ಶಿಶುಗಳು ಅದಲು ಬದಲು; 60 ವರ್ಷಗಳ ಬಳಿಕ ತಮ್ಮ ಜನ್ಮ ರಹಸ್ಯ ತಿಳಿದು ಶಾಕ್‌ ಆದ ಮಹಿಳೆಯರು

ಆಸ್ಪತ್ರೆಗಳಲ್ಲಿನ ಶಿಶು ಅದಲು-ಬದಲು ಪ್ರಕರಣಗಳ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, 1965 ರಲ್ಲಿ ಒಂದು ಸಣ್ಣ ಎಡವಟ್ಟಿನಿಂದ ನವಜಾತ ಹೆಣ್ಣು ಶಿಶುಗಳು ಅದಲು ಬದಲಾಗಿದ್ದು, ಬರೋಬ್ಬರಿ 60 ವರ್ಷಗಳ ಬಳಿಕ ಮಹಿಳೆಯರಿಬ್ಬರಿಗೆ ತಾವು ಅದಲು ಬದಲಾಗಿ ತಮ್ಮದಲ್ಲದ ಕುಟುಂಬದೊಂದಿಗೆ ಇಷ್ಟು ದಿನ ವಾಸವಿದ್ದೆವು ಎಂಬ ಆಘಾತಕಾರಿ ವಿಷಯ ಗೊತ್ತಾಗಿದೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಶಿಶುಗಳು ಅದಲು ಬದಲು; 60 ವರ್ಷಗಳ ಬಳಿಕ ತಮ್ಮ ಜನ್ಮ ರಹಸ್ಯ ತಿಳಿದು ಶಾಕ್‌ ಆದ ಮಹಿಳೆಯರು
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 22, 2024 | 11:42 AM

ಸಿನಿಮಾ, ಧಾರವಾಹಿಗಳಲ್ಲಿ ನವಜಾತ ಶಿಶುಗಳು ಅದಲು ಬದಲಾಗುವಂತಹ ಸ್ಟೋರಿಗಳನ್ನು ನೋಡಿರುತ್ತೇವೆ. ನಿಜ ಜೀವನದಲ್ಲೂ ಆಸ್ಪತ್ರೆಯಲ್ಲಿ ಮಗು ಅದಲು ಬದಲಾಗುವಂತಹ ಸಾಕಷ್ಟು ಘಟನೆಗಳು ಕೂಡಾ ನಡೆದಿವೆ. ಇದೀಗ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, 1965 ರಲ್ಲಿ ಒಂದು ಸಣ್ಣ ಎಡವಟ್ಟಿನಿಂದ ನವಜಾತ ಹೆಣ್ಣು ಶಿಶುಗಳು ಅದಲು ಬದಲಾಗಿದ್ದು, ಬರೋಬ್ಬರಿ 60 ವರ್ಷಗಳ ಬಳಿಕ ಮಹಿಳೆಯರಿಬ್ಬರಿಗೆ ತಾವು ಅದಲು ಬದಲಾಗಿ ತಮ್ಮದಲ್ಲದ ಕುಟುಂಬದೊಂದಿಗೆ ಇಷ್ಟು ದಿನ ವಾಸವಿದ್ದೆವು ಎಂಬ ಆಘಾತಕಾರಿ ವಿಷಯ ಗೊತ್ತಾಗಿದೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಈ ಘಟನೆ ನಾರ್ವೆಯಲ್ಲಿ ನಡೆದಿದ್ದು, ಮಹಿಳೆಯರಿಬ್ಬರಿಗೆ ತಾವು ಅದಲು ಬದಲಾಗಿ ತಮ್ಮದಲ್ಲದ ಕುಟುಂಬದೊಂದಿಗೆ ಇಷ್ಟು ದಿನ ವಾಸವಿದ್ದೆವು ಎಂಬ ಆಘಾತಕಾರಿ ಸಂಗತಿಯನ್ನು ಬರೋಬ್ಬರಿ 60 ವರ್ಷಗಳ ಬಳಿಕ ತಿಳಿದುಕೊಂಡಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ವೆಬ್‌ಸೈಟ್ ಪ್ರಕಾರ, ನಾರ್ವೆಯಲ್ಲಿ ವಾಸಿಸುವ 59 ವರ್ಷದ ಇಬ್ಬರು ಮಹಿಳೆಯರು ತಾವು ಶಿಶುವಾಗಿರುವಾಗಲೇ ಅದಲು ಬದಲಾಗಿರುತ್ತಾರೆ. ಈ ಜನ್ಮ ರಸಹ್ಯ ಅವರಿಗೆ ಬರೋಬ್ಬರಿ 60 ವರ್ಷಗಳ ಬಳಿಕ ಗೊತ್ತಾಗಿ ಶಾಕ್‌ ಆಗಿದ್ದಾರೆ.

