ಕ್ರೆಡಿಟ್ ಗ್ಯಾರಂಟಿ: ಎಂಎಸ್​ಎಂಇಗಳಿಗೆ 100 ಕೋಟಿ ರೂವರೆಗೂ ಅಡಮಾನರಹಿತ ಸಾಲ: ನಿರ್ಮಲಾ ಸೀತಾರಾಮನ್

|

Updated on: Nov 11, 2024 | 4:23 PM

Credit guarantee scheme: ಕೇಂದ್ರ ಸರ್ಕಾರ ಎಂಎಸ್​ಎಂಇಗಳಿಗೆ ಉತ್ತೇಜನ ನೀಡಲು ಕ್ರೆಡಿಟ್ ಗ್ಯಾರಂಟಿ ಸ್ಕೀಮ್ ಮಾಡಿದೆ. ಇನ್ನು ಕಳೆದ ಬಜೆಟ್​ನಲ್ಲಿ ಪ್ರಕಟಿಸಲಾಗಿತ್ತು. ಶೀಘ್ರದಲ್ಲೇ ಜಾರಿಗೆ ಬರುವ ಸಾಧ್ಯತೆ ಇದೆ. ಇದರಡಿಯಲ್ಲಿ ಎಂಎಸ್​ಎಂಇಗಳಿಗೆ ಸರ್ಕಾರವೇ 100 ಕೋಟಿ ರೂವರೆಗಿನ ಸಾಲಕ್ಕೆ ಗ್ಯಾರಂಟಿ ಒದಗಿಸಲಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕ್ರೆಡಿಟ್ ಗ್ಯಾರಂಟಿ: ಎಂಎಸ್​ಎಂಇಗಳಿಗೆ 100 ಕೋಟಿ ರೂವರೆಗೂ ಅಡಮಾನರಹಿತ ಸಾಲ: ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us on

ಬೆಂಗಳೂರು, ನವೆಂಬರ್ 11: ಸರ್ಕಾರಿ ಬ್ಯಾಂಕುಗಳು ಹೊಸ ಸಾಲ ಮೌಲ್ಯಮಾಪನ ಮಾದರಿ ರೂಪಿಸಿದ್ದು, ಆ ವ್ಯವಸ್ಥೆಯಡಿ ಎಂಎಸ್​ಎಂಇಗಳಿಗೆ ಅಡಮಾನರಹಿತವಾಗಿ 100 ಕೊಟಿ ರೂಗಳವರೆಗೆ ಸಾಲ ಸಿಗುವ ಅವಕಾಶ ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಮೊನ್ನೆ ನಡೆದ ನ್ಯಾಷನಲ್ ಎಂಎಸ್​ಎಂಇ ಕ್ಲಸ್ಟರ್ ಔಟ್​ರೀಚ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಹೊಸ ಕ್ರೆಡಿಟ್ ಗ್ಯಾರಂಟೀ ಸ್ಕೀಮ್​ನಿಂದ ಎಂಎಸ್​ಎಂಇಗಳ ಫಂಡಿಂಗ್ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕ್ರೆಡಿಟ್ ಗ್ಯಾರಂಟಿ ಸ್ಕೀಮ್ ಶೀಘ್ರದಲ್ಲೇ ಕ್ಯಾಬಿನೆಟ್ ಅವಗಾಹನೆಗೆ ಹೋಗಲಿದೆ ಎಂದಿದ್ದಾರೆ.

