Sign In

By signing in or creating an account, you agree with Associated Broadcasting Company's Terms & Conditions and Privacy Policy.

Own Factories: ಫ್ಯಾಕ್ಟರಿ ಸ್ಥಾಪಿಸಬೇಕೆ? ಇಲ್ಲಿವೆ ಸಣ್ಣ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಐಡಿಯಾಗಳು

Business Ideas: ಸಂಬಳದ ಕೆಲಸ ಬೇಡ, ಸ್ವಂತದ್ದು ಮಾಡಬೇಕು ಎಂಬ ಹಪಾಹಪಿ ಇದ್ದರೆ ಒಂದಷ್ಟು ಬಿಸಿನೆಸ್ ಐಡಿಯಾಗಳು ಇಲ್ಲಿವೆ. 3ಡಿ ಪ್ರಿಂಟಿಂಗ್ ಸರ್ವಿಸ್​ನಿಂದ ಹಿಡಿದು ಆಟಿಕೆ ತಯಾರಿಕೆವರೆಗೂ ವಿವಿಧ ಬಿಸಿನೆಸ್​ಗಳ ವಿವರ ಇದೆ. ಯಾವ ಬಿಸಿನೆಸ್ ಮಾಡಬೇಕೆಂದು ಮೊದಲು ಆಯ್ಕೆ ಮಾಡಿ, ಅದಕ್ಕೆ ಬೇಕಾದ ಯೋಜನೆ, ಬಂಡವಾಳ ತಯಾರಿಸಬೇಕು.

Own Factories: ಫ್ಯಾಕ್ಟರಿ ಸ್ಥಾಪಿಸಬೇಕೆ? ಇಲ್ಲಿವೆ ಸಣ್ಣ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಐಡಿಯಾಗಳು
ಫ್ಯಾಕ್ಟರಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 22, 2023 | 4:17 PM

ಯಾರಿಗೆ ಸಾಲುತ್ತೆ ಇವತ್ತಿನ ಸಂಬಳ? ಸ್ವಂತ ಉದ್ಯೋಗ (self employment) ನಡೆಸಬೇಕು, ಕೈತುಂಬ ಸಂಪಾದಿಸಬೇಕು, ಹತ್ತಾರು ಮಂದಿಗೆ ಕೆಲಸ ಕೊಡಬೇಕು ಎಂಬುದು ಪ್ರತಿಯೊಬ್ಬರಲ್ಲೂ ಇರುವ ಒಂದು ಕನಸು. ಆದರೆ, ಏನು ಮಾಡಬೇಕು, ಹೇಗೆ ಆರಂಭಿಸಬೇಕು ಎಂಬುದೇ ಪ್ರಮುಖ ತೊಡಕಾಗಿ, ಆಲೋಚನೆಗಳು ಈ ತೊಡಕನ್ನು ದಾಟಿ ಮುಂದಕ್ಕೆ ಹೋಗುವುದೇ ಇಲ್ಲ. ನೀವು ಯಾವ ಬಿಸಿನೆಸ್ ನಡೆಸಬೇಕು (business ideas) ಎಂದು ಮೊದಲು ನಿಶ್ಚಯಿಸಿಕೊಳ್ಳಬೇಕು. ಆ ಬಳಿಕ ಅದಕ್ಕೆ ಬೇಕಾದ ಯೋಜನೆ, ಹೂಡಿಕೆಗಳನ್ನು ವ್ಯವಸ್ಥೆ ಮಾಡಿ, ಅಖಾಡಕ್ಕೆ ಇಳಿಯಬಹುದು. ನಿಮ್ಮ ಕೆಲಸವನ್ನು ತುಸು ಸರಳಗೊಳಿಸುವ ಪ್ರಯತ್ನವಾಗಿ ಇಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಒಂದಷ್ಟು ಸಣ್ಣ ಬಿಸಿನೆಸ್ ಐಡಿಯಾಗಳನ್ನು ನೀಡಿದ್ದೇವೆ. ಉಪಯೋಗವಾಗುತ್ತಾ ನೋಡಿ.

ಬಿಸಿನೆಸ್ ಐಡಿಯಾ: 3ಡಿ ಪ್ರಿಂಟಿಂಗ್ ಸರ್ವಿಸ್

ಇವತ್ತು ಬಹಳ ಟ್ರೆಂಡಿಂಗ್​ನಲ್ಲಿರುವ ತಂತ್ರಜ್ಞಾನ ಇದು. 3ಡಿ ಪ್ರಿಂಟಿಂಗ್ ಸರ್ವಿಸ್​ನ ಟೆಕ್ನಾಲಜಿ ಇವತ್ತು ಸಾಕಷ್ಟು ಬದಲಾಗಿದೆ. ಬಹಳ ಪರಿಣಾಮಕಾರಿಯಾಗಿ ಉತ್ಪನ್ನಗಳ ಮಾದರಿಗಳನ್ನು ಇದರ ಮೂಲಕ ತಯಾರಿಸಬಹುದು.

