NEFT service: ಮೇ 23ರಂದು 14 ಗಂಟೆ ಕಾಲ NEFT ಸೇವೆ ಸಿಗಲ್ಲ; ಎಷ್ಟು ಹೊತ್ತಿಂದ ಎಷ್ಟರ ತನಕ ಇಲ್ಲಿದೆ ಮಾಹಿತಿ
NEFT ಸೇವೆಗೆ ಸಂಬಂಧಿಸಿದಂತೆ ಮೇ 23ನೇ ತಾರೀಕಿನಂದು 14 ಗಂಟೆಗಳ ಕಾಲ ಸೇವೆ ದೊರೆಯುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ತಿಳಿಸಲಾಗಿದೆ.
NEFT ಸೇವೆಯು ಮೇ 23ನೇ ತಾರೀಕಿನಂದು 14 ಗಂಟೆಗಳ ಕಾಲ ದೊರಯುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೇ 17ರಂದು ತಿಳಿಸಿದೆ. NEFT ಸಿಸ್ಟಮ್ ಅಪ್ಗ್ರೇಡ್ ಆಗಬೇಕಿರುವುದರಿಂದ ಈ ಸೇವೆಯು ದೊರೆಯುವುದಿಲ್ಲ. ಮೇ 23, 2021ರ ಭಾನುವಾರ 00:01 (ರಾತ್ರಿ 12 ಗಂಟೆ 1 ನಿಮಿಷದಿಂದ) 14:00 (ಮಧ್ಯಾಹ್ನ 2 ಗಂಟೆ) ತನಕ ಸೇವೆಯು ದೊರೆಯುವುದಿಲ್ಲ ಎಂದು ತಿಳಿಸಲಾಗಿದೆ.
“NEFTನ ತಾಂತ್ರಿಕ ಅಪ್ಗ್ರೇಡ್ ಮೂಲಕ ಕಾರ್ಯಕ್ಷಮತೆ ಉತ್ತಮಗೊಳಿಸಲು ಹಾಗೂ ಬಳಕೆ ಜಾಸ್ತಿ ಮಾಡುವ ಉದ್ದೇಶದಿಂದ ಮೇ 22, 2021ರ ವ್ಯವಹಾರದ ನಂತರ ನಿಗದಿ ಆಗಿದೆ. NEFT ಸೇವೆಗಳು ಮೇ 23, 2021ರ 00:01ರಿಂದ 14:00ರ ತನಕ ದೊರೆಯುವುದಿಲ್ಲ,” ಎಂದು ಆರ್ಬಿಐ ಹೇಳಿದೆ. ಈ ಮಧ್ಯೆ ಆರ್ಟಿಜಿಎಸ್ ಸೇವೆಗಳು ಮೇ 23ನೇ ತಾರೀಕು ಮಾಮೂಲಿನಂತೆ ದೊರೆಯುತ್ತವೆ. ಇದೇ ರೀತಿಯ ತಾಂತ್ರಿಕ ಅಪ್ಗ್ರೇಡ್ ಆರ್ಟಿಜಿಎಸ್ ಅನ್ನು ಏಪ್ರಿಲ್ 18, 2021ರಲ್ಲಿ ಪೂರ್ತಿ ಆಗಿದೆ ಎಂದು ಆರ್ಬಿಐ ಹೇಳಿದೆ.
ಗ್ರಾಹಕರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದು ಕೇಂದ್ರಬ್ಯಾಂಕ್ನಿಂದ ಸದಸ್ಯ ಬ್ಯಾಂಕ್ಗಳಿಗೆ ಸೂಚನೆ ನೀಡಲಾಗಿದೆ. NEFT ನಿರ್ವಹಣೆ ಮಾಡುವ ಅವಧಿಯಲ್ಲಿ ಪಾವತಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಕೂಡ ಇದೇ ಸಂದರ್ಭದಲ್ಲಿ ತಿಳಿಸಲಾಗಿದೆ. NEFTಗೆ ಸಂಬಂಧಿಸಿದ ಅಪ್ಡೇಟ್ಗಳನ್ನು ಅಯಾ ಕಾಲಕ್ಕೆ ತಕ್ಕಂತೆ ಗ್ರಾಹಕರಿಗೆ ನೀಡಲಾಗುವುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: RTGS, NEFT extension to Payments bank: ಪೇಮೆಂಟ್ಸ್ ಬ್ಯಾಂಕ್ಗಳಿಗೂ ಆರ್ಟಿಜಿಎಸ್, ಎನ್ಇಎಫ್ಟಿ ವಿಸ್ತರಣೆ
(RBI informed that, due to upgrade and maintenance NEFT service not available for 14 hours to customers on May 23, 2021)