ಮೆಡಿಕಲ್ ಡಿವೈಸ್ ಕ್ಷೇತ್ರದ ಬೆಳವಣಿಗೆಗೆ ಪುಷ್ಟಿ ಕೊಡಲು ಸರ್ಕಾರದಿಂದ ಯೋಜನೆ; ಮೂರು ವರ್ಷಗಳಿಗೆ 500 ಕೋಟಿ ರೂ ವಿನಿಯೋಗ

Medical devices sector: ವೈದ್ಯಕೀಯ ಸಾಧನಗಳ ತಯಾರಿಕಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗುವಂತೆ ಸರ್ಕಾರ ಯೋಜನೆ ಹಾಕಿದೆ. ಈ ಉದ್ಯಮದ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಕ್ರಮಗಳನ್ನು ಈ ಯೋಜನೆಯಲ್ಲಿ ಹಾಕಲಾಗಿದೆ. ಮೂರು ವರ್ಷಗಳಿಗೆ ಸರ್ಕಾರ 500 ಕೋಟಿ ರೂ ಹಣವನ್ನು ಇದಕ್ಕಾಗಿ ವಿನಿಯೋಗಿಸಲಿದೆ.

ಮೆಡಿಕಲ್ ಡಿವೈಸ್ ಕ್ಷೇತ್ರದ ಬೆಳವಣಿಗೆಗೆ ಪುಷ್ಟಿ ಕೊಡಲು ಸರ್ಕಾರದಿಂದ ಯೋಜನೆ; ಮೂರು ವರ್ಷಗಳಿಗೆ 500 ಕೋಟಿ ರೂ ವಿನಿಯೋಗ
ಮೆಡಿಕಲ್ ಡಿವೈಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 10, 2024 | 5:05 PM

ನವದೆಹಲಿ, ನವೆಂಬರ್ 10: ಭಾರತದಲ್ಲಿ ಮೆಡಿಕಲ್ ಡಿವೈಸ್ ತಯಾರಿಕೆಯ ಉದ್ಯಮವನ್ನು ಬಲಪಡಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು ಅದಕ್ಕಾಗಿ 500 ಕೋಟಿ ರೂ ಆರಂಭಿಕ ಫಂಡಿಂಗ್ ಪ್ರಕಟಿಸಿದೆ. ವೈದ್ಯಕೀಯ ಸಾಧನಗಳ ಪ್ರಮುಖ ಬಿಡಿಭಾಗಗಳ ತಯಾರಿಕೆ, ಕೌಶಲ್ಯಾಭಿವೃದ್ಧಿ, ಕ್ಲಿನಿಕಲ್ ಸ್ಟಡಿಗಳಿಗೆ ನೆರವು, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ಔದ್ಯಮಿಕ ಪ್ರಚಾರ ಇತ್ಯಾದಿ ಪ್ರಮುಖ ಕಾರ್ಯಗಳತ್ತ ಈ ಯೋಜನೆ ಗಮನ ಹರಿಸುತ್ತದೆ. ಮೂರು ವರ್ಷಗಳಿಗೆಂದು ಸರ್ಕಾರ ಈ ಯೋಜನೆಗೆ 500 ಕೋಟಿ ರೂ ಎತ್ತಿ ಇಟ್ಟಿದೆ.

ಮೆಡಕಲ್ ಡಿವೈಸ್ ಕ್ಲಸ್ಟರ್​ಗಳಿಗೆ ಸಾಮಾನ್ಯ ಸೌಲಭ್ಯಗಳು, ಕೆಪಾಸಿಟಿ ನಿರ್ಮಾಣ, ಕೌಶಲ್ಯಾಭಿವೃದ್ಧಿ ಇತ್ಯಾದಿ ಐದು ಪ್ರಮುಖ ಅಂಶಗಳು ಈ ಸ್ಕೀಮ್​ನ ವ್ಯಾಪ್ತಿಯಲ್ಲಿವೆ. ಆಮದು ಅವಲಂಬನೆ ಕಡಿಮೆ ಮಾಡಲು ಹೂಡಿಕೆ, ಕ್ಲಿನಿಕಲ್ ಸ್ಟಡಿ ನೆರವು ಕೂಡ ಇದರಡಿ ಬರುತ್ತದೆ.

ಇದನ್ನೂ ಓದಿ: ಗುಜರಿ ಅಂತ ಜರೀಬೇಡಿ… ಗುಜರಿ ಮಾರಿ ಸರ್ಕಾರ ಗಳಿಸಿದ್ದೆಷ್ಟು ನೋಡಿ

ಇನ್ನು, ಮೂಲಸೌಕರ್ಯ ಅಭಿವೃದ್ಧಿಗೆಂದೇ 110 ಕೋಟಿ ರೂ ಎತ್ತಿ ಇಡಲಾಗಿದೆ. ಆರ್ ಅಂಡ್ ಡಿ ಲ್ಯಾಬ್, ಡಿಸೈನ್, ಟೆಸ್ಟಿಂಗ್ ಸೆಂಟರ್, ಪ್ರಾಣಿ ಪ್ರಯೋಗಾಲಯ ಇತ್ಯಾದಿ 20 ಮೆಡಿಕಲ್ ಡಿವೈಸ್ ಕ್ಲಸ್ಟರ್​ಗಳ ನಿರ್ಮಾಣವಾಗಲಿದೆ.

ಭಾರತದ ವೈದ್ಯಕೀ ಸಾಧನಗಳ ಉದ್ಯಮವು ಏಷ್ಯಾದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 14 ಬಿಲಿಯನ್ ಡಾಲರ್ ಮಾರುಕಟ್ಟೆ ಗಾತ್ರ ಇರುವ ಈ ಉದ್ಯಮವು 2030ರೊಳಗೆ 30 ಬಿಲಿಯನ್ ಡಾಲರ್ ಗಾತ್ರಕ್ಕೆ ಬೆಳೆಯುವ ನಿರೀಕ್ಷೆ ಇದೆ.

ಇದನ್ನೂ ಓದಿ: ಭಾರತದಲ್ಲಿ ಚೊಚ್ಚಲ ಆ್ಯಪಲ್ ಆರ್ ಅಂಡ್ ಡಿ; ಅಮೆರಿಕ, ಚೀನಾ, ಜರ್ಮನಿ, ಇಸ್ರೇಲ್ ಸಾಲಿಗೆ ಭಾರತ

ಈ ಯೋಜನೆಯು ಮೆಡಿಕಲ್ ಡಿವೈಸ್ ಕ್ಷೇತ್ರಕ್ಕೆ ಗೇಮ್ ಚೇಂಜರ್ ಆಗಲಿದೆ ಎಂದು ಇದೇ ವೇಳೆ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ. ಇನ್ನು, ಇದೇ ಉದ್ಯಮದಲ್ಲಿರುವ ಪಾಲಿ ಮೆಡಕ್ಯೂರ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಹಿಮಾಂಶು ಬೇದ್ ಅವರು, ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದ್ದಾರೆ. ವಲಯದ ಬೆಳವಣಿಗೆಯ ವೇಗವನ್ನು ಇದು ಹೆಚ್ಚಿಸಲಿದೆ. ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ. ಮೆಡಿಕಲ್ ಡಿವೈಸ್ ಕ್ಷೇತ್ರದಲ್ಲಿ ಪ್ರಮುಖ ರಫ್ತುದಾರ ದೇಶವೆನ್ನುವ ಭಾರತದ ಸ್ಥಾನವನ್ನು ಇದು ಇನ್ನಷ್ಟು ಬಲಪಡಿಸಲಿದೆ ಎಂದು ಹಿಮಾಂಶು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್