AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

e- RUPI: ಪ್ರಧಾನಿ ನರೇಂದ್ರ ಮೋದಿಯಿಂದ ಆಗಸ್ಟ್ 2ಕ್ಕೆ ಇ-ರುಪಿಗೆ ಚಾಲನೆ; ಏನಿದರ ವೈಶಿಷ್ಟ್ಯ ತಿಳಿಯಿರಿ

ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 2ರಂದು ಇ-ರುಪಿಗೆ ಚಾಲನೆ ನೀಡಲಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.

e- RUPI: ಪ್ರಧಾನಿ ನರೇಂದ್ರ ಮೋದಿಯಿಂದ ಆಗಸ್ಟ್ 2ಕ್ಕೆ ಇ-ರುಪಿಗೆ ಚಾಲನೆ; ಏನಿದರ ವೈಶಿಷ್ಟ್ಯ ತಿಳಿಯಿರಿ
ನರೇಂದ್ರ ಮೋದಿ
Follow us
TV9 Web
| Updated By: Srinivas Mata

Updated on: Jul 31, 2021 | 11:25 PM

ವ್ಯಕ್ತಿ ಮತ್ತು ಉದ್ದೇಶಿತ ನಿರ್ದಿಷ್ಟ ಡಿಜಿಟಲ್ ಪಾವತಿ ಸಲ್ಯೂಷನ್ ಇ-ರುಪಿ (e- RUPI)ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 2ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕವಾಗಿ ಚಾಲನೆ ನೀಡಲಿದ್ದಾರೆ. ಸರ್ಕಾರವು ಉತ್ತಮ ಆಡಳಿತದ ದೃಷ್ಟಿಯಿಂದ ಎಲೆಕ್ಟ್ರಾನಿಕ್ ವೋಚರ್ ಪರಿಕಲ್ಪನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿದೆ. ಡಿಜಿಟಲ್ ಪಾವತಿಗೆ ನಗದುರಹಿತ ಮತ್ತು ಕಾಂಟ್ಯಾಕ್ಟ್​ಲೆಸ್ ಸಾಧನವಾಗಿರುವುದರ ಜೊತೆಗೆ ಇ-ರುಪಿ ಎನ್ನುವುದು ಕ್ಯೂಆರ್ ಕೋಡ್ ಅಥವಾ ಎಸ್‌ಎಂಎಸ್ ಸ್ಟ್ರಿಂಗ್ ಆಧಾರಿತ ಇ-ವೋಚರ್ ಆಗಿದೆ. ಇದನ್ನು ಫಲಾನುಭವಿಗಳ ಮೊಬೈಲ್‌ಗೆ ತಲುಪಿಸಲಾಗುತ್ತದೆ. “ಈ ತಡೆರಹಿತ ಒನ್-ಟೈಮ್ ಪಾವತಿ ಕಾರ್ಯವಿಧಾನದಿಂದ ಬಳಕೆದಾರರು ಕಾರ್ಡ್, ಡಿಜಿಟಲ್ ಪಾವತಿ ಆ್ಯಪ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಸಂಪರ್ಕದ ಅಗತ್ಯ ಇಲ್ಲದೆ, ಸೇವಾ ಪೂರೈಕೆದಾರರಲ್ಲಿ ವೋಚರ್ ಅನ್ನು ರಿಡೀಮ್ ಮಾಡಬಹುದು,” ಎಂದು ಜುಲೈ 31ರಂದು ಪಿಎಂಒ (ಪ್ರಧಾನಮಂತ್ರಿ ಕಾರ್ಯಾಲಯ) ಹೇಳಿಕೆಯಲ್ಲಿ ತಿಳಿಸಿದೆ.

