ನವದೆಹಲಿ, ನವೆಂಬರ್ 17: ಆಯಿಲ್ ಮಾರ್ಕೆಟಿಂಗ್ ಕಂಪನಿಗಳು 19 ಕಿಲೋ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳ ಬೆಲೆ (19 KG Commercial LPG Cylinder Price) ಇಳಿಕೆ ಮಾಡಿವೆ. ಆದರೆ, ಸದ್ಯಕ್ಕೆ ಎಲ್ಲಾ ನಗರಗಳಲ್ಲೂ ಬೆಲೆ ಇಳಿಕೆಯಾಗಿಲ್ಲ. ನಾಲ್ಕು ಮೆಟ್ರೋ ನಗರಗಳಲ್ಲಿ ಕಮರ್ಷಿಯಲ್ ಗ್ಯಾಸ್ ಬೆಲೆ ಪ್ರತೀ ಸಿಲಿಂಡರ್ಗೆ 57.50 ರೂನಷ್ಟು ಕಡಿಮೆ ಆಗಿದೆ. ನವದೆಹಲಿ, ಮುಂಬೈ, ಕೋಲ್ಕತಾ ಮತ್ತು ಚೆನ್ನೈ ಮಹಾನಗರಿಗಳಲ್ಲಿ ಸದ್ಯ ಈ ಬೆಲೆ ಇಳಿಕೆ ಆಗಿರುವುದನ್ನು ಪ್ರಕಟಿಸಲಾಗಿದೆ. ನವೆಂಬರ್ 16, ಅಂದರೆ ನಿನ್ನೆ ಗುರುವಾರದಿಂದಲೇ ಹೊಸ ದರ ಜಾರಿಗೆ ಬಂದಿದೆ. ದೀಪಾವಳಿಗೆ ಮುನ್ನ ಸಿಲಿಂಡರ್ಗೆ 101.5 ರೂನಷ್ಟು ಬೆಲೆ ಏರಿಕೆಯ ಬಿಸಿ ಕಂಡಿದ್ದ ಜನರಿಗೆ ಈಗ ತುಸು ನಿರಾಳ ತರಬಹುದು.
ಇದನ್ನೂ ಓದಿ: ಸಫಾರಿಯಲ್ಲಿ ಸರ್ಚ್ನಿಂದ ಆದಾಯ; ಆ್ಯಪಲ್ಗೆ ಒಂದು ವರ್ಷದಲ್ಲಿ ಗೂಗಲ್ ಕೊಡೋ ಹಣ ಎಷ್ಟು?
ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಇವತ್ತು ಪ್ರಕಟಿಸಿರುವ ಗ್ಯಾಸ್ ಬೆಲೆ ಇಳಿಕೆ ಕೇವಲ 19 ಕಿಲೋ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳದ್ದು ಮಾತ್ರ. ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವ ಬದಲಾವಣೆ ಆಗಿಲ್ಲ. ಬೆಂಗಳೂರಿನಲ್ಲಿ ಡೊಮೆಸ್ಟಿಕ್ ಗ್ಯಾಸ್ ಬೆಲೆ 14.2 ಕಿಲೋ ಸಿಲಿಂಡರ್ಗೆ 905.50 ರೂ ಇದೆ.
ಇದನ್ನೂ ಓದಿ: ಜಿಯೋ ಫೈನಾನ್ಷಿಯಲ್ ಸರ್ವಿಸಸ್ ನಿರ್ದೇಶಕರಾಗಿ ಇಶಾ ಅಂಬಾನಿ ಸೇರಿದಂತೆ ಮೂವರ ನೇಮಕಕ್ಕೆ ಆರ್ಬಿಐ ಸಮ್ಮತಿ
ತೈಲ ಮಾರುಕಟ್ಟೆ ಕಂಪನಿಗಳು ಪ್ರತೀ ತಿಂಗಳು 1ನೇ ತಾರೀಖು ವಿವಿಧ ಎಲ್ಪಿಜಿ ಬೆಲೆಗಳನ್ನು ಪರಿಷ್ಕರಿಸುತ್ತವೆ. ಸತತ ಎರಡು ತಿಂಗಳು ಕಮರ್ಷಿಯಲ್ ಗ್ಯಾಸ್ ಬೆಲೆಗಳನ್ನು ಹೆಚ್ಚಿಸಿದ್ದವು. ಅಕ್ಟೋಬರ್ 1ರಂದು 19 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆಗಳನ್ನು 209 ರೂಗಳಷ್ಟು ಹೆಚ್ಚಿಸಲಾಗಿತ್ತು. ನವೆಂಬರ್ 1ರಂದು ಸುಮಾರು ನೂರು ರೂಗಳಿಗೂ ಹೆಚ್ಚು ಬೆಲೆ ಏರಿಕೆ ಮಾಡಲಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