AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿ ಸತತ ಎರಡನೇ ಬಾರಿ ಬಡ್ಡಿದರ ಕಡಿತ; ಭಾರತದ ಮೇಲೇನು ಪರಿಣಾಮಗಳು?

US Federal Reserve cuts its benchmark interest rates 3.75%-4.00%: ಅಮೆರಿಕದ ಫೆಡರಲ್ ರಿಸರ್ವ್ ತನ್ನ ಬಡ್ಡಿದರಗಳನ್ನು 3.75%-4.00% ಗೆ ಇಳಿಸಿದೆ. ಕಳೆದ ಬಾರಿಯ ಸಭೆಯಲ್ಲೂ ಬಡ್ಡಿ ದರ ಇಳಿಸಲಾಗಿತ್ತು. ಈ ವರ್ಷ ಎರಡು ಬಾರಿ ಫೆಡರಲ್ ರಿಸರ್ವ್ ತನ್ನ ಬಡ್ಡಿದರ ಇಳಿಸಿರುವುದು. ಈ ಬೆಳವಣಿಗೆಯನ್ನು ಮಾರುಕಟ್ಟೆ ಮೊದಲೇ ಗ್ರಹಿಸಿತ್ತಾದ್ದರಿಂದ ಜಾಗತಿಕವಾಗಿ ಹೆಚ್ಚೇನು ಪರಿಣಾಮ ಕಂಡಿಲ್ಲ. ಭಾರತದಲ್ಲಿ ಷೇರುಮಾರುಕಟ್ಟೆ ತುಸು ಕುಸಿತ ಕಂಡಿದೆ.

ಅಮೆರಿಕದಲ್ಲಿ ಸತತ ಎರಡನೇ ಬಾರಿ ಬಡ್ಡಿದರ ಕಡಿತ; ಭಾರತದ ಮೇಲೇನು ಪರಿಣಾಮಗಳು?
ಫೆಡರಲ್ ರಿಸರ್ವ್ ಛೇರ್ಮನ್ ಜಿರೋಮ್ ಪೋವೆಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 30, 2025 | 12:16 PM

Share

ನವದೆಹಲಿ, ಅಕ್ಟೋಬರ್ 30: ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ (US Federal Reserve) ತನ್ನ ಬಡ್ಡಿದರವನ್ನು ಸತತ ಎರಡನೇ ಬಾರಿ ಇಳಿಸಿದೆ. ಬಡ್ಡಿದರ 25 ಮೂಲಾಂಕಗಳಷ್ಟು ಇಳಿದಿದೆ. ಇದೀಗ ಅಲ್ಲಿ ಬೆಂಚ್​ಮಾರ್ಕ್ ಇಂಟರೆಸ್ಟ್ ರೇಟ್ 3.75%-4.00% ಇದೆ. ಅಮೆರಿಕದ ಆರ್ಥಿಕತೆಯ ಹಿತ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಬಡ್ಡಿ ದರ ಮತ್ತಷ್ಟು ಇಳಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು ಎಂದು ಫೆಡರಲ್ ರಿಸರ್ವ್ ಛೇರ್ಮನ್ ಆದ ಪೋವೆಲ್ ಹೇಳಿದ್ದಾರೆ.

ಬಡ್ಡಿದರವನ್ನು ಈತಿ ವರ್ಷ ಇಳಿಸಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದ ಫೆಡರಲ್ ರಿಸರ್ವ್ ಈಗ ಸತತ ಎರಡು ಬಾರಿ ದರ ಕಡಿಮೆಗೊಳಿಸಿರುವುದು ಗಮನಾರ್ಹ. ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಧಿಕಾರಕ್ಕೆ ಬಂದಾಗಿನಿಂದ ಬಡ್ಡಿ ದರ ಇಳಿಸುವ ವಿಚಾರದಲ್ಲಿ ಫೆಡರಲ್ ರಿಸರ್ವ್ ಜೊತೆ ನಿರಂತರ ತಿಕ್ಕಾಟ ನಡೆಸಿದ್ದರು. ಇದೀಗ ಟ್ರಂಪ್ ಒತ್ತಡಕ್ಕೆ ಪೊವೆಲ್ ಮಣಿದಂತೆ ಮೇಲ್ನೋಟಕ್ಕೆ ತೋರುತ್ತಿದೆ.

