AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟನ್​ನ ಪ್ರಾಕ್ಟೀಸ್ ಪ್ಲಸ್ ಹಾಸ್ಪಿಟಲ್ ಗ್ರೂಪ್ ಖರೀದಿಸಿದ ಡಾ. ದೇವಿಶೆಟ್ಟಿಯ ನಾರಾಯಣ ಹೃದಯಾಲಯ

Narayana Hrudayalaya buys Practice Plus Group Hospitals UK: ಬೆಂಗಳೂರಿನ ನಾರಾಯಣ ಹೃದಯಾಲಯವು ತನ್ನ ಅಂಗಸಂಸ್ಥೆಯ ಮೂಲಕ ಯುಕೆ ದೇಶದ ಪ್ರಾಕ್ಟೀಸ್ ಪ್ಲಸ್ ಗ್ರೂಪ್ ಹಾಸ್ಪಿಟಲ್ಸ್ ಸಂಸ್ಥೆಯನ್ನು ಖರೀದಿಸಿದೆ. ಬಿಎಸ್​ಇಗೆ ಸಲ್ಲಿಸಿದ ರೆಗ್ಯುಲೇಟರಿ ಫೈಲಿಂಗ್​ನಲ್ಲಿ ನಾರಾಯಣ ಹೃದಯಾಲಯ ಈ ಅಪ್​​ಡೇಟ್ ನೀಡಿದೆ. ಹಲವು ಆಸ್ಪತ್ರೆ, ಚಿಕಿತ್ಸಾ ಘಟಕ, ತಪಾಸಣಾ ಕೇಂದ್ರಗಳನ್ನು ಹೊಂದಿರುವ ಪ್ರಾಕ್ಟೀಸ್ ಪ್ಲಸ್ ಗ್ರೂಪ್ ಅನ್ನು 2,200 ಕೋಟಿ ರೂಗೆ ಖರೀದಿಸಲಾಗಿದೆ.

ಬ್ರಿಟನ್​ನ ಪ್ರಾಕ್ಟೀಸ್ ಪ್ಲಸ್ ಹಾಸ್ಪಿಟಲ್ ಗ್ರೂಪ್ ಖರೀದಿಸಿದ ಡಾ. ದೇವಿಶೆಟ್ಟಿಯ ನಾರಾಯಣ ಹೃದಯಾಲಯ
ನಾರಾಯಣ ಹೃದಯಾಲಯ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 31, 2025 | 4:22 PM

Share

ಬೆಂಗಳೂರು, ಅಕ್ಟೋಬರ್ 11: ಡಾ. ದೇವಿಶೆಟ್ಟಿ ಮಾಲಕತ್ವದ ನಾರಾಯಣ ಹೃದಯಾಲಯ (Narayana Hrudayalaya) ಸಂಸ್ಥೆಯು ಬ್ರಿಟನ್​ನ ದೊಡ್ಡ ಆಸ್ಪತ್ರೆ ಸಮೂಹವೊಂದನ್ನು ಖರೀದಿಸಿದೆ. ಯುಕೆ ರಾಷ್ಟ್ರದ ಆರನೇ ಅತಿದೊಡ್ಡ ಹಾಸ್ಪಿಟಲ್ ಚೈನ್ ಎನಿಸಿರುವ ಪ್ರಾಕ್ಟಿಸ್ ಪ್ಲಸ್ ಗ್ರೂಪ್ ಹಾಸ್ಪಿಟಲ್ಸ್ (Practice Plus Group Hospitals) ಅನ್ನು ನಾರಾಯಣ ಹೃದಯಾಲಯವು 188.78 ಮಿಲಿಯನ್ ಪೌಂಡ್​ಗೆ ಖರೀದಿಸಿದೆ. 188.78 ಮಿಲಿಯನ್ ಪೌಂಡ್ ಎಂದರೆ ಸುಮಾರು 2,200 ಕೋಟಿ ರೂ ಆಗುತ್ತದೆ. ಖರೀದಿಸಲಾಗಿರುವ ಈ ಸಂಗತಿಯನ್ನು ಸ್ವತಃ ನಾರಾಯಣ ಹೃದಯಾಲಯ ಸಂಸ್ಥೆಯೇ ಹೇಳಿಕೆ ಮೂಲಕ ಖಚಿತಪಡಿಸಿದೆ.

ನಾರಾಯಣ ಹೃದಯಾಲಯಕ್ಕೆ ಸೇರಿದ ನಾರಾಯಣ ಹೆಲ್ತ್ ನೆಟ್ವರ್ಕ್​ನ ಭಾಗವಾಗಿರುವ ಹೆಲ್ತ್ ಸಿಟಿ ಕೇಮ್ಯಾನ್ ಐಲೆಂಡ್ಸ್​ನ ಅಂಗಸಂಸ್ಥೆಯಾದ ನಾರಾಯಣ ಹೃದಯಾಲಯ ಯುಕೆ ಲಿಮಿಟೆಡ್ ವತಿಯಿಂದ ಈ ಖರೀದಿ ಮಾಡಲಾಗಿದೆ. ಪ್ರಾಕ್ಟೀಸ್ ಪ್ಲಸ್ ಗ್ರೂಪ್ ಹಾಸ್ಪಿಟಲ್ಸ್​ನ ಎಲ್ಲಾ ನೂರಕ್ಕೆ ನೂರು ಈಕ್ವಿಟಿ ಷೇರುಗಳನ್ನು ಖರೀದಿಸಲಾಗಿದೆ. ನಾರಾಯಣ ಹೃದಯಾಲಯವು ಬಿಎಸ್​ಇಗೆ ಸಲ್ಲಿಸಿದ ಫೈಲಿಂಗ್​ನಲ್ಲಿ ಈ ವಿಚಾರವನ್ನು ತಿಳಿಸಿದೆ.

