ITC Q3 Results: ಐಟಿಸಿ ಮೂರನೇ ತ್ರೈಮಾಸಿಕ ಲಾಭ 4,156 ಕೋಟಿ ರೂಪಾಯಿ; ರೂ. 5.25 ಮಧ್ಯಂತರ ಲಾಭಾಂಶ ಘೋಷಣೆ

ಐಟಿಸಿ ಕಂಪೆನಿಯ 2022ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇ 12.7ರಷ್ಟು ಹೆಚ್ಚಳವಾಗಿ 4156 ಕೋಟಿ ರೂಪಾಯಿ ಮುಟ್ಟಿದೆ. 5.25 ರೂಪಾಯಿ ಮಧ್ಯಂತರ ಲಾಭಾಂಶ ದಾಖಲಾಗಿದೆ.

ITC Q3 Results: ಐಟಿಸಿ ಮೂರನೇ ತ್ರೈಮಾಸಿಕ ಲಾಭ 4,156 ಕೋಟಿ ರೂಪಾಯಿ; ರೂ. 5.25 ಮಧ್ಯಂತರ ಲಾಭಾಂಶ ಘೋಷಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Feb 03, 2022 | 10:23 PM

ಭಾರತದ ಅತಿ ದೊಡ್ಡ ತಯಾರಕ ಮತ್ತು ಎಫ್​ಎಂಸಿಜಿ ಪ್ರಮುಖ ಕಂಪೆನಿ ಐಟಿಸಿ (ITC) ಲಿಮಿಟೆಡ್​ನ ಅಕ್ಟೋಬರ್​ನಿಂದ ಡಿಸೆಂಬರ್​ ತ್ರೈಮಾಸಿಕದಲ್ಲಿ ಫೆಬ್ರವರಿ 3ರಂದು ಏಕೀಕೃತ ತೆರಿಗೆ ನಂತರದ ಲಾಭ (PAT) 4,156.20 ಕೋಟಿ ರೂಪಾಯಿ ಮಾಡಿದೆ. ಒಂದು ವರ್ಷದ ಹಿಂದಿನ ಇದೇ ತ್ರೈಮಾಸಿಕದ ಅವಧಿಯಲ್ಲಿ 3,687.88 ಕೋಟಿ ರೂಪಾಯಿ ಆಗಿದ್ದು, ಅಲ್ಲಿಂದ ಶೇ 12.7ರಷ್ಟು ಏರಿಕೆ ದಾಖಲಿಸಿದೆ. ಜುಲೈನಿಂದ ಸೆಪ್ಟೆಂಬರ್​ಗೆ ಕೊನೆಯಾದ ಕಳೆದ ತ್ರೈಮಾಸಿಕಕ್ಕೆ 3,697.18 ಕೋಟಿ ರೂಪಾಯಿ ಬಂದಿತ್ತು. ಏಕೀಕೃತ ಆದಾಯ (ಅಬಕಾರಿ ಸುಂಕ ಹೊರತುಪಡಿಸಿ) ಶೇ 32.5ರಷ್ಟು ಹೆಚ್ಚಾಗಿ, 15,862.32 ಕೋಟಿ ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 11,969 ಕೋಟಿ ರೂಪಾಯಿ ಬಂದಿತ್ತು.

2021ರ ಸೆಪ್ಟೆಂಬರ್​ಗೆ ಕೊನೆಯಾದ ತ್ರೈಮಾಸಿಕಕ್ಕೆ 12,533.6 ಕೋಟಿ ರೂಪಾಯಿ ಆಗಿದೆ. ಐಟಿಸಿಯು ಸಿಗರೇಟ್​ ಉದ್ಯಮದಲ್ಲಿ ಬಲವಾದ ಬೇಡಿಕೆ ಕಂಡಿದ್ದು, ಪ್ರಮಾಣವು ಕೊವಿಡ್​ ಮುಂಚಿನ ಹಂತವು ತಲುಪಿದ್ದು, ಎಫ್​ಎಂಸಿಜಿ ಮಾರಾಟ ಉತ್ತೇಜನ ಹಾಗೂ ಸಂಚಾರ ಮತ್ತು ಆಕ್ಯುಪೆನ್ಸಿಯು ಹೆಚ್ಚಾಗುತ್ತಿದ್ದಂತೆ ಹೋಟೆಲ್ ಉದ್ಯಮದಲ್ಲಿ ಬೆಳವಣಿಗೆ ಕಂಡಿದೆ.

ಕಂಪೆನಿಯು 31 ಮಾರ್ಚ್ 2022ರಂದು ಕೊನೆಗೊಳ್ಳುವ ಹಣಕಾಸು ವರ್ಷಕ್ಕೆ ಪ್ರತಿ 1 ರೂಪಾಯಿ ಸಾಮಾನ್ಯ ಷೇರಿಗೆ ರೂ. 5.25ರ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. ಡಿವಿಡೆಂಡ್ ಪಾವತಿಯ ದಾಖಲೆ ದಿನಾಂಕವನ್ನು ಫೆಬ್ರವರಿ 15, 2022ರಂದು ನಿಗದಿಪಡಿಸಲಾಗಿದೆ ಮತ್ತು ಲಾಭಾಂಶವು ಮಾರ್ಚ್ 4, 2022ರಂದು ಅರ್ಹ ಷೇರುದಾರರಿಗೆ ಪಾವತಿಸಲಾಗುತ್ತದೆ.

ಫೆಬ್ರವರಿ 3ರಂದು ಎನ್​ಎಸ್​ಇಯಲ್ಲಿ ಅದರ ಹಿಂದಿನ ಅಂತ್ಯದ ಕೊನೆಗಿಂತ 2.30 ರೂಪಾಯಿಗಳ ಏರಿಕೆಯೊಂದಿಗೆ ಸ್ಟಾಕ್ ರೂ. 234.45ಕ್ಕೆ ಕೊನೆಗೊಂಡಿತು. ಇದು ಕಳೆದ ಒಂದು ವರ್ಷದಲ್ಲಿ ಶೇ 8ರಷ್ಟು ಆದಾಯವನ್ನು ಗಳಿಸಿದೆ ಮತ್ತು ಈ ಹಣಕಾಸು ವರ್ಷದಲ್ಲಿ ಮತ್ತು ಒಂದು ತಿಂಗಳ ಹಿಂದಿನಿಂದ ನೋಡಿದರೆ ಶೇ 7ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: Inox: ಥೇಟರ್​ನೊಳಗೆ ಆಹಾರ, ಪಾನೀಯ ಪೂರೈಕೆಗೆ ಐಟಿಸಿ ಜತೆಗೆ ಐನಾಕ್ಸ್​ ಸಹಯೋಗ

Published On - 10:18 pm, Thu, 3 February 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