ನವದೆಹಲಿ, ಏಪ್ರಿಲ್ 8: ಇವತ್ತಿನ ಜಾಗತೀಕರಣದ ದಿನಗಳಲ್ಲಿ ಎಲ್ಲೋ ಒಂದು ಕಡೆ ನಡೆಯುವ ಒಂದು ಘಟನೆ ಜಾಗತಿಕವಾಗಿ ಪರಿಣಾಮ (global effects) ಬೀರಬಹುದು. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಶೀತವಾಗಬಹುದು. ಈ ವಿಶ್ವದ ಯಾವ ದೇಶ ಕೂಡ ಬಾಹ್ಯ ಪರಿಣಾಮದಿಂದ ಹೊರತಾಗಿರುವುದಿಲ್ಲ. ವ್ಯಾಪಾರ, ವಹಿವಾಟು, ಹವಾಮಾನ ಹೀಗೆ ಜಗತ್ತಿನ ದೇಶಗಳು ಪರಸ್ಪರ ಒಂದಿಲ್ಲೊಂದು ರೀತಿಯಲ್ಲಿ ಅವಲಂಬಿತವಾಗಿರುತ್ತವೆ. ಒಂದು ದೇಶದ ಆರ್ಥಿಕತೆಯ ಬೆಳವಣಿಗೆಯು ಅಲ್ಲಿಯ ವಿವಿಧ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತದೆ. ವಿಶ್ವದ ದೊಡ್ಡಣ್ಣನಾದ ಅಮೆರಿಕದಲ್ಲಿ ಆಗುವ ಬದಲಾವಣೆಗಳು ಜಗತ್ತಿನ ಹಲವು ದೇಶಗಳ ಮಾರುಕಟ್ಟೆಯನ್ನು ಪ್ರಭಾವಿಸುತ್ತವೆ.
ಸಿಎನ್ಬಿಸಿ ಟಿವಿ18 ವಾಹಿನಿಯ ನಿಗೆಲ್ ಡಿಸೋಜಾ ಅವರು ಮೊನ್ನೆ ಈ ಮಾರುಕಟ್ಟೆ ಟ್ರೆಂಡ್ ಬಗ್ಗೆ ಮಾಡಿದ ಒಂದು ಟ್ವೀಟ್ ಕೆಲ ಇಂಟರೆಸ್ಟಿಂಗ್ ಸಂಗತಿಯನ್ನು ಎತ್ತಿ ತೋರಿಸಿದೆ. ಯಾವ್ಯಾವ ಮಾರುಕಟ್ಟೆ ಚಲನೆಗಳು ಯಾವ್ಯಾವ ಕಥೆ ಹೇಳುತ್ತವೆ ಎಂಬುದನ್ನು ಚಿಕ್ಕದಾಗಿ ಮತ್ತು ಚೊಕ್ಕವಾಗಿ ತಿಳಿಸಿದ್ದಾರೆ.
Each market movement hints at a different narrative!
📈Stocks surge as if anticipating rate cuts signalling optimism in the economy.
⚱️Gold & Silver shining brighter amid economic uncertainty, acting as a safe haven for investors.
📃Bonds plummet suggesting fears of looming…
— Nigel D’Souza (@Nigel__DSouza) April 6, 2024
ಇವೆಲ್ಲ ಸೂಚನೆಗಳು ನಮ್ಮನ್ನು ತಲೆ ಕೆರೆದುಕೊಳ್ಳುವಂತೆ ಮಾಡಿವೆ ಎಂದು ನಿಗೆಲ್ ಡಿಸೋಜಾ ಹೇಳುತ್ತಾರೆ.
ಇದನ್ನೂ ಓದಿ: ಡಾಲರ್ಗೂ ಚಿನ್ನಕ್ಕೂ ಎಣ್ಣೆ ಶೀಗೆಕಾಯಿ ಸಂಬಂಧ; ಆದರೂ ಡಾಲರ್ ಜೊತೆಜೊತೆಗೆ ಚಿನ್ನದ ಬೆಲೆಯೂ ಏರುತ್ತಿರೋದ್ಯಾಕೆ?
ಮಾರುಕಟ್ಟೆ ತಜ್ಞರು ಸಾಮಾನ್ಯವಾಗಿ ವಿವಿಧ ವಿದ್ಯಮಾನಗಳ ಮೂಲಕ ಟ್ರೆಂಡ್ ಅನ್ನು ಅಂದಾಜು ಮಾಡುತ್ತಾರೆ. ಕೆಲವೊಮ್ಮೆ ಸಹಜ ಪ್ರವೃತ್ತಿಗೆ ವಿರುದ್ಧವಾಗಿ ಮಾರುಕಟ್ಟೆ ವರ್ತಿಸಬಹುದು. ಅಂಥ ಒಂದು ಮಿಶ್ರ ಸಂದರ್ಭ ಈಗ ಇದ್ದಂತಿದೆ. ಮಾರುಕಟ್ಟೆ ಹೀಗೇ ವರ್ತಿಸುತ್ತದೆ, ಇವೇ ಪರಿಣಾಮ ಬೀರುತ್ತವೆ ಎಂದು ಸ್ಪಷ್ಟವಾಗಿ ಊಹಿಸಲು ಕಷ್ಟವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:47 pm, Mon, 8 April 24