Meta Layoffs: ಮೆಟಾದಿಂದ 11,000 ಉದ್ಯೋಗಿಗಳ ವಜಾ; ಮಾರ್ಕ್ ಝುಕರ್​ಬರ್ಗ್ ಘೋಷಣೆ

| Updated By: Ganapathi Sharma

Updated on: Nov 09, 2022 | 5:47 PM

ಮೆಟಾದ ಇತಿಹಾಸದಲ್ಲೇ ತುಂಬಾ ಕಠಿಣ ನಿರ್ಧಾರ ಕೈಗೊಳ್ಳುತ್ತಿರುವ ಬಗ್ಗೆ ನಾನಿಂದು ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ. ಕಂಪನಿಯ ಉದ್ಯೋಗಿಗಳ ಪ್ರಮಾಣದಲ್ಲಿ ಶೇಕಡಾ 13ರಷ್ಟನ್ನು ಕಡಿತ ಮಾಡಲು ನಿರ್ಧರಿಸಿದ್ದೇನೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಝುಕರ್​ಬರ್ಗ್ ತಿಳಿಸಿದ್ದಾರೆ.

Meta Layoffs: ಮೆಟಾದಿಂದ 11,000 ಉದ್ಯೋಗಿಗಳ ವಜಾ; ಮಾರ್ಕ್ ಝುಕರ್​ಬರ್ಗ್ ಘೋಷಣೆ
ಫೇಸ್​ಬುಕ್ (ಸಂಗ್ರಹ ಚಿತ್ರ)
Follow us on

ನವದೆಹಲಿ: ಸಾಮಾಜಿಕ ಮಾಧ್ಯಮಗಳಾದ ಫೇಸ್​ಬುಕ್ (Facebook), ಇನ್​ಸ್ಟಾಗ್ರಾಮ್ (Instagram) ಹಾಗೂ ಮೆಸೆಂಜಿಂಗ್ ಆ್ಯಪ್ ವಾಟ್ಸ್​ಆ್ಯಪ್ (WhatsApp) ವೇದಿಕೆಗಳನ್ನು ನಿರ್ವಹಿಸುವ ಮೆಟಾ’ (Meta ) 11,000 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮಾರ್ಕ್ ಝುಕರ್​ಬರ್ಗ್ (Mark Zuckerberg ) ಬಹಿರಂಗಪಡಿಸಿದ್ದಾರೆ. ಜಾಗತಿಕವಾಗಿ ಕಂಪನಿಯ ಶೇಕಡಾ 13ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಅವರು ಅಧಿಕೃತ ಬ್ಲಾಗ್​ಪೋಸ್ಟ್​ನಲ್ಲಿ ಉದ್ಯೋಗಿಗಳನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕಂಪನಿಯು ಅಪಾರ ನಷ್ಟ ಅನುಭವಿಸುತ್ತಿದ್ದು ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ವಾರವಷ್ಟೇ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್​​ನಿಂದ 3,500ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು.

ಝುಕರ್​ಬರ್ಗ್ ಹೇಳಿದ್ದು…

ಮೆಟಾದ ಇತಿಹಾಸದಲ್ಲೇ ತುಂಬಾ ಕಠಿಣ ನಿರ್ಧಾರ ಕೈಗೊಳ್ಳುತ್ತಿರುವ ಬಗ್ಗೆ ನಾನಿಂದು ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ. ಕಂಪನಿಯ ಉದ್ಯೋಗಿಗಳ ಪ್ರಮಾಣದಲ್ಲಿ ಶೇಕಡಾ 13ರಷ್ಟನ್ನು ಕಡಿತ ಮಾಡಲು ನಿರ್ಧರಿಸಿದ್ದೇನೆ. 11,000ಕ್ಕೂ ಹೆಚ್ಚು ಪ್ರತಿಭಾವಂತ ಉದ್ಯೋಗಿಗಳು ನಮ್ಮ ತಂಡದಿಂದ ಹೊರಹೋಗಬೇಕಿದೆ. ವೆಚ್ಚವನ್ನು ಕಡಿತಗೊಳಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದನೇ ತ್ರೈಮಾಸಿಕ ಅವಧಿಯಲ್ಲಿ ನೇಮಕಾತಿ ಪ್ರಕ್ರಿಯೆಗೆ ತಡೆ ಹಿಡಿಯಲಾಗಿತ್ತು. ಅದು ಹಾಗೆಯೇ ಮುಂದುವರಿಯಲಿದೆ. ಈ ಮೂಲಕ ಕಂಪನಿಯನ್ನು ಇನ್ನಷ್ಟು ದಕ್ಷವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕಿದೆ ಎಂದು ಝುಕರ್​ಬರ್ಗ್ ಹೇಳಿದ್ದಾರೆ.

ಇದನ್ನೂ ಓದಿ
ಆರೋಗ್ಯ ವಿಮೆ ಪೋರ್ಟ್ ಮಾಡುವುದು ಹೇಗೆ, ಪ್ರಯೋಜನವೇನು? ಇಲ್ಲಿದೆ ವಿವರ
ನಿಮ್ಮ ಪಿಎಫ್​ ಖಾತೆಗೂ ಬಂತೇ ಇಪಿಎಫ್​ ಬಡ್ಡಿ ಹಣ, ಪರಿಶೀಲಿಸುವುದು ಹೇಗೆ? ಇಲ್ಲಿದೆ ನೋಡಿ
Stock Market: ಷೇರುಪೇಟೆ ವಹಿವಾಟಿಗೆ ಇಂದು ಬಿಡುವು; ಕಾರಣವೇನು?
Petrol Price on November 8: ಬಳ್ಳಾರಿಯಲ್ಲಿ ಪೆಟ್ರೋಲ್ ಬೆಲೆ 1 ರೂ. ಕುಸಿತ; ಬೆಂಗಳೂರು ಸೇರಿ ಪ್ರಮುಖ ನಗರಗಳ ಇಂದಿನ ಡೀಸೆಲ್ ದರ ಹೀಗಿದೆ

