Cryptocurrency Price: ಬಿಟ್​ಕಾಯಿನ್, ಇಥರ್ ಮತ್ತಿತರ ಕ್ರಿಪ್ಟೊಕರೆನ್ಸಿ ಇಂದಿನ ದರದಲ್ಲಿ ಇಳಿಕೆ; ಯಾವುದರ ದರ ಎಷ್ಟಿದೆ

| Updated By: Digi Tech Desk

Updated on: Jun 08, 2021 | 1:35 PM

Major Cryptocurrency Price: ಜೂನ್ 8, 2021ಕ್ಕೆ ಅನ್ವಯ ಆಗುವಂತೆ ಪ್ರಮುಖ ಕ್ರಿಪ್ಟೊಕರೆನ್ಸಿಗಳ ಇಂದಿನ ದರದ ಮಾಹಿತಿ ಇಲ್ಲಿದೆ. ಇದರಲ್ಲಿ ಬಿಟ್​ಕಾಯಿನ್ ಸೇರಿದಂತೆ ಇತರ ಕ್ರಿಪ್ಟೊಕರೆನ್ಸಿ ವಿವರಗಳಿವೆ.​

Cryptocurrency Price: ಬಿಟ್​ಕಾಯಿನ್, ಇಥರ್ ಮತ್ತಿತರ ಕ್ರಿಪ್ಟೊಕರೆನ್ಸಿ ಇಂದಿನ ದರದಲ್ಲಿ ಇಳಿಕೆ; ಯಾವುದರ ದರ ಎಷ್ಟಿದೆ
ಪ್ರಾತಿನಿಧಿಕ ಚಿತ್ರ
Follow us on

ಬಿಟ್​ಕಾಯಿನ್, ಇಥರ್ ಮತ್ತಿತರ ಕ್ರಿಪ್ಟೊಕರೆನ್ಸಿಗಳು ಏರಿಳಿತದ ವ್ಯವಹಾರವನ್ನು ಮಂಗಳವಾರ ಕೂಡ ಕಂಡಿವೆ. ಚೀನಾದ ಅತಿದೊಡ್ಡ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ ಆದ ವಿಬೋದಿಂದ ಕ್ರಿಪ್ಟೊಗೆ ಸಂಬಂಧಿಸಿದ ಹತ್ತಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಲಾಗಿದೆ. ಈ ಹಿಂದೆ ಚೀನಾದ ಕೇಂದ್ರೀಯ ಬ್ಯಾಂಕ್​ನಿಂದ ಕ್ರಿಪ್ಟೊ ಕಂಪೆನಿಗಳ ವಿರುದ್ಧ ಕ್ರಮ ಕೈಗೊಂಡಾಗ, ಮೇ ತಿಂಗಳ ಆರಂಭದಲ್ಲಿ ಕ್ರಿಪ್ಟೊ ಮಾರುಕಟ್ಟೆಯು 24 ಗಂಟೆಯಲ್ಲಿ 4600 ಕೋಟಿ ಅಮೆರಿಕನ್ ಡಾಲರ್ ನಷ್ಟ ಅನುಭವಿಸಿತ್ತು. ಕಳೆದ 24 ಗಂಟೆಯೊಳಗೆ ಅತಿ ದೊಡ್ಡ ಕ್ರಿಪ್ಟೊಕರೆನ್ಸಿ ಬಿಟ್​ಕಾಯಿನ್ ಶೇ 8.5ರಷ್ಟು ಇಳಿಕೆ ಕಂಡು, ಜೂನ್​ 8ರಂದು ಬೆಳಗ್ಗೆ 33,737.72 ಅಮೆರಿಕನ್ ಡಾಲರ್ ಮುಟ್ಟಿತು. ಇಥೆರಿಯಂ ಕೂಡ ಕಳೆದ 24 ಗಂಟೆಯಲ್ಲಿ ಶೇ 6.42ರಷ್ಟು ಕುಸಿದಿದ್ದು, 2,609.73 ಯುಎಸ್​ಡಿಯಲ್ಲಿ ವಹಿವಾಟು ನಡೆಸುತ್ತಿದೆ. ಕಳೆದ ಒಂದು ತಿಂಗಳಲ್ಲಿ ಕ್ರಿಪ್ಟೊಕರೆನ್ಸಿಗಳ ಬೆಲೆಯಲ್ಲಿ ಭಾರೀ ಇಳಿಕೆ ಆಗಿದೆ. ಬಿಟ್​ಕಾಯಿನ್ ಮತ್ತು ಇಥರ್ ಮೊದಲ ತ್ರೈಮಾಸಿಕದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿತು. ಆದರೆ ಆ ನಂತರ ಹತ್ತಿರಹತ್ತಿರ ಶೇ 50ರಷ್ಟು ಕಳೆದ ತಿಂಗಳು ಇಳಿಕೆ ಕಂಡಿತು.

