ಇನ್ನೂ ಬಾಕಿ ಇದೆ ಮಾರುಕಟ್ಟೆ ಕುಸಿತ; ವಾಹನ, ಎಫ್​ಎಂಸಿಜಿ, ಬ್ಯಾಂಕ್ ಸೆಕ್ಟರ್ ಹುಷಾರ್: ಜೈ ಬಾಲಾ

Stock market prediction: ಕ್ಯಾಷ್ ದಿ ಚವೋಸ್ ಎಕ್ಸಿಕ್ಯೂಟಿವ್ ಜೈ ಬಾಲಾ ಪ್ರಕಾರ ನಿಫ್ಟಿ50ಯಿಂದ 22,800ರಲ್ಲಿ ಪ್ರತಿರೋಧ ಶುರುವಾಗುತ್ತದೆ. 22,280 ಅಂಕ ಮಟ್ಟದವರೆಗೆ ಈ ಪ್ರತಿರೋಧ ಇದೆ. ಸದ್ಯ ನಿಫ್ಟಿ ಇವತ್ತೂ ಕುಸಿದಿದ್ದು, 22,020 ಅಂಕಗಳ ಆಸುಪಾಸಿನಲ್ಲಿ ಗಿರಕಿ ಹೊಡೆಯುತ್ತಿದೆ. ಆಟೊಮೊಬೈಲ್, ಬ್ಯಾಂಕಿಂಗ್ ಮತ್ತು ಎಫ್​ಎಂಸಿಜಿ ಸೆಕ್ಟರ್​ಗಳು ಹೆಚ್ಚು ಹಿನ್ನಡೆ ಕಾಣುವ ಅಪಾಯದಲ್ಲಿವೆ ಎನ್ನುತ್ತಾರೆ ಜೈಬಾಲ.

ಇನ್ನೂ ಬಾಕಿ ಇದೆ ಮಾರುಕಟ್ಟೆ ಕುಸಿತ; ವಾಹನ, ಎಫ್​ಎಂಸಿಜಿ, ಬ್ಯಾಂಕ್ ಸೆಕ್ಟರ್ ಹುಷಾರ್: ಜೈ ಬಾಲಾ
ಮಾರುಕಟ್ಟೆ

Updated on: Mar 03, 2025 | 12:23 PM

ನವದೆಹಲಿ, ಮಾರ್ಚ್ 3: ಷೇರು ಮಾರುಕಟ್ಟೆಗೆ ಇವತ್ತೇ ಶುಭ ಕಾಲ ಪುನಾರಂಭ ಆಗುತ್ತೆ ಎಂದು ಹಲವು ತಜ್ಞರು ಪ್ರತಿ ದಿನವೂ ಹೇಳುತ್ತಲೇ ಬಂದಿದ್ದಾರೆ. ಆದರೆ, ಐದು ತಿಂಗಳಿಂದಲೂ ಮಾರುಕಟ್ಟೆಯಲ್ಲಿ ಅಪ್ಪಟ ಅಸ್ಥಿರತೆ ನೆಲಸಿದೆ. ಯಾರ ಲೆಕ್ಕಾಚಾರವೂ ಇಲ್ಲಿ ತಲೆಕೆಳಗಾಗುವಂತಹ ಓಟವನ್ನು ಕಾಣಬಹುದು. ಷೇರು ಮಾರುಕಟ್ಟೆ ಕುಸಿತ ಇನ್ನೂ ಎಷ್ಟು ದಿನದವರೆಗೆ ನಡೆಯುತ್ತದೆ, ಮತ್ತೆ ಯಾವಾಗ ಚೇತರಿಕೆ ಶುರುವಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಕಷ್ಟ. ಕ್ಯಾಷ್ ದಿ ಚವೋಸ್ ಸಂಸ್ಥೆಯ (CashTheChaos) ಎಕ್ಸಿಕ್ಯೂಟಿವ್ ಜೈ ಬಾಲಾ ಪ್ರಕಾರ ನಿಫ್ಟಿ ಮತ್ತಷ್ಟು ಕುಸಿಯಲಿದೆ. ಹಾಗೆಯೇ, ಅವರು ಯಾವ್ಯಾವ ಸೆಕ್ಟರ್​​ಗಳು ದುರ್ಬಲ ಎನಿಸಿವೆ ಎಂಬುದನ್ನು ತಿಳಿಸಿದ್ದಾರೆ.

