AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಲಾರ್ ಮ್ಯಾನುಫ್ಯಾಕ್ಚರಿಂಗ್: ಬೇರೆ ದೇಶಗಳಿಗೆ 20 ವರ್ಷ; ಭಾರತಕ್ಕೆ ನಾಲ್ಕೈದು ವರ್ಷ ಸಾಕು: ವಿನೀತ್ ಮಿಟ್ಟಲ್

Solar manufacturing ecosystem in India: ಸೌರಶಕ್ತಿ ಉತ್ಪಾದನೆ ಕಾರ್ಯ ಭಾರತದಲ್ಲಿ ಸಾಕಷ್ಟು ನಡೆಯುತ್ತಿದೆ. ಆದರೆ, ಅದಕ್ಕೆ ಬೇಕಾದ ಉಪಕರಣಗಳ ಲಭ್ಯತೆ ಭಾರತದಲ್ಲಿ ಇಲ್ಲ. ವಿದೇಶಗಳ ಮೇಲೆ ಅವಲಂಬಿತವಾಗುವ ಸ್ಥಿತಿ ಇದೆ. ಈಗ ಪರಿಸ್ಥಿತಿ ಬದಲಾಗುತ್ತಿದೆ. ನಾಲ್ಕೈದು ವರ್ಷದಲ್ಲಿ ಸೌರಶಕ್ತಿ ಉತ್ಪಾದನೆಯಲ್ಲಿ ಪೂರ್ಣವಾಗಿ ಸ್ವಾವಲಂಬನೆ ಸಾಧಿಸಬಲ್ಲೆವು ಎಂದು ಉದ್ಯಮಿ ವಿನೀತ್ ಮಿಟ್ಟಲ್ ಹೇಳಿದ್ದಾರೆ.

ಸೋಲಾರ್ ಮ್ಯಾನುಫ್ಯಾಕ್ಚರಿಂಗ್: ಬೇರೆ ದೇಶಗಳಿಗೆ 20 ವರ್ಷ; ಭಾರತಕ್ಕೆ ನಾಲ್ಕೈದು ವರ್ಷ ಸಾಕು: ವಿನೀತ್ ಮಿಟ್ಟಲ್
ಸೋಲಾರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 11, 2024 | 2:30 PM

Share

ನವದೆಹಲಿ, ನವೆಂಬರ್ 11: ಸೋಲಾರ್ ಉಪಕರಣಗಳ ತಯಾರಿಕೆಯ ವ್ಯವಸ್ಥೆ ನಿರ್ಮಿಸಲು ಬೇರೆ ದೇಶಗಳಿಗೆ 20 ವರ್ಷ ಬೇಕಾದವು. ಆದರೆ, ಭಾರತದಲ್ಲಿ ನಾಲ್ಕೈದು ವರ್ಷದಲ್ಲಿ ಇದು ಸಾಧ್ಯವಾಗಲಿದೆ ಎಂದು ಅವಾಡ ಗ್ರೂಪ್​ನ ಸಂಸ್ಥಾಪಕ ಮತ್ತು ಛೇರ್ಮನ್ ಆದ ವಿನೀತ್ ಮಿಟ್ಟಲ್ ಅಭಿಪ್ರಾಯಪಟ್ಟಿದ್ದಾರೆ. ಯುಎಇ ದೇಶದ ಅಬುಧಾಬಿಯಲ್ಲಿ ನಡೆದ ಕಾರ್ಯಕ್ರಮವೊಮದರಲ್ಲಿ ಮಾತನಾಡುತ್ತಿದ್ದ ವಿನೀತ್, ಬಹಳ ಶೀಘ್ರದಲ್ಲಿ ಭಾರತವು ಸೌರಶಕ್ತಿ ಉತ್ಪಾದನೆಯಲ್ಲಿ ಪೂರ್ಣ ಸ್ವಾವಲಂಬನೆ ಸಾಧಿಸಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೌರಶಕ್ತಿ ಉತ್ಪಾದನೆಯ ಉಪಕರಣಗಳಿಗಾಗಿ ಭಾರತೀಯ ಕಂಪನಿಗಳು ಬೇರೆ ದೇಶಗಳ ಮೇಲೆ ಅವಲಂಬಿತವಾಗಿವೆ. ಇದು ಭಾರತೀಯ ಸೌರ ಸಂಸ್ಥೆಗಳಿಗೆ ಹಿನ್ನಡೆಯಂತೂ ತರುತ್ತಿದೆ. ಈ ಪರಿಸ್ಥಿತಿ ಬಹಳ ಬೇಗ ಬದಲಾಗಲಿದೆ. ಸೌರಶಕ್ತಿ ಉತ್ಪಾದನೆಯ ಸಪ್ಲೈ ಚೈನ್​ನಲ್ಲಿರುವ ಪ್ರತಿಯೊಂದು ಭಾಗದ ಪೂರ್ಣ ವ್ಯವಸ್ಥೆಯನ್ನು ನಿರ್ಮಿಸಲು ಹಲವು ದೇಶಗಳು ಕಳೆದ 20 ವರ್ಷಗಳಿಂದ ಮಾಡಿದ ಕಾರ್ಯವನ್ನು ಭಾರತ ಮುಂದಿನ ನಾಲ್ಕೈದು ವರ್ಷದಲ್ಲೇ ಸಾಧಿಸಲಿದೆ ಎಂದು ಮಿಟ್ಟಲ್ ಹೇಳಿದ್ದಾರೆ.

