AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Unclaimed Deposits: ನಿಷ್ಕ್ರಿಯ ಖಾತೆಗಳ ಪಟ್ಟಿ ಆರ್​ಬಿಐಗೆ ಕೊಟ್ಟ ಬ್ಯಾಂಕುಗಳು; ಈ ಖಾತೆಗಳಲ್ಲಿ ಎಷ್ಟಿದೆ ಹಣ, ಮುಂದೇನಾಗುತ್ತೆ? ಇಲ್ಲಿದೆ ವಿವರ

What Happens To Unclaimed Money?: 10 ವರ್ಷಗಳಿಗೂ ಹೆಚ್ಚು ಕಾಲದಿಂದ ಕ್ಲೈಮ್ ಆಗದೇ ಉಳಿದಿರುವ ಖಾತೆಗಳ ಪಟ್ಟಿಯನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಆರ್​ಬಿಐಗೆ ನೀಡಿರುವುದು ತಿಳಿದುಬಂದಿದೆ. ಇವುಗಳ ಒಟ್ಟು ಮೊತ್ತ 35,012 ಕೋಟಿ ರೂ ಎಂದೆನ್ನಲಾಗಿದೆ. ಎಸ್​ಬಿಐ, ಪಿಎನ್​ಬಿ ಮತ್ತು ಕೆನರಾ ಬ್ಯಾಂಕುಗಳಲ್ಲೇ ಅತಿ ಹೆಚ್ಚು ನಿಷ್ಕ್ರಿಯ ಖಾತೆಗಳು ಮತ್ತು ಹಣ ಇರುವುದು ಈ ಪಟ್ಟಿಯಿಂದ ಬಹಿರಂಗವಾಗಿದೆ.

Unclaimed Deposits: ನಿಷ್ಕ್ರಿಯ ಖಾತೆಗಳ ಪಟ್ಟಿ ಆರ್​ಬಿಐಗೆ ಕೊಟ್ಟ ಬ್ಯಾಂಕುಗಳು; ಈ ಖಾತೆಗಳಲ್ಲಿ ಎಷ್ಟಿದೆ ಹಣ, ಮುಂದೇನಾಗುತ್ತೆ? ಇಲ್ಲಿದೆ ವಿವರ
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 06, 2023 | 2:07 PM

Share

ನವದೆಹಲಿ: ನಿರ್ದಿಷ್ಟ ಅವಧಿಯವರೆಗೆ ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗಿದ್ದರೆ ಅವನ್ನು ಫ್ರೀಜ್ ಮಾಡಲಾಗುತ್ತದೆ ಎಂಬುದು ಸಾಮಾನ್ಯವಾಗಿ ಗೊತ್ತಿರುವ ಸಂಗತಿ. ಖಾತೆದಾರರ ಸಾವು ಇತ್ಯಾದಿ ವಿವಿಧ ಕಾರಣಗಳಿಗೆ ಬ್ಯಾಂಕ್ ಖಾತೆಗಳಲ್ಲಿ ವಹಿವಾಟು ನಡೆಯದೇ ಹೋಗಿರಬಹುದು. ಈ ರೀತಿ ನಿಷ್ಕ್ರಿಯಗೊಂಡಿರುವ ಖಾತೆಗಳಲ್ಲಿರುವ ಹಣ ಏನಾಗುತ್ತದೆ? ಬ್ಯಾಂಕುಗಳ ಪಾಲಾಗುತ್ತದಾ ಈ ಹಣ ಎಂಬಿತ್ಯಾದಿ ಪ್ರಶ್ನೆಗಳು ಎದುರಾಗಬಹುದು. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಆರ್​ಬಿಐ ಇದೀಗ ಈ ನಿಷ್ಕ್ರಿಯ ಬ್ಯಾಂಕ್ ಖಾತೆಗಳಲ್ಲಿರುವ (Unclaimed Bank Deposits) ಹಣವನ್ನು ಖಾತೆದಾರರಿಗೆ ಅಥವಾ ಅವರ ವಾರಸುದಾರರಿಗೆ (Legal Heirs or Nominees) ಮರಳಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಿದೆ. 10 ವರ್ಷಗಳಿಗೂ ಹೆಚ್ಚು ಕಾಲದಿಂದ ಕ್ಲೈಮ್ ಆಗದೇ ಉಳಿದಿರುವ ಖಾತೆಗಳ ಪಟ್ಟಿಯನ್ನು ಸರ್ಕಾರಿ ಬ್ಯಾಂಕುಗಳು ಆರ್​ಬಿಐಗೆ ಇದೇ ಫೆಬ್ರುವರಿಯಲ್ಲಿ ನೀಡಿರುವುದು ತಿಳಿದುಬಂದಿದೆ. ಇವುಗಳ ಒಟ್ಟು ಮೊತ್ತ 35,012 ಕೋಟಿ ರೂ ಎಂದೆನ್ನಲಾಗಿದೆ. ಎಸ್​ಬಿಐ, ಪಿಎನ್​ಬಿ ಮತ್ತು ಕೆನರಾ ಬ್ಯಾಂಕುಗಳಲ್ಲೇ ಅತಿ ಹೆಚ್ಚು ನಿಷ್ಕ್ರಿಯ ಖಾತೆಗಳು ಮತ್ತು ಹಣ ಇರುವುದು ಈ ಪಟ್ಟಿಯಿಂದ ಬಹಿರಂಗವಾಗಿದೆ. ಆರ್​ಬಿಐ ಇದೀಗ ಒಂದು ವೆಬ್ ಪೋರ್ಟಲ್ ರೂಪಿಸುತ್ತಿದ್ದು, ಕ್ಲೈಮ್ ಆಗದೇ ಉಳಿದಿರುವ ಖಾತೆಗಳನ್ನು ಈ ಪೋರ್ಟಲ್​ನಲ್ಲಿ ಹುಡುಕುವ ಸೌಲಭ್ಯ ಒದಗಿಸಲಿದೆ.

