AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಳಿಯಲು, ಏರಲು ರನ್​ವೇ ಬೇಕಿಲ್ಲದ ವಿಮಾನ ನಿರ್ಮಿಸುತ್ತಿದ್ದಾರೆ ಭಾರತೀಯ ವಿಜ್ಞಾನಿಗಳು; ಜಗತ್ತಲ್ಲಿ ಯಾರಿಂದಲೂ ಪೂರ್ಣವಾಗದ ಸಾಹಸ ಇದು

Indians developing vertical landing aircraft: ಹೈಬ್ರಿಡ್ ರಾಕೆಟ್ ಥ್ರಸ್ಟರ್ ಮತ್ತು ವರ್ಚುವಲ್ ಸಿಮುಲೇಶನ್ ಟೆಕ್ನಾಲಜಿ ಬಳಸಿ ವಿಮಾನ ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತೀಯ ವಿಜ್ಞಾನಿಗಳು ಮಾಡುತ್ತಿರುವ ಈ ಸಾಹಸ ಯಶಸ್ವಿಯಾದಲ್ಲಿ ಜಾಗತಿಕ ವೈಮಾನಿಕ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಎನಿಸಬಹುದು. ಸದ್ಯ ಇರುವ ವಿಮಾನಗಳು ಮೇಲೇರಲು ಮತ್ತು ಇಳಿಯಲು ರನ್​ವೇ ಬೇಕು. ಆದರೆ, ಈ ವಿಮಾನವು ಹೆಲಿಕಾಪ್ಟರ್ ರೀತಿ ನೇರವಾಗಿ ಇಳಿಯಬಲ್ಲುದು.

ಇಳಿಯಲು, ಏರಲು ರನ್​ವೇ ಬೇಕಿಲ್ಲದ ವಿಮಾನ ನಿರ್ಮಿಸುತ್ತಿದ್ದಾರೆ ಭಾರತೀಯ ವಿಜ್ಞಾನಿಗಳು; ಜಗತ್ತಲ್ಲಿ ಯಾರಿಂದಲೂ ಪೂರ್ಣವಾಗದ ಸಾಹಸ ಇದು
ವಿಮಾನದ ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 31, 2025 | 12:21 PM

Share

ಚೆನ್ನೈ, ಅಕ್ಟೋಬರ್ 31: ವಿಮಾನಗಳು ಟೇಕಾಫ್ ಆಗಲು ಮತ್ತು ಇಳಿಯಲು ರನ್​ವೇ ಬೇಕೇ ಬೇಕು. ರನ್ ವೇ ಇಲ್ಲದೆ ವಿಮಾನ ಕೆಳಗಿಯಲ್ಲ. ರನ್ ವೇ ಇಲ್ಲದೇ ಕೆಳಗಿಳಿಯುವ ವಿಮಾನ ಯಾಕಿಲ್ಲ ಎಂದು ಯಾರಿಗಾದರೂ ಅನಿಸುತ್ತಿರಬಹುದು. ಡ್ರೋನ್ ಮಾದರಿಯಲ್ಲಿ, ಹೆಲಿಕಾಪ್ಟರ್ ಮಾದರಿಯಲ್ಲಿ, ಸ್ಕೈಫೈ ಸಿನಿಮಾಗಳಲ್ಲಿ ಬರುವ ಏಲಿಯನ್​ಗಳ ಸ್ಪೇಸ್​ಶಿಪ್ ಮಾದರಿಯಲ್ಲಿ ವಿಮಾನಗಳನ್ನು ಯಾಕೆ ತಯಾರಿಸಬಾರದು ಎಂದು ಕೆಲವರಿಗಾದರೂ ಕಾಡುತ್ತಿರಬಹುದು. ಈ ಕಾತರ ಮತ್ತು ಪ್ರಶ್ನೆಗಳಿಗೆ ಭಾರತೀಯ ವಿಜ್ಞಾನಿಗಳು ಉತ್ತರ ಕೊಡುತ್ತಿದ್ದಾರೆ. ವಿಮಾನವು ನೇರವಾಗಿ ಮತ್ತು ಮೆದುವಾಗಿ ಕೆಳಗಿಳಿಯಬಲ್ಲಂತಹ ತಂತ್ರಜ್ಞಾನವನ್ನು ಐಐಟಿ ಮದ್ರಾಸ್​ನ ತಂಡವೊಂದು ಆವಿಷ್ಕರಿಸಿದೆ. ವಿಶ್ವದಲ್ಲಿ ಕೆಲವೇ ದೇಶಗಳು ಈ ತಂತ್ರಜ್ಞಾನ ಆವಿಷ್ಕಾರದಲ್ಲಿ ತೊಡಗಿವೆ. ಈ ಸಾಲಿಗೆ ಭಾರತವೂ ಸೇರ್ಪಡೆಯಾಗುತ್ತಿರುವುದು ಹೆಮ್ಮೆಯ ಸಂಗತಿ.