ಆದರೂ ಬಿಟ್​ಕಾಯಿನ್​ ಫಂಡ್ಸ್ ಮತ್ತು ಉತ್ಪನ್ನಗಳು ದಾಖಲೆಯ ಹೊರಹರಿವನ್ನು ಕಳೆದ ವಾರ ಮುಂದುವರಿಸಿವೆ. ಹೂಡಿಕೆದಾರರು ಬಹಳ ಎಚ್ಚರಿಕೆಯಿಂದ ಇದರ ಮೇಲೆ ಕಣ್ಣು ನೆಟ್ಟಿದ್ದಾರೆ. ಬಿಟ್​ಕಾಯಿನ್ ಹೊರಹರಿವು ಜೂನ್ 4ರ ಕೊನೆ ಹೊತ್ತಿಗೆ 1.41 ಕೋಟಿ ಅಮೆರಿಕನ್ ಡಾಲರ್ ಇತ್ತು. ಈ ವರ್ಷದ ನಿವ್ವಳ ಒಳಹರಿವಿನಲ್ಲಿ ಶೇ 8.3ರಷ್ಟಿದೆ. ಈ ವರ್ಷ ನಿವ್ವಳ ಒಳಹರಿವು 420 ಕೋಟಿ ಅಮೆರಿಕನ್ ಡಾಲರ್ ಇದೆ. ಕ್ರಿಪ್ಟೊಕರೆನ್ಸಿ ವಲಯ ಒಟ್ಟಾರೆ ಹೊರಹರಿವು ಕಳೆದ ವಾರ 9.42 ಕೋಟಿ ಅಮೆರಿಕನ್ ಡಾಲರ್ ಇದೆ. ಇಥೆರಿಯಂ ಬ್ಲಾಕ್​ಚೈನ್ ಒಳಹರಿವು ಕಾಣುವುದು ಮುಂದುವರಿದಿದೆ. ಈ ವಾರ 3.3 ಕೋಟಿ ಅಮೆರಿಕನ್ ಡಾಲರ್ ಆಗಿದೆ. ಈ ವರ್ಷ ಇಲ್ಲಿಯ ತನಕ ಇಥರ್ ಉತ್ಪನ್ನಗಳು ಮತ್ತು ನಿಧಿಯಲ್ಲಿ 100 ಕೋಟಿ ಅಮೆರಿಕನ್ ಡಾಲರ್ ಒಳಹರಿವಿದೆ. XRP 7 ಮಿಲಿಯನ್ ಯುಎಸ್​ಡಿ ಒಟ್ಟಾರೆ ಒಳಹರಿವು ಕಂಡಿದೆ. ಏಪ್ರಿಲ್​ನಿಂದ ಈಚೆಗೆ ಅತಿದೊಡ್ಡದು ಇದು. ಕಾರ್ಡಾನೊ ಮತ್ತು ಮಲ್ಟಿ ಅಸೆಟ್ ಪ್ರಾಡಕ್ಟ್​ಗಳು ಕ್ರಮವಾಗಿ 4.5 ಮಿಲಿಯನ್ ಹಾಗೂ 2.7 ಮಿಲಿಯನ್ ಡಾಲರ್ ಒಳಹರಿವು ದಾಖಲಿಸಿವೆ.

