LPG Price Increase: 19 ಕೇಜಿ ತೂಕದ ಎಲ್​ಪಿಜಿ ಸಿಲಿಂಡರ್ 73.5 ರೂಪಾಯಿ ಏರಿಕೆ

19 ಕೇಜಿ ತೂಕದ ಎಲ್​​ಪಿಜಿ ಸಿಲಿಂಡರ್​ ದರದಲ್ಲಿ ಆಗಸ್ಟ್​ 1ರಿಂದ ಅನ್ವಯ ಆಗುವಂತೆ ರೂ. 73.5 ಏರಿಕೆ ಆಗಿದೆ. ಆದರೆ ಮನೆ ಬಳಕೆ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.

LPG Price Increase: 19 ಕೇಜಿ ತೂಕದ ಎಲ್​ಪಿಜಿ ಸಿಲಿಂಡರ್ 73.5 ರೂಪಾಯಿ ಏರಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Aug 02, 2021 | 12:44 PM

ಪೆಟ್ರೋಲಿಯಂ ಹಾಗೂ ಗ್ಯಾಸ್ ರೀಟೇಲ್ ಸಂಸ್ಥೆಗಳು ಆಗಸ್ಟ್ 1ನೇ ತಾರೀಕಿನಿಂದ ಅನ್ವಯ ಆಗುವಂತೆ 19 ಕೇಜಿ ತೂಕದ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ಗಳ ದರವನ್ನು 73.5 ರೂಪಾಯಿ ಏರಿಕೆ ಮಾಡಿವೆ. ಇನ್ನು 14.2 ಕೇಜಿ ತೂಕದ ಮನೆ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈಗಿನ ಬೆಲೆ ಏರಿಕೆಯು ಜಾರಿಗೆ ಬಂದ ಮೇಲೆ 19 ಕೇಜಿ ತೂಕದ ಎಲ್​ಪಿಜಿ ಸಿಲಿಂಡರ್ ಬೆಲೆಯು ದೆಹಲಿಯಲ್ಲಿ 1623 ರೂಪಾಯಿ ಆಗುತ್ತದೆ. ಇನ್ನು ಮುಂಬೈನಲ್ಲಿ 1579.50 ರೂಪಾಯಿ ಮುಟ್ಟುತ್ತದೆ. ಕೋಲ್ಕತ್ತಾದಲ್ಲಿ 1629 ರೂ., ಚೆನ್ನೈನಲ್ಲಿ 1761 ರೂಪಾಯಿ ಏಗಿದೆ. ಅಂದಹಾಗೆ ತೈಲ ಮತ್ತು ಅನಿಲ ಕಂಪೆನಿಗಳು ಪ್ರತಿ ತಿಂಗಳು 1ನೇ ತಾರೀಕಿನಂದು ಅಡುಗೆ ಅನಿಲದ ಬೆಲೆಯನ್ನು ಪರಿಷ್ಕರಿಸುತ್ತವೆ. ಇನ್ನು 2021ರ ಆಗಸ್ಟ್​ನಲ್ಲಿ ಮನೆ ಬಳಕೆಯ ಎಲ್​ಪಿಜಿ ಸಿಲಿಂಡರ್​ ದರದಲ್ಲಿ ಯಾವ ಬದಲಾವಣೆ ಆಗಿಲ್ಲ. 14.2 ಕೇಜಿ ಸಿಲಿಂಡರ್ ದರ ದೆಹಲಿಯಲ್ಲಿ ರೂ. 834.50 ಇದ್ದರೆ, ಮುಂಬೈನಲ್ಲಿ 834.50, ಕೋಲ್ಕತ್ತಾ ರೂ. 861 ಹಾಗೂ ಚೆನ್ನೈನಲ್ಲಿ 850.50 ರೂಪಾಯಿ ಇದೆ.

2021ರಲ್ಲಿ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗಳ ಬೆಲೆಯು 138.50 ರೂಪಾಯಿ ಹೆಚ್ಚಳವಾಗಿದೆ. ಜನವರಿ 1ರಂದು 14.2 ಕೇಜಿ ತೂಕದ ಸಿಲಿಂಡರ್ 138.50 ರೂಪಾಯಿ ಹೆಚ್ಚಳ ಆಯಿತು. ಆಗ ಸಿಲಿಂಡರ್ ದರ 694 ರೂಪಾಯಿ ಇತ್ತು. ಇನ್ನು ಕಳೆದ ಏಳು ವರ್ಷಗಳಲ್ಲಿ ಸಿಲಿಂಡರ್ ದರ ದುಪ್ಪಟ್ಟಾಗಿದೆ. ಉದಾಹರಣೆಗೆ, 2014ರ ಮಾರ್ಚ್ 1ನೇ ತಾರೀಕು ದೆಹಲಿಯಲ್ಲಿ 14.2 ಕೇಜಿ ತೂಕದ ಸಿಲಿಂಡರ್ 410.50 ರೂಪಾಯಿ ಇತ್ತು. ಆದರೆ ನಂತರದಲ್ಲಿ ನಿರಂತರವಾದ ಬೆಲೆ ಏರಿಕೆ ಮೂಲಕ ಸದ್ಯಕ್ಕೆ ಅದೇ ತೂಕದ ಸಿಲಿಂಡರ್ ದರವು ರೂ. 834.50 ಇದೆ.

ಅಂದಹಾಗೆ, ಪೇಟಿಎಂನಿಂದ ಬಂಪರ್​ ಆಫರ್​ವೊಂದು ನಡೆಯುತ್ತಿದೆ. ಇದನ್ನು ಬಳಸಿಕೊಂಡು ಅಡುಗೆ ಅನಿಲ ಸಿಲಿಂಡರ್​ ಅನ್ನು ಉಚಿತವಾಗಿ ಪಡೆಯುವ ಸಾಧ್ಯತೆ ಇದೆ. ಹೊಸ ಗ್ರಾಹಕರು ಈ ಆ್ಯಪ್ ಮೂಲಕವಾಗಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದಲ್ಲಿ ರೂ. 900 ತನಕ ಕ್ಯಾಶ್​ ಬ್ಯಾಕ್ ಸಿಗುತ್ತದೆ. ಕನಿಷ್ಠ ಕ್ಯಾಶ್​ ಬ್ಯಾಕ್​ 10 ರೂಪಾಯಿ ಹಾಗೂ ಗರಿಷ್ಠ 900 ರೂಪಾಯಿ ಈ ಆಫರ್​ ಮೂಲಕ ದೊರೆಯುತ್ತದೆ.

ಇದನ್ನೂ ಓದಿ: Financial Changes: ಆಗಸ್ಟ್ 1ರಿಂದ ಅನ್ವಯ ಆಗುವಂತೆ ಈ 5 ಹಣಕಾಸು ಬದಲಾವಣೆಗಳು ನಿರೀಕ್ಷಿಸಿ, ಸಿದ್ಧರಾಗಿ

(LPG 19 KG Cylinder Price Increased By Rs 73 From August 1st 2021 Domestic Cylinder Price Remains Unchanged)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್