ಇದನ್ನೂ ಓದಿ: ಚೀನಾ ಮೇಲಿನ ಟ್ಯಾರಿಫ್ ಶೇ. 57ರಿಂದ 47ಕ್ಕೆ ಇಳಿಸಿ ಹುಬ್ಬೇರಿಸಿದ ಡೊನಾಲ್ಡ್ ಟ್ರಂಪ್; ಚೀನಾ ಜೊತೆ ಅಮೆರಿಕ ಸೂಪರ್ ಡೀಲ್

ಅಮೆರಿಕದ ಬಡ್ಡಿದರ ಇಳಿಕೆಯಿಂದ ಭಾರತದ ಮೇಲೇನು ಪರಿಣಾಮ?

ಫೆಡರಲ್ ರಿಸರ್ವ್​ನಿಂದ ಸತತ ಎರಡನೇ ಬಾರಿ ಬಡ್ಡಿದರ ಇಳಿಸುವ ನಿರ್ಧಾರದಿಂದ ಜಾಗತಿಕ ಮಾರುಕಟ್ಟೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಇಂದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏಷ್ಯಾದ ಮಾರುಕಟ್ಟೆಯೂ ತುಸು ಕಳೆಗುಂದಿದೆ.

ಅಮೆರಿಕದಲ್ಲಿ ಬಡ್ಡಿದರವನ್ನು ಇಳಿಸಬಹುದು ಎನ್ನುವ ಸುಳಿವು ಮೊದಲೇ ಇತ್ತು. ಕಾಕತಾಳೀಯವೋ ಅಥವಾ ಇದೇ ಕಾರಣಕ್ಕೋ ವಿದೇಶೀ ಹೂಡಿಕೆದಾರರು (ಎಫ್​ಐಐ) ಭಾರತದ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಹೂಡಿಕೆ ಹೆಚ್ಚಿಸಿದ್ದಾರೆ. ಷೇರುಪೇಟೆ ಒಂದಷ್ಟು ಚೇತರಿಸಿಕೊಳ್ಳಲು ಇದೂ ಒಂದು ಕಾರಣವಾಗಿತ್ತು.

ಇದನ್ನೂ ಓದಿ: ಚೀನಾ ಅಧ್ಯಕ್ಷ ಷಿ ಭೇಟಿಗೂ ಮುನ್ನ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗೆ ಸೂಚಿಸಿದ್ದ ಟ್ರಂಪ್

ಇವತ್ತು ನಿಫ್ಟಿ ಸೂಚ್ಯಂಕ ಬೆಳಗಿನ ಅವಧಿಯಲ್ಲಿ ಕೆಂಪು ಬಣ್ಣಕ್ಕೆ ತಿರುಗಿತ್ತು. ಅಮೆರಿಕದ ಬಡ್ಡಿದರ ಇಳಿಕೆಗೆ ಸ್ಪಂದಿಸದೆ, ಭಾರತದ ಮಾರುಕಟ್ಟೆ ಸಹಜವಾಗಿ ವರ್ತಿಸುತ್ತಿರುವಂತೆ ಕಾಣುತ್ತಿದೆ. ಸದ್ಯ ನಿಫ್ಟಿ50 ಸೂಚ್ಯಂಕವು 25,900 ಅಂಕಗಳ ಆಸುಪಾಸಿನಲ್ಲಿ ಗಿರಕಿ ಹೊಡೆಯುತ್ತಿದೆ. ಅಮೆರಿಕದ ಬಡ್ಡಿದರ ಇಳಿಕೆಯಿಂದ ಮತ್ತಷ್ಟು ಎಫ್​ಐಐಗಳು ಆಗಮಿಸಿ ನಿಫ್ಟಿಯನ್ನು 26,100 ಅಂಕಗಳ ಮಟ್ಟಕ್ಕಿಂತ ಮೇಲೆ ಒಯ್ಯಲಿ ಎನ್ನುವ ನಿರೀಕ್ಷೆಯಲ್ಲಿ ಹೂಡಿಕೆದಾರರು ಇದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!