Gold Hallmarking: ಚಿನ್ನದ ಹಾಲ್​ಮಾರ್ಕ್ ಕಡ್ಡಾಯ ನಿಯಮ 3 ತಿಂಗಳು ವಿಸ್ತರಣೆ, ಆಭರಣ ತಯಾರಕರಿಗೆ ನಿರಾಳ

ಚಿನ್ನದ ಹಾಲ್​ಮಾರ್ಕಿಂಗ್​ ಅಂತಿಮ ಗಡುವನ್ನು ನವೆಂಬರ್ 30, 2021ರ ತನಕ ವಿಸ್ತರಣೆ ಮಾಡಲಾಗಿದೆ. ಆ ಮೂಲಕ ಆಭರಣ ತಯಾರಕರು ನಿರಾಳ ಆದಂತಾಗಿದೆ.

Gold Hallmarking: ಚಿನ್ನದ ಹಾಲ್​ಮಾರ್ಕ್ ಕಡ್ಡಾಯ ನಿಯಮ 3 ತಿಂಗಳು ವಿಸ್ತರಣೆ, ಆಭರಣ ತಯಾರಕರಿಗೆ ನಿರಾಳ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 01, 2021 | 5:54 PM

ಆಭರಣ ವ್ಯಾಪಾರಿಗಳಿಗೆ ನಿರಾಳ ಆಗುವಂಥ ಸುದ್ದಿಯೊಂದು ಇಲ್ಲಿದೆ. ಸರ್ಕಾರವು ಚಿನ್ನದ ಹಾಲ್‌ಮಾರ್ಕಿಂಗ್ ಗಡುವನ್ನು ಮೂರು ತಿಂಗಳು ವಿಸ್ತರಿಸಲು ನಿರ್ಧರಿಸಿದ್ದು, ಈ ಹೊಸ ಗಡುವು ನವೆಂಬರ್ 30, 2021ರ ವರೆಗೆ ಇದೆ. ಈ ಮೊದಲು ಆಗಸ್ಟ್ 31, 2021ರ ತನಕ ಮಾತ್ರ ಇತ್ತು. ಇದರ ಅಧಿಕೃತ ಅಧಿಸೂಚನೆಯು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಲ್ಲದೆ ಮಾಹಿತಿಯ ಪ್ರಕಾರ, ಹಾಲ್‌ಮಾರ್ಕಿಂಗ್ ಯೂನಿಕ್ ID (HUID) ನಿಯಮಗಳು ಹಾಲ್‌ಮಾರ್ಕಿಂಗ್ ಕೇಂದ್ರಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಆಭರಣಗಳು ಹಾಗೂ ಗ್ರಾಹಕರನ್ನು HUID ಮೂಲಕ ಪತ್ತೆ ಮಾಡುವುದಿಲ್ಲ. ಚಿನ್ನದ ಆಭರಣಗಳ ಕಡ್ಡಾಯ ಹಾಲ್‌ಮಾರ್ಕಿಂಗ್ ಜೂನ್ 16, 2021ರಂದು ಜಾರಿಗೆ ಬಂದಿದ್ದು, ಸದ್ಯಕ್ಕೆ 256 ಜಿಲ್ಲೆಗಳಲ್ಲಿ ಕಡ್ಡಾಯ ಹಾಲ್‌ಮಾರ್ಕಿಂಗ್ ಇದೆ.

ಇತ್ತೀಚೆಗೆ, ಕೇಂದ್ರ ಸರ್ಕಾರದ ಹೊಸ ಚಿನ್ನದ ಹಾಲ್‌ಮಾರ್ಕಿಂಗ್ ನಿಯಮಗಳನ್ನು ವಿರೋಧಿಸಿ 350ಕ್ಕೂ ಹೆಚ್ಚು ಆಭರಣ ವ್ಯಾಪಾರಿಗಳ ಸಂಘಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದವು. 350ಕ್ಕೂ ಅಧಿಕ ಆಭರಣ ಸಂಸ್ಥೆಗಳು ಸರ್ಕಾರದ ಎಚ್‌ಯುಐಡಿ ವ್ಯವಸ್ಥೆಗೆ ವಿರುದ್ಧವಾಗಿದ್ದು, ಚಿನ್ನದ ಶುದ್ಧತೆಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗಿದೆ. ಆದರೆ ಇದು ಕೇವಲ ಟ್ರ್ಯಾಕಿಂಗ್ ಕಾರ್ಯ ವಿಧಾನವಾಗಿದೆ.