ಏಪ್ರಿಲ್ 3ರಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಗವದ್ ಕರಾಡ್ ಅವರು ಲೋಕಸಭೆಯಲ್ಲಿ ಈ ಬಗ್ಗೆ ನೀಡಿದ ಲಿಖಿತ ಉತ್ತರದಲ್ಲಿ ಒಂದಷ್ಟು ಮಾಹಿತಿ ಇದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ (ಪಬ್ಲಿಕ್ ಸೆಕ್ಟರ್ ಬ್ಯಾಂಕ್) 10 ವರ್ಷಗಳಿಗೂ ಹೆಚ್ಚು ಕಾಲದಿಂದ ಆಪರೇಟ್ ಆಗದ ಖಾತೆಗಳಲ್ಲಿರುವ ಹಣ 35,012 ಕೋಟಿ ರುಪಾಯಿ ಇದೆ. ಇದನ್ನು 2023 ಫೆಬ್ರುವರಿ ಅಂತ್ಯದಲ್ಲಿ ಆರ್​ಬಿಐಗೆ ರವಾನೆ ಮಾಡಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದರು.

ಇದನ್ನೂ ಓದಿRepo and Bond: ರೆಪೋ ದರ ಏರಿಕೆ ಇಲ್ಲ ಎನ್ನುತ್ತಿದ್ದಂತೆಯೇ ಸರ್ಕಾರಿ ಬಾಂಡ್​ನ ಬಡ್ಡಿ ಇಳಿಕೆ; ಷೇರು ಮಾರುಕಟ್ಟೆಯಲ್ಲೂ ಸಂಚಲನ

10 ವರ್ಷಗಳಿಂದ ಕ್ಲೈಮ್ ಆಗದ ಬ್ಯಾಂಕ್ ಖಾತೆಗಳ ಹಣದ ವಿವರ

  1. ಎಸ್​ಬಿಐ: 8,086 ಕೋಟಿ ರೂ
  2. ಪಂಜಾಬ್ ನ್ಯಾಷನಲ್ ಬ್ಯಾಂಕು: 5,340 ಕೋಟಿ ರೂ
  3. ಕೆನರಾ ಬ್ಯಾಂಕ್: 4,558 ಕೋಟಿ ರೂ
  4. ಬ್ಯಾಂಕ್ ಆಫ್ ಬರೋಡಾ: 3,904 ಕೋಟಿ ರೂ
  5. ಯೂನಿಯಲ್ ಬ್ಯಾಂಕ್ ಆಫ್ ಇಂಡಿಯಾ: 3,177 ಕೋಟಿ ರೂ
  6. ಬ್ಯಾಂಕ್ ಆಫ್ ಇಂಡಿಯಾ: 2,557 ಕೋಟಿ ರೂ
  7. ಇಂಡಿಯನ್ ಬ್ಯಾಂಕ್: 2,445 ಕೋಟಿ ರೂ
  8. ಇಂಡಿಯನ್ ಓವರ್​ಸೀಸ್ ಬ್ಯಾಂಕ್: 1,790 ಕೋಟಿ ರೂ
  9. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: 1,240 ಕೋಟಿ ರೂ
  10. ಬ್ಯಾಂಕ್ ಆಫ್ ಮಹಾರಾಷ್ಟ್ರ: 838 ಕೋಟಿ ರೂ
  11. ಯುಕೋ ಬ್ಯಾಂಕ್: 583 ಕೋಟಿ ರೂ
  12. ಪಂಜಾಬ್ ಮತ್ತು ಸಿಂದ್ ಬ್ಯಾಂಕ್: 494 ಕೋಟಿ ರೂ