ಐಐಟಿ ಮದ್ರಾಸ್​ನ ತಂಡವು ಹೈಬ್ರಿಡ್ ರಾಕೆಟ್ ಥ್ರಸ್ಟರ್ ಮತ್ತು ವರ್ಚುವಲ್ ಸಿಮುಲೇಶನ್ ತಂತ್ರಜ್ಞಾನವನ್ನು ಏಕೀಕರಿಸಿ, ವಿಮಾನ ನೇರವಾಗಿ ಇಳಿಯಲು ಸಾಧ್ಯವಾಗುವಂತೆ ಮಾಡಿದ್ದಾರೆ. ಇದಕ್ಕೆ ಸಂಕೀರ್ಣ ಎಂಜಿನಿಯರಿಂಗ್ ತಂತ್ರಜ್ಞಾನದ ಅವಶ್ಯಕತೆ ಇರುತ್ತದೆ. ಇಲ್ಲಿ ವಿಮಾನ ಅಥವಾ ವೈಮಾನಿಕ ವಾಹನವು ಕೆಳಗಿಳಿಯುವಾಗ ಎಷ್ಟು ನಿಧಾನಗೊಳ್ಳುತ್ತದೆ, ಎಷ್ಟು ಮೆದುವಾಗಿ ಇಳಿಯುತ್ತದೆ ಎಂಬುದು ಮುಖ್ಯ. ಇದನ್ನು ಸಾಧಿಸಲು ಜಾಗತಿಕವಾಗಿ ಎಂಜಿನಿಯರುಗಳು ಮತ್ತು ವಿಜ್ಞಾನಿಗಳು ಹರಸಾಹಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ವಿಜ್ಞಾನಿಗಳು ಇದನ್ನು ಸಾಧಿಸುತ್ತಿರುವುದು ಹೆಮ್ಮೆಯ ಸಂಗತಿ.

ಇದನ್ನೂ ಓದಿ: ಭಾರತದ ಸಾಗರ ಯೋಜನೆಗಳಿಂದ 4.5 ಲಕ್ಷ ಕೋಟಿ ರೂ ಹೂಡಿಕೆ, 2,500ಕ್ಕೂ ಅಧಿಕ ಹಡಗುಗಳ ನಿರ್ಮಾಣ: ಪ್ರಧಾನಿ ನಿರೀಕ್ಷೆ

ಈಗ ನೇರವಾಗಿ ಏರಬಲ್ಲ ಮತ್ತು ಇಳಿಯಬಲ್ಲ ಫ್ಲೈಯಿಂಗ್ ಟ್ಯಾಕ್ಸಿಗಳನ್ನು ಆವಿಷ್ಕರಿಸಲಾಗಿದೆ. ಆದರೆ, ಇವುಗಳ ತಂತ್ರಜ್ಞಾನ ತೀರಾ ಸಂಕೀರ್ಣವಾಗಿರುತ್ತದೆ. ಇದನ್ನು ಮೈಂಟೆನೆನ್ಸ್ ಮಾಡುವುದು ಕೂಡ ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಐಐಟಿ ಮದ್ರಾಸ್ ತಂಡ ವಿನೂತನ ವಿಧಾನ ಅನುಸರಿಸಿ ಯಶಸ್ವಿಯಾಗಿದೆ. ತಮ್ಮ ಪ್ರಯೋಗದ ಸಂಗತಿಯನ್ನು ಈ ತಂಡವು ಅಂತಾರಾಷ್ಟ್ರೀಯ ಜರ್ನಲ್​ನಲ್ಲಿ ಪ್ರಕಟಿಸಿದೆ.

