ಗ್ಯಾಸ್ ಬೆಲೆ ಇಳಿಕೆ ಎಲ್ಲರಿಗೂ ಅನ್ವಯ ಅಗುತ್ತಾ? ಉಜ್ವಲ ಯೋಜನೆ ಫಲಾನುಭವಿಗಳಿಗೆ ಮಾತ್ರವಾ? ಈ ಯೋಜನೆಗೆ ಯಾರು ಅರ್ಹರು? ಇಲ್ಲಿದೆ ಡೀಟೇಲ್ಸ್

|

Updated on: Aug 30, 2023 | 2:40 PM

LPG Gas Price Details: ಸರ್ಕಾರ ಎಲ್​ಪಿಜಿ ಸಿಲಿಂಡರ್ ಬೆಲೆಯನ್ನು 200 ರೂನಷ್ಟು ಇಳಿಸುತ್ತಿದೆ. ಈ ಬೆಲೆ ಇಳಿಕೆ ಪಿಎಂ ಉಜ್ವಲ ಯೋಜನೆಗೆ ಮಾತ್ರವಲ್ಲ, ಎಲ್ಲಾ ಎಲ್​ಪಿಜಿ ಕನೆಕ್ಷನ್​ಗೂ ಅನ್ವಯ ಆಗುತ್ತದೆ. ಉಜ್ವಲ ಸ್ಕೀಮ್​ನಲ್ಲಿ ಈಗಾಗಲೇ ಇರುವ 200 ರೂ ಸಬ್ಸಿಡಿ ಜೊತೆಗೆ ಇದೂ ಹೆಚ್ಚುವರಿ 200 ರೂ ಇಳಿಕೆ ಅನ್ವಯ ಆಗುತ್ತದೆ. ಈ ಸ್ಕೀಮ್​ನ ಫಲಾನುಭವಿಗಳಿಗೆ ಒಟ್ಟು 400 ರೂನಷ್ಟು ಬೆಲೆ ಇಳಿಕೆ ಇರುತ್ತದೆ.

ಗ್ಯಾಸ್ ಬೆಲೆ ಇಳಿಕೆ ಎಲ್ಲರಿಗೂ ಅನ್ವಯ ಅಗುತ್ತಾ? ಉಜ್ವಲ ಯೋಜನೆ ಫಲಾನುಭವಿಗಳಿಗೆ ಮಾತ್ರವಾ? ಈ ಯೋಜನೆಗೆ ಯಾರು ಅರ್ಹರು? ಇಲ್ಲಿದೆ ಡೀಟೇಲ್ಸ್
ಎಲ್​ಪಿಜಿ
Follow us on

ನವದೆಹಲಿ, ಆಗಸ್ಟ್ 30: ಕೇಂದ್ರ ಸಂಪುಟ ನಿನ್ನೆ (ಆಗಸ್ಟ್ 29) ಎಲ್​ಪಿಜಿ ಸಿಲಿಂಡರ್ ಬೆಲೆ ಇಳಿಕೆ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. ಶೀಘ್ರದಲ್ಲೇ ತೈಲ ಮಾರುಕಟ್ಟೆ ಕಂಪನಿಗಳು ದರಪರಿಷ್ಕರಣೆ ಪ್ರಕಟಿಸಲಿವೆ. ಸರ್ಕಾರ 14.2 ಕಿಲೋ ಅಡುಗೆ ಅನಿಲ ಸಿಲಿಂಡರ್​ನ ಬೆಲೆ 200 ರೂನಷ್ಟು (LPG Gas Cylinder Price) ತಗ್ಗಿಸಲು ನಿರ್ಧರಿಸಿದೆ. ಇದರೊಂದಿಗೆ ಗ್ಯಾಸ್ ಬೆಲೆ ಸಾವಿರ ರೂ ಮಟ್ಟಕ್ಕಿಂತ ಕೆಳಗೆ ಇಳಿಯಲಿದೆ. ನಿನ್ನೆ ಸಚಿವ ಸಂಪಟ ಸಭೆ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಎಲ್​ಪಿಜಿ ಬೆಲೆ ಇಳಿಕೆ ನಿರ್ಧಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ, ಕೆಲ ವರದಿಗಳು ಪಿಎಂ ಉಜ್ವಲ ಯೋಜನೆ (PM Ujjwala Yojana) ಫಲಾನುಭವಿಗಳಿಗೆ ಸಿಗುವ ಸಬ್ಸಿಡಿ ಹಣ ಇದು ಎಂದು ತಿಳಿಸಿದ್ದವು. ಈ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿಗೆ ಗೊಂದಲವಾಗಿದೆ.

ಆದರೆ ಅಧಿಕೃತ ಮಾಹಿತಿ ಪ್ರಕಾರ, ಎಲ್ಲಾ ಎಲ್​ಪಿಜಿ ಬಳಕೆದಾರರಿಗೂ 200 ರೂ ಬೆಲೆ ಇಳಿಕೆ ಅನ್ವಯ ಆಗುತ್ತದೆ. ಭಾರತದಲ್ಲಿ 33 ಕೋಟಿ ಮನೆಗಳಲ್ಲಿ ಎಲ್​ಪಿಜಿ ಸಿಲಿಂಡರ್​ಗಳ ಬಳಕೆ ಆಗುತ್ತದೆ. ಅವರೆಲ್ಲರಿಗೂ ಬೆಲೆ ಇಳಿಕೆ ಭಾಗ್ಯ ಸಿಗುತ್ತದೆ. ಈ 33 ಕೋಟಿ ಗ್ಯಾಸ್ ಕನೆಕ್ಷನ್​ಗಳ ಪೈಕಿ ಪಿಎಮ್ ಉಜ್ವಲ ಯೋಜನೆಯ ಅಡಿಯಲ್ಲಿ ಎಲ್​ಪಿಜಿ ಸೌಲಭ್ಯ ಪಡೆದಿರುವವರ ಸಂಖ್ಯೆ 10 ಕೋಟಿ ಸಮೀಪ ಇದೆ.

