AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Demat Account: ಆದಾಯದ ಮೂಲಕ್ಕೆ ಕೆವೈಸಿಯಲ್ಲಿ ಪ್ರೂಫ್​ ತಿಳಿಸದಿದ್ದರೆ ಜುಲೈ 31ಕ್ಕೆ ಡಿಮ್ಯಾಟ್ ಖಾತೆ ಕ್ಲೋಸ್

ನಿಮ್ಮ ಆದಾಯ ಮೂಲದ ಸಾಕ್ಷ್ಯವನ್ನು ಜುಲೈ 31, 2021ರೊಳಗೆ ಕೆವೈಸಿಗೆ ಸಲ್ಲಿಕೆ ಮಾಡದಿದ್ದರೆ ನಿಮ್ಮ ಡಿಮ್ಯಾಟ್​ ಕ್ಲೋಸ್ ಆಗಲಿದೆ. ಏಕೆ ಎಂಬುದನ್ನು ತಿಳಿಯಿರಿ.

Demat Account: ಆದಾಯದ ಮೂಲಕ್ಕೆ ಕೆವೈಸಿಯಲ್ಲಿ ಪ್ರೂಫ್​ ತಿಳಿಸದಿದ್ದರೆ ಜುಲೈ 31ಕ್ಕೆ ಡಿಮ್ಯಾಟ್ ಖಾತೆ ಕ್ಲೋಸ್
ಸೆಬಿ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Jul 31, 2021 | 6:54 PM

Share

ಷೇರು ಮಾರ್ಕೆಟ್ (Share Market) ಮತ್ತು ಅದಕ್ಕೆ ಸಂಬಂಧಿಸಿದಂತೆ ಹೂಡಿಕೆಗೆ ನಿಮ್ಮದು ಡಿಮ್ಯಾಟ್​ ಖಾತೆ (Demat Account) ಇದೆಯಾ? ಹಾಗಿದ್ದ ಮೇಲೆ ನಿಮ್ಮ ಆದಾಯ ಮೂಲದ ಬಗ್ಗೆ ನೋ ಯುವರ್ ಕಸ್ಟಮರ್​ (KYC) ಅರ್ಜಿ ಜತೆಗೆ ನೀಡಬೇಕು. ಒಂದು ವೇಳೆ ಹಾಗೆ ಮಾಡಲು ವಿಫಲರಾದಲ್ಲಿ ಜುಲೈ 31ರ ಶನಿವಾರದ ನಂತರ ಡಿಮ್ಯಾಟ್ ಖಾತೆಯು ಕ್ಲೋಸ್ ಆಗುತ್ತದೆ. ಹಲವು ಬ್ರೋಕರೇಜ್ ಕಂಪೆನಿಗಳು ತಮ್ಮ ಗ್ರಾಹಕರಿಗೆ ಇ-ಮೇಲ್ ಕಳಿಸುತ್ತಿದ್ದಾರೆ. ಒಂದು ವೇಳೆ ಆದಾಯ ಮೂಲ ಸೇರಿದಂತೆ ಕೆವೈಸಿ ಮಾಹಿತಿ ನೀಡದಿದ್ದಲ್ಲಿ ಖಾತೆ ಕ್ಲೋಸ್ ಆಗಿಬಿಡುತ್ತದೆ ಎಂದು ತಿಳಿಸಲಾಗುತ್ತಿದೆ. ಇದರ ಹೊರತಾಗಿ ಸೆಕ್ಯೂರಿಟೀಸ್ ಎಕ್ಸ್​ಚೇಂಜ್​ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅಕ್ಟೋಬರ್​ನಿಂದ ಅನ್ವಯ ಆಗುವಂತೆ ನಾಮಿನೇಷನ್ ನಿಯಮಾವಳಿಗಳನ್ನು ಬದಲಾಯಿಸುತ್ತಿದೆ.

ಸೆಬಿ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಎಲ್ಲ ಟ್ರೇಡಿಂಗ್ ಸದಸ್ಯರು ಮತ್ತು ಡೆಪಾಸಿಟರಿ ಪಾರ್ಟಿಸಿಪೆಂಟ್​​​ಗಳು ಹೊಸ ಟ್ರೇಡಿಂಗ್ ಖಾತೆಯನ್ನು ಅಕ್ಟೋಬರ್​ 1ರಿಂದ ಅನ್ವಯ ಆಗುವಂತೆ ಸಕ್ರಿಯವಾಗಬೇಕು. ಒಂದು ಸಲ ನಾಮಿನೇಷನ್ ಅರ್ಜಿ ಪಡೆದ ಮೇಲೆ ಹಾಗೆ ಮಾಡಬಹುದು. ಖಾತೆದಾರರು ನಾಮಿನೇಷನ್ ಹಾಗೂ ಘೋಷಣಾ ಅರ್ಜಿಗಳಿಗೆ ಸಹಿ ಹಾಕಬೇಕು. ಒಂದು ವೇಳೆ ಅರ್ಜಿದಾರರು ಸಹಿ ಹಾಕಲು ಸಾಧ್ಯ ಆಗದಿದ್ದಲ್ಲಿ ಹೆಬ್ಬೆಟ್ಟಿನ ಗುರುತು ಹಾಕಬೇಕು. ಅರ್ಜಿಯಲ್ಲಿ ಸಾಕ್ಷ್ಯಗಳ ಸಹಿ ಬೇಕಾಗುತ್ತದೆ.

