Meta: ಮೊದಲ ಬಾರಿಗೆ ಪೂರ್ಣಾವಧಿ ಉದ್ಯೋಗದ ಆಫರ್​ ರದ್ದುಗೊಳಿಸಿದ ಮೆಟಾ

| Updated By: Ganapathi Sharma

Updated on: Jan 12, 2023 | 4:52 PM

ಇತ್ತೀಚೆಗಷ್ಟೇ ಉದ್ಯೋಗಿಗಳ ಸಾಮೂಹಿಕ ವಜಾ ನಿರ್ಧಾರ ಕೈಗೊಂಡಿದ್ದ ಮಾರ್ಕ್ ಝುಕರ್​​ಬರ್ಗ್​ ಒಡೆತನದ ಮೆಟಾ ಇದೀಗ ಮೊದಲ ಬಾರಿಗೆ ಪೂರ್ಣಾವಧಿ ಉದ್ಯೋಗದ ಆಫರನ್ನೂ ರದ್ದುಗೊಳಿಸಿದೆ. ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಕಠಿಣ ಪರಿಸ್ಥಿತಿ ಎದುರಿಸುತ್ತಿರುವುದರಿಂದ ಈ ಕ್ರಮ ಕೈಗೊಂಡಿರುವುದಾಗಿ ಕಂಪನಿ ಹೇಳಿದೆ.

Meta: ಮೊದಲ ಬಾರಿಗೆ ಪೂರ್ಣಾವಧಿ ಉದ್ಯೋಗದ ಆಫರ್​ ರದ್ದುಗೊಳಿಸಿದ ಮೆಟಾ
ಮೆಟಾ
Follow us on

ನವದೆಹಲಿ: ಇತ್ತೀಚೆಗಷ್ಟೇ ಉದ್ಯೋಗಿಗಳ ಸಾಮೂಹಿಕ ವಜಾ ನಿರ್ಧಾರ ಕೈಗೊಂಡಿದ್ದ ಮಾರ್ಕ್ ಝುಕರ್​​ಬರ್ಗ್(Mark Zuckerberg) ಒಡೆತನದ ಮೆಟಾ (Meta) ಇದೀಗ ಮೊದಲ ಬಾರಿಗೆ ಪೂರ್ಣಾವಧಿ ಉದ್ಯೋಗದ ಆಫರನ್ನೂ ರದ್ದುಗೊಳಿಸಿದೆ. ಜಾಗತಿಕ ಆರ್ಥಿಕ ಹಿಂಜರಿತ (Global Recession) ಮತ್ತು ಕಠಿಣ ಪರಿಸ್ಥಿತಿ ಎದುರಿಸುತ್ತಿರುವುದರಿಂದ ಈ ಕ್ರಮ ಕೈಗೊಂಡಿರುವುದಾಗಿ ಕಂಪನಿ ಹೇಳಿದೆ. ಸದ್ಯದ ಪರಿಸ್ಥಿತಿಯಲ್ಲಿ ನೇಮಕಾತಿ ಅಗತ್ಯಗಳ ಬಗ್ಗೆ ನಾವು ಪರಾಮರ್ಶಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಸಣ್ಣ ಸಂಖ್ಯೆಯ ಪೂರ್ಣಾವಧಿ ಉದ್ಯೋಗದ ಆಫರ್​​ಗಳನ್ನು ರದ್ದುಗೊಳಿಸಬೇಕಾಗಿ ಬಂದಿದೆ ಎಂದು ಮೆಟಾ ವಕ್ತಾರರು ಅಮೆರಿಕ ಮೂಲದ ಟೆಕ್ ವೆಬ್​ಸೈಟ್​​ ‘ಟೆಕ್​ಕ್ರಂಚ್’ಗೆ ತಿಳಿಸಿದ್ದಾರೆ.

2023ರಲ್ಲಿ ನೇಮಕಾತಿ ಹೊಂದಾಣಿಕೆ, ಆದ್ಯತೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ವಕ್ತಾರರು ತಿಳಿಸಿದ್ದಾರೆ. ಮೆಟಾದ 11,000 ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ 2022ರ ನವೆಂಬರ್​ನಲ್ಲಿ ಮಾರ್ಕ್ ಝುಕರ್​​ಬರ್ಗ್ ಘೋಷಿಸಿದ್ದರು.

ಇದನ್ನೂ ಓದಿ: Meta: ಟಾಟಾ ಕ್ಲಿಕ್ ಮಾಜಿ ಸಿಇಒ ವಿಕಾಸ್ ಪುರೋಹಿತ್​ಗೆ ಮೆಟಾ ಉನ್ನತ ಹುದ್ದೆ

ಮೆಟಾದ ಲಂಡನ್ ಕಚೇರಿಯಲ್ಲಿ ಸುಮಾರು 20 ಪೂರ್ಣಾವಧಿ ಉದ್ಯೋಗದ ಆಫರ್​​ ಅನ್ನು ಇತ್ತಿಚೆಗೆ ರದ್ದುಪಡಿಸಲಾಗಿತ್ತು ಎಂದು ಎಂಜಿನಿಯರ್, ಬರಹಗಾರ ಗಾರ್ಗ್​​ಲಿ ಒರೊಝ್​ ಟ್ವೀಟ್ ಮಾಡಿದ್ದಾರೆ. 2023ರಲ್ಲಿ ಲಂಡನ್​ ಕಚೇರಿಯಲ್ಲಿ ನಡೆಸಲು ಉದ್ದೇಶಿಸಿದ್ದ ಬೇಸಗೆ ಇಂಟರ್ನ್​ಶಿಪ್​ ಅನ್ನು ರದ್ದುಗೊಳಿಸುವುದಾಗಿ ಮೆಟಾ ಇತ್ತೀಚೆಗೆ ತಿಳಿಸಿತ್ತು. ಇಂಟರ್ನ್​ಶಿಪ್ ಅನ್ನು 2023ರ ಜನವರಿಯಲ್ಲಿ ಆರಂಭಿಸಲು ಉದ್ದೇಶಿಸಲಾಗಿತ್ತು.


ಸಾಮಾಜಿಕ ಮಾಧ್ಯಮಗಳಾದ ಫೇಸ್​ಬುಕ್, ಇನ್​ಸ್ಟಾಗ್ರಾಮ್ ಹಾಗೂ ಮೆಸೆಂಜಿಂಗ್ ಆ್ಯಪ್ ವಾಟ್ಸ್​ಆ್ಯಪ್ ವೇದಿಕೆಗಳನ್ನು ನಿರ್ವಹಿಸುವ ‘ಮೆಟಾ’ 11,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ಮಾರ್ಕ್ ಝುಕರ್​ಬರ್ಗ್ ನವೆಂಬರ್​​ನಲ್ಲಿ ಘೋಷಿಸಿದ್ದರು. ಜತೆಗೆ ಅನಿವಾರ್ಯವಾಗಿ ಕಠಿಣ ನಿರ್ಧಾರ ಕೈಗೊಂಡಿರುವುದಕ್ಕೆ ಉದ್ಯೋಗಿಗಳ ಬಳಿ ಕ್ಷಮೆಯಾಚಿಸಿದ್ದರು. ಮೆಟಾ ಕಂಪನಿಯ ಅಂಗಸಂಸ್ಥೆಗಳ ನೇಮಕಾತಿ ಪ್ರಕ್ರಿಯೆಗೆ ತಡೆ ಒಡ್ಡಿರುವುದು ಮುಂದುವರಿಯಲಿದೆ ಎಂದೂ ಅವರು ಹೇಳಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:51 pm, Thu, 12 January 23