ಏನಿದು e-RUPI ವೋಚರ್? ಇದರ ಅನುಕೂಲಗಳೇನು? ಯಾವ ಬ್ಯಾಂಕ್ಗಳಲ್ಲಿ ಸಿಗುತ್ತವೆ?
ಇ-ರುಪಿ ಅಂದರೆ ಏನು? ಇದನ್ನು ಯಾವ ಉದ್ದೇಶಕ್ಕೆ ಬಳಸಬಹುದು? ಇದರ ಅನುಕೂಲಗಳೇನು, ಎಲ್ಲೆಲ್ಲಿ ದೊರೆಯುತ್ತದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೊಸದಾದ ಕ್ಯಾಶ್ಲೆಸ್ ಪೇಮೆಂಟ್ ಸಲ್ಯೂಷನ್ಗೆ ಚಾಲನೆ ನೀಡಲಿದ್ದಾರೆ. ಇದು ಇ-ವೋಚರ್ ಆಧಾರಿತವಾಗಿ ಕಾರ್ಯ ನಿರ್ವಹಿಸುತ್ತದೆ. ಈ ವ್ಯವಸ್ಥೆಯಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾವು ಫೈನಾನ್ಷಿಯಲ್ ಸರ್ವೀಸಸ್ ಇಲಾಖೆ, ಆರೋಗ್ಯ ಸಚಿವಾಲಯ ಹಾಗು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿದೆ.
e-RUPI ವೋಚರ್ ಬಳಕೆ ಮಾಡುವುದು ಹೇಗೆ? ಈ ವೋಚರ್ಗಳು ಇ-ಗಿಫ್ಟ್ ಕಾರ್ಡ್ಗಳಿದ್ದಂತೆ. ಪ್ರೀಪೇಯ್ಡ್ ಆಗಿರುತ್ತವೆ. ಕಾರ್ಡ್ನ ಕೋಡ್ ಅನ್ನು ಒಂದೋ ಎಸ್ಸೆಮ್ಮೆಸ್ ಮೂಲಕ ಹಂಚಿಕೊಳ್ಳಬಹುಉ ಅಥವಾ ಒಆರ್ ಕೋಡ್ ಹಂಚಿಕೊಳ್ಳಬಹುದು. ಈ ವೋಚರ್ಗಳು ವ್ಯಕ್ತಿ ಮತ್ತು ಉದ್ದೇಶ ನಿರ್ದಿಷ್ಟವಾದಂಥವು. ಉದಾಹರಣೆಗೆ, ನೀವು ಕೊವಿಡ್-19 ಲಸಿಕೆಗಾಗಿ ಇ-ರುಪಿ- ವೋಚರ್ ಹೊಂದಿದ್ದರೆ, ಅದನ್ನು ಲಸಿಕೆಗಾಗಿ ಮಾತ್ರ ರಿಡೀಮ್ ಮಾಡಿಕೊಳ್ಳಬೇಕು.
ಇತರ ಆನ್ಲೈನ್ ಅಪ್ಲಿಕೇಷನ್ಗಿಂತ ಇ-ರುಪಿ ಹೇಗೆ ಭಿನ್ನ? ಇ-ರುಪಿ ಎಂಬುದು ಯಾವುದೇ ಪ್ಲಾಟ್ಫಾರ್ಮ್ ಅಲ್ಲ. ಇದು ನಿರ್ದಿಷ್ಟ ಸೇವೆಗಾಗಿ ಮಾಡಿರುವಂಥ ವೋಚರ್. ಇ-ರುಪಿ ವೋಚರ್ಗಳು ನಿರ್ದಿಷ್ಟ ಉದ್ದೇಶವನ್ನು ಒಳಗೊಂಡಿರುವಂಥದ್ದು. ಮತ್ತು ಜತೆಗೆ ಒಬ್ಬ ವ್ಯಕ್ತಿಯ ಬಳಿ ಬ್ಯಾಂಕ್ ಖಾತೆ ಅಥವಾ ಡಿಜಿಟಲ್ ಪೇಮೆಂಟ್ ಆ್ಯಪ್ ಅಥವಾ ಸ್ಮಾರ್ಟ್ಫೋನ್ ಇಲ್ಲದಿದ್ದರೂ ಈ ವೋಚರ್ಗಳ ಅನುಕೂಲಗಳನ್ನು ಪಡೆದುಕೊಳ್ಳಬಹುದು.
