LPG Cylinder: ಎಲ್​ಪಿಜಿ ಅಡುಗೆ ಅನಿಲ ಸಿಲಿಂಡರ್​ ಬೆಲೆಯಲ್ಲಿ 25 ರೂ. ಹೆಚ್ಚಳ; ಪ್ರಮುಖ ನಗರಗಳಲ್ಲಿ ಬೆಲೆ ವಿವರ ಹೀಗಿದೆ

| Updated By: Srinivas Mata

Updated on: Aug 17, 2021 | 11:38 PM

ಸರ್ಕಾರಿ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪೆನಿಗಳು ಎಲ್​ಪಿಜಿ ಅಡುಗೆ ಅನಿಲ ಸಿಲಿಂಡರ್​ಗಳ ಬೆಲೆಯಲ್ಲಿ ಆಗಸ್ಟ್ 17ನೇ ತಾರೀಕಿನಂದು 25 ರೂಪಾಯಿ ಬೆಲೆ ಏರಿಕೆ ಮಾಡಿವೆ.

LPG Cylinder: ಎಲ್​ಪಿಜಿ ಅಡುಗೆ ಅನಿಲ ಸಿಲಿಂಡರ್​ ಬೆಲೆಯಲ್ಲಿ 25 ರೂ. ಹೆಚ್ಚಳ; ಪ್ರಮುಖ ನಗರಗಳಲ್ಲಿ ಬೆಲೆ ವಿವರ ಹೀಗಿದೆ
ಸಾಂದರ್ಭಿಕ ಚಿತ್ರ
Follow us on

ಸರ್ಕಾರಿ ಸ್ವಾಮ್ಯದ ತೈಲ ರೀಟೇಲರ್​ಗಳು ಎಲ್​ಪಿಜಿ ಅನಿಲ್ ಸಿಲಿಂಡರ್​ಗಳು ಅಥವಾ ಅಡುಗೆ ಅನಿಲ ಸಿಲಿಂಡರ್​ಗಳ ಬೆಲೆಯನ್ನು ಆಗಸ್ಟ್​ 17, 2021ರ ಮಂಗಳವಾರ ಏರಿಕೆ ಮಾಡಿವೆ. ಕಳೆದ ಬಾರಿ ಜುಲೈ 1ನೇ ತಾರೀಕಿನಂದು ಹೆಚ್ಚಳ ಮಾಡಲಾಗಿತ್ತು. ಆಗ 25.50 ರೂಪಾಯಿ ಏರಿಸಲಾಗಿತ್ತು. ಇದೀಗ ಬೆಲೆ ಹೆಚ್ಚಳದ ನಂತರ ನಾಲ್ಕು ಮೆಟ್ರೋ ನಗರಗಳಲ್ಲಿನ ಹಿಂದಿನ ದರ ಮತ್ತು ಈಗಿನ ದರದ ವಿವರ ಇಲ್ಲಿ ನೀಡಲಾಗಿದೆ.
ನವದೆಹಲಿ: ಈಗಿನ ದರ- ರೂ. 859.5 ಮತ್ತು ಹಿಂದಿನ ದರ- ರೂ. 834.5
ಮುಂಬೈ; ಈಗಿನ ದರ- ರೂ. 859.5 ಮತ್ತು ಹಿಂದಿನ ದರ- ರೂ. 834.5
ಕೋಲ್ಕತ್ತಾ: ಈಗಿನ ದರ- ರೂ. 886 ಮತ್ತು ಹಿಂದಿನ ದರ- ರೂ. 861
ಚೆನ್ನೈ: ಈಗಿನ ದರ- ರೂ. 875.5 ಮತ್ತು ಹಿಂದಿನ ದರ- ರೂ. 850.5

ಎಲ್​ಪಿಜಿ ಸಿಲಿಂಡರ್​ಗಳ ದರವು 25 ರೂಪಾಯಿ ಹೆಚ್ಚಳ ಮಾಡಲಾಗಿದೆ. ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಈ ಏರಿಕೆಯ ನಂತರ ದರವು 897.5 ರೂಪಾಯಿ ಆಗಿದೆ. ಸಾಮಾನ್ಯವಾಗಿ ತೈಲ ಮಾರ್ಕೆಟಿಂಗ್ ಕಂಪೆನಿಗಳು ಪ್ರತಿ ತಿಂಗಳ ಮೊದಲ ದಿನದಂದು ಬೆಲೆ ಏರಿಕೆ ಮಾಡುತ್ತವೆ. ಇಲ್ಲಿ ಉಲ್ಲೇಖ ಮಾಡಬೇಕಾದ ಅಂಶ ಏನೆಂದರೆ, ದೆಹಲಿಯಲ್ಲಿ ಈ ವರ್ಷದ ಆರಂಭದಲ್ಲಿ- ಅಂದರೆ 2021ರ ಶುರುವಿನಲ್ಲಿ ಸಿಲಿಂಡರ್ ಬೆಲೆ 694 ರೂಪಾಯಿ ಇತ್ತು. ಇದೀಗ ಎಂಟು ತಿಂಗಳಲ್ಲಿ 165 ರೂಪಾಯಿ ಹೆಚ್ಚಳ ಆಗಿದೆ. ಇನ್ನು ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್ ದರ 862.5 ಆಗುತ್ತದೆ.

ಅಡುಗೆ ಅನಿಲ ಸಿಲಿಂಡರ್ ದರವನ್ನು ನಿಗದಿ ಮಾಡುವಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಎಷ್ಟಿದೆ ಎಂಬುದನ್ನು ಹಾಗೂ ಡಾಲರ್ ವಿರುದ್ಧದ ರೂಪಾಯಿ ಮೌಲ್ಯವನ್ನು ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿನ ಏರಿಕೆಯಿಂದಾಗಿ ಸಾಮಾನ್ಯ ಜನರ ಮೇಲೆ ದೊಡ್ಡ ಮಟ್ಟದ ಪರಿಣಾಮ ಆಗುತ್ತದೆ.

ಇದನ್ನೂ ಓದಿ: LPG Price Increase: 19 ಕೇಜಿ ತೂಕದ ಎಲ್​ಪಿಜಿ ಸಿಲಿಂಡರ್ 73.5 ರೂಪಾಯಿ ಏರಿಕೆ

(LPG Cooking Gas Cylinder Price Hiked By Rs 25 On August 17th)