‘ಟರ್ಮ್ ಲೋನ್​ಗಳು ಸಿಗುವುದಿಲ್ಲ. ಮೆಷಿನರಿಗಳಿಗೆ ಲೋನ್​ಗಳು ಸಿಗುವುದಿಲ್ಲ ಎಂಬುದು ಎಂಎಸ್​ಎಂಇಗಳಿಗೆ ಮೊದಲಿಂದಲೂ ಇದ್ದ ಅಳಲು. ಬಜೆಟ್​ನಲ್ಲಿ ಪ್ರಕಟಿಸಲಾದ ಈ ಕ್ರೆಡಿಟ್ ಗ್ಯಾರಂಟಿ ಸ್ಕೀಮ್​ನಲ್ಲಿ ಎಂಎಸ್​ಎಂಇಗಳಿಗೆ 100 ಕೋಟಿ ರೂವರೆಗೆ ಸಾಲಕ್ಕೆ ಗ್ಯಾಂರಂಟಿ ಸಿಗುತ್ತದೆ. ನೀವು ಬ್ಯಾಂಕ್​ನಿಂದ 100 ಕೋಟಿ ರೂಗೂ ಹೆಚ್ಚು ಮೊತ್ತದ ಸಾಲ ಪಡೆಯಲು ಹೋದರೂ ಸರ್ಕಾರದಿಂದಲೇ ನೂರು ಕೋಟಿ ರೂಗೆ ಗ್ಯಾರಂಟಿ ಕೊಡಲಾಗುತ್ತದೆ. ಅಂದರೆ, ಅಡಮಾನರಹಿತವಾಗಿ ನೀವು 100 ಕೋಟಿ ರೂವರೆಗೆ ಸಾಲ ಪಡೆಯಬಹುದು’ ಎಂದು ನಿರ್ಮಲಾ ಸೀತಾರಾಮನ್ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: ಸೋಲಾರ್ ಮ್ಯಾನುಫ್ಯಾಕ್ಚರಿಂಗ್: ಬೇರೆ ದೇಶಗಳಿಗೆ 20 ವರ್ಷ; ಭಾರತಕ್ಕೆ ನಾಲ್ಕೈದು ವರ್ಷ ಸಾಕು: ವಿನೀತ್ ಮಿಟ್ಟಲ್

ಈ ಬ್ಯಾಂಕುಗಳೇ ಹೊಸ ಮಾದರಿಯ ಕ್ರೆಡಿಟ್ ಅಸೆಸ್ಮೆಂಟ್ ಮಾಡಲ್ ಅನ್ನು ರೂಪಿಸಲಿವೆ. ಪ್ರತಿಯೊಂದು ಬ್ಯಾಂಕ್ ಕೂಡ ತನ್ನದೇ ರೀತಿಯ ಕ್ರೆಡಿಟ್ ಅಸೆಸ್ಮೆಂಟ್ ಮಾಡಲ್ ರೂಪಿಸುತ್ತದೆ. ಇದರಿಂದ ಎಂಎಸ್​ಎಂಇಗಳಿಗೆ ನೆರವಾಗಬಲ್ಲುದು ಎಂದು ಹಣಕಾಸು ಸಚಿವೆ ಮಾಹಿತಿ ನೀಡಿದ್ದಾರೆ.

ಆರಂಭವಾಗಿರುವ ಸಿಡ್ಬಿ (SIDBI) ಬ್ಯಾಂಕ್​ನ ಆರು ಹೊಸ ಶಾಖೆಗಳ ವ್ಯಾಪ್ತಿಗೆ 20 ಕೈಗಾರಿಕಾ ಕ್ಲಸ್ಟರ್​ಗಳು ಬರುತ್ತವೆ. ಇದರಿಂದ ಕರ್ನಾಟಕದಲ್ಲಿ ಎಂಎಸ್​ಎಂಇಗಳಿಗೆ ಹೆಚ್ಚು ಬಲ ಸಿಗಬಹುದು. ಕರ್ನಾಟಕದಲ್ಲಿರುವ ಸಿಡ್ಬಿ ಬ್ಯಾಂಕ್ ಶಾಖೆಗಳ ಪೋರ್ಟ್​ಫೋಲಿಯೋದಲ್ಲಿ 1,169 ಕೋಟಿ ರೂ ಇದೆ. ಅನುತ್ಪಾದಕ ಸಾಲ ಆಸ್ತಿ ಯಾವುದೂ ಇಲ್ಲ. ಸಿಡ್​ಬಿಯ ನೇರ ಹಣಕಾಸು ಸೌಲಭ್ಯಗಳಿಂದಾಗಿ ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಕೈಗಾರಿಕೆಗಳ ಸಾಮರ್ಥ್ಯ ಬಲಗೊಳ್ಳಲಿದೆ ಎಂದು ಸಚಿವೆ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲೂ ತಲೆ ಎತ್ತಲಿದೆ ಟ್ರಂಪ್ ಟವರ್; ಅಮೆರಿಕ ಬಿಟ್ಟರೆ ಭಾರತದಲ್ಲೇ ಹೆಚ್ಚು

ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವಗಳಲ್ಲಿ ಇಕಾಮರ್ಸ್ ಟ್ರೇಡ್ ಹಬ್​ಗಳನ್ನು ಸ್ಥಾಪಿಸಲಾಗುವುದು. ಇದರಿಂದ ಅಂತರರಾಷ್ಟ್ರೀಯ ವ್ಯಾಪಾರ ಮತ್ತು ರಫ್ತು ಸಂಬಂಧಿತ ಸೇವೆಗಳಿಗೆ ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