ಈ ವೋಚರ್ಗಳನ್ನು ಆರೋಗ್ಯಕ್ಕೆ ಸಂಬಂಧಿಸಿದ ಪಾವತಿಗಳಿಗಾಗಿಯೇ ಬಹುತೇಕ ಉಪಯೋಗಿಸಲಾಗುತ್ತದೆ. ಕಾರ್ಪೊರೇಟ್ಗಳು ತಮ್ಮ ಸಿಬ್ಬಂದಿಗೆ ಇದನ್ನು ವಿತರಿಸಬಹುದು. ಕೇಂದ್ರ ಸರ್ಕಾರ ಈ ಹಿಂದೆ ಹೇಳಿದ ಪ್ರಕಾರ, ಲಸಿಕೆ ಇ-ವೋಚರ್ ಅನ್ನು ತರುವುದಾಗಿ ತಿಳಿಸಿತ್ತು. ಆ ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ ಇ-ವೋಚರ್ ಖರೀದಿಸಬಹುದು ಮತ್ತು ಇತತರಿಗೆ ಉಡುಗೊರೆಯಾಗಿ ನೀಡಬಹುದು, ಇನ್ನೊಂದು ವಿಚಾರ, ಯಾರು ಈ ವೋಚರ್ಗಳನ್ನು ಖರೀದಿಸಿ, ವಿತರಿಸುತ್ತಾರೋ ಅವರು, ಈ ವೋಚರ್ ಬಳಕೆ ಆಗಿದೆಯೋ ಇಲ್ಲವೋ ಎಂಬುದನ್ನು ಟ್ರ್ಯಾಕ್ ಮಾಡಬಹುದು. ಇನ್ನು ಫಲಾನುಭವಿಗಳು ತಮ್ಮ ವಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಕಾಗಿಲ್ಲ.
ರಿಡೀಮ್ ಮಾಡಿಕೊಳ್ಳುವುದು ಹೇಗೆ? ರಿಡೀಮ್ ಮಾಡುವುದಕ್ಕೆ ಕಾರ್ಡ್ ಅಥವಾ ವೋಚರ್ನ ಹಾರ್ಡ್ ಕಾಪಿ ಬೇಕಾಗಲ್ಲ. ಸಂದೇಶದ ಮೂಲಕ ಪಡೆಯುವ ಕ್ಯೂಆರ್ ಕೋಡ್ ಸಾಕು.
ಯಾವ ಬ್ಯಾಂಕ್ಗಳಲ್ಲಿ ಇ-ರುಪಿ ದೊರೆಯಲಿದೆ? ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಪ್ರಕಾರ, ಎಂಟು ಬ್ಯಾಂಕ್ಗಳಲ್ಲಿ ಈಗಾಗಲೇ ದೊರೆಯುತ್ತಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ, ಆಕ್ಸಿಸ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ಗಳಲ್ಲಿ ಲಭ್ಯ ಇದೆ.
ಇದನ್ನೂ ಓದಿ: e- RUPI: ಪ್ರಧಾನಿ ನರೇಂದ್ರ ಮೋದಿಯಿಂದ ಆಗಸ್ಟ್ 2ಕ್ಕೆ ಇ-ರುಪಿಗೆ ಚಾಲನೆ; ಏನಿದರ ವೈಶಿಷ್ಟ್ಯ ತಿಳಿಯಿರಿ
(What Is E- RUPI And How It Works Where Will Get It Here Is An Explainer)