mAadhaar ಆ್ಯಪ್​ನಲ್ಲಿ ಐವರ ಪ್ರೊಫೈಲ್ ಸೇರಿಸಲು ಅವಕಾಶ; ಷರತ್ತುಗಳು, ಅನುಕೂಲಗಳು ಇತ್ಯಾದಿ ವಿವರ

mAadhaar App, know how to add family members' profile: ಹೊಸ ಎಂ ಆಧಾರ್ ಆ್ಯಪ್​ನಲ್ಲಿ ಇರುವ ವಿಶೇಷ ಫೀಚರ್​ಗಳಲ್ಲಿ ಕುಟುಂಬ ಸದಸ್ಯರ ಆಧಾರ್ ಸೇರ್ಪಡೆ ಮಾಡುವುದು ಒಂದು. ಸೇರ್ಪಡೆ ಮಾಡಬೇಕಿರುವ ಆಧಾರ್ ನಂಬರ್ ನಮೂದಿಸಿ, ಆ ವ್ಯಕ್ತಿಯ ಬಯೋಮೆಟ್ರಿಕ್ ದೃಢೀಕರಣ ಪಡೆಯಬೇಕಾಗುತ್ತದೆ. ಗರಿಷ್ಠ ಐದು ಪ್ರೊಫೈಲ್ ಸೇರ್ಪಡೆ ಮಾಡಬಹುದು.

mAadhaar ಆ್ಯಪ್​ನಲ್ಲಿ ಐವರ ಪ್ರೊಫೈಲ್ ಸೇರಿಸಲು ಅವಕಾಶ; ಷರತ್ತುಗಳು, ಅನುಕೂಲಗಳು ಇತ್ಯಾದಿ ವಿವರ
ಆಧಾರ್
Image Credit source: Getty Images

Updated on: Jul 26, 2026 | 11:41 AM

ಮುಖ್ಯಾಂಶಗಳು

  • mAadhaar ಆ್ಯಪ್​ನಲ್ಲಿ ಕುಟುಂಬ ಸದಸ್ಯರ ಆಧಾರ್ ಸೇರ್ಪಡೆ ಮಾಡಬಹುದು.
  • ಸೇರ್ಪಡೆ ಮಾಡಬೇಕಿರುವ ಆಧಾರ್ ನಂಬರ್ ನಮೂದಿಸಿ, ಬಯೋಮೆಟ್ರಿಕ್ ದೃಢೀಕರಣ ಪಡೆಯಬೇಕು.
  • ಗರಿಷ್ಠ ಐದು ಪ್ರೊಫೈಲ್ ಸೇರ್ಪಡೆ ಮಾಡಬಹುದು.

mAadhaar ಅಪ್ಲಿಕೇಶನ್‌ನಲ್ಲಿ ನಿಮ್ಮ ಸ್ವಂತ ಆಧಾರ್ ವಿವರಗಳ ಜೊತೆಗೆ ನಿಮ್ಮ ಕುಟುಂಬದ ಸದಸ್ಯರ ಆಧಾರ್ ಪ್ರೊಫೈಲ್‌ಗಳನ್ನು (Aadhaar profiles) ಸಹ ಒಂದೇ ಕಡೆ ನಿರ್ವಹಿಸಬಹುದು. ಒಂದು ಆ್ಯಪ್‌ನಲ್ಲಿ ಗರಿಷ್ಠ 5 ಆಧಾರ್ ಪ್ರೊಫೈಲ್‌ಗಳನ್ನು ಸೇರಿಸಲು ಅವಕಾಶವಿದೆ. ಸೇರ್ಪಡೆ ಮಾಡಬೇಕಿರುವ ಸದಸ್ಯರ ಬಯೋಮೆಟ್ರಿಕ್ ದೃಢೀಕರಣ (Biometric authentication) ಬೇಕಾಗುತ್ತದೆ. ಆ ವ್ಯಕ್ತಿಯೇ ಖುದ್ದಾಗಿ ಮುಖ ಚಹರೆ ನೀಡಿ ದೃಢೀಕರಿಸಬೇಕಾಗುತ್ತದೆ. ಎಂ ಆಧಾರ್ ಆ್ಯಪ್​ನಲ್ಲಿರುವ ಈ ಫೀಚರ್ ಹೇಗೆ ಕೆಲಸ ಮಾಡುತ್ತದೆ, ವಿವರ ಈ ಕೆಳಗಿದೆ.

mAadhaar ನಲ್ಲಿ ಕುಟುಂಬ ಸದಸ್ಯರನ್ನು ಸೇರಿಸಲು ಕ್ರಮ (Step-by-Step Process)