ಇದನ್ನೂ ಓದಿ: ಟ್ವಿಟರ್​ ನಂತರ ಫೇಸ್​ಬುಕ್​ನಿಂದಲೂ ಉದ್ಯೋಗಿಗಳ ಕೆಲಸ ಕಸಿಯಲು ಸಿದ್ಧತೆ: ದೊಡ್ಡಮಟ್ಟದಲ್ಲಿ ಸಿಬ್ಬಂದಿ ವಜಾ ಪಟ್ಟಿ ಸಿದ್ಧಪಡಿಸಿದ ಮೆಟಾ

ಈ ನಿರ್ಧಾರಗಳನ್ನು ಯಾಕೆ ತೆಗೆದುಕೊಳ್ಳಬೇಕಾಯಿತು ಮತ್ತು ನಾವು ಯಾಕೆ ಈ ಸ್ಥಿತಿಗೆ ಬಂದೆವು ಎಂಬುದನ್ನು ವಿವರಿಸುವ ಹೊಣೆಗಾರಿಕೆ ನನ್ನದು. ಇದು ಎಲ್ಲರಿಗೂ ಕಠಿಣ ಸಮಯವಾಗಿದೆ ಎಂಬುದು ನನಗೆ ತಿಳಿದಿದೆ ಮತ್ತು ಇದರಿಂದ ತೊಂದರೆಗೊಳಗಾದವರ ಬಗ್ಗೆ ವಿಷಾದವಿದೆ ಎಂದು ಅವರು ಹೇಳಿದ್ದಾರೆ.

ಪ್ರತಿಯೊಬ್ಬರಿಗೂ ಬೀಳ್ಕೊಡುಗೆ ಮಾಡುವುದಕ್ಕಾಗಿ ಇ-ಮೇಲ್ ವಿಳಾಸವನ್ನು ಉಳಿಸಿಕೊಳ್ಳಲಿದ್ದೇವೆ. ಉದ್ಯೋಗ ಕಡಿತದಿಂದ ತೊಂದರೆಗೆ ಒಳಗಾಗುವ ಉದ್ಯೋಗಿಯು ಪ್ರಶ್ನೆಗಳನ್ನು ಕೇಳಲು ಮತ್ತು ಇತರರೊಂದಿಗೆ ಸಂವಹನ ನಡೆಸಲು ಅರ್ಹರಾಗಿರುತ್ತಾರೆ. ಅದಕ್ಕೆ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಜಾಗೊಳ್ಳುವವರಿಗೆ 16 ವಾರಗಳ ಬೇರ್ಪಡಿಕೆ ವೇತನ

ವಜಾಗೊಳ್ಳುವ ಅಮೆರಿಕದ ಉದ್ಯೋಗಿಗಳಿಗೆ 16 ವಾರಗಳ ಬೇರ್ಪಡಿಕೆ ವೇತನ (Severance pay) ನೀಡಲಾಗುವುದು ಎಂದೂ ಝುಕರ್​ಬರ್ಗ್ ಮಾಹಿತಿ ನೀಡಿದ್ದಾರೆ. ಇಂಥ ಉದ್ಯೋಗಿಗಳ ಕುಟುಂಬದವರಿಗೆ ಒದಗಿಸಲಾಗಿರುವ ಆರೋಗ್ಯ ಸೌಲಭ್ಯಗಳು 6 ತಿಂಗಳವರೆಗೆ ಮುಂದುವರಿಯಲಿದೆ ಎಂದೂ ಅವರು ಹೇಳಿದ್ದಾರೆ.

‘ವೀಸಾ ಸಮಸ್ಯೆಗಳಿದ್ದರೆ ಪರಿಹರಿಸಲು ಬೆಂಬಲ’

ನೀವು ವೀಸಾ ಪಡೆದು ಇಲ್ಲಿದ್ದರೆ (ಅಮೆರಿಕ) ಇದು ವಿಶೇಷವಾಗಿ ಕಷ್ಟಕರ ಸಮಯ ಎಂಬುದು ಎಂದು ನನಗೆ ತಿಳಿದಿದೆ. ಉದ್ಯೋಗದಿಂದ ತೆರವಾಗುವುದಕ್ಕೂ ಮೊದಲು ನೊಟೀಸ್ ಅವಧಿ ಮತ್ತು ವೀಸಾ ಸಂಬಂಧಿತ ಕೆಲವು ಗ್ರೇಸ್ ಅವಧಿಗಳು ನಿಮಗೆ ದೊರೆಯಲಿವೆ. ಅಂದರೆ ಪ್ರತಿಯೊಬ್ಬರೂ ತಮ್ಮ ವಲಸೆ ಸ್ಥಿತಿಗತಿ ಹಾಗೂ ಸಂಬಂಧಿತ ಯೋಜನೆಗಳನ್ನು ರೂಪಿಸಲು ಮತ್ತು ಅದಕ್ಕಾಗಿ ಕಾರ್ಯನಿರ್ವಹಿಸಲು ಸಮಯಾವಕಾಶ ದೊರೆಯಲಿದೆ. ಇದಕ್ಕಾಗಿ ವ್ಯವಸ್ಥೆ ಮಾಡಲಾಗುವುದು ಎಂದು ಝುಕರ್​ಬರ್ಗ್ ಭರವಸೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:38 pm, Wed, 9 November 22