ಗೋಲ್ಡ್ ಹಾಲ್‌ಮಾರ್ಕಿಂಗ್ ನಿಯಮಗಳು, 2021 1. ವಾರ್ಷಿಕ ವಹಿವಾಟು ರೂ. 40 ಲಕ್ಷದವರೆಗಿನ ಆಭರಣ ವ್ಯಾಪಾರಿಗಳಿಗೆ ಕಡ್ಡಾಯ ಹಾಲ್‌ಮಾರ್ಕಿಂಗ್‌ನಿಂದ ವಿನಾಯಿತಿ ನೀಡಲಾಗುತ್ತದೆ. 2. ಭಾರತ ಸರ್ಕಾರದ ವ್ಯಾಪಾರ ನೀತಿಯ ಪ್ರಕಾರ ಆಭರಣಗಳ ರಫ್ತು ಮತ್ತು ಮರು-ಆಮದು. 3. ಅಂತಾರಾಷ್ಟ್ರೀಯ ಪ್ರದರ್ಶನಗಳಿಗಾಗಿನ ಆಭರಣಗಳು, ಸರ್ಕಾರಿ ಅನುಮೋದಿತ B2B ದೇಶೀಯ ಪ್ರದರ್ಶನಗಳಿಗೆ ಆಭರಣಗಳಿಗೆ ಕಡ್ಡಾಯ ಹಾಲ್‌ಮಾರ್ಕಿಂಗ್‌ನಿಂದ ವಿನಾಯಿತಿ ನೀಡಲಾಗುತ್ತದೆ. 4. ಹೆಚ್ಚುವರಿ ಕ್ಯಾರೆಟ್‌ಗಳ ಚಿನ್ನವಾದ 20, 23 ಮತ್ತು 24ಕ್ಕೆ ಹಾಲ್‌ಮಾರ್ಕಿಂಗ್‌ಗೆ ಅನುಮತಿಸಲಾಗುತ್ತದೆ. 5. ಕೈಗಡಿಯಾರಗಳು, ಫೌಂಟೇನ್ ಪೆನ್ನುಗಳು ಮತ್ತು ವಿಶೇಷ ರೀತಿಯ ಆಭರಣಗಳು ಅಂದರೆ. ಕುಂದನ್, ಪೋಲ್ಕಿ ಮತ್ತು ಜಡೌಗಳಿಗೆ ಹಾಲ್‌ಮಾರ್ಕಿಂಗ್‌ನಿಂದ ವಿನಾಯಿತಿ ನೀಡಲಾಗಿದೆ. 6. ಆಭರಣ ವ್ಯಾಪಾರಿಗಳು ಹಾಲ್​ಮಾರ್ಕ್​ ಇಲ್ಲದ ಹಳೆಯ ಚಿನ್ನದ ಆಭರಣಗಳನ್ನು ಗ್ರಾಹಕರಿಂದ ಮರಳಿ ಖರೀದಿಸುವುದನ್ನು ಮುಂದುವರಿಸಬಹುದು. 7. ಆಭರಣ ವ್ಯಾಪಾರಿಗಳಿಂದ ಸಾಧ್ಯವಾದರೆ ಅಥವಾ ಹೊಸ ಆಭರಣಗಳನ್ನು ಕರಗಿಸಿ ಮಾಡಿದ ನಂತರ ಹಳೆಯ ಆಭರಣಗಳಿಗೆ ಹಾಲ್‌ಮಾರ್ಕ್ ಮಾಡಬಹುದು. 8. ಯೋಜನೆಯ ಅನುಷ್ಠಾನದ ಸಮಯದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳನ್ನು ಪರಿಶೀಲಿಸಲು ಕಂದಾಯ ಅಧಿಕಾರಿಗಳು ಮತ್ತು ಕಾನೂನು ತಜ್ಞರ ಪ್ರತಿನಿಧಿಗಳ ಸಮಿತಿಯನ್ನು ರಚಿಸಲಾಗುತ್ತದೆ. 