ಬಿಸಿನೆಸ್ ಐಡಿಯಾ: ಆಹಾರ, ಪಾನೀಯ ಉತ್ಪಾದನೆ

ಆಹಾರ ಮತ್ತು ಪಾನೀಯಗಳನ್ನು ತಯಾರಿಸುವ ಕಾರ್ಖಾನೆ ಆರಂಭಿಸಬಹುದು. ಇದೂ ಕೂಡ ಬಹಳ ದೊಡ್ಡದಾಗಿರುವ ಒಂದು ಉದ್ಯಮ. ಆಹಾರವಸ್ತುಗಳನ್ನು ಪಡೆಯುವುದರಿಂದ ಹಿಡಿದು ಅಂಗಡಿ ಮುಂಗಟ್ಟುಗಳಿಗೆ ಮಾರುವವರೆಗೆ ನೀವು ಮಾರುಕಟ್ಟೆ ವ್ಯವಸ್ಥೆ ರೂಪಿಸಿಕೊಂಡರೆ ಒಳ್ಳೆಯ ಲಾಭಕಾರಿ ಉದ್ದಿಮೆ ಆಗಬಹುದು.

ಇದನ್ನೂ ಓದಿ: Viral Post: ಕೇವಲ 5ವರ್ಷ ದುಡಿದು, ಜೀವನಪೂರ್ತಿ ಆರಾಮಾಗಿರಿ, ವಿದ್ಯಾರ್ಹತೆ ಅಗತ್ಯವಿಲ್ಲ; ಜಾಹೀರಾತು ವೈರಲ್​​

ಬಿಸಿನೆಸ್ ಐಡಿಯಾ: ಹ್ಯಾಂಡ್​ಮೇಡ್ ಪೇಪರ್

ಈಗ ಪರಿಸರ ಸ್ನೇಹಿ ವಸ್ತುಗಳಿಗೆ ಆದ್ಯತೆ ಸಿಗುತ್ತಿದೆ. ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ರೀಸೈಕಲ್ಡ್ ವಸ್ತುಗಳಿಗೆ ಹೆಚ್ಚು ಬೇಡಿಕೆ ಇದೆ. ಅದರಲ್ಲೂ ಕಾಗದದಿಂದ ತಯಾರಿಸಲಾದ ಕವರ್ ಇತ್ಯಾದಿ ವಸ್ತುಗಳು ಹೆಚ್ಚು ಮಾರಾಟ ಕಾಣುತ್ತಿವೆ.

ಕ್ಯಾಂಡಲ್ ತಯಾರಿಕೆ

ಹುಟ್ಟುಹಬ್ಬ ಇತ್ಯಾದಿ ಬಹಳಷ್ಟು ಕಾರ್ಯಕ್ರಮಗಳಿಗೆ ಕ್ಯಾಂಡಲ್​ಗಳನ್ನು ಇಡಲಾಗುತ್ತದೆ ಇದಕ್ಕೆ ಉತ್ತಮ ಮಾರುಕಟ್ಟೆ ಇದೆ. ಇದರ ತಯಾರಿಕೆಯೂ ತುಸು ಸುಲಭ. ಕ್ಯಾಂಡರ್ ತಯಾರಿಸುವ ಫ್ಯಾಕ್ಟರಿ ಕೂಡ ಉತ್ತಮ ಬಿಸಿನೆಸ್ ಐಡಿಯಾ.

ಇದನ್ನೂ ಓದಿ: Aadhaar BIG News: ಆಧಾರ್ ಕಾರ್ಡ್ ಮಾಡಿಸಿಲ್ಲವಾ? ಬಂದಿದೆ ಪಾಸ್​ಪೋರ್ಟ್ ಮಾದರಿ ವೆರಿಫಿಕೇಶನ್ ಪ್ರಕ್ರಿಯೆ

ಬೊಂಬೆ ತಯಾರಿಕೆ

ಆಟಿಕೆ ಗೊಂಬೆಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಮಕ್ಕಳಿಗೆ ಬೊಂಬೆಗಳನ್ನು ತಯಾರಿಸಿ ಸಾಕಷ್ಟು ಹಣ ಗಳಿಸಬಹುದು. ಆದರೆ, ಮಕ್ಕಳಿಗೆ ಆಡಲು ಈ ಆಟಿಕೆ ಸುರಕ್ಷಿತವಾಗಿರುವುದನ್ನು ಖಾತ್ರಿಪಡಿಸುವ ಜವಾಬ್ದಾರಿ ಹೆಚ್ಚಿರುತ್ತದೆ. ಹಾಗೆಯೇ, ಬೊಂಬೆ ವಿನ್ಯಾಸದಲ್ಲಿ ಕ್ರಿಯೇಟಿವಿಟಿ ಇದ್ದರೆ ಇನ್ನೂ ಅನುಕೂಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