

– 1 ವರ್ಷ 5 ದಿನಗಳಿಂದ 1 ವರ್ಷದ 11 ದಿನಗಳಿಗಿಂತ ಕಡಿಮೆ: ಶೇ 5.15

– 1 ವರ್ಷ 11 ದಿನಗಳಿಂದ 1 ವರ್ಷದ 25 ದಿನಗಳಿಗಿಂತ ಕಡಿಮೆ, 1 ವರ್ಷ 25 ದಿನಗಳಿಂದ 13 ತಿಂಗಳಿಗಿಂತ ಕಡಿಮೆ: ಶೇ 5.2

– 13 ತಿಂಗಳಿಂದ 14 ತಿಂಗಳಿಗಿಂತ ಕಡಿಮೆ, 14 ತಿಂಗಳಿಂದ 15 ತಿಂಗಳಿಗಿಂತ ಕಡಿಮೆ, 15 ತಿಂಗಳಿಂದ 16 ತಿಂಗಳಿಗಿಂತ ಕಡಿಮೆ, 16 ತಿಂಗಳಿಂದ 17 ತಿಂಗಳಿಗಿಂತ ಕಡಿಮೆ, 17 ತಿಂಗಳಿಂದ 18 ತಿಂಗಳಿಗಿಂತ ಕಡಿಮೆ: ಶೇ 5.1

– 18 ತಿಂಗಳಿಂದ 2 ವರ್ಷಗಳಿಗಿಂತ ಕಡಿಮೆ: ಶೇ 5.25

– 2 ವರ್ಷದಿಂದ 30 ತಿಂಗಳಿಗಿಂತ ಕಡಿಮೆ, 30 ತಿಂಗಳಿಂದ 3 ವರ್ಷಗಳಿಗಿಂತ ಕಡಿಮೆ, 3 ವರ್ಷದಿಂದ 5 ವರ್ಷಗಳಿಗಿಂತ ಕಡಿಮೆ: ಶೇ 5.4

– 5 ವರ್ಷದಿಂದ 10 ವರ್ಷಗಳು: ಶೇ 5.75

ಐಸಿಐಸಿಐ ಬ್ಯಾಂಕ್ ಎಫ್​ಡಿ ದರಗಳು ಐಸಿಐಸಿಐ ಬ್ಯಾಂಕ್ ಶೇ 2.5ರಿಂದ ಶೇ 5.50ರ ವರೆಗಿನ ಬಡ್ಡಿದರಗಳನ್ನು 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರ್​ ಆಗುವ ಠೇವಣಿಗಳ ಮೇಲೆ ನೀಡುತ್ತದೆ. ಈ ದರಗಳು ಅಕ್ಟೋಬರ್ 21, 2020ರಿಂದ ಇದು ಅನ್ವಯಿಸುತ್ತಿದೆ.

ಅವಧಿ ಪ್ರಕಾರವಾಗಿ ಬಡ್ಡಿ ದರಗಳು ಈ ಕೆಳಗಿನಂತಿವೆ: 7 ದಿನಗಳಿಂದ 14 ದಿನಗಳು; 15 ದಿನಗಳಿಂದ 29 ದಿನಗಳು: ಶೇ 2.50

30 ದಿನಗಳಿಂದ 45 ದಿನಗಳು; 46 ದಿನಗಳಿಂದ 60 ದಿನಗಳು; 61 ದಿನಗಳಿಂದ 90 ದಿನಗಳು: ಶೇ 3

91 ದಿನಗಳಿಂದ 120 ದಿನಗಳು; 121 ದಿನಗಳಿಂದ 184 ದಿನಗಳು: ಶೇ 3.5

185 ದಿನಗಳಿಂದ 210 ದಿನಗಳು; 211 ದಿನಗಳಿಂದ 270 ದಿನಗಳು; 271 ದಿನಗಳಿಂದ 289 ದಿನಗಳು; 290 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ: ಶೇ 4.40

1 ವರ್ಷದಿಂದ 389 ದಿನಗಳು; 390 ದಿನಗಳಿಂದ < 18 ತಿಂಗಳು: ಶೇ 4.9

18 ತಿಂಗಳಿಂದ 2 ವರ್ಷಗಳವರೆಗೆ: ಶೇ 5

2 ವರ್ಷ 1 ದಿನದಿಂದ 3 ವರ್ಷಗಳು: ಶೇ 5.15

3 ವರ್ಷ 1 ದಿನದಿಂದ 5 ವರ್ಷಗಳು: ಶೇ 5.35

5 ವರ್ಷ 1 ದಿನದಿಂದ 10 ವರ್ಷಗಳು: ಶೇ 5.50

ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್​ ವೇಳೆ ಈ 4 ಕ್ಲೇಮ್​ಗಳ ಬಗ್ಗೆ ಗಮನ ನೀಡದಿದ್ದರೆ ನುಕ್ಸಾನ್ ಆದೀತು ಎಚ್ಚರ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