ಗೂಗಲ್-ಜಿಯೋ ಪಾರ್ಟ್ನರ್ಶಪ್; ಒಂದೂವರೆ ವರ್ಷ ಉಚಿತ ಎಐ ಪ್ರೋ ಕೊಡುಗೆ
Reliance Jio partnership with Google: ಗೂಗಲ್ ಜೊತೆ ರಿಲಾಯನ್ಸ್ ಜಿಯೋ ಟಯಪ್ ಮಾಡಿಕೊಂಡಿದ್ದು, ತನ್ನ ಯುವ ಬಳಕೆದಾರರಿಗೆ ಸುಧಾರಿತ ಗೂಗಲ್ ಎಐ ಸಾಧನಗಳನ್ನು ಉಚಿತವಾಗಿ ನೀಡುತ್ತಿದೆ. ಜಿಯೋದ 18 ವರ್ಷದಿಂದ 25 ವರ್ಷ ವಯೋಮಾನದ ಬಳಕೆದಾರರಿಗೆ ಸದ್ಯಕ್ಕೆ ಈ ಆಫರ್ ಇದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ದೊರಕಬಹುದು. ಈ ಗೂಗಲ್ ಎಐ ಪ್ರೋ ಪ್ಯಾಕೇಜ್ನಲ್ಲಿ ಜೆಮಿನಿ 2.5 ಪ್ರೋ, ವಿಯೋ 3.1, ಇಮೇಜನ್3, ನೋಟ್ಬುಕ್ ಎಲ್ಎಂ ಮೊದಲಾದವು ಒಳಗೊಂಡಿವೆ.

ನವದೆಹಲಿ, ಅಕ್ಟೋಬರ್ 31: ಪರ್ಪ್ಲೆಕ್ಸಿಟಿ ಎಐ (Perplexity AI) ಜೊತೆ ಏರ್ಟೆಲ್ ಸಹಭಾಗಿತ್ವ ಹೊಂದಿದ ರೀತಿಯಲ್ಲಿ ರಿಲಾಯನ್ಸ್ ಜಿಯೋ ಸಂಸ್ಥೆಯು ಗೂಗಲ್ ಜೊತೆ ಒಪ್ಪಂದ (Google and Reliance Jio partnership) ಮಾಡಿಕೊಂಡಿದೆ. ತನ್ನ ಯುವ ಬಳಕೆದಾರರಿಗೆ ಗೂಗಲ್ ಎಐ ಪ್ರೋ ಸೇವೆಯನ್ನು (Google AI Pro) ಉಚಿತವಾಗಿ ನೀಡಲಿದೆ. 18ರಿಂದ 25 ವರ್ಷದೊಳಗಿನ ವಯಸ್ಸಿನ ಜಿಯೋ ಬಳಕೆದಾರರು ಅನ್ಲಿಮಿಟೆಡ್ 5ಜಿ ಪ್ಲಾನ್ಗಳನ್ನು ಖರೀದಿಸಿದರೆ 18 ತಿಂಗಳ ಕಾಲ ಉಚಿತವಾಗಿ ಎಐ ಪ್ರೋ ಅನ್ನು ಬಳಸುವ ಅವಕಾಶ ಕೊಡಲಾಗುತ್ತಿದೆ
ಈ ಗೂಗಲ್ ಎಐ ಪ್ರೊ ಪ್ಯಾಕೇಜ್ನಲ್ಲಿ ಜೆಮಿನಿ 2.5 ಪ್ರೋ, ವಿಯೋ 3.1 ವಿಡಿಯೋ ಜನರೇಶನ್, ಇಮೇಜನ್ 3 ಇಮೇಜ್ ಕ್ರಿಯೇಶನ್, ನೋಟ್ಬುಕ್ ಎಲ್ಎಂ ಹಾಗೂ 2ಟಿಬಿ ಕ್ಲೌಡ್ ಸ್ಟೋರೇಜ್ ಇವೆಲ್ಲವೂ ಒಳಗೊಂಡಿರುತ್ತೆ. ಇವುಗಳ ಒಟ್ಟು ಮಾರುಕಟ್ಟೆ ಮೌಲ್ಯ 35,100 ರೂ ಎಂದೆನ್ನಲಾಗುತ್ತಿದೆ. ಇದಿಷ್ಟೂ ಕೂಡ ಜಿಯೊ ಬಳಕೆದಾರರಿಗೆ ಒಂದೂವರೆಗೆ ಉಚಿತವಾಗಿ ಲಭ್ಯ ಇರುತ್ತದೆ.