ಅಕ್ಟೋಬರ್​ನಿಂದ ಡಿಮ್ಯಾಟ್ ಖಾತೆಗೆ ಹೊಸ ನಿಯಮಾವಳಿಗಳು ಸೆಬಿ ಹೊರಡಿಸಿದ ಆದೇಶದ ಪ್ರಕಾರ, ಹೊಸದಾಗಿ ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆ ತೆರೆಯಯುವುದರ ಜತೆಗೆ ನಾಮಿಷೇನ್ ಮಾಡುವುದಕ್ಕೂ ಆಯ್ಕೆ ಇದೆ. ಆದರೂ ಇದು ಆಯ್ಕೆ ಮಾತ್ರ. ನಾಮಿನೇಟ್ ಮಾಡದೆಯೂ ಟ್ರೇಡಿಂಗ್ ಖಾತೆಯನ್ನು ತೆರೆಯಬಹುದು. ಸೆಬಿಯಿಂದ ನಾಮಿನೇಷನ್​ಗೆ ಅರ್ಜಿಯ ಫಾರ್ಮಾಟ್ ಸಹ ಬಿಡುಗಡೆ ಮಾಡಲಾಗಿದೆ. ಒಂದು ವೇಳೆ ಹೂಡಿಕೆದಾರ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆ ಜತೆಗೆ ನಾಮಿನೇಷನ್ ಮಾಡುವುದು ಬೇಡ ಅಂದುಕೊಂಡಲ್ಲಿ ಆ ಬಗ್ಗೆ ಸೆಬಿಗೆ ಮಾಹಿತಿಯನ್ನು ನೀಡಬೇಕು. ಒಂದು ವೇಳೆ ನಾಮಿನೇಷನ್ ಭರ್ತಿ ಮಾಡಲಿಲ್ಲ ಅಂದರೆ ಖಾತೆ ಕ್ಲೋಸ್ ಆಗುತ್ತದೆ.

ಇದಕ್ಕಾಗಿ ಘೋಷಣಾ ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ. ಒಂದು ವೇಳೆ ಈಗಾಗಲೇ ಡಿಮ್ಯಾಟ್ ಖಾತೆ ಇದ್ದಲ್ಲಿ ನಾಮಿನೇಷನ್ ಅರ್ಜಿಯನ್ನು ಮಾರ್ಚ್ 31, 2022ರೊಳಗೆ ಭರ್ತಿ ಮಾಬೇಕು. ಇನ್ನು ನಾಮಿನೇಷನ್ ಬೇಡ ಎಂದಾದಲ್ಲಿ ಇದಕ್ಕಾಗಿ ಪ್ರತ್ಯೇಕ ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ. ಒಂದು ವೇಳೆ ನಾಮಿನೇಷನ್ ಅಥವಾ ಘೋಷಣಾ ಅರ್ಜಿ ಎರಡನ್ನೂ ತುಂಬಲಿಲ್ಲ ಅಂತಾದಲ್ಲಿ ಖಾತೆಗೆ ತಡೆ ಹಾಕಲಾಗುತ್ತದೆ.

ನಾಮಿನಿಯ ಪಾಲನ್ನು ತಿಳಿಸಿರಬೇಕು ಹೊಸ ನಿಯಮಾವಳಿಯಂತೆ, ಡಿಮ್ಯಾಟ್ ಹಾಗೂ ಟ್ರೇಡಿಂಗ್ ಖಾತೆದಾರರು ತಮ್ಮ ನಿಧನಾ ನಂತರ ಯಾರಿಗೆ ಷೇರುಗಳು ಸೇರಬೇಕು ಎಂಬ ಬಗ್ಗೆ ಸ್ಪಷ್ಟವಾಗಿ ನಮೂದಿಸಿರಬೇಕು. ಒಂದು ವೇಳೆ ನಾಮಿನಿಯ ಹೆಸರು ಬದಲಾಯಿಸಬೇಕು ಅಂತಂದುಕೊಂಡರೂ ಮಾಡಬಹುದು. ಗಮನದಲ್ಲಿರಲಿ, ಗರಿಷ್ಠ ಮೂವರ ಹೆಸರನ್ನು ಡಿಮ್ಯಾಟ್​ ಖಾತೆಗೆ ನಾಮಿನೇಟ್​ ಮಾಡಬಹುದು. ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ನಾಮಿನಿಗಳು ಇದ್ದಲ್ಲಿ ಎಲ್ಲ ನಾಮಿನಿಗಳ ಪಾಲು ಎಷ್ಟು ಎಂಬುದನ್ನು ಖಾತೆದಾರರು ತಿಳಿಸಬೇಕು.

ಇದನ್ನೂ ಓದಿ: Stock Market Expert Tips: ಷೇರು ಮಾರ್ಕೆಟ್​ನಲ್ಲಿ ಬದಲಾವಣೆ ಗುರುತಿಸಿ ಲಾಭ ಮಾಡೋದು ಹೇಗೆ ಅನ್ನೋದನ್ನು ನಿತಿನ್ ಹೇಳ್ತಾರೆ

(If Income Proof Not Provided To KYC By July 31st Your Demat Account To Be Closed)

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್