ನಿಫ್ಟಿ ಸೂಚ್ಯಂಕಕ್ಕೆ 22,100 ಉತ್ತಮ ಸಪೋರ್ಟ್ ಲೆವೆಲ್ ಎಂದು ಭಾವಿಸಲಾಗಿತ್ತು. ಆದರೆ, ಆ ಮಟ್ಟದಿಂದ ಹೊರಬಂದು 22,000 ಮಟ್ಟಕ್ಕಿಂತ ಕೆಳಗೆ ಕುಸಿಯುವ ಹಾದಿಯಲ್ಲಿದೆ. ಜೈ ಬಾಲ ಅವರು ನಿಫ್ಟಿ ಕುಸಿತ 21,280 ಅಂಕಗಳ ಮಟ್ಟದವರೆಗೆ ಆಗಬಹುದು ಎಂದಿದ್ದಾರೆ. 21,800ರಿಂದ 21,280ರಲ್ಲಿ ನಿಫ್ಟಿ50ಯಿಂದ ಪ್ರಬಲ ಪ್ರತಿರೋಧ ಇದೆ.

ಇದನ್ನೂ ಓದಿ: ಎಲ್​ಟಿಸಿಜಿ ತೆರಿಗೆ ಬೇಡ, ಎಸ್​ಟಿಸಿಜಿ ಅವಧಿ ಹೆಚ್ಚಿಸಿ; ಎಸ್​ಟಿಟಿ ಏರಿಸಿ: ಗುರ್ಮೀತ್ ಚಡ್ಡಾ ಸಲಹೆ

ಈ ಸೆಕ್ಟರ್​ಗಳ ಬಗ್ಗೆ ಹುಷಾರ್: ಜೈ ಬಾಲ

ಎಕನಾಮಿಕ್ಸ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಜೈ ಬಾಲ ಅವರು ಹೆಚ್ಚು ಕುಸಿತ ಕಾಣಲಿರುವ ಮೂರು ಸೆಕ್ಟರ್​ಗಳನ್ನು ಹೆಸರಿಸಿದ್ದಾರೆ. ಅವರ ಪ್ರಕಾರ, ವಾಹನೋದ್ಯಮ (ಆಟೊ), ಬ್ಯಾಂಕಿಂಗ್ ಮತ್ತು ಎಫ್​ಎಂಸಿಜಿ ಸೆಕ್ಟರ್​ಗಳ ಬಗ್ಗೆ ಜಾಗ್ರತೆ ಇರಬೇಕಿದೆ. ಈ ಸೆಕ್ಟರ್​ಗಳು ಹಲವು ವರ್ಷಗಳ ಗರಿಷ್ಠ ಮಟ್ಟ ಕಂಡಿವೆ. ಷೇರು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದ ಆಟೊ ಸೆಕ್ಟರ್ ಮೈಕೊಡವಿ ಮೇಲೇಳುವವರೆಗೂ ಮಾರುಕಟ್ಟೆ ತಿರುಗಿ ನಿಲ್ಲುವುದು ಕಷ್ಟ ಎನ್ನುತ್ತಾರೆ ಅವರು.

ಆಟೊ ಸೆಕ್ಟರ್ ಭರವಸೆ ಕಾಣದಿದ್ದರೆ ಭಾರತದಲ್ಲಿ ಮಾರುಕಟ್ಟೆಯ ಗೂಳಿ ಓಟದ ಸಾಧ್ಯತೆಯೇ ಇಲ್ಲ. ಹೀಗಾಗಿ, ಆಟೊಮೊಬೈಲ್ ಪ್ರಮುಖ ಸೂಚಿಯಾಗಿದೆ ಎನ್ನುವ ಅವರು, ಎಫ್​ಎಂಸಿಜಿ ಸೆಕ್ಟರ್ ಅನ್ನು ಸದ್ಯಕ್ಕೆ ಯಾರೂ ಟಚ್ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: 300 ಕೋಟಿ ರೂಗೆ ಖರೀದಿಸಿ 3 ವರ್ಷದಲ್ಲಿ ಕಂಪನಿ ಮುಚ್ಚಿದ ಫ್ಲಿಪ್​ಕಾರ್ಟ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