AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಭರ್ಜರಿ ಪ್ರವಾಸೋದ್ಯಮ; ವರ್ಷಕ್ಕೆ ಒಂದು ಕೋಟಿ ವಿದೇಶೀ ಪ್ರವಾಸಿಗರು, 2.7 ಲಕ್ಷ ಕೋಟಿ ರೂ ವಿದೇಶೀ ವಿನಿಮಯ ಗಳಿಕೆ

Central tourism department annual report 2024-25: 2024ರ ವರ್ಷದಲ್ಲಿ ಭಾರತಕ್ಕೆ 96.6 ಲಕ್ಷ ವಿದೇಶೀ ಪ್ರವಾಸಿಗರು ಬಂದು ಹೋಗಿದ್ದಾರೆ. ಇದರಿಂದ ಭಾರತದ ವಿದೇಶೀ ವಿನಿಮಯಕ್ಕೆ 2.7 ಲಕ್ಷ ಕೋಟಿ ರೂನಷ್ಟು ಲಾಭ ಬಂದಿದೆ. ಇದೂ ಸೇರಿ ಇನ್ನೂ ಹಲವು ಸಂಗತಿಗಳನ್ನೊಳಗೊಂಡ ವರದಿಯೊಂದನ್ನು ಕೇಂದ್ರ ಪ್ರವಾಸೋದ್ಯಮ ಇಲಾಖೆ ಬಿಡುಗಡೆ ಮಾಡಿದೆ.

ಭಾರತದ ಭರ್ಜರಿ ಪ್ರವಾಸೋದ್ಯಮ; ವರ್ಷಕ್ಕೆ ಒಂದು ಕೋಟಿ ವಿದೇಶೀ ಪ್ರವಾಸಿಗರು, 2.7 ಲಕ್ಷ ಕೋಟಿ ರೂ ವಿದೇಶೀ ವಿನಿಮಯ ಗಳಿಕೆ
ಪ್ರವಾಸೋದ್ಯಮ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 03, 2025 | 7:11 PM

Share

ನವದೆಹಲಿ, ಜೂನ್ 3: ಭಾರತವು ವಿಶ್ವದ ಪ್ರವಾಸೋದ್ಯಮ ಕೇಂದ್ರವಾಗಿ ತಿರುಗುತ್ತಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ವಿದೇಶೀ ಪ್ರವಾಸಿಗರು ಭಾರತದತ್ತ ಆಕರ್ಷಿತರಾಗುತ್ತಿದ್ದಾರೆ. ಇಲ್ಲಿಯ ಸಾಂಸ್ಕೃತಿಕ ಮತ್ತು ಆದ್ಯಾತ್ಮಿಕ ಪರಂಪರೆ ಉಳಿಸಲು ಸರ್ಕಾರ ಪ್ರಯತ್ನ ಪಡುತ್ತಿರುವ ಫಲವಾಗಿ ಪ್ರವಾಸೋದ್ಯಮ ಗಟ್ಟಿಗೊಳ್ಳುತ್ತಿದೆ. 2024ರಲ್ಲಿ ಭಾರತಕ್ಕೆ 96.6 ಲಕ್ಷ ವಿದೇಶೀ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಬಿಡುಗಡೆ ಮಾಡಿದ 2024-25ರ ವಾರ್ಷಿಕ ವರದಿಯಲ್ಲಿ ಈ ಅಂಶವನ್ನು ಎತ್ತಿ ತೋರಿಸಲಾಗಿದೆ. ಹೆಚ್ಚೂಕಡಿಮೆ ಒಂದು ಕೋಟಿ ವಿದೇಶಿಗರ ಆಗಮನದಿಂದ ಭಾರತಕ್ಕೆ ವಿದೇಶೀ ವಿನಿಮಯದಲ್ಲಿ 2.7 ಲಕ್ಷ ಕೋಟಿ ರೂನಷ್ಟು ಆದಾಯ ಬಂದಿದೆ.