ನಿಷ್ಕ್ರಿಯ ಖಾತೆಗಳ ವ್ಯಕ್ತಿಗಳನ್ನು ಹುಡುಕುವ ಜವಾಬ್ದಾರಿ ಬ್ಯಾಂಕುಗಳಿಗೆ

ಆರ್​ಬಿಐನ ನಿಯಮಗಳ ಪ್ರಕಾರ ಬ್ಯಾಂಕುಗಳು ತಮ್ಮಲ್ಲಿನ ನಿಷ್ಕ್ರಿಯ ಖಾತೆಗಳ ಮೇಲೆ ನಿಗಾ ಇರಿಸಬೇಕಾಗುತ್ತದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ವಹಿವಾಟು ನಡೆಸದ ಖಾತೆಗಳನ್ನು ಗುರುತಿಸಬೇಕಾಗುತ್ತದೆ. ಇದು ಪ್ರತೀ ವರ್ಷವೂ ತಪ್ಪದೇ ನಡೆಯಬೇಕು. ಈ ನಿಷ್ಕ್ರಿಯ ಖಾತೆಗಳ ಗ್ರಾಹಕರನ್ನು ಸಂಪರ್ಕಿಸಿ, ಲಿಖಿತ ಉತ್ತರ ಪಡೆಬೇಕಾದ್ದು ಬ್ಯಾಂಕುಗಳ ಜವಾಬ್ದಾರಿ.

ಇದನ್ನೂ ಓದಿSBI WECARE: ಎಸ್​ಬಿಐ ವೀ ಕೇರ್ ಸ್ಕೀಮ್; ಕೊನೆಯ ದಿನಾಂಕ ಮತ್ತೆ 3 ತಿಂಗಳು ವಿಸ್ತರಣೆ; ಏನಿದು ಯೋಜನೆ?

ಎರಡು ವರ್ಷಗಳಿಗೂ ಹೆಚ್ಚು ಕಾಲ ಯಾವುದೇ ವಹಿವಾಟು ನಡೆಯದ ಖಾತೆಗಳ ಗ್ರಾಹಕರು ಅಥವಾ ಅವರ ವಾರಸುದಾರರನ್ನು ಹುಡುಕಲು ವಿಶೇಷ ಕಾರ್ಯಾಚರಣೆ ನಡೆಸುವಂತೆ ಬ್ಯಾಂಕುಗಳಿಗೆ ಸಲಹೆ ನೀಡಲಾಗಿದೆ. ಹಾಗೆಯೇ, 10 ವರ್ಷಗಳಿಗೂ ಹೆಚ್ಚು ಕಾಲ ನಿಷ್ಕ್ರಿಯವಾಗಿರುವ ಖಾತೆಗಳ ಖಾತೆದಾರರ ಹೆಸರು, ವಿಳಾಸ ಇರುವ ಪಟ್ಟಿಯನ್ನು ಆಯಾ ಬ್ಯಾಂಕುಗಳು ತಮ್ಮ ವೆಬ್​ಸೈಟ್​ಗಳಲ್ಲಿ ಪ್ರಕಟಿಸುವ ಅಗತ್ಯ ಇದೆ. ಕೇಂದ್ರ ಸಚಿವರು ಈ ಬಗ್ಗೆ ಲೋಕಸಭೆಯಲ್ಲಿ ಮಾಹಿತಿ ನೀಡಿದರು.

ನಿಷ್ಕ್ರಿಯ ಬ್ಯಾಂಕ್ ಖಾತೆಗಳ ಹಣವನ್ನು ವಾರಸುದಾರರಿಗೆ ಮರಳಿಸಲು ಆರ್​ಬಿಐ ಕ್ರಮ

ವಿವಿಧ ಸರ್ಕಾರಿ ಬ್ಯಾಂಕುಗಳಲ್ಲಿ 10 ವರ್ಷಗಳಿಂದ ನಿಷ್ಕ್ರಿಯವಾಗಿರುವ ಖಾತೆಗಳನ್ನು ಹುಡುಕಲು ಆರ್​ಬಿಐ ಇದೀಗ ಕೇಂದ್ರೀಕೃತ ವೆಬ್ ಪೋರ್ಟಲ್​ವೊಂದನ್ನು ರೂಪಿಸುತ್ತಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಸಾಧನಗಳ ಉಪಯೋಗವನ್ನು ಈ ಪೋರ್ಟಲ್​ನಲ್ಲಿ ಬಳಸಲಾಗುವುದು. ಈ ನಿಷ್ಕ್ರಿಯ ಖಾತೆಗಳ ಹಣವು ಡೆಪಾಸಿಟರ್ ಎಜುಕೇಶನ್ ಅಂಡ್ ಅವೇರ್ನೆಸ್ (ಡಿಇಎ) ಎಂಬ ನಿಧಿಗೆ ವರ್ಗಾವಣೆ ಆಗುತ್ತದೆ. ಆರ್​ಬಿಐ ಈ ಡಿಇಎ ಫಂಡ್ ಅನ್ನು ನಿರ್ವಹಿಸುತ್ತದೆ. ಈ ಹಣವನ್ನು ಠೇವಣಿದಾರರಿಗೆ ಅಥವಾ ಅವರ ವಾರಸುದಾರರಿಗೆ ಮರಳಿಸುವುದು ಆರ್​ಬಿಐನ ಗುರಿಯಾಗಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:07 pm, Thu, 6 April 23

ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