ಈ ಮಧ್ಯೆ ಕೇಂದ್ರ ಅಮೆರಿಕದ ದೇಶವಾದ ಎಲ್ ಸಲ್ವಡಾರ್ ಕ್ರಿಪ್ಟೊಕರೆನ್ಸಿಗೆ ಕಾನೂನಬದ್ಧ ಮೌಲ್ಯ ದೊರಕಿಸಿಕೊಡಲು ಮುಂದಾಗಿದೆ. ಅಲ್ಲಿನ ಅಧ್ಯಕ್ಷ ನಯೀಬ್ ಬುಕೆಲೆ ಈ ಬಗ್ಗೆ ಹೇಳಿಕೆ ನೀಡಿದ್ದು, ಮುಂದಿನ ವಾರ ದೇಶದ ಸಂಸತ್​ನಲ್ಲಿ ಪ್ರಸ್ತಾವ ಇಡಲಿದ್ದಾರೆ. ಇದರಿಂದ ದೇಶದಲ್ಲಿ ಉದ್ಯೋಗ ಸೃಷ್ಟಿ, ಹಣಕಾಸು ಒಳಗೊಳ್ಳುವಿಕೆ ಮೊದಲಾದ ಅನುಕೂಲಗಳು ಆಗಲಿವೆ ಎಂಬುದು ಅವರ ಅಭಿಪ್ರಾಯ ಆಗಿದೆ. ಜೂನ್ 8ನೇ ತಾರೀಕಿಗೆ ಕ್ರಿಪ್ಟೊಕರೆನ್ಸಿಗಳ ದರ ಎಷ್ಟಿತ್ತು ಹಾಗೂ ಎಷ್ಟು ಬದಲಾವಣೆ ಆಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಬಿಟ್​ಕಾಯಿನ್ ಯುಎಸ್​ಡಿ 33,737.72 -8.5% ಬದಲಾವಣೆ 24 ಗಂಟೆಯಲ್ಲಿ

ಇಥೆರಿಯಂ ಯುಎಸ್​ಡಿ 2,603 -6.74% ಬದಲಾವಣೆ 24 ಗಂಟೆಯಲ್ಲಿ

ಬಿನಾನ್ಸ್ ಕಾಯಿನ್ ಯುಎಸ್​ಡಿ 361.46 -10.65% ಬದಲಾವಣೆ 24 ಗಂಟೆಯಲ್ಲಿ

ಟಿಥೆರ್ ಯುಎಸ್​ಡಿ 1.00 0.01% ಬದಲಾವಣೆ 24 ಗಂಟೆಯಲ್ಲಿ

ಕಾರ್ಡಾನೊ ಯುಎಸ್​ಡಿ 1.57 -8.61% ಬದಲಾವಣೆ 24 ಗಂಟೆಯಲ್ಲಿ

Dogecoin ಯುಎಸ್​ಡಿ 0.33 9.67% ಬದಲಾವಣೆ 24 ಗಂಟೆಯಲ್ಲಿ

XRP ಯುಎಸ್​ಡಿ 0.8633 10.71% ಬದಲಾವಣೆ 24 ಗಂಟೆಯಲ್ಲಿ

Polkadot ಯುಎಸ್​ಡಿ 21.89 -12.94% ಬದಲಾವಣೆ 24 ಗಂಟೆಯಲ್ಲಿ

USD Coin ಯುಎಸ್​ಡಿ  1  0.01% ಬದಲಾವಣೆ 24 ಗಂಟೆಯಲ್ಲಿ

Uniswap ಯುಎಸ್​ಡಿ 24.16 8.50% ಬದಲಾವಣೆ 24 ಗಂಟೆಯಲ್ಲಿ

ಇದನ್ನೂ ಓದಿ: Cryptocurrency Bit Coin: ಬಿಟ್​ಕಾಯಿನ್​ಗೆ ಕಾನೂನು ಮಾನ್ಯತೆ ನೀಡುವ ಮೊದಲ ದೇಶವಾಗಲಿದೆ ಎಲ್​ ಸಲ್ವಡಾರ್

(Major cryptocurrencies bitcoin, ether and others rate as on June 8, 2021)

Published On - 11:33 am, Tue, 8 June 21