MRF: ಟೈರ್ ಕಂಪೆನಿಗಳಿಗೆ ಸಿಸಿಐ ಜುಲ್ಮಾನೆ; 622 ಕೋಟಿ ದಂಡದ ವಿರುದ್ಧ ಕಾನೂನು ಹೋರಾಟಕ್ಕೆ ಎಂಆರ್​ಎಫ್ ನಿರ್ಧಾರ

| Updated By: Srinivas Mata

Updated on: Feb 04, 2022 | 7:27 AM

ಭಾರತದ ಸ್ಪರ್ಧಾ ಆಯೋಗ ವಿಧಿಸಿರುವ ರೂ. 622 ಕೋಟಿ ಜುಲ್ಮಾನೆ ಆದೇಶ ವಿರುದ್ಧ ಇರುವ ಕಾನೂನು ಆಯ್ಕೆಗಳ ಹುಡುಕಾಟದಲ್ಲಿ ಟೈರ್​ ಕಂಪೆನಿ ಎಂಆರ್​ಎಫ್ ತೊಡಗಿಕೊಂಡಿದೆ.

MRF: ಟೈರ್ ಕಂಪೆನಿಗಳಿಗೆ ಸಿಸಿಐ ಜುಲ್ಮಾನೆ; 622 ಕೋಟಿ ದಂಡದ ವಿರುದ್ಧ ಕಾನೂನು ಹೋರಾಟಕ್ಕೆ ಎಂಆರ್​ಎಫ್ ನಿರ್ಧಾರ
ಸಾಂದರ್ಭಿಕ ಚಿತ್ರ
Follow us on

ಭಾರತ ಸ್ಪರ್ಧಾ ಆಯೋಗ (Competition Commission Of India) ಕಂಪೆನಿಯ ಮೇಲೆ ವಿಧಿಸಿರುವ 622.09 ಕೋಟಿ ರೂಪಾಯಿ ದಂಡದ ಆದೇಶ ಪ್ರಶ್ನಿಸಲು ಕಾನೂನು ಆಯ್ಕೆಗಳನ್ನು ಹುಡುಕುವುದಾಗಿ ಫೆಬ್ರವರಿ 3ರ ಗುರುವಾರದಂದು ಪ್ರಮುಖ ಟೈರ್ ತಯಾರಕ ಎಂಆರ್​ಎಫ್​ (MRF) ಲಿಮಿಟೆಡ್ ಹೇಳಿದೆ. “ದರ, ಉತ್ಪಾದನೆಯ ನಿಯಂತ್ರಣದಲ್ಲಿ ತೊಡಗಿದ್ದಕ್ಕಾಗಿ” ನಾಲ್ಕು ಇತರ ಟೈರ್ ತಯಾರಕರೊಂದಿಗೆ ಎಂಆರ್​ಎಫ್​ಗೆ ಕೂಡ ಒಂದು ದಿನ ಮುಂಚಿತವಾಗಿ ದಂಡವನ್ನು ಘೋಷಿಸಲಾಗಿದೆ. ನಿಯಂತ್ರಕ ಫೈಲಿಂಗ್‌ನಲ್ಲಿ, ಸಿಸಿಐ ಆದೇಶವು “ಸತ್ಯ ಮತ್ತು ಕಾನೂನಿನ ಸರಿಯಾದ ಮೌಲ್ಯಮಾಪನವನ್ನು ಆಧರಿಸಿಲ್ಲ,” ಈ ಸಂಬಂಧವಾಗಿ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಎಂಆರ್​ಎಫ್​ ಸೇರಿಸಿದೆ. “ಎಂಆರ್​ಎಫ್ ತನ್ನ ಎಲ್ಲ ಭಾಗೀದಾರರಿಗೆ ಭರವಸೆ ನೀಡಲು ಬಯಸುತ್ತದೆ, ತನ್ನ ಉದ್ಯಮದ ಪದ್ಧತಿಗಳಲ್ಲಿ ಉನ್ನತ ಮಟ್ಟದ ಆಡಳಿತ ಅನುಸರಿಸುತ್ತದೆ,” ಎಂದು ಅದು ಹೇಳಿದೆ.

