SBI: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 1 ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೇಲೆ ರೂ. 1 ಕೋಟಿ ದಂಡ ವಿಧಿಸಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949 (ಕಾಯ್ದೆ) ಸೆಕ್ಷನ್ 19ರ ಸಬ್-ಸೆಕ್ಷನ್ (2) ಅನ್ನು ಉಲ್ಲಂಘಿಸಿದ್ದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (RBI) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ 1 ಕೋಟಿ ರೂಪಾಯಿ ಮೊತ್ತದ ದಂಡವನ್ನು ವಿಧಿಸಿದೆ. ಕಾಯ್ದೆಯ ಸೆಕ್ಷನ್ 46 (4) (i) ಮತ್ತು 51 (1) ರೊಂದಿಗೆ ಓದಲಾದ ಸೆಕ್ಷನ್ 47 ಎ (1) (ಸಿ) ನಿಬಂಧನೆಗಳ ಅಡಿಯಲ್ಲಿ ಆರ್‌ಬಿಐಗೆ ಸಿಕ್ಕಿರುವ ಅಧಿಕಾರವನ್ನು ಚಲಾಯಿಸಲು ದಂಡ ವಿಧಿಸಲಾಗಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ. ಈ ಕ್ರಮವು ನಿಯಂತ್ರಕ ನಿಯಮಾವಳಿಯಲ್ಲಿನ ನ್ಯೂನತೆಗಳನ್ನು ಆಧರಿಸಿದೆ ಮತ್ತು ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ಮಾಡಿಕೊಂಡಿರುವ ಯಾವುದೇ ವಹಿವಾಟು ಅಥವಾ ಒಪ್ಪಂದದ ಸಿಂಧುತ್ವಕ್ಕೆ ಇದು ಸಂಬಂಧಿಸಿಲ್ಲ ಎಂದು ಆರ್‌ಬಿಐ ಹೇಳಿದೆ.
ಇನ್ನೂ ಮುಂದುವರಿದು, “ಬ್ಯಾಂಕ್‌ನ ಮೇಲ್ವಿಚಾರಣೆ ಮೌಲ್ಯಮಾಪನಕ್ಕಾಗಿ (ISE) ಶಾಸನಬದ್ಧ ತಪಾಸಣೆಗಳನ್ನು ಮಾರ್ಚ್ 31, 2018 ಮತ್ತು ಮಾರ್ಚ್ 31, 2019ರಂತೆ ಅದರ ಹಣಕಾಸಿನ ಸ್ಥಿತಿಗಳನ್ನು ಉಲ್ಲೇಖಿಸಿ, RBI ನಡೆಸಿದ ಅಪಾಯದ ಮೌಲ್ಯಮಾಪನ ವರದಿಗಳು, ತಪಾಸಣೆ ವರದಿ ಮತ್ತು ಕಾಯ್ದೆಯ ಸೆಕ್ಷನ್ 19ರ ಸಬ್-ಸೆಕ್ಷನ್ (2)ರ ಉಲ್ಲಂಘನೆಗೆ ಸಂಬಂಧಿಸಿದ ಎಲ್ಲ ಸಂಬಂಧಿತ ಪತ್ರ ವ್ಯವಹಾರಗಳು ತಿಳಿಸುವಂತೆ, ಆ ಕಂಪೆನಿಗಳ ಪಾವತಿಸಿದ ಷೇರು ಬಂಡವಾಳದ ಶೇ 30ಕ್ಕಿಂತ ಹೆಚ್ಚು ಷೇರುಗಳನ್ನು ಅಡಮಾನವಾಗಿ ಸಾಲಗಾರ ಕಂಪೆನಿಗಳಲ್ಲಿ ಬ್ಯಾಂಕ್ ಹೊಂದಿದೆ.”
ಆರ್‌ಬಿಐ ಪ್ರಕಾರ, ಬ್ಯಾಂಕ್‌ಗೆ ನೋಟಿಸ್ ಜಾರಿ ಮಾಡಲಾಗಿದೆ. ಅದರಲ್ಲಿ ತಿಳಿಸಿರುವಂತೆ ಕಾಯ್ದೆಯ ಮೇಲಿನ ನಿಬಂಧನೆಗಳ ಉಲ್ಲಂಘನೆಗಾಗಿ ಏಕೆ ದಂಡವನ್ನು ವಿಧಿಸಬಾರದು ಎಂಬ ಕಾರಣವನ್ನು ತಿಳಿಸಲು ಸಲಹೆ ನೀಡಿತು. ನೋಟಿಸ್‌ಗೆ ಬ್ಯಾಂಕ್ ಉತ್ತರ ನೀಡಿದ್ದು, ವೈಯಕ್ತಿಕ ವಿಚಾರಣೆಯ ಸಮಯದಲ್ಲಿ ಮಾಡಿದ ಮೌಖಿಕ ಸಲ್ಲಿಕೆಗಳು ಮತ್ತು ಬ್ಯಾಂಕ್ ಮಾಡಿದ ಹೆಚ್ಚುವರಿ ಸಲ್ಲಿಕೆಗಳನ್ನು ಪರಿಗಣಿಸಿದ ನಂತರ, ಆರ್‌ಬಿಐ ಕಾಯ್ದೆಯ ಮೇಲಿನ ನಿಬಂಧನೆಗಳ ಉಲ್ಲಂಘನೆ ಆರೋಪವನ್ನು ಸಮರ್ಥಿಸುತ್ತದೆ. ಮತ್ತು ವಿತ್ತೀಯ ದಂಡವನ್ನು ವಿಧಿಸಲು ಸಮರ್ಥವಾಗಿದೆ ಎಂಬ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.
ಇದನ್ನೂ ಓದಿ: SBI Bank Charges: ಯುಪಿಐ, ರುಪೇ ಡೆಬಿಟ್ ಕಾರ್ಡ್, ಮೂಲ ಉಳಿತಾಯ ಖಾತೆಗಳ ಶುಲ್ಕಗಳ ಬಗ್ಗೆ ಎಸ್ಬಿಐ ಸ್ಪಷ್ಟನೆ
Published On - 8:58 pm, Fri, 26 November 21