9. ಆಭರಣಗಳ ನೋಂದಣಿ ಒಂದು ಬಾರಿ ಮತ್ತು ನೋಂದಣಿಗಾಗಿ ಆಭರಣ ವ್ಯಾಪಾರಿಗಳಿಂದ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಬೆಲೆಬಾಳುವ ಲೋಹದ ವಸ್ತುಗಳನ್ನು ಮಾರಾಟ ಮಾಡುವ ಯಾವುದೇ ತಯಾರಕರು, ಆಮದುದಾರರು, ಸಗಟು ವ್ಯಾಪಾರಿಗಳು, ವಿತರಕರು ಅಥವಾ ಚಿಲ್ಲರೆ ವ್ಯಾಪಾರಿಗಳು ಕಡ್ಡಾಯವಾಗಿ BISನಲ್ಲಿ ನೋಂದಾಯಿಸಿಕೊಳ್ಳಬೇಕು. ಆದರೂ ಆಭರಣ ವ್ಯಾಪಾರಿಗಳಿಗೆ ಕೆಲಸದ ಆಧಾರದ ಮೇಲೆ ಚಿನ್ನದ ಆಭರಣಗಳನ್ನು ತಯಾರಿಸುವ ಕುಶಲಕರ್ಮಿಗಳು ಅಥವಾ ತಯಾರಕರು ಹಾಗೂ ಸರಪಳಿಯಲ್ಲಿ ಯಾರಿಗೂ ನೇರವಾಗಿ ಮಾರಾಟಕ್ಕೆ ಸಂಬಂಧ ಇಲ್ಲದವರು ನೋಂದಣಿಯಿಂದ ವಿನಾಯಿತಿ ನೀಡಲಾಗುತ್ತದೆ. 10. ತಯಾರಕರು, ಸಗಟು ಮಾರಾಟಗಾರರು, ವಿತರಕರು ಅಥವಾ ಚಿಲ್ಲರೆ ವ್ಯಾಪಾರಿಗಳಾಗಿರಬಹುದು ಹಾಲ್‌ಮಾರ್ಕ್ ಅನ್ನು ಮಾರಾಟದ ಮೊದಲ ಹಂತದಲ್ಲಿ ಮಾಡಲಾಗುತ್ತದೆ. ಹಾಲ್‌ಮಾರ್ಕ್ ಮಾಡಿದ ಆಭರಣಗಳಲ್ಲಿ 2 ಗ್ರಾಂ ಹೆಚ್ಚಳ ಅಥವಾ ಇಳಿಕೆಯ ಪರಿಶುದ್ಧತೆ ಹೊಣೆಗಾರಿಕೆಯೊಂದಿಗೆ ಆಭರಣ ತಯಾರಕರಿಗೆ ವಹಿಸಲಾಗುತ್ತದೆ.

ಇದನ್ನೂ ಓದಿ: Hallmark: ಕಷ್ಟದ ಹಾಲ್​ಮಾರ್ಕಿಂಗ್ ಪ್ರಕ್ರಿಯೆ, ದಂಡದ ತೂಗುಗತ್ತಿ: ದೇಶವ್ಯಾಪಿ ಆಭರಣ ತಯಾರಕರು ಮುಷ್ಕರಕ್ಕೆ ಮುಂದಾಗಿರುವುದು ಏಕೆ?

(Mandatory Gold Hallmarking Extended Till November 30th 2021 Here Is The Details)

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್