ಕಾಡುಗಳಲ್ಲೂ ವಿಮಾನ ಇಳಿಸಲು ಸಾಧ್ಯ…

ಆವಿಷ್ಕರಿಸಲಾಗಿರುವ ಈ ವ್ಯವಸ್ಥೆಯನ್ನು ತಾಂತ್ರಿಕವಾಗಿ ಉಪಯೋಗಿಸಿ, ಅದನ್ನು ಕಮರ್ಷಿಯಲ್ ಆಗಿ ಬಳಸಲು ಸಾಧ್ಯವಾದರೆ ಜಾಗತಿಕ ವೈಮಾನಿಕ ಕ್ಷೇತ್ರದಲ್ಲೇ ಗೇಮ್ ಚೇಂಜರ್ ಎನಿಸಲಿದೆ ಎಂದು ಐಐಟಿ ಮದ್ರಾಸ್​ನ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಪಿ.ಎ. ರಾಮಕೃಷ್ಣ ಅವರು ಹೇಳುತ್ತಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಸತತ ಎರಡನೇ ಬಾರಿ ಬಡ್ಡಿದರ ಕಡಿತ; ಭಾರತದ ಮೇಲೇನು ಪರಿಣಾಮಗಳು?

ಸದ್ಯ ಈ ರೀತಿ ನೇರವಾಗಿ ಏರಬಲ್ಲ ಮತ್ತು ಇಳಿಯಬಲ್ಲ ವೈಮಾನಿಕ ವಾಹನ ಎಂದರೆ ಹೆಲಿಕಾಪ್ಟರ್ ಮಾತ್ರವೇ. ಆದರೆ, ಇದರ ವೇಗ ಬಹಳ ಕಡಿಮೆ, ಕಾರ್ಯನಿರ್ವಹಣೆ ವೆಚ್ಚ ಅಧಿಕ, ಕ್ರಮಿಸುವ ದೂರವೂ ಕಡಿಮೆ. ಹೀಗಾಗಿ, ಐಐಟಿ ಮದ್ರಾಸ್​ನ ವಿಜ್ಞಾನಿಗಳು ಆವಿಷ್ಕರಿಸಿದ ತಂತ್ರಜ್ಞಾನ ನಿಜಕ್ಕೂ ಗೇಮ್ ಚೇಂಜರ್ ಎನಿಸುತ್ತದೆ.

ಒಂದು ವೇಳೆ, ಈ ತಂತ್ರಜ್ಞಾನವನ್ನು ವಿಮಾನಗಳಿಗೆ ಅಳವಡಿಸಲು ಯಶಸ್ವಿಯಾದಲ್ಲಿ ವೈಮಾನಕ ಚಹರೆಯೇ ಬದಲಾಗಬಲ್ಲುದು. ವಿಮಾನಗಳು ಮೇಲೇರಲು ಮತ್ತು ಲ್ಯಾಂಡ್ ಆಗಲು ರನ್​ವೆಗಳೇ ಬೇಕಾಗುವುದಿಲ್ಲ. ಬೆಟ್ಟ ಗುಡ್ಡಗಳು, ಕಾಡು ಇತ್ಯಾದಿ ಊಹಿಸಲೂ ಸಾಧ್ಯವಿಲ್ಲದ ಜಾಗಗಳಲ್ಲೂ ವಿಮಾನವನ್ನು ಇಳಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್