ಬೆಂಗಳೂರಿನಲ್ಲಿ ಸದ್ಯ 14.2 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆ 1,105.50 ರೂ ಇದೆ. ಈಗ 200 ರೂ ಬೆಲೆ ಇಳಿಕೆಯಾದರೆ ಬೆಂಗಳೂರಿನಲ್ಲಿ ಸಿಲಿಂಡರ್ ಬೆಲೆ 905.50 ರೂ ಆಗುತ್ತದೆ. ಇದು ಸಾಮಾನ್ಯ ಎಲ್​ಪಿಜಿ ಬಳಕೆದಾರರಿಗೆ ಅನ್ವಯ ಆಗುವ ಬೆಲೆ ಪರಿಷ್ಕರಣೆ.

ಇದನ್ನೂ ಓದಿ: LPG Prices: ಎಲ್​ಪಿಜಿ ಸಿಲಿಂಡರ್ ದರ 200 ರೂ ಇಳಿಕೆ; ಕೇಂದ್ರ ಸಂಪುಟದಿಂದ ಅನುಮೋದನೆ

ಆದರೆ, ಪಿಎಂ ಉಜ್ವಲ ಸ್ಕೀಮ್ ಯೋಜನೆಯ ಫಲಾನುಭವಿಗಳಿಗೆ ಬೆಲೆ ಇನ್ನೂ ಕಡಿಮೆ ಇದೆ. ಈ ಯೋಜನೆಯಲ್ಲಿ ಈ ಹಿಂದೆ 200 ರೂ ಸಬ್ಸಿಡಿ ಕೊಡಲಾಗುತ್ತಿತ್ತು. ಈಗ 200 ರೂ ಬೆಲೆ ಇಳಿಕೆಯೂ ಹೆಚ್ಚುವರಿಯಾಗಿ ಇವರಿಗೆ ಅನ್ವಯ ಆಗುತ್ತದೆ. ಅಂದರೆ ಈ ಯೋಜನೆಯ ಫಲಾನುಭವಿಗಳಿಗೆ ಒಟ್ಟು 400 ರೂ ಬೆಲೆ ಇಳಿಕೆ ಇರುತ್ತದೆ. ಬೆಂಗಳೂರಿನಲ್ಲಿ 1,105.50 ರೂ ಬೆಲೆ ಇರುವ ಗ್ಯಾಸ್, ಉಜ್ವಲ ಯೋಜನೆಯ ಅಡಿಯಲ್ಲಿ 705.50 ರೂಗೆ ಸಿಗುತ್ತದೆ.

ಏನಿದು ಪಿಎಂ ಉಜ್ವಲ ಯೋಜನೆ?

ಕೇಂದ್ರ ಸರ್ಕಾರ ಬಡವರಿಗೆಂದು ರೂಪಿಸಿದ ಹಲವು ಸ್ಕೀಮ್​ಗಳಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯೂ ಒಂದು. 2016ರಲ್ಲಿ ಇದನ್ನು ಆರಂಭಿಸಲಾಯಿತು. ಯೋಜನೆಯ ಫಲಾನುಭವಿಗಳಾಗಲು ಬಿಪಿಎಲ್ ಕಾರ್ಡ್​ದಾರರಾಗಿರಬೇಕು, 18 ವರ್ಷ ಮೇಲ್ಪಟ್ಟ ಮಹಿಳೆಯರಾಗಿರಬೇಕು. ಮನೆಯಲ್ಲಿ ಬೇರೆ ಎಲ್​ಪಿಜಿ ಸಂಪರ್ಕ ಇರಬಾರದು. ಇವೆಲ್ಲ ಷರತ್ತುಗಳು ಸಮ್ಮತವಾಗಿದ್ದವರು ಯೋಜನೆಗೆ ಅರ್ಹರಾಗಿರುತ್ತಾರೆ.

ಇದನ್ನೂ ಓದಿ: ಕಾಲಜ್ಞಾನಿ ಗೂಗಲ್; ಯಾವ ಸಮಯದಲ್ಲಿ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ಬುಕ್ ಮಾಡಬಹುದು? ಗೂಗಲ್ ಫ್ಲೈಟ್ಸ್​ನಲ್ಲಿದೆ ಹೊಸ ಫೀಚರ್

ಭಾರತದಲ್ಲಿ ಈ ಪಿಎಂ ಉಜ್ವಲ ಯೋಜನೆಯಲ್ಲಿ ಇರುವ ಫಲಾನುಭವಿಗಳ ಸಂಖ್ಯೆಯ 9 ಕೋಟಿಗೂ ಹೆಚ್ಚಿದೆ. ಶೀಘ್ರದಲ್ಲೇ ಇದರ ಸಂಖ್ಯೆ 10 ಕೋಟಿ ದಾಟಲಿದೆ. ಮುಂದಿನ ಕೆಲ ವರ್ಷಗಳಲ್ಲಿ ಇನ್ನೂ 5 ಕೋಟಿಯಷ್ಟು ಮಂದಿಯನ್ನು ಈ ಯೋಜನೆ ಅಡಿ ತರಲು ಕೇಂದ್ರ ಸರ್ಕಾರ ಯೋಜಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:04 pm, Wed, 30 August 23