ಯಾವುದೇ ಭೌತಿಕ ಇಂಟರ್​ಫೇಸ್ ಇಲ್ಲದೆ ಡಿಜಿಟಲ್ ರೀತಿಯಲ್ಲಿ ಫಲಾನುಭವಿಗಳು ಮತ್ತು ಸೇವಾ ಪೂರೈಕೆದಾರರೊಂದಿಗೆ ಇ-ರುಪಿ ಸಂಪರ್ಕಿಸುತ್ತದೆ. ವಹಿವಾಟು ಪೂರ್ಣಗೊಂಡ ನಂತರವೇ ಸೇವಾ ಪೂರೈಕೆದಾರರಿಗೆ ಪಾವತಿಯನ್ನು ಮಾಡಲಾಗಿದೆ ಎಂದು ಇದು ಖಾತ್ರಿಪಡಿಸುತ್ತದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ. ಪೂರ್ವ-ಪಾವತಿಯ ಸ್ವಭಾವದಾದ್ದರಿಂದ ಯಾವುದೇ ಮಧ್ಯವರ್ತಿ ಒಳಗೊಳ್ಳದೆ ಸೇವಾ ಪೂರೈಕೆದಾರರಿಗೆ ಸಕಾಲಿಕ ಪಾವತಿಯನ್ನು ಇ-ರುಪಿ ಖಾತ್ರಿಪಡಿಸುತ್ತದೆ ಎಂದು ಸರ್ಕಾರ ಹೇಳಿದೆ.

ಜನಕಲ್ಯಾಣ ಸೇವೆಗಳಲ್ಲಿ ಆಗುವ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರವು ಒಂದು ವ್ಯವಸ್ಥೆಯನ್ನು ನಿರೀಕ್ಷಿಸುತ್ತಿದೆ. ಔಷಧಗಳು, ಪೌಷ್ಟಿಕಾಂಶದ ಸಪೋರ್ಟ್, ಅಥವಾ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಮುಂತಾದ ಯೋಜನೆಗಳನ್ನು ತಲುಪಿಸಲು ಸಹ ಇದನ್ನು ಬಳಸಬಹುದು. ಅಲ್ಲದೆ, ತಮ್ಮ ಉದ್ಯೋಗಿಗಳ ಕಲ್ಯಾಣದ ಭಾಗವಾಗಿ ಈ ಡಿಜಿಟಲ್ ವೋಚರ್‌ಗಳನ್ನು ಖಾಸಗಿ ಸಂಸ್ಥೆಗಳು ಬಳಸಿಕೊಳ್ಳಬಹುದು. ಅಷ್ಟೇ ಅಲ್ಲ, ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಲಿಟಿ ಕಾರ್ಯಕ್ರಮದಲ್ಲೂ ಬಳಕೆ ಮಾಡಬಹುದು ಎಂದು ಪ್ರಧಾನಮಂತ್ರಿ ಕಾರ್ಯಾಲಯ ಹೇಳಿದೆ.

ಇದನ್ನೂ ಓದಿ: Fiscal Deficit: ಕೇಂದ್ರ ಸರ್ಕಾರದ ವಿತ್ತೀಯ ಕೊರತೆ ಏಪ್ರಿಲ್​ನಿಂದ ಜೂನ್ ಮಧ್ಯೆ ಶೇ 58ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಇಳಿಕೆ

(PM Narendra Modi Will Launch e- RUPI On August 2nd Here Is The Details)

ಸಿಟಿಲೈಟ್ಸ್: ದುನಿಯಾ ವಿಜಯ್ ಪುತ್ರಿ ಮೋನಿಷಾ ನಟನೆಯ ಸಣ್ಣ ಝಲಕ್ ಇಲ್ಲಿದೆ
ಸಿಟಿಲೈಟ್ಸ್: ದುನಿಯಾ ವಿಜಯ್ ಪುತ್ರಿ ಮೋನಿಷಾ ನಟನೆಯ ಸಣ್ಣ ಝಲಕ್ ಇಲ್ಲಿದೆ
Live: ವಿದೇಶಾಂಗ ಇಲಾಖೆಯಿಂದ ತುರ್ತು ಸುದ್ದಿಗೋಷ್ಠಿ
Live: ವಿದೇಶಾಂಗ ಇಲಾಖೆಯಿಂದ ತುರ್ತು ಸುದ್ದಿಗೋಷ್ಠಿ
ಸೀಸನ್​ ಮಧ್ಯ ನಾಯಕನನ್ನು ಬದಲಿಸಿದ್ದ ಆರ್​ಸಿಬಿ
ಸೀಸನ್​ ಮಧ್ಯ ನಾಯಕನನ್ನು ಬದಲಿಸಿದ್ದ ಆರ್​ಸಿಬಿ
ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ; ಪೇಶಾವರದಲ್ಲಿ ಭಾರತ ಪ್ರತಿದಾಳಿ
ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ; ಪೇಶಾವರದಲ್ಲಿ ಭಾರತ ಪ್ರತಿದಾಳಿ
ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