  1. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ mAadhaar ಆ್ಯಪ್ ಅನ್ನು ತೆರೆಯಿರಿ ಮತ್ತು ನಿಮ್ಮ 4-ಅಂಕಿಯ PIN/Password ನಮೂದಿಸಿ ಲಾಗಿನ್ ಆಗಿ.
  2. ಆ್ಯಪ್‌ನ ಮುಖಪುಟದಲ್ಲಿ (Dashboard) ಮೇಲ್ಭಾಗದಲ್ಲಿರುವ “Add Profile” ಅಥವಾ “Register Aadhaar” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  3. ನೀವು ಸೇರಿಸಲು ಬಯಸುವ ಕುಟುಂಬದ ಸದಸ್ಯರ 12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ.
  4. ಈಗ ಸದಸ್ಯರ ಮುಖಚಹರೆಯನ್ನು ಕ್ಯಾಮೆರಾಗೆ ತೋರಿಸಿ ದೃಢೀಕರಣ ಪಡೆಯಬೇಕಾಗುತ್ತದೆ.
  5. ಆಧಾರ್ ಸಂಖ್ಯೆ ಮತ್ತು ಸದಸ್ಯರ ಮುಖ ಚಹರೆ ಸರಿಹೊಂದಿಕೆಯಾದಾಗ ಅವರ ಪ್ರೊಫೈಲ್ ಸೇರ್ಪಡೆಯಾಗುತ್ತದೆ.

ಈ ರೀತಿ, ಐದು ಪ್ರೊಫೈಲ್​ಗಳನ್ನು ಒಂದೇ ಎಂಆಧಾರ್ ಆ್ಯಪ್​ನಲ್ಲಿ ಸೇರಿಸಲು ಅವಕಾಶ ಇರುತ್ತದೆ. ಆದರೆ, ಈ ಫೀಚರ್ ಮೈ ಆಧಾರ್ ವೆಬ್​ಸೈಟ್​ನಲ್ಲಿ ಲಭ್ಯ ಇರುವುದಿಲ್ಲ. ಎಂಆಧಾರ್ ಆ್ಯಪ್​ನಲ್ಲಿ ಮಾತ್ರವೇ ಈ ಸೌಲಭ್ಯ ಇದೆ.

ಇದನ್ನೂ ಓದಿ: ಜಿಎಸ್​ಟಿ ಕಾಂಪೆನ್ಸೇಶನ್ ಸೆಸ್ ಅಂತ್ಯವಾದರೂ ರಾಜ್ಯಗಳಿಗೆ ತಗ್ಗಲ್ಲ ತೆರಿಗೆ ಸುಗ್ಗಿ; ಸಿಗಲಿದೆ 1.43 ಲಕ್ಷ ಕೋಟಿ ರೂ ಹೆಚ್ಚುವರಿ ಆದಾಯ

mAadhaar ಆ್ಯಪ್​ನ ಈ ಫೀಚರ್​ನಿಂದ ಅನುಕೂಲಗಳೇನು?

