Gold Rate Today: ಇಂದು ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ! ಸ್ನೇಹಿತರಿಗಾಗಿ ಆಭರಣ ಉಡುಗೊರೆ ಕೊಡಲು ಯೋಚಿಸಬಹುದು

Gold Rate Today: ಇಂದು ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ! ಸ್ನೇಹಿತರಿಗಾಗಿ ಆಭರಣ ಉಡುಗೊರೆ ಕೊಡಲು ಯೋಚಿಸಬಹುದು
ಸಾಂದರ್ಭಿಕ ಚಿತ್ರ

Gold Price Today: ಇಂದು ಚಿನ್ನದ ದರ ಕೊಂಚ ಇಳಿಕೆ ಆಗಿದೆ. ಚಿನ್ನಾಭರಣ ಖರೀದಿಸುವತ್ತ ಯೋಚಿಸಬಹುದು. ಬೆಳ್ಳಿ ದರದಲ್ಲಿಯೂ ಸಹ ಇಂದು ಇಳಿಕೆ ಕಂಡು ಬಂದಿದ್ದು ಆಭರಣ ಪ್ರಿಯರಿಗೆ ಖುಷಿ ಕೊಡುವ ವಿಚಾರ.

TV9kannada Web Team

| Edited By: shruti hegde

Aug 01, 2021 | 8:55 AM

Gold Silver Rate Today | ಬೆಂಗಳೂರು: ಚಿನ್ನದ ಆಭರಣ ಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ. ಬಂಗಾರವನ್ನು ಖರೀದಿಸಲೆಂದೇ ಅದೆಷ್ಟೋ ವರ್ಷಗಳಿಂದ ಹಣವನ್ನು ಸಂಗ್ರಹಿಸಿಡುತ್ತಾ ಬಂದಿರುತ್ತೇವೆ. ಇದೊಂದೇ ಅಲ್ಲದೆ ಗೆಳೆಯ, ಗೆಳತಿಯರಿಗಾಗಿ ಸರ್ಪ್ರೈಸ್ ಗಿಫ್ಟ್ ಕೊಡಲೂ ಸಹ ಯೋಚಿಸಿರಬಹುದು. ಹೀಗಿರುವಾಗ ಇಂದು ಚಿನ್ನದ ದರ(Gold Price) ಕೊಂಚ ಇಳಿಕೆ ಆಗಿದೆ. ಚಿನ್ನಾಭರಣ ಖರೀದಿಸುವತ್ತ ಯೋಚಿಸಬಹುದು. ಬೆಳ್ಳಿ ದರದಲ್ಲಿಯೂ(Silver Price) ಸಹ ಇಂದು ಇಳಿಕೆ ಕಂಡು ಬಂದಿದ್ದು ಆಭರಣ ಪ್ರಿಯರಿಗೆ ಖುಷಿ ಕೊಡುವ ವಿಚಾರ.

ಇಂದು ವಿಶ್ವ ಸ್ನೇಹಿತರ ದಿನವನ್ನು ಆಚರಿಸಲಾಗುತ್ತಿದೆ. ವಿಶೇಷವಾಗಿ ಸ್ನೇಹದ ಬಾಂಧವ್ಯವನ್ನು ಇನ್ನಷ್ಟು ಗಟ್ಟಿ ಮಾಡುವ ಈ ದಿನದಂದು ಸ್ನೇಹಿತರಿಗೆ ಉಡುಗೊರೆ ಕೊಡುವುದಾದರೆ ಆಭರಣ ಕೊಡುವತ್ತ ಯೋಚಿಸಬಹುದು. ಅದರಲ್ಲಿಯೂ ಬಂಗಾರವನ್ನು ಕೊಡಿಸುವ ಪ್ಲಾನ್ ಇದ್ದರೆ ಇಂದು ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಚಿನ್ನ, ಬೆಳ್ಳಿ ದರ ವಿವರ ಈ ಕೆಳಗಿನಂತಿದೆ ಗಮನಿಸಿ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,000 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,50,000 ರೂಪಾಯಿಗೆ ಇಳಿದಿದೆ. ದೈನಂದಿನ ದರ ಬದಲಾವಣೆಯಲ್ಲಿ 2,500 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,100 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,91,000 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 2,700 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ ದರದಲ್ಲಿಯೂ ಸಹ ಕೊಂಚ ಇಳಿಕೆ ಕಂಡು ಬಂದಿದ್ದು ಕೆಜಿ ಬೆಳ್ಳಿಗೆ 67,900 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯಲ್ಲಿ 300 ರೂಪಾಯಿ ಇಳಿಕೆ ಕಂಡಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,480 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,54,800 ರೂಪಾಯಿ ನಿಗದಿಯಾಗಿದೆ. ಸುಮಾರು 1,400 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,620 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,96,200 ರೂಪಾಯಿಗೆ ಇಳಿಕೆಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,500 ರೂಪಾಯಿ ಇದೆ.

ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,150 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,71,500 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2,500 ರೂಪಾಯಿ ಇಳಿಕೆ ಕಂಡು ಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 51,440 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 5,14,400 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2,700 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿಯೂ ಸಹ ಇಂದು ಕೊಂಚ ಇಳಿಕೆ ಕಂಡು ಬಂದಿದ್ದು ಕೆಜಿ ಬೆಳ್ಳಿಗೆ 67,900 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲವಣೆಯಲ್ಲಿ 300 ರೂಪಾಯಿ ಇಳಿಕೆಯಾಗಿದೆ.

ಇದನ್ನೂ ಓದಿ:

Gold Rate Today: ಇಂದು ಚಿನ್ನದ ದರ ಅಲ್ಪ ಏರಿಕೆ, ಬೆಳ್ಳಿ ಬೆಲೆ ಇಳಿಕೆ! ಕೂಡಿಟ್ಟ ಹಣದಲ್ಲಿ ಆಭರಣ ಖರೀದಿಸುವುದಾದರೆ ಯೋಚಿಸಿ

Gold Rate Today: ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ! ಆಭರಣ ಕೊಳ್ಳುವ ವಿಚಾರವಿದ್ದರೆ ದರ ವಿವರ ಒಮ್ಮೆ ಗಮನಿಸಿ

Follow us on

Related Stories

Most Read Stories

Click on your DTH Provider to Add TV9 Kannada