ಇದನ್ನೂ ಓದಿ: ಮೆಡಿಕಲ್ ಡಿವೈಸ್ ಕ್ಷೇತ್ರದ ಬೆಳವಣಿಗೆಗೆ ಪುಷ್ಟಿ ಕೊಡಲು ಸರ್ಕಾರದಿಂದ ಯೋಜನೆ; ಮೂರು ವರ್ಷಗಳಿಗೆ 500 ಕೋಟಿ ರೂ ವಿನಿಯೋಗ

ವಿನೀತ್ ಮಿಟ್ಟಲ್ ಅವರ ಅವಾಡ ಗ್ರೂಪ್ ಸಂಸ್ಥೆ ಮರುಬಳಕೆ ಇಂಧ ಉತ್ಪಾದನೆಯ ಕ್ಷೇತ್ರದ ಬಿಸಿನೆಸ್ ಹೊಂದಿದೆ. ಮುಂಬೈನಲ್ಲಿ ಇದರ ಕಚೇರಿ ಇದ್ದು, ಸೌರಶಕ್ತಿ, ವಾಯುಶಕ್ತಿ, ಹಸಿರು ಇಂಧನ ಇತ್ಯಾದಿ ಬಿಸಿನೆಸ್ ನಡೆಸುತ್ತಿದೆ. ತಮ್ಮ ಕ್ಷೇತ್ರದಲ್ಲಿ ಉಪಕರಣಗಳ ತಯಾರಿಕೆಯಲ್ಲಿ ದೇಶವು ಸ್ವಾವಲಂಬನೆ ಹೊಂದಬೇಕು ಎಂಬುದು ಈ ಸಂಸ್ಥೆಯ ಆಶಯ. ‘ಫ್ಯಾಕ್ಟರಿಯ ಒಂದು ಭಾಗದಿಂದ ವೇಫರ್ ಹಾಕಿದರೆ, ಮತ್ತೊಂದು ಭಾಗದಿಂದ ಸೋಲಾರ್ ಪ್ಯಾನಲ್ ಬರುತ್ತದೆ. ಅಂಥದ್ದೊಂದು ಕ್ಯಾಂಪಸ್ ಅನ್ನು ಸ್ಥಾಪಿಸುತ್ತಿದ್ದೇವೆ. ಇದು ರಿನಿವಬಲ್ ಎನರ್ಜಿ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಆಗಬಲ್ಲುದು’ ಎಂದು ತಿಳಿಸಿದ್ದಾರೆ.

ಹೈಡ್ರೋಜನ್ ಇಂಧನದ ಉಪಯುಕ್ತತೆ ಬಗ್ಗೆ ಮಾತನಾಡಿದ ಅವರು, ಅದರ ಇಕೋಸಿಸ್ಟಂ ಸರಿಯಾಗಿ ಬೆಳೆಯದ ಕಾರಣ ಉತ್ಪಾದನಾ ವೆಚ್ಚ ಬಹಳ ಹೆಚ್ಚಿದೆ. ಇದು ಕಡಿಮೆ ಆಗಬೇಕು ಎನ್ನುವುದು ಅವರ ಅನಿಸಿಕೆ.

ಇದನ್ನೂ ಓದಿ: ಗುಜರಿ ಅಂತ ಜರೀಬೇಡಿ… ಗುಜರಿ ಮಾರಿ ಸರ್ಕಾರ ಗಳಿಸಿದ್ದೆಷ್ಟು ನೋಡಿ

‘ಸೋಲಾರ್​ನಲ್ಲಿ ನಾನು ಮೊದಲ ಪ್ರಾಜೆಕ್ಟ್ ಮಾಡಿದಾಗ ಬೆಲೆ 30 ಸೆಂಟ್​ನಷ್ಟಿತ್ತು. ಈಗ ನಾವು ಕೇವಲ ನಾಲ್ಕು ಸೆಂಟ್​ಗಿಂತ ಕಡಿಮೆ ಬೆಲೆಗೆ ಮಾಡುತ್ತಿದ್ದೇವೆ. ಇದೇ ರೀತಿಯಲ್ಲಿ ಹೈಡ್ರೋಜನ್ ಎನರ್ಜಿ ಸೆಕ್ಟರ್ ಕೂಡ ಅಭಿವೃದ್ದಿಯಾಗಬೇಕು. ಜಾಗತಿಕವಾಗಿ ಸರ್ಕಾರಗಳಿಂದ ಹಲವಾರು ಯೋಜನೆಗಳು ಬರದೇ ಹೋದರೆ ಈ ಸೆಕ್ಟರ್​ನಲ್ಲಿ ಇಂಧನ ಉತ್ಪಾದನಾ ವೆಚ್ಚ ಕಡಿಮೆ ಆಗುವುದೇ ಇಲ್ಲ’ ಎಂದು ವಿನೀತ್ ಮಿಟ್ಟಲ್ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