ಬೆಂಗಳೂರು: ಎಲ್ಪಿಜಿ (LPG) ಗ್ಯಾಸ್ ಸಿಲೆಂಡರ್ ಬೆಲೆ ಸದ್ಯ ಗಗನಮುಖಿಯಾಗಿದೆ. ಬಡ ಮತ್ತು ಮಧ್ಯಮ ವರ್ಗದವರಿಗೆ ಎಲ್ಪಿಜಿ, ಪೆಟ್ರೋಲ್, ಡೀಸೆಲ್ ಎಲ್ಲವೂ ಹೊರೆಯಾಗುತ್ತಿದೆ. ಇಂತಹ ದುಬಾರಿ ದುನಿಯಾದಲ್ಲಿ ಗ್ರಾಹಕರಿಗೆ ಕೇವಲ 9 ರೂಪಾಯಿಗೆ LPG ನೀಡಲು ಪೇಟಿಎಂ (Paytm) ಅವಕಾಶ ನೀಡುತ್ತಿದೆ. ಪ್ರಸ್ತುತ ಸಬ್ಸಿಡಿ ಇಲ್ಲದ 14.2 ಕೆಜಿ ಸಿಲಿಂಡರ್ ಖರೀದಿಸಬೇಕಾದರೆ 809 ರೂಪಾಯಿ ಪಾವತಿಸಬೇಕಾಗುತ್ತದೆ. ಆದರೆ, ಪೇಟಿಎಂ ಮಾತ್ರ ಕೇವಲ 9 ರೂಪಾಯಿಗೆ ಸಿಲಿಂಡರ್ ಪಡೆಯಬಹುದು ಎಂಬ ಬಂಪರ್ ಆಫರ್ ಘೋಷಿಸಿದೆ. ಈ ಆಫರ್ ಪೇಟಿಎಂ ಬಳಕೆದಾರರಿಗಾಗಿ ಲಭ್ಯವಿದ್ದು, ಬಳಕೆದಾರರು ತಕ್ಷಣವೇ ಚೆಕ್ ಮಾಡಿ, ಸಿಲಿಂಡರ್ ಬುಕ್ ಮಾಡಿ ಲಾಭ ಪಡೆದುಕೊಳ್ಳಬಹುದಾಗಿದೆ.
ಎಲ್ಪಿಜಿ ಸಿಲಿಂಡರ್ ಗ್ಯಾಸ್ ಬುಕಿಂಗ್ ಮತ್ತು ಪಾವತಿಗಾಗಿ ಪೇಟಿಎಂ ತನ್ನ ಬಳಕೆದಾರಿಗಾಗಿ ಈ ಕೊಡುಗೆ ನೀಡಲು ಮುಂದಾಗಿದೆ. ಪೇಟಿಎಂ ಕ್ಯಾಶ್ಬ್ಯಾಕ್ ಅಡಿಯಲ್ಲಿ ಖರೀದಿದಾರರು ಸಿಲಿಂಡರ್ ಬುಕ್ ಮಾಡಿದರೆ ಅವರು 800 ರೂಪಾಯಿಗಳವರೆಗಿನ ಕ್ಯಾಶ್ಬ್ಯಾಕ್ ಪಡೆಯಬಹುದು ಎಂಬ ಮಾಹಿತಿ ತಿಳಿದು ಬಂದಿದೆ. ಆದರೆ, ಕ್ಯಾಶ್ಬ್ಯಾಕ್ ಅದೃಷ್ಟವಂತರಿಗೆ ಮಾತ್ರ ಸಿಗುವುದರಿಂದ ಗ್ರಾಹಕರು ಎಚ್ಚರಿಕೆಯಿಂದ ಬುಕಿಂಗ್ ಮಾಡಬೇಕಿದೆ.
ಹೇಗೆ ಬುಕ್ ಮಾಡಬೇಕು?
ನೀವು ಪೇಟಿಎಂ ಬಳಕೆದಾರರಾಗಿರದಿದ್ದಲ್ಲಿ ಮೊದಲು ಪೇಟಿಎಂ ಡೌನ್ಲೋಡ್ ಮಾಡಿ. ನಂತರ ಅದರಲ್ಲಿ ಕಾಣಿಸುವ Show more ಆಪ್ಷನ್ ಕ್ಲಿಕ್ ಮಾಡಿ. ಅದರಲ್ಲಿ ರೀಚಾರ್ಜ್ & ಬಿಲ್ ಎಂಬ ಆಯ್ಕೆ ಕಾಣಲಿದ್ದು ಅದರ ಮೇಲೆ ಮತ್ತೆ ಕ್ಲಿಕ್ ಮಾಡಿ. ಈಗ ನಿಮಗೆ ಸಿಲಿಂಡರ್ ಬುಕ್ ಮಾಡುವ ಆಯ್ಕೆ ಕಾಣಿಸಲಿದೆ. ಅದರಲ್ಲಿ ನೀವು ಯಾವ ಸಂಸ್ಥೆಯ ಸಿಲಿಂಡರ್ ಬಳಸುತ್ತಿದ್ದೀರಿ ಎಂಬುದನ್ನು ಪರಿಶೀಲಿಸಿ, ಬುಕ್ ಮಾಡಿ. ನಂತರದ ಹಂತದಲ್ಲಿ ಪ್ರೊಮೋ ಕೋಡ್ ಹಾಕಲು ಅವಕಾಶವಿದ್ದು ತಪ್ಪದೇ FIRSTLPG ಎಂಬ ಕೋಡ್ ಬಳಸಿ.
ಕ್ಯಾಶ್ಬ್ಯಾಕ್ ಹೇಗೆ ಸಿಗಲಿದೆ?
ಇದರಲ್ಲಿ ಬುಕ್ ಮಡಿದ ತಕ್ಷಣ ಸ್ಕ್ರಾಚ್ ಕಾರ್ಡ್ ನಿಮ್ಮದಾಗುತ್ತದೆ. ಸ್ಕ್ರಾಚ್ ಕಾರ್ಡ್ನಲ್ಲಿ ಇದ್ದಷ್ಟು ಹಣ ಕ್ಯಾಶ್ಬ್ಯಾಕ್ ಆಗುತ್ತದೆ. ಈ ಸ್ಕ್ರಾಚ್ಕಾರ್ಡ್ ಏಪ್ರಿಲ್ 30ರವರೆಗೆ ಮಾತ್ರ ವ್ಯಾಲಿಡಿಟಿ ಹೊಂದಿರುತ್ತದೆ .
ಕ್ಯಾಶ್ಬ್ಯಾಕ್ ಅವಧಿ ಎಲ್ಲಿಯವರೆಗೆ ಇರಲಿದೆ?
ಈ ಕ್ಯಾಶ್ಬ್ಯಾಕ್ ಆಫರ್ ಏಪ್ರಿಲ್ 30ರವರೆಗೆ ಲಭ್ಯವಿರುತ್ತದೆ. ಈ ಅವಕಾಶ ಮೊದಲ ಬಾರಿಗೆ ಪೇಟಿಎಂ ಮೂಲಕ ಸಿಲಿಂಡರ್ ಬುಕ್ ಮಾಡುವವರಿಗೆ ಮಾತ್ರ ಸಿಗುತ್ತದೆ.
ಇದನ್ನೂ ಓದಿ: How to book gas cylinder: ವಾಟ್ಸಾಪ್ ಮೂಲಕ ಇಂಡೇನ್, ಎಚ್ಪಿ, ಭಾರತ್ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಹೇಗೆ?
Published On - 12:17 pm, Wed, 21 April 21