ಫೆಬ್ರವರಿ 2ನೇ ತಾರೀಕಿನಂದು ಭಾರತ ಸ್ಪರ್ಧಾ ಆಯೋಗದಿಂದ ಅಪೋಲೊ ಟೈರ್ಸ್‌ಗೆ 425.53 ಕೋಟಿ ರೂಪಾಯಿ, ಸಿಯೆಟ್ ಲಿಮಿಟೆಡ್‌ 252.16 ಕೋಟಿ ರೂಪಾಯಿ, ಜೆಕೆ ಟೈರ್‌ ರೂ. 309.95 ಕೋಟಿ ಮತ್ತು ಬಿರ್ಲಾ ಟೈರ್‌ ಮೇಲೆ ರೂ 178.33 ಕೋಟಿ, ಜೊತೆಗೆ ಎಂಆರ್‌ಎಫ್​ಗೆ 622.09 ಕೋಟಿ ರೂ. ದಂಡ ವಿಧಿಸಿದೆ. “ಟೈರ್ ತಯಾರಕರು ತಮ್ಮ ಸಂಘದ ವೇದಿಕೆ ಮೂಲಕ ಬೆಲೆ-ಸೂಕ್ಷ್ಮ ಡೇಟಾವನ್ನು ವಿನಿಮಯ ಮಾಡಿಕೊಂಡಿದ್ದಾರೆ. ಅವುಗಳೆಂದರೆ, ಆಟೋಮೋಟಿವ್ ಟೈರ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ​​(ATMA) ಟೈರ್‌ಗಳ ಬೆಲೆಗಳ ಮೇಲೆ ಸಾಮೂಹಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ,” ಎಂದು ನ್ಯಾಯೋಚಿತ ವ್ಯಾಪಾರ ನಿಯಂತ್ರಕ ಗಮನಿಸಿದೆ.

2011-2012ರ ಅವಧಿಯಲ್ಲಿ ಬೆಲೆ, ಸ್ಪರ್ಧೆ ಸೇರಿ ಸ್ಪರ್ಧಾತ್ಮಕ ಕಾಯ್ದೆಯ ಸೆಕ್ಷನ್ 3ರ ನಿಬಂಧನೆಗಳ ಉಲ್ಲಂಘನೆಗಾಗಿ, ಅಂದರೆ ಆ ಸ್ಪರ್ಧಾತ್ಮಕ-ವಿರೋಧಿ ಒಪ್ಪಂದಗಳನ್ನು ನಿಷೇಧಿಸುವ ವಿಚಾರವಾಗಿ ಟೈರ್ ತಯಾರಕರು ಮತ್ತು ATMA ತಪ್ಪಿತಸ್ಥ ಎಂದು ಸಿಸಿಐ ಹೇಳಿದೆ. “ರಿಯಲ್ ಟೈಮ್ ಆಧಾರದ ಮೇಲೆ ಉತ್ಪಾದನೆ, ದೇಶೀಯ ಮಾರಾಟ ಮತ್ತು ಟೈರ್‌ಗಳ ರಫ್ತಿನ ಕುರಿತು ಕಂಪೆನಿವಾರು ಮತ್ತು ವಿಭಾಗವಾರು ಡೇಟಾ (ಮಾಸಿಕ ಮತ್ತು ಅಕ್ಯುಮಲೇಟಿವ್ ಎರಡೂ) ATMA ಸಂಗ್ರಹಿಸಿದೆ ಮತ್ತು ಒಗ್ಗೂಡಿಸಿದೆ ಎಂದು ಆಯೋಗವು ಕಂಡುಹಿಡಿದಿದೆ,” ಎಂಬುದಾಗಿ ಸಿಸಿಐನಿಂದ ಸೇರಿಸಲಾಗಿದೆ. ಟೈರ್ ತಯಾರಕರಿಗೆ ವಿಧಿಸಲಾದ ದಂಡವನ್ನು ಹೊರತುಪಡಿಸಿ ATMAಗೆ 0.084 ಕೋಟಿ ರೂಪಾಯಿ ದಂಡವನ್ನು ವಿಧಿಸಲಾಗಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಗೂಗಲ್ ಅನ್ಯಾಯ ಮಾಡುತ್ತಿದೆಯೆಂದು​ ದೂರು ಕೊಟ್ಟ ಡಿಜಿಟಲ್​ ನ್ಯೂಸ್​ ಪ್ರಕಾಶಕರ ಸಂಘ; ಸಿಸಿಐನಿಂದ ತನಿಖೆಗೆ ಆದೇಶ