ಸದ್ಯ ಈ ಪ್ಲಾನ್ ಅನ್ನು ಯುವ ಬಳಕೆದಾರರಿಗೆ ಕೊಡಲು ನಿರ್ಧರಿಸಲಾಗಿದೆ. ಅಂದರೆ 18ರಿಂದ 25 ವರ್ಷ ವಯೋಮಾನದಲ್ಲಿರುವ ಬಳಕೆದಾರರಿಗೆ ಮಾತ್ರ ಸದ್ಯ ಲಭ್ಯ ಇರುವುದು. ಮುಂದಿನ ದಿನಗಳಲ್ಲಿ ಎಲ್ಲಾ ಜಿಯೋ ಬಳಕೆದಾರರ 5ಜಿ ಪ್ಲಾನ್ಗಳಲ್ಲಿ ಈ ಕೊಡುಗೆ ಒಳಗೊಂಡಿರುತ್ತದೆ. ಜಿಯೋ ಬಳಕೆದಾರರು ಮೈ ಜಿಯೋ ಆ್ಯಪ್ಗೆ ಹೋಗಿ ಅಲ್ಲಿಂದ ಈ ಆಫರ್ ಅನ್ನು ಸಕ್ರಿಯಗೊಳಿಸಬಹುದು.
ಗೂಗಲ್ ಎಐ ಸೇವೆಯಿಂದ ಏನು ಪ್ರಯೋಜನ?
ಗೂಗಲ್ ಎಐ ಪ್ಯಾಕೇಜ್ನಲ್ಲಿ ಮಾಡಲಾಗಿರುವ ಎಲ್ಲಾ ಆಫರ್ಗಳು ಕೂಡ ತಿರಸ್ಕರಿಸಲು ಸಾಧ್ಯವಾಗದೇ ಇರುವಂಥವು. ಗೂಗಲ್ 2.5 ಪ್ರೋ ಮಾಡಲ್ ಉನ್ನತ ಹಂತದ ಎಐ ಮಾಡಲ್ ಆಗಿದೆ. ನ್ಯಾನೋ ಬನಾನ ಮಾಡಲ್ನಿಂದ ನಿಮಗೆ ಬೇಕಾದ ಇಮೇಜ್ ಸೃಷ್ಟಿಸಬಹುದು, ಬೇಕಾದ ರೀತಿಯಲ್ಲಿ ಇಮೇಜ್ ಎಡಿಟಿಂಗ್ ಮಾಡಬಹುದು. ಈ ನ್ಯಾನೋ ಬನಾನ ಈಗೀಗ ಬಹಳ ಖ್ಯಾತವಾಗಿದೆ. ವಿಯೋ 3.1 ಮಾಡಲ್ನಿಂದ ಒಳ್ಳೆಯ ವಿಡಿಯೋ ನಿರ್ಮಿಸಬಹುದು.
ಇದನ್ನೂ ಓದಿ: ಭಾರತದ ಸಾಗರ ಯೋಜನೆಗಳಿಂದ 4.5 ಲಕ್ಷ ಕೋಟಿ ರೂ ಹೂಡಿಕೆ, 2,500ಕ್ಕೂ ಅಧಿಕ ಹಡಗುಗಳ ನಿರ್ಮಾಣ: ಪ್ರಧಾನಿ ನಿರೀಕ್ಷೆ
ನೋಟ್ಬುಕ್ ಎಲ್ಎಂ ಮಾಡಲ್ ಅನ್ನು ಸಂಶೋಧನೆ ಮತ್ತು ಅಧ್ಯಯನಕ್ಕೆ ಚೆನ್ನಾಗಿ ಉಪಯೋಗಿಸಬಹುದು. ಇವುಗಳ ಜೊತೆಗೆ ನಿಮ್ಮ ವಾಟ್ಸಾಪ್, ಕ್ಯಾಮೆರಾ ಫೋಟೋಗಳನ್ನು ಬ್ಯಾಕಪ್ ಮಾಡಲು 2ಟಿಬಿ ಕ್ಲೌಡ್ ಸ್ಟೋರೇಜ್ ಅನ್ನೂ ಉಚಿತವಾಗಿ ನೀಡಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