ಡೋಕೆನ್ ಎಂಬ ಮಹಿಳೆ 14 ಫೆಬ್ರವರಿ 1965 ರಂದು ನಾರ್ವೆಯ ಎಗ್ಸ್ಬೋನ್ಸ್ ಆಸ್ಪತ್ರೆಯಲ್ಲಿ ಹೆಣ್ಣು ಜನ್ಮ ನೀಡುತ್ತಾರೆ. ಇಲ್ಲಿ ಆ ಸಮಯದಲ್ಲಿ ಜನಿಸಿದ ಎಲ್ಲಾ ಮಕ್ಕಳನ್ನು ಒಂದೇ ಸ್ಥಳದಲ್ಲಿ ಇರಿಸಲಾಗಿತ್ತು ಮತ್ತು ತಾಯಂದಿರನ್ನು ತಮ್ಮ ತಮ್ಮ ಕೊಠಡಿಗಳಲ್ಲಿ ವಿಶ್ರಾಂತಿಗಾಗಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಒಂದು ಸಣ್ಣ ಎಡವಟ್ಟಿನಿಂದ ಎರಡು ಶಿಶುಗಳ ಅದಲು ಬದಲಾಗಿ ಡೋಕೊನ್‌ ತಮ್ಮ ಹೆತ್ತ ಮಗುವಿನ ಬದಲಿಗೆ ಬೇರೊಂದು ಮಗುವನ್ನು ಮನೆಗೆ ಕರೆದುಕೊಂಡು ಹೋಗ್ತಾರೆ ಮತ್ತು ಆ ಮಗುವಿಗೆ ಮೋನಾ ಎಂಬ ಹೆಸರಿಡುತ್ತಾರೆ. ಮೋನಾ ಬೆಳೆದು ದೊಡ್ಡವಳಾದಂತೆ ಆಕೆಯ ಕಪ್ಪು ಮತ್ತು ಗುಂಗುರು ಕೂದಲನ್ನು ನೋಡಿ ಡೋಕೆನ್‌ ಮತ್ತು ಆಕೆಯ ತಾಯಿ ನಮ್ಮ ಕುಟುಂಬದಲ್ಲಿ ಈ ರೀತಿ ಯಾರಿಗೂ ಕೂದಲು ಇರಲಿಲ್ಲವಲ್ಲ ಎಂದು ಆಶ್ವರ್ಯ ಪಡುತ್ತಾರೆ.

ಇದನ್ನೂ ಓದಿ; ಹಸುವಿನ ಗುದನಾಳದೊಳಗೆ 2.5 ಅಡಿ ಉದ್ದದ ಕೋಲು ತುರುಕಿ ವಿಕೃತಿ; ಪಶು ವೈದ್ಯರಿಂದ ರಕ್ಷಣೆ

ಇದಾದ ಬಳಿಕ 2000ನೇ ಇಸವಿಯ ಸುಮಾರಿಗೆ ತಾನು ಸಾಕುತ್ತಿರುವ ಮಗು ತನ್ನದಲ್ಲ ಹಾಗೂ ತನ್ನ ಹೆತ್ತ ಮಗಳು (ಲಿಂಡಾ ಕರಿನ್‌ ರಿಸ್ವಿಕ್)‌ ಬೇರೊಬ್ಬ ಮಹಿಳೆಯೊಂದಿಗೆ ಇದ್ದಾಳೆ ಎಂಬ ಆಘಾತಕಾರಿ ವಿಚಾರ ಡೋಕೆನ್‌ಗೆ ತಿಳಿಯುತ್ತದೆ. ಈ ಇಬ್ಬರೂ ತಾಯಂದಿರ ಮಕ್ಕಳು ಅದಲು ಬದಲಾಗಿರುವ ವಿಚಾರ 1985 ರಲ್ಲಿಯೇ ನಾರ್ವೆಯ ಸರ್ಕಾರಿ ಆರೋಗ್ಯ ಅಧಿಕಾರಿಗಳು ಗೊತ್ತಾಗಿದ್ದರೂ, ಈ ವಿಷಯವನ್ನು ಎರಡೂ ಕುಟುಂಬದಿಂದ ಮುಚ್ಚಿಡುತ್ತಾರೆ. 2021 ರಲ್ಲಿ ಮೋನಾ ಡಿಎನ್‌ಎ ಪರೀಕ್ಷೆ ಮಾಡಿಸಿದಾಗ ಆಕೆ ಡೋಕೆನ್‌ನ ಹೆತ್ತ ಮಗಳಲ್ಲ ಎಂಬ ಸತ್ಯವನ್ನು ಆಕೆ ಕಂಡುಕೊಳ್ಳುತ್ತಾಳೆ. ನಂತರ ಅದಲು ಬದಲಾದ ಮೋನಾ ಮತ್ತು ಲಿಂಡಾ ಕರಿನ್‌ ರಿಸ್ವಿಕ್ ಈ ಇಬ್ಬರೂ ಮಹಿಳೆರೂ ಸರ್ಕಾರಿ ಅಧಿಕಾರಿಗಳು ತಮ್ಮ ಗೊತ್ತಿದ್ದರೂ ತಮ್ಮ ಜನ್ಮ ರಹಸ್ಯವನ್ನು ಮುಚ್ಚಿಟ್ಟು ನಮ್ಮ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ಸರ್ಕಾರದ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಇದೀಗ ಸರ್ಕಾರ ಕ್ಷಮೆಯಾಚಿಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