ಇದನ್ನೂ ಓದಿ: 24 ಕ್ಯಾರಟ್ ಚಿನ್ನದ ಮೇಲೆ ಸಿಕ್ಕಾಪಟ್ಟೆ ಹರಿದುಬಂದ ಹೂಡಿಕೆ; ಚಿನ್ನದ ಬೆಲೆ ಇಷ್ಟೊಂದು ಏರಲು ಇದಪ್ಪಾ ಕಾರಣ..!

ಪ್ರಾಕ್ಟೀಸ್ ಪ್ಲಸ್ ಗ್ರೂಪ್ ಹಾಸ್ಪಿಟಲಲ್ಸ್ ಸಂಸ್ಥೆಯು ಬ್ರಿಡ್ಜ್​ಪಾಯಿಂಟ್ ಎನ್ನುವ ಹೂಡಿಕೆದಾರರ ಒಡೆತನದಲ್ಲಿ ಇತ್ತು. ಯುಕೆ ರಾಷ್ಟ್ರದ ಐದನೇ ಅತಿದೊಡ್ಡ ಖಾಸಗಿ ಪ್ರೈವೇಟ್ ಆಸ್ಪತ್ರೆ ಎನಿಸಿದೆ. ಈ ಗ್ರೂಪ್​ನಲ್ಲಿ ಒಟ್ಟು ಏಳು ಆಸ್ಪತ್ರೆಗಳು, ಮೂರು ಸರ್ಜಿಕಲ್ ಸೆಂಟರ್​ಗಳು, ಎರಡು ತುರ್ತು ಚಿಕಿತ್ಸಾ ಘಟಕಗಳು, ಹಲವು ತಪಾಸಣಾ ಮತ್ತು ಆಫ್ತಲ್ಮಾಲಜಿ ಸೆಂಟರ್​ಗಲು ಇವೆ. ಒಟ್ಟಾರೆ 330 ಬೆಡ್​ಗಳು ಇದ್ದು, 2,500 ಸಿಬ್ಬಂದಿ ಹಾಗೂ 1,300 ಕ್ಲಿನಿಕಲ್ ಪ್ರೊಫೆಷನಲ್​ಗಳು ಕೆಲಸ ಮಾಡುತ್ತಾರೆ. ವರ್ಷಕ್ಕೆ 80,000 ಶಸ್ತ್ರಚಿಕಿತ್ಸೆಗಳು ಈ ಆಸ್ಪತ್ರೆಗಳಲ್ಲಿ ನಡೆಯುತ್ತವೆ. 2024-25ರಲ್ಲಿ ಪ್ರಾಕ್ಟೀಸ್ ಪ್ಲಸ್ ಹಾಸ್ಟಿಟಲ್​ಗಳಿಂದ 250 ಮಿಲಿಯನ್ ಪೌಂಡ್ ವಹಿವಾಟು ನಡೆದಿರುವುದು ತಿಳಿದುಬಂದಿದೆ.

ನಾರಾಯಣ ಹೃದಯಾಲಯ ಸಂಸ್ಥೆಯ ಸ್ಥಾಪಕರಾದ ಡಾ. ದೇವಿ ಶೆಟ್ಟಿ ಅವರು ಈ ಕುರಿತು ಮಾತನಾಡಿದ್ದು, ‘ಪ್ರಾಕ್ಟೀಸ್ ಪ್ಲಸ್ ಗ್ರೂಪ್ ಮತ್ತು ನಾವು ಇಬ್ಬರೂ ಕೂಡ ಒಂದೇ ತೆರನಾದ ದೃಷ್ಟಿಕೋನ ಹೊಂದಿದ್ದೇವೆ. ಹೆಲ್ತ್​ಕೇರ್ ಅನ್ನು ಎಲ್ಲರಿಗೂ ಕೈಗೆಟುಕುವಂತೆ ತಲುಪಿಸುವುದು ನಮ್ಮ ಉದ್ದೇಶ’ ಎಂದಿದ್ದಾರೆ.

ಇದನ್ನೂ ಓದಿ: ಗೂಗಲ್-ಜಿಯೋ ಪಾರ್ಟ್ನರ್​ಶಪ್; ಒಂದೂವರೆ ವರ್ಷ ಉಚಿತ ಎಐ ಪ್ರೋ ಕೊಡುಗೆ

ಬ್ರಿಟನ್​ನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಜರಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಶಸ್ತ್ರಚಿಕಿತ್ಸೆಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ನಾರಾಯಣ ಹೃದಯಾಲಯವು ಈ ಬೇಡಿಕೆಯನ್ನು ಪೂರೈಸಲು ಸಮರ್ಥವಾಗಿದೆ. ಹೆಲ್ತ್​ಸಿಟಿ ಕೇಮನ್ ಐಲೆಂಡ್ಸ್ ಮೂಲಕ ಕೆರಿಬಿಯನ್ ನಾಡಿನಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿರುವ ನಾರಾಯಣ ಹೃದಯಾಲಯವು ಈಗ ಇನ್ನಷ್ಟು ಪ್​ರಬಲ ಜಾಗತಿಕ ಹೆಲ್ತ್​ಕೇರ್ ಬ್ರ್ಯಾಂಡ್ ಆಗಿ ಬೆಳೆಯಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