Video: ಹಸುವಿನ ಗುದನಾಳದೊಳಗೆ 2.5 ಅಡಿ ಉದ್ದದ ಕೋಲು ತುರುಕಿ ವಿಕೃತಿ; ಪಶು ವೈದ್ಯರಿಂದ ರಕ್ಷಣೆ
ಉತ್ತರಪ್ರದೇಶದ ನೋಯ್ಡಾದಲ್ಲಿ ಬೀದಿ ಹಸುವಿನ ಗುದನಾಳದೊಳಗೆ 2.5 ಅಡಿ ಉದ್ದದ ಕೋಲು ಪತ್ತೆಯಾಗಿದೆ. ನಂದಿ ಸೇವಾ ಟ್ರಸ್ಟ್ ಹಸುವಿಗೆ ಚಿಕಿತ್ಸೆ ನೀಡಿದ್ದು, ಕೋಲನ್ನು ಹೊರ ತೆಗೆಯಲಾಗಿದೆ. ಪ್ರಾಣಿ ಹಿಂಸೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಅಮಾನವೀಯ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ.
ಉತ್ತರಪ್ರದೇಶ: ಬೀದಿ ಹಸುವಿನ ಗುದನಾಳದೊಳಗೆ 2.5 ಅಡಿ ಉದ್ದದ ಕೋಲು ತುರುಕಿ ವಿಕೃತಿ ಮರೆದಿರುವ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ರಸ್ತೆಬದಿ ಅನಾರೋಗ್ಯದಿಂದ ಬಳಲುತ್ತಿದ್ದ ಹಸುವಿನ ರಕ್ಷಣೆಗೆ ನಂದಿ ಸೇವಾ ಟ್ರಸ್ಟ್ ಧಾವಿಸಿದ್ದು, ಈ ವೇಳೆ ಪಶು ವೈದ್ಯರು ಪರೀಕ್ಷಿಸಿದಾಗ ಅದರ ಹೊಟ್ಟೆಯೊಳಗೆ ಕೋಲು ಇರುವುದು ಪತ್ತೆಯಾಗಿದೆ. ಸದ್ಯ ಕೋಲನ್ನು ಹೊರ ತೆಗೆಯಲಾಗಿದ್ದು, ಹಸುವಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ವರದಿಗಳ ಪ್ರಕಾರ, ಅಸ್ವಸ್ಥಗೊಂಡಿದ್ದ ಹಸುವನ್ನು ನಂದಿ ಸೇವಾ ಟ್ರಸ್ಟ್ ಅವರು ಆಂಬ್ಯುಲೆನ್ಸ್‌ನಲ್ಲಿ ಸೆಕ್ಟರ್ 3 ಪಟ್ವಾರಿಯಲ್ಲಿರುವ ಆಸ್ಪತ್ರೆಗೆ ಸಾಗಿಸಿದ್ದರು. ವೈದ್ಯರು ವಿವಿಧ ಪರೀಕ್ಷೆಗಳನ್ನು ನಡೆಸಿದ್ದು, ಬಳಿಕ ಹಸುವಿನ ಗುದನಾಳದೊಳಗೆ ಕೋಲು ತುರುಕಿರುವುದು ಬೆಳಕಿಗೆ ಬಂದಿದೆ. 2.5 ಅಡಿ ಉದ್ದದ ಮರದ ಕೋಲು ಹಸುವಿನ ಗುದನಾಳದೊಳಗೆ ಸಿಲುಕಿಕೊಂಡಿರುವುದನ್ನು ಪಶುವೈದ್ಯರು ಪತ್ತೆ ಹಚ್ಚಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
:गौतमबुद्धनगर के ग्रेटर नोएडा में थाना #ईकोटेक-3 क्षेत्र के अलीवर्दीपुर #हल्दौनी गांव में गाय के साथ क्रूरता का मामला सामने आया है। आरोपियों ने गोवंशा के #प्राइवेट पार्ट को भी नहीं छोड़ा। दरिंदो को कड़ी सजा मिलनी #चाहिए। @noidapolice pic.twitter.com/zgzIp5Czf7
— Mohd Bilal | ↕️ (@BilalBiswani) November 21, 2024
ಇದನ್ನೂ ಓದಿ: ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಕುಸಿದು ಬಿದ್ದು ಪ್ರಾಣ ಬಿಟ್ಟ ವ್ಯಕ್ತಿ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪಶುವೈದ್ಯರು ಹಸುವಿನ ಒಳಗಿದ್ದ ಕೋಲನ್ನು ತೆಗೆಯುತ್ತಿರುವುದು ಕಂಡು ಬರುತ್ತಿದೆ. ಸದ್ಯ ವಿಕೃತಿ ಮರೆದವರ ವಿರುದ್ಧ ಪೋಲೀಸ್ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಬಂಧನದ ವರದಿಗಳಿಲ್ಲ. ಈ ಸಂಬಂಧ ಇಕೋಟೆಕ್-3 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:39 am, Fri, 22 November 24