  • ಭೌತಿಕ ಕಾರ್ಡ್ ಒಯ್ಯುವ ಅಗತ್ಯವಿಲ್ಲ: ಕುಟುಂಬದ ಪ್ರತಿಯೊಬ್ಬರ ಆಧಾರ್ ಕಾರ್ಡ್ ಅಥವಾ ಅದರ ಪ್ರತಿಯನ್ನು (Xerox) ಯಾವಾಗಲೂ ಜೊತೆಯಲ್ಲಿಟ್ಟುಕೊಳ್ಳುವ ಅಗತ್ಯವಿರುವುದಿಲ್ಲ. ಪ್ರಯಾಣಿಸುವಾಗ ಅಥವಾ ಯಾವುದೇ ತುರ್ತು ಸಂದರ್ಭದಲ್ಲಿ ಮೊಬೈಲ್‌ನಲ್ಲೇ ಆಧಾರ್ ತೋರಿಸಬಹುದು.
  • ಪ್ರಯಾಣದ ವೇಳೆ ಗುರುತಿನ ಚೀಟಿಯಾಗಿ ಬಳಕೆ: ರೈಲ್ವೆ ಪ್ರಯಾಣ (IRCTC), ವಿಮಾನ ನಿಲ್ದಾಣ ಪ್ರವೇಶ (Airport Entry) ಅಥವಾ ಹೋಟೆಲ್ ಚೆಕ್-ಇನ್ ಮಾಡುವಾಗ ಕುಟುಂಬದ ಎಲ್ಲಾ ಸದಸ್ಯರ ಗುರುತಿನ ಚೀಟಿಯಾಗಿ (ID Proof) mAadhaar ನಲ್ಲಿರುವ ಡಿಜಿಟಲ್ ಆಧಾರ್‌ ಅನ್ನು ತೋರಿಸಬಹುದು.
  • ಒಂದೇ ಆ್ಯಪ್‌ನಲ್ಲಿ ನಿರ್ವಹಣೆ: ಮಕ್ಕಳು ಅಥವಾ ಹಿರಿಯರ ಆಧಾರ್ ಪ್ರೊಫೈಲ್ ಅನ್ನು ಒಂದೇ ಸ್ಮಾರ್ಟ್‌ಫೋನ್‌ನಲ್ಲಿ ನಿರ್ವಹಿಸಬಹುದು. ಹೀಗಾಗಿ ಅವರ ಆಧಾರ್ ವಿವರಗಳಿಗಾಗಿ ಬೇರೆ ಬೇರೆ ಕಡೆ ಹುಡುಕಾಡುವ ಶ್ರಮ ತಪ್ಪುತ್ತದೆ.
  • ಇ-ಆಧಾರ್ ಡೌನ್‌ಲೋಡ್ ಮತ್ತು ಶೇರಿಂಗ್ ಸುಲಭ: ಅಗತ್ಯ ಬಿದ್ದಾಗ ಕುಟುಂಬದ ಯಾವುದೇ ಸದಸ್ಯರ e-Aadhaar ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ PDF ರೂಪದಲ್ಲಿ ಅಧಿಕೃತವಾಗಿ ಶೇರ್ (Share) ಮಾಡಬಹುದು.
  • ಆಫ್‌ಲೈನ್ ಪರಿಶೀಲನೆಗೆ QR ಕೋಡ್: ಆ್ಯಪ್‌ನಲ್ಲಿ ಸಿಗುವ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಯಾವುದೇ ಇಂಟರ್ನೆಟ್ ಇಲ್ಲದಿದ್ದರೂ ಕುಟುಂಬದ ಸದಸ್ಯರ ಆಧಾರ್ ವಿವರಗಳನ್ನು ಸುರಕ್ಷಿತವಾಗಿ ಪರಿಶೀಲಿಸಬಹುದು (Offline Verification).
  • ವರ್ಚುವಲ್ ಐಡಿ ರಚನೆ: ಸುರಕ್ಷತೆಯ ದೃಷ್ಟಿಯಿಂದ ಆಧಾರ್ ಸಂಖ್ಯೆಯನ್ನು ನೇರವಾಗಿ ನೀಡಲು ಇಷ್ಟವಿಲ್ಲದಿದ್ದಾಗ, ಕುಟುಂಬದ ಸದಸ್ಯರಿಗೆ VID (Virtual ID) ಅನ್ನು ಕ್ಷಣಾರ್ಧದಲ್ಲಿ ಆ್ಯಪ್ ಮೂಲಕವೇ ಜನರೇಟ್ ಮಾಡಿಕೊಳ್ಳಬಹುದು.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQs)

1. ಮೈ ಆಧಾರ್ ವೆಬ್​ಸೈಟ್​ಗೂ ಎಂಆಧಾರ್ ಆ್ಯಪ್​ಗೂ ಸಂಬಂಧ ಇದೆಯಾ?

My Aadhaar website ಮತ್ತು mAadhaar App ಎರಡೂ ಕೂಡ ಆಧಾರ್​ನ ಕೆಲ ಮಾಹಿತಿ ಪಡೆಯಲು ಮತ್ತು ಹಂಚಿಕೊಳ್ಳಲು ರಚನೆಯಾಗಿವೆ. ಆದರೆ, ಒಂದಷ್ಟು ಭಿನ್ನ ಫೀಚರ್​ಗಳನ್ನು ಹೊಂದಿವೆ.

2. mAadhaar ಆ್ಯಪ್​ನಲ್ಲಿ ವಿಶೇಷ ಫೀಚರ್ ಏನು?

mAadhaar ಆ್ಯಪ್​ನಲ್ಲಿ ಹಲವು ಫೀಚರ್ಸ್ ಇವೆ. ಅದರಲ್ಲಿ ಕುಟುಂಬ ಸದಸ್ಯರ ಪ್ರೊಫೈಲ್ ಸೇರಿಸುವುದು ಒಂದು. ಒಟ್ಟು ಐದು ಪ್ರೊಫೈಲ್ ಸೇರಿಸಬಹುದು.

3. ಒಟಿಪಿ ಮೂಲಕ ಪ್ರೊಫೈಲ್ ಸೇರಿಸಬಹುದಾ?

ಇಲ್ಲ, mAadhaar ಆ್ಯಪ್​ನಲ್ಲಿ ಪ್ರೊಫೈಲ್ ಸೇರ್ಪಡೆ ಮಾಡಬೇಕಿರುವ ವ್ಯಕ್ತಿಯ ಮುಖಚಹರೆ ಮೂಲಕ ಆಧಾರ್ ದೃಢೀಕರಣ ಪಡೆಯಬೇಕಾಗುತ್ತದೆ.

Follow Us