ಈ ವರದಿ ಪ್ರಕಾರ, 2023ರಲ್ಲಿ ಭಾರತಕ್ಕೆ ಬಂದ ವಿದೇಶೀ ಪ್ರವಾಸಿಗರ ಸಂಖ್ಯೆ 95.2 ಲಕ್ಷ. ಆ ವರ್ಷ ಸೃಷ್ಟಿಯಾದ ಫಾರೀನ್ ಎಕ್​ಸ್​​ಚೇಂಜ್ ಗಳಿಕೆ 2.32 ಲಕ್ಷ ಕೋಟಿ ರೂನಷ್ಟು. 2024ರಲ್ಲಿ ಪ್ರವಾಸಿಗರ ಸಂಖ್ಯೆ ಮತ್ತು ಅವರಿಂದ ಬಂದ ಆದಾಯ ಮತ್ತಷ್ಟು ಹೆಚ್ಚಳವಾಗಿದೆ.

ಚಲೋ ಇಂಡಿಯಾ ಅಭಿಯಾನ

ವಿದೇಶಗಳಲ್ಲಿ ನೆಲಸಿರುವ ಭಾರತೀಯ ಸಮುದಾಯದವರನ್ನು ಒಳಗೊಂಡ ‘ಚಲೋ ಇಂಡಿಯಾ’ ಅಭಿಯಾನವನ್ನು ಆರಂಭಿಸಲಾಯಿತು. ತಾವು ನೆಲಸಿರುವ ದೇಶಗಳಲ್ಲಿರುವ ಸ್ಥಳೀಯ ಸ್ನೇಹಿತರಿಗೆ ಭಾರತದ ಬಗ್ಗೆ, ಅಲ್ಲಿನ ಸ್ಥಳಗಳ ಬಗ್ಗೆ ಸಕಾರಾತ್ಮಕವಾಗಿ ಬಿಂಬಿಸುವುದು ಈ ಅಭಿಯಾನದ ಮುಖ್ಯಾಂಶ. ಚಲೋ ಇಂಡಿಯಾ ಕೆಂಪೇನ್​​ ಪರಿಣಾಮವಾಗಿ, ಭಾರತಕ್ಕೆ ಬರುವ ವಿದೇಶೀ ಪ್ರವಾಸಿಗರಿಗೆ 1 ಲಕ್ಷದಷ್ಟು ಉಚಿತ ವೀಸಾವನ್ನೂ ನೀಡಲಾಗುತ್ತದೆ.

ಇದನ್ನೂ ಓದಿ: ಎಂಆರ್​​ಎಫ್ ಭಾರತದ ಅತಿದುಬಾರಿ ಷೇರು; ಮೊದಲ ಸ್ಥಾನ ಬಿಟ್ಟ ಎಲ್ಸಿಡ್ ಇನ್ವೆಸ್ಟ್​​ಮೆಂಟ್ಸ್

ಪರ್ಯಟನ್ ಮಿತ್ರ, ಪರ್ಯಟನ್ ದೀದಿ

ಪ್ರವಾಸದ ಅನುಭವವನ್ನು ಉತ್ಕೃಷ್ಟಗೊಳಿಸಲು ನೆರವಾಗುವ ದೃಷ್ಟಿಯಿಂದ ಸರ್ಕಾರವು ಪರ್ಯಟನ್ ಮಿತ್ರ ಮತ್ತು ಪರ್ಯಟನ್ ದೀದಿ ಉಪಕ್ರಮಗಳನ್ನು ಕಳೆದ ವರ್ಷ ಆರಂಭಿಸಿತು. ಪ್ರಮುಖ ಪ್ರವಾಸೀ ಸ್ಥಳಗಳಲ್ಲಿ ಸ್ಥಳೀಯರು ಟೂರ್ ಗೈಡ್​​ಗಳಾಗಿ ಪ್ರವಾಸಿಗರಿಗೆ ಅರಿವು ಮೂಡಿಸುವಂತಾಗುವುದು ಇದರ ಉದ್ದೇಶ. ಇದರಿಂದ ಉದ್ಯೋಗಸೃಷ್ಟಿಯೂ ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:04 pm, Tue